Let our motto be Yoga for peace, harmony and progress: PM Modi
Yoga transcends the barriers of age, colour, caste, community, thought, sect, rich or poor, state and border: PM Modi
Yoga is both ancient and modern. It is constant and evolving: PM Modi

ವೇದಿಕೆಯಲ್ಲಿರುವ ರಾಜ್ಯಪಾಲರಾದ ದ್ರೌಪದಿ ಅವರೇ, ಮುಖ್ಯಮಂತ್ರಿಗಳೇ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರುಗಳೇ ಮತ್ತು ಜಾರ್ಖಂಡ್ ನ ನನ್ನ ಆತ್ಮೀಯ ಸಹೋದರ ಸಹೋದರಿಯರೇ..

 

ಅಂತಾರಾಷ್ಟ್ರೀಯ ಯೋಗದ ದಿನದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ, ಇಡೀ ದೇಶಕ್ಕೆ ಮತ್ತು ಇಡೀ ವಿಶ್ವಕ್ಕೆ ನನ್ನ ಶುಭಾಶಯಗಳು. ಈ ಪ್ರಬಾತ್ ತಾರಾ ಮೈದಾನದಿಂದ ಎಲ್ಲ ದೇಶವಾಸಿಗಳಿಗೂ ಶುಭೋದಯವನ್ನು ತಿಳಿಸುತ್ತೇನೆ. ಇಂದು ಈ ಪ್ರಭಾತ್ ತಾರಾ ಮೈದಾನ ವಿಶ್ವ ಭೂಪಟದಲ್ಲಿ ಕಂಗೊಳಿಸುತ್ತಿದೆ. ಇಂದು ಜಾರ್ಖಂಡ್ ಗೆ ಈ ಗೌರವ ದೊರೆತಿದೆ. ಇಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲು ದೇಶದ ಮತ್ತು ವಿಶ್ವದ ವಿವಿಧ ಭಾಗಗಳಲ್ಲಿ ಲಕ್ಷಾಂತರ ಜನರು ಒಗ್ಗೂಡಿದ್ದಾರೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

 

ವಿಶ್ವದಾದ್ಯಂತ ಯೋಗವನ್ನು ಪ್ರಚಾರ ಮಾಡಲು ಮಾಧ್ಯಮ ಮಿತ್ರರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಂಡ ಎಲ್ಲರ ಮಹತ್ವದ ಪಾತ್ರ ಅತ್ಯಂತ ಅಗತ್ಯವಾಗಿತ್ತು. ನಾನು ಅವರೆಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

 

ಯೋಗ ದಿನ ಆಚರಿಸಲು ಜಾರ್ಖಂಡ್ ಗೆ ಆಗಮಿಸಿರುವುದು ನನಗೆ ಒಂದು ಅದ್ಭುತ ಅನುಭವ ನೀಡಿದೆ. ಬೆಳಗ್ಗೆಯೇ ಮನೆಯಿಂದ ಎದ್ದು ದೂರದೂರದಿಂದ ಇಲ್ಲಿ ಬಂದು ಸೇರಿರುವ ನಿಮ್ಮೆಲ್ಲರಿಗೂ ನಾನು ಋಣಿಯಾಗಿದ್ದೇನೆ. ನಾನು 5ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗಾಗಿ ರಾಂಚಿಗೆ ಏಕೆ ಬಂದೆ ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿರಬಹುದು. ಸಹೋದರ ಸಹೋದರಿಯರೇ, ನನಗೆ ರಾಂಚಿಯ ಮೇಲೆ ಆಳವಾದ ನಂಟಿದೆಯಾದರೂ, ನಾನು ಇಂದು ರಾಂಚಿಗೆ ಆಗಮಿಸಿರುವುದಕ್ಕೆ ಮೂರು ಪ್ರಮುಖ ಕಾರಣಗಳಿವೆ. ಮೊದಲನೆಯದು ಜಾರ್ಖಂಡ್ ಎಂಬ ಹೆಸರೇ ಅದು ಅರಣ್ಯ ಭೂಮಿ ಎಂಬುದನ್ನು ಸೂಚಿಸುತ್ತದೆ. ಇದು ಪ್ರಕೃತಿಗೆ ಅತ್ಯಂತ ಹತ್ತಿರವಾಗಿದೆ ಮತ್ತು ಮಾನವ ಮತ್ತು ಪ್ರಕೃತಿಯ ನಡುವಿನ ಸೌಹಾರ್ದತೆ ಮಾನವರಿಗೆ ಸಂಪೂರ್ಣ ವಿಭಿನ್ನವಾದ ಅನುಭವ ನೀಡುತ್ತದೆ. ಇಲ್ಲಿಗೆ ಬರಲು ಎರಡನೇ ಕಾರಣವೇನೆಂದರೆ, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ  ರಾಂಚಿ ಮತ್ತು ಆರೋಗ್ಯ ಸೇವೆಯ ನಡುವೆ ಇರುವ ಬಾಂಧವ್ಯ.  ಕಳೆದ ವರ್ಷ ಸೆಪ್ಟೆಂಬರ್ 23ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ನಾವು ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟನೆಗೆ ರಾಂಚಿಗೆ ಬಂದಿದ್ದೆವು. ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ಯೋಜನೆ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ ಇಂದು ಅತ್ಯಂತ ಅಲ್ಪಾವಧಿಯಲ್ಲಿ ಬಡ ಜನರಿಗೆ ದೊಡ್ಡ ಪ್ರಯೋಜನ ನೀಡಿದೆ. ನಾವು ಭಾರತೀಯರನ್ನು ಆರೋಗ್ಯವಂತರನ್ನಾಗಿ ಮಾಡಲು ಯೋಗದ ಮಹತ್ವವನ್ನು ಅರಿತಿದ್ದೇವೆ. ಹೀಗಾಗಿ ರಾಂಚಿಗೆ ಇಂದು ಬಂದಿರುವುದು ನನಗೆ ಮಹತ್ವದ್ದಾಗಿದೆ.

 

ಸಹೋದರ, ಸಹೋದರಿಯರೇ,

 

ನಾವೆಲ್ಲರೂ ಈಗ ಈ ಯೋಗ ಪ್ರಚಾರವನ್ನು ವಿಭಿನ್ನ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಿದೆ ಮತ್ತು ಇದು ನಾನು ರಾಂಚಿಗೆ ಬರಲು  ಮೂರನೇ ಮತ್ತು ಅತಿ ದೊಡ್ಡ ಕಾರಣವಾಗಿದೆ.

 

ಸ್ನೇಹಿತರೆ,

 

ಯೋಗ ನಮ್ಮ ದೇಶದಲ್ಲಿ ಸದಾ ಇದೆ ಮತ್ತು ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಜಾರ್ಖಂಡ್ ನ ಛವು ನೃತ್ಯ ಸಹ ಹಲವು ಆಸನ ಮತ್ತ ಭಂಗಿಗಳನ್ನು ಬಿಂಬಿಸುತ್ತದೆ. ಆಧುನಿಕ ಯೋಗದ ಪಯಣ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ಜನರಿಗೆ ಹೆಚ್ಚಾಗಿ ತಲುಪಿಲ್ಲ ಎಂಬುದು ನಿಜ. ಈಗ ನಾವೆಲ್ಲರೂ ಈಗ ಆಧುನಿಕ ಯೋಗವನ್ನು ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ, ಅರಣ್ಯಗಳಿಗೆ ಮತ್ತು ದೂರದ ಪ್ರದೇಶಗಳಿಗೆ ತೆಗೆದುಕೊಂಡು ಹೋಗಬೇಕಾಗಿದೆ. ನಾನು ಯೋಗವನ್ನು ಬಡವರು ಮತ್ತು ಬುಡಕಟ್ಟು ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಲು ಬಯಸುತ್ತೇನೆ ಕಾರಣ, ಬಡವರೇ ಹೆಚ್ಚು ಕಾಯಿಲೆಗಳಿಂದ ಬಳಲುವುದು. ಒಂದು ಕಾಯಿಲೆ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತದೆ. ಬಡತನ ವೇಗವಾಗಿ ತಗ್ಗುತ್ತಿರುವಾಗ, ಬಡತನದಿಂದ ಹೊರಬಂದವರಿಗೆ ಯೋಗ ಮಹತ್ವದ ಮಾಧ್ಯಮವಾಗಿದೆ. ಯೋಗವನ್ನು ಅಪ್ಪಿಕೊಂಡರೆ, ಅದು ಅವರನ್ನು ಬಡತನ ಮತ್ತು ಕಾಯಿಲೆಗಳಿಂದ ಉಳಿಸುತ್ತದೆ.

 

ಸ್ನೇಹಿತರೆ,

 

ಸೌಲಭ್ಯಗಳಿಂದ ಮಾತ್ರವೇ ಬದುಕನ್ನು ಸುಗಮಗೊಳಿಸಿದರೆ ಸಾಲದು. ಔಷಧ ಮತ್ತು ಶಸ್ತ್ರಚಿಕಿತ್ಸೆಗಳಿಂದ ಪರಿಹಾರ ಕೊಡಿಸಿದರೆ ಸಾಲದು. ಇಂದಿನ ಸವಾಲಿನ ಸಮಯದಲ್ಲಿ, ರೋಗವನ್ನು ತಡೆದು ಯೋಗಕ್ಷೇಮದ ಬಗ್ಗೆ ಗಮನ ಹರಿಸುವುದು ನಮಗೆಲ್ಲರಿಗೂ ಮಹತ್ವದ್ದಾಗಿದೆ. ನಾವು ಯೋಗದಿಂದ ಒಂದು ಶಕ್ತಿಯನ್ನು ಪಡೆಯುತ್ತೇವೆ. ಯೋಗ ಮತ್ತು ಪುರಾತನ ಭಾರತೀಯ ಸಿದ್ಧಾಂತಗಳು ಅದೇ ಸ್ಫೂರ್ತಿಯನ್ನು ಹಂಚಿಕೊಳ್ಳುತ್ತವೆ. ಯೋಗವನ್ನು ಕೇವಲ ಅರ್ಧ ಗಂಟೆ ನೆಲದ ಮೇಲೆ ಅಥವಾ ನೆಲ ಹಾಸಿನ ಮೇಲೆ ಅಥವಾ ಚಾಪೆಯ ಮೇಲೆ ಮಾಡಿದರೆ ಸಾಲದು, ಯೋಗ ಒಂದು ಶಿಸ್ತು, ಒಂದು ಸಮರ್ಪಣೆ ಮತ್ತು ಅದನ್ನು ನಮ್ಮ ಜೀವನದುದ್ದಕ್ಕೂ ಪಾಲಿಸಬೇಕು. ಯೋಗ ಬಣ್ಣ, ಜಾತಿ, ಧರ್ಮ, ಬಡತನ, ಸಿರಿತನ, ಪ್ರಾಂತ್ಯ, ಗಡಿ ಸೇರಿದಂತೆ ಎಲ್ಲ ತಾರತಮ್ಯವನ್ನು ಮೀರಿದ್ದಾಗಿದೆ. ಎಲ್ಲಿರಿಗಾಗಿ ಯೋಗ ಮತ್ತು ಎಲ್ಲರೂ ಯೋಗಕ್ಕೆ ಸೇರಿದವರಾಗಿದ್ದಾರೆ.

 

ಸ್ನೇಹಿತರೇ,

 

ಕಳೆದ ಐದು ವರ್ಷಗಳ ಅವಧಿಯಲ್ಲಿ, ನಮ್ಮ ಸರ್ಕಾರ ಯೋಗದೊಂದಿಗೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸೇರಿಸುವ ಮೂಲಕ ಯೋಗವನ್ನು ರೋಗ ತಡೆಗಟ್ಟುವ ಆರೋಗ್ಯ ಸೇವೆಯ ಬಲಿಷ್ಠ ಸ್ತಂಭವಾಗಿ ಮಾಡಲು ಪ್ರಯತ್ನಿಸಿದೆ.  ಪಡಸಾಲೆಯಿಂದ ಮಲಗುವ ಕೋಣೆಯವರೆಗೆ, ಉದ್ಯಾನವನಗಳಿಂದ ಹಿಡಿದು ನಗರಗಳಲ್ಲಿನ ಕ್ರೀಡಾ ಸಂಕೀರ್ಣದವರೆಗೆ, ಬೀದಿಗಳಿಂದ ಕ್ಷೇಮ ಕೇಂದ್ರಗಳವರೆಗೆ ಇಂದು ಭಾರತದಲ್ಲಿ ಯೋಗದ ಅರಿವು ಪ್ರತಿಯೊಂದು ವಿಭಾಗವನ್ನೂ ತಲುಪಿದೆ ಎಂದು ನಾವು ಪ್ರತಿಪಾದಿಸಬಹುದು; ಇಂದು ಯೋಗವನ್ನು ಎಲ್ಲೆಡೆಯೂ ಅನುಭವಿಸಲಾಗುತ್ತಿದೆ.

 

ಸಹೋದರ ಸಹೋದರಿಯರೇ,

 

ಇಂದಿನ ಯುವ ಪೀಳಿಗೆ ಈ ಸಾಂಪ್ರದಾಯಿಕ ಪದ್ಧತಿಯಲ್ಲಿ ಆಧುನಿಕತೆಯೊಂದಿಗೆ ಪಾಲ್ಗೊಂಡು, ಪ್ರಚಾರ ಮಾಡುವುದನ್ನು ನೋಡಿದಾಗ ನನಗೆ ಅತೀವ ಸಂತೃಪ್ತಿ ಮತ್ತು ಆನಂದ ಆಗುತ್ತದೆ. ಯುವಜನರ ರಚನಾತ್ಮಕ ಕಲ್ಪನೆ ಮತ್ತು ನಾವಿನ್ಯತೆಯ ನೆರವಿನಿಂದ, ಯೋಗ ಇನ್ನೂ ಹೆಚ್ಚು ಜನಪ್ರಿಯವಾಗುತ್ತಿದೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಜೀವಂತವಾಗಿದೆ. ಸ್ನೇಹಿತರೆ, ಇಂದು ಯೋಗ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿಗಳ ಯೋಗ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಪ್ರಶಸ್ತಿಗಳನ್ನು ಸಹ ನಮ್ಮ ಸಚಿವರು ಪ್ರಕಟಿಸಿದ್ದಾರೆ. ತೀರ್ಪುಗಾರರ ಮಂಡಳಿ ಇದನ್ನು ಆಯ್ಕೆ ಮಾಡಿದೆ ಮತ್ತು ಇದಕ್ಕಾಗಿ ಭಾರೀ ಶ್ರಮಪಟ್ಟು ವಿಶ್ವಾದ್ಯಂತದಿಂದ ಸಾಧಕರನ್ನು ಆಯ್ಕೆ ಮಾಡಲಾಗಿದೆ.  ಯೋಗದ ಬಗ್ಗೆ ಪ್ರಶಸ್ತಿ ವಿಜೇತರಿಗೆ ಇರುವ ಸಮರ್ಪಣೆಯನ್ನು ನಾನು ಶ್ಲಾಘಿಸುತ್ತೇನೆ.

ಸ್ನೇಹಿತರೆ,

 

ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ “ಹೃದಯಕ್ಕಾಗಿ ಯೋಗ’’ ಎಂಬುದಾಗಿದೆ. ಇಡೀ ವಿಶ್ವಕ್ಕೆ ಇಂದು ಹೃದಯದ ಆರೈಕೆ ಒಂದು ಸವಾಲಾಗಿದೆ. ಭಾರತದಲ್ಲಿ ಕಳೆದ ಎರಡು ಎರಡೂವರೆ ವರ್ಷದ ಅವಧಿಯಲ್ಲಿ ಹೃದ್ರೋಗದ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಯುವ ಜನರಲ್ಲೂ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು ದುರ್ದೈವವೇ ಸರಿ. ಇಂಥ ಸನ್ನಿವೇಶದಲ್ಲಿ, ಯೋಗವನ್ನು ಹೃದಯ ಚಿಕಿತ್ಸೆ ಜಾಗೃತಿಯ ಜತೆಗೆ ರೋಗ ತಡೆಗೆ ಯೋಗವನ್ನು ಒಂದು ಭಾಗವಾಗಿ ಮಾಡುವುದು ಮುಖ್ಯವಾಗಿದೆ. ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ನಾನು ಸ್ಥಳೀಯ ಯೋಗಾಶ್ರಮಗಳಿಗೆ ಮನವಿ ಮಾಡುತ್ತೇನೆ. ರಿಖ್ಯ ಪೀಠಯೋಗ ಆಶ್ರಮ, ರಾಂಚಿಯ ಯೋಗ ಸಂತ್ಸಂಗ ಸಖ್ಯ ಆಶ್ರಮ ಮತ್ತು ಇತರ ಸಂಸ್ಥೆಗಳು ಹೃದಯ ಆರೈಕೆಯ ಜಾಗೃತಿ ಕೇಂದ್ರೀತ ಧ್ಯೇಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಮಾಡುವಂತೆ ನಾನು ಕೋರುತ್ತೇನೆ.

 

ಸ್ನೇಹಿತರೆ,

 

ಉತ್ತಮ ಆರೋಗ್ಯದೊಂದಿಗೆ, ನಾವು ಬದುಕಿನಲ್ಲಿ ಉನ್ನತವಾದ್ದನ್ನು ಸಾಧಿಸಬಹುದು. ದಣಿದ ದೇಹ ಮತ್ತು ಮುರಿದ ಮನಸ್ಸು ಯಾವುದೇ ಕನಸು ಕಟ್ಟಲು ಅಥವಾ ತನ್ನ ಆಶಯಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ನಾವು ಉತ್ತಮ ಆರೋಗ್ಯದ ಬಗ್ಗೆ ಮಾತನಾಡಿದಾಗ, ನಾವು ನಾಲ್ಕು ‘ಪ’ ಗಳನ್ನು ಅಂದರೆ ಪಾನಿ, ಪೋಷಣ್, ಪರ್ಯಾವರಣ್ ಮತ್ತು ಪರಿಶ್ರಮ್ ( ನೀರು, ಪೌಷ್ಟಿಕತೆ, ಪರಿಸರ ಮತ್ತು ಪರಿಶ್ರಮ)ವನ್ನು ಸ್ಮರಿಸುವುದು ಅಗತ್ಯ. ಸ್ವಚ್ಛ ನೀರು, ಸೂಕ್ತ ಪೌಷ್ಟಿಕತೆ, ಸ್ವಚ್ಛ ಪರಿಸರ ಅಂದರೆ ಶುದ್ಧ ವಾಯು ಮತ್ತು ಕಠಿಣ ಪರಿಶ್ರಮ ನಮ್ಮ ಬದುಕಿನ ಭಾಗವಾಗಬೇಕು.

ಸ್ನೇಹಿತರೆ, ‘ಪ’  ಫಲಿತಾಂಶ ನೀಡುತ್ತದೆ. ಇದಕ್ಕಾಗಿಯೇ ವಿಶ್ವಾದ್ಯಂತದ ಜನರು ಯೋಗ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ನಾನು ಭಾವಿಸುತ್ತೇವೆ. ವಿಶ್ವದಾದ್ಯಂತ ಪ್ರಥಮ ಸೂರ್ಯ ಕಿರಣಗಳನ್ನು ಯೋಗಾಭ್ಯಾಸದೊಂದಿಗೆ ಸ್ವಾಗತಿಸುವುದು ಸುಂದರ ದೃಶ್ಯ. ನಾನು ನಿಮ್ಮೆಲ್ಲರಿಗೂ ಯೋಗವನ್ನು ಸ್ವೀಕರಿಸುವಂತೆ ಮತ್ತು ನಿಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ. ಯೋಗ ಪುರಾತನ ಮತ್ತು ಆಧುನಿಕ. ಇದು ಸ್ಥಿರ ಮತ್ತು ವಿಕಸನಗೊಳ್ಳುವಂಥದ್ದು. ಶತಮಾನಗಳಿಂದ ಯೋಗದ ಸಾರವು ಒಂದೇ ಆಗಿರುತ್ತದೆ- ಆರೋಗ್ಯಕರ ದೇಹ, ಸ್ಥಿರ ಮನಸ್ಸು, ಏಕತೆಯ ಮನೋಭಾವ. ಯೋಗವು ಜ್ಞಾನ ಅಥವಾ ಅರಿವು, ಕರ್ಮ ಅಥವಾ ಕೆಲಸ ಮತ್ತು ಭಕ್ತಿ ಅಥವಾ ಧ್ಯಾನದ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತದೆ. ಯೋಗ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಉತ್ತಮ ಚಿಂತನೆ, ಕ್ರಿಯೆ ಮತ್ತು ಸ್ಫೂರ್ತಿ ತುಂಬುತ್ತದೆ.

 

ಸ್ನೇಹಿತರೆ, ಯೋಗಾಭ್ಯಾಸ ಮಾಡುವ ಅವಶ್ಯಕತೆ ಹಿಂದಿಗಿಂತ ಇಂದು ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಮತ್ತು ಒತ್ತಡಕ್ಕೆಸಂಬಂಧಿ ಕಾಯಿಲೆಗಳ ಯುಗದಲ್ಲಿ ನಾವಿದ್ದೇವೆ. ಇದು ಕಾರ್ಯಸ್ಥಾನದಲ್ಲಿನ ಒತ್ತಡ ಮತ್ತು ತ್ವರಿತ ದೈನಂದಿನ ಚಟುವಟಿಕೆಯಿಂದ ಬಂದುದಾಗಿದೆ. ಭವ್ಯ ಭವಿಷ್ಯ ಇರುವ ಯುವಕ-ಯುವತಿಯರು ಮಾದಕ ದ್ರವ್ಯ ಸೇವನೆ, ಮದ್ಯಪಾನ ಚಟಕ್ಕೆ ಬಿದ್ದು, ಮಧುಮೇಹ ಮತ್ತು ಇತರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕೇಳಿದಾಗ ನನಗೆ ನೋವುಂಟುಮಾಡುತ್ತದೆ.

 

ಯೋಗ ಈ ಎಲ್ಲ  ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಯೋಗ ಜನರ ನಡುವೆ ಮತ್ತು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಇದು ಇಂದು ವಿಶ್ವ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಪರಿಹಾರ ಒದಗಿಸುತ್ತದೆ.

 

ಸ್ನೇಹಿತರೆ, ಶಾಂತಿ, ಸೌಹಾರ್ದ ಯೋಗದೊಂದಿಗೆ ಸಂಪರ್ಕಿತವಾಗಿದೆ. 5ನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ನಮ್ಮ ಉದ್ದೇಶ ಶಾಂತಿಗಾಗಿ, ಸೌಹಾರ್ದಕ್ಕಾಗಿ ಮತ್ತು ಪ್ರಗತಿಗಾಗಿ ಯೋಗವಾಗಿರಲಿ.

ಸಹೋದರ ಸಹೋದರಿಯರೇ,

 

ಅಂತಾರಾಷ್ಟ್ರೀಯ ಯೋಗ ದಿನದ ತರುವಾಯ, ನಾವು ಹಲವು ಪ್ರಭಾವಶಾಲಿ ಕ್ರಮಗಳನ್ನು ಕೈಗೊಂಡಿದ್ದೇವೆ. ನಾವು ಅದರ ಪ್ರಯೋಜನವನ್ನೂ ಕಂಡಿದ್ದೇವೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಮತ್ತು ಹವ್ಯಾಸದಲ್ಲಿ ಯೋಗವನ್ನು ಅವಿಭಾಗ್ಯ ಅಂಗಗೊಳಿಸಲು ಶ್ರಮಿಸುತ್ತಿದ್ದೇವೆ. ಯೋಗ ಶಿಕ್ಷಕರ, ಯೋಗಾಭ್ಯಾಸಿಗಳ ಮತ್ತು ಸಂಸ್ಥೆಗಳ ಪಾತ್ರ ಇದಕ್ಕಾಗಿ ವಿಸ್ತಾರವಾಗಬೇಕಾಗಿದೆ. ಯೋಗವನ್ನು ಕೋಟ್ಯಂತರ ಜನರ ಜೀವನದ ಭಾಗವಾಗಿಸಲು ಮಾನವಶಕ್ತಿ ಸಿದ್ಧವಾಗುವುದು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮಾಡುವುದು ಅಗತ್ಯ. ನಾವು ಯೋಗ ಮತ್ತು ಅದರೊಂದಿಗೆ ಸಂಬಂಧಿತವಾದ ಸಂಸ್ಥೆಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಸರ್ಕಾರ, ಈ ಕಲ್ಪನೆಯೊಂದಿಗೆ ಮುಂದೆ ಸಾಗುತ್ತಿದೆ.

ಸ್ನೇಹಿತರೆ,

 

ಇಂದು ವಿಶ್ವವೇ ಯೋಗವನ್ನು ಸ್ವೀಕರಿಸಿದೆ. ಹೀಗಾಗಿ, ನಾವು ಯೋಗ ಸಂಬಂಧಿ ಸಂಶೋಧನೆಗಳ ಬಗ್ಗೆ ಗಮನ ಹರಿಸಬೇಕಾಗಿದೆ. ನಮ್ಮ ಮೊಬೈಲ್ ಪೋನ್ ಗಳು ಮತ್ತು ತಂತ್ರಾಂಶ ಅಪ್ ಡೇಟ್ ಆಗುವಂತೆಯೇ ಯೋಗದ ಬಗೆಗಿನ ಇತ್ತೀಚಿನ ಮಾಹಿತಿಯನ್ನು ಜಗತ್ತಿಗೆ ತಿಳಿಸುವುದು ಅಗತ್ಯವಾಗಿದೆ. ಹೀಗಾಗಿ, ನಾವು ಯೋಗವನ್ನು ಸೀಮಿತಗೊಳಿಸಬಾರದು. ಯೋಗವನ್ನು ವೈದ್ಯಕೀಯ, ಫಿಸಿಯೋಥೆರಪಿ, ಕೃತಕ ಬುದ್ಧಿಮತ್ತೆಗೂ ಸಂಪರ್ಕಿಸಬೇಕಿದೆ. ಮಿಗಿಲಾಗಿ, ಯೋಗದೊಂದಿಗೆ ಸಂಪರ್ಕಿತವಾಗಿರುವ ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡಬೇಕಾಗಿದೆ. ಆಗ ಮಾತ್ರ ಯೋಗವನ್ನು ವಿಸ್ತರಿಸಲು ಸಾಧ್ಯ.

ನಮ್ಮ ಸರ್ಕಾರ  ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ನಾನು ಮತ್ತೊಮ್ಮೆ ನಿಮ್ಮೆಲ್ಲರ ಉತ್ತಮ ಆರೋಗ್ಯಕ್ಕೆ ಶುಭ ಹಾರೈಸುತ್ತೇನೆ. ನಾವು ಇಂದು ಇಲ್ಲಿ ಪ್ರದರ್ಶಿಸಿದ ಪ್ರತಿಯೊಂದ ಆಸನದ ಅವಧಿಯನ್ನು ನಿಧಾನವಾಗಿ ಹೆಚ್ಚಿಸುತ್ತಾ ಸಾಗಿ. ಅಧಿಕವಾಗಿಯೂ ಯೋಗಾಸನ ಮಾಡಬೇಡಿ. ನೀವು ಅದರ ಪ್ರಭಾವವನ್ನು ನಿಮ್ಮ ಬದುಕಿನಲ್ಲಿ ಕಾಣುತ್ತೀರಿ.

 

ನಾನು ಮತ್ತೊಮ್ಮೆ ನಿಮ್ಮೆಲ್ಲರ ಉತ್ತಮ ಆರೋಗ್ಯ, ಸೌಹಾರ್ದತೆ, ಶಾಂತಿ ಮತ್ತು ಉತ್ತಮವಾದ ಬದುಕಿಗಾಗಿ ಶುಭ ಕೋರುತ್ತೇನೆ. 

 

ಬನ್ನಿ ಇಂದಿನಿಂದಲೇ ಯೋಗವನ್ನು ಆರಂಭಿಸೋಣ.

 

ಅತ್ಯಂತ ಅಲ್ಪ ಕಾಲಾವಧಿಯಲ್ಲಿ ಇಷ್ಟು ವೈಭವದ ಸಿದ್ಧತೆಗಳನ್ನು ಮಾಡಿರುವ ಜಾರ್ಖಂಡ್ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಈ ಮುನ್ನ  ಈ ಬಗ್ಗೆ ಅವರಿಗೆ ಕಲ್ಪನೆಯೇ ಇರಲಿಲ್ಲ. ಎರಡು ವಾರಗಳ ಹಿಂದೆ ಸರ್ಕಾರದಿಂದ ಮಾಹಿತಿ ಸಿಕ್ಕಾಗ ರಾಂಚಿಯಲ್ಲಿ ಈ ವೈಭವದ ಕಾರ್ಯಕ್ರಮ ಆಯೋಜಿಸುವ ಆಲೋಚನೆ ನನ್ನ ಮನಸ್ಸಿನಲ್ಲಿ ಬಂತು. ಆದರೆ, ಜಾರ್ಖಂಡ್ ನ ಜನತೆ, ಇಷ್ಟು ಅಲ್ಪಾವಧಿಯಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದಾರೆ. ನಾನು ಇದಕ್ಕಾಗಿ ನಿಮ್ಮೆಲ್ಲರನ್ನೂ ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ.

 

ಧನ್ಯವಾದಗಳು! 

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."