ಈವರೆಗೆ 40 ಕೋಟಿ ಭಾರತೀಯರು ಲಸಿಕೆ ಪಡೆಯುವ ಮೂಲಕ ‘ಬಾಹುಬಲಿ’ಗಳಾಗಿದ್ದಾರೆ: ಪ್ರಧಾನಮಂತ್ರಿ
ಸಂಸತ್ತಿನಲ್ಲಿ ಸಾಂಕ್ರಾಮಿಕದ ಬಗ್ಗೆ ಸಕಾರಾತ್ಮಕ, ಅರ್ಥಪೂರ್ಣ ಚರ್ಚೆ ಆಗಬೇಕೆಂದು ನಮ್ಮ ಬಯಕೆ : ಪ್ರಧಾನಮಂತ್ರಿ
ಸಾಂಕ್ರಾಮಿಕದ ಬಗ್ಗೆ ಚರ್ಚೆ ನಡೆಸಲು ನಾಳೆ ಸಂಜೆ ಸದನ ನಾಯಕರ ಸಮಯ ಕೋರಿದ್ದೇನೆ: ಪ್ರಧಾನಮಂತ್ರಿ
ಪ್ರತಿಪಕ್ಷಗಳು ಕಠಿಣ ಹಾಗೂ ಕಷ್ಟಕರ ಪ್ರಶ್ನೆಗಳನ್ನು ಕೇಳಬೇಕು ಮತ್ತು ಶಾಂತಿಯುತ ವಾತಾವರಣದಲ್ಲಿ ಉತ್ತರ ನೀಡಲು ಅವಕಾಶ ನೀಡಬೇಕು: ಪ್ರಧಾನಮಂತ್ರಿ

ಮಿತ್ರರೇ ಸ್ವಾಗತ ಮತ್ತು ನೀವೆಲ್ಲರೂ ಕನಿಷ್ಠ ಒಂದು ಡೋಸ್ ಲಸಿಕೆಯನ್ನಾದರೂ ಸಹ ಪಡೆದಿದ್ದೀರೆಂದು ಭಾವಿಸಿದ್ದೇನೆ. ಆದರೂ ಸಹ, ನಾನು ನಿಮ್ಮೆಲ್ಲರನ್ನೂ ಮತ್ತು ಸದನದ ನನ್ನೆಲ್ಲ ಸಹೋದ್ಯೋಗಿಗಳಿಗೆ ಕೋವಿಡ್ ಶಿಷ್ಟಾಚಾರ ಪಾಲನೆಗೆ ಸಹಕಾರ ನೀಡಬೇಕೆಂದು ಕೋರುತ್ತೇನೆ. ಲಸಿಕೆ ‘ಬಾಹು’ (ತೋಳುಗಳಿಗೆ) ನೀಡಲಾಗಿದೆ ಮತ್ತು ಅದನ್ನು ಪಡೆದವರು “ಬಾಹುಬಲಿ’ಗಳಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಬಾಹುಬಲಿಗಳಾಗಲು ಇರುವ ಏಕೈಕ ಮಾರ್ಗವೆಂದರೆ ಲಸಿಕೆಯನ್ನು ಪಡೆಯುವುದು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಸುಮಾರು 40 ಕೋಟಿ ಜನರು “ಬಾಹುಬಲಿ”ಗಳಾಗಿದ್ದಾರೆ. ಲಸಿಕೆ ನೀಡುವುದನ್ನು ಕ್ಷಿಪ್ರವಾಗಿ ಕೈಗೊಳ್ಳಲಾಗುತ್ತಿದೆ. ಸಾಂಕ್ರಾಮಿಕದಿಂದ ಇಡೀ ಜಗತ್ತು, ಇಡೀ ಮನುಕುಲ ತತ್ತರಿಸಿದೆ. ಆದ್ದರಿಂದ ನಾವು ಸಾಂಕ್ರಾಮಿಕದ ಬಗ್ಗೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕೆಂದು ಬಯಸಿದ್ದೇವೆ. ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಸಾಕಷ್ಟು ಹೊಸತನಗಳನ್ನು ಕಂಡುಕೊಳ್ಳಲು ಗೌರವಾನ್ವಿತ ಸದಸ್ಯರಿಂದ ಎಲ್ಲ ಪ್ರಾಯೋಗಿಕ ಸಲಹೆಗಳನ್ನು ಪಡೆದುಕೊಳ್ಳಲು ನಾವು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದೇವೆ. ಕೆಲವು ನೂನ್ಯತೆಗಳಿದ್ದರೆ, ಅವುಗಳನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಾವೆಲ್ಲರೂ ಒಟ್ಟಾರೆ ಹೋರಾಟವನ್ನು ಮುಂದುವರಿಸಬಹುದು.

ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ವಿಸ್ತೃತವಾದ ಪ್ರಾತ್ಯಕ್ಷಿಕೆ ನೀಡಲು ಬಯಸುತ್ತೇನೆ, ಅದಕ್ಕಾಗಿ ನಾಳೆ ಸಂಜೆ ಸದನದ ಎಲ್ಲ ನಾಯಕರಿಗೆ ಸಮಯ ನೀಡುವಂತೆ ಮನವಿ ಮಾಡಿದ್ದೇನೆ. ಸದನದ ಒಳಗೆ ಮತ್ತು ಹೊರಗೆ ನಾನು ಸದನಗಳ ನಾಯಕರೊಂದಿಗೆ ಚರ್ಚೆ ಮಾಡಲು ಬಯಸುತ್ತೇನೆ ಏಕೆಂದರೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಾವು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದೇನೆ. ನಾನಾ ವೇದಿಕೆಗಳಲ್ಲಿ ಚರ್ಚೆ ನಡೆಯುತ್ತಿವೆ. ಸದನದಲ್ಲಿ ಚರ್ಚೆ ನಡೆಯುವ ಜೊತೆಗೆ ಸದನಗಳ ನಾಯಕರ ಜೊತೆ ಚರ್ಚೆ ನಡೆದರೆ ಅದು ಹೆಚ್ಚು ಸೂಕ್ತವಾಗಿರುತ್ತದೆ.

ಈ ಅಧಿವೇಶನದಲ್ಲಿ ಪರಿಣಾಮಕಾರಿ ಚರ್ಚೆಗಳ ಮೂಲಕ ಫಲಿತಾಂಶ ಆಧರಿತವಾಗಿರಲಿ, ಆ ಮೂಲಕ ಜನರು ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರವನ್ನು ನೀಡುತ್ತದೆ.  ಎಲ್ಲ ಗೌರವಾನ್ವಿತ ಸಂಸದರು ಮತ್ತು ಎಲ್ಲ ರಾಜಕೀಯ ಪಕ್ಷಗಳು ಸದನಗಳಲ್ಲಿ ಕಠಿಣ ಮತ್ತು ತೀಕ್ಷ್ಣ ಪ್ರಶ್ನೆಗಳನ್ನು ಕೇಳಬೇಕೆಂದು ನಾನು ಮನವಿ ಮಾಡುತ್ತೇನೆ, ಆದರೆ ಶಾಂತಿಯುತ ವಾತಾವರಣದಲ್ಲಿ ಉತ್ತರ ನೀಡಲು ಸರ್ಕಾರಕ್ಕೆ ಅವಕಾಶ ನೀಡಬೇಕು. ಸತ್ಯ ಜನರನ್ನು ತಲುಪಿದಾಗ ಪ್ರಜಾಪ್ರಭುತ್ವವು ಬಲಗೊಳ್ಳುತ್ತದೆ. ಇದು ಜನರ ನಂಬಿಕೆಯನ್ನು ಬಲವರ್ಧನೆಗೊಳಿಸುವ ಜೊತೆಗೆ ಅಭಿವೃದ್ಧಿಯ ವೇಗವನ್ನು ಸುಧಾರಿಸುತ್ತದೆ.

ಮಿತ್ರರೇ, ಈ ಅಧಿವೇಶನದಲ್ಲಿ ಕಳೆದ ಬಾರಿ ಇದ್ದಂತೆ ಆಂತರಿಕ ವ್ಯವಸ್ಥೆಯಿಲ್ಲ, ಏಕೆಂದರೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡಿರುವುದರಿಂದ ಎಲ್ಲರೂ ಒಟ್ಟಾಗಿ ಕುಳಿತು ಕೆಲಸ ಮಾಡೋಣ. ನಾನು ಮತ್ತೊಮ್ಮೆ ಎಲ್ಲರಿಗೂ ತುಂಬಾ ಧನ್ಯವಾದಗಳನ್ನು ಹೇಳಬಯಸುತ್ತೇನೆ ಮತ್ತು ನಿಮ್ಮ ಬಗ್ಗೆ ನೀವು ಎಚ್ಚರಿಕೆಯಿಂದಿರಿ. ದೇಶದ ಆಶಯ ಹಾಗೂ ಆಕಾಂಕ್ಷೆಗಳನ್ನು ಈಡೇರಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ.

ಮಿತ್ರರೇ, ಧನ್ಯವಾದಗಳು..!

ಘೋಷಣೆ: ಪ್ರಧಾನಮಂತ್ರಿಗಳು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು, ಇದು ಆದರ ಯಥಾವತ್  ಅನುವಾದವಲ್ಲ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi