ಭಾರತ-ಏಷಿಯಾನ್ ಶೃಂಗಸಭೆಯಲ್ಲಿ ಮತ್ತೊಮ್ಮೆ ನಿಮ್ಮನ್ನು ಭೇಟಿ ಮಾಡಲು ನನಗೆ ಸಂತೋಷವಾಗಿದೆ. ಅತ್ಯುನ್ನತ ಗುಣಮಟ್ಟದ ಅತ್ಯುತ್ತಮ ವ್ಯವಸ್ಥೆ ಮತ್ತು ಆತಿಥ್ಯಕ್ಕಾಗಿ ನಾನು ಥೈಲ್ಯಾಂಡ್ ಗೆ ಧನ್ಯವಾದ ಹೇಳುತ್ತೇನೆ. ಮುಂದಿನ ವರ್ಷ ಆಸಿಯಾನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ಅಧ್ಯಕ್ಷತೆ ವಹಿಸುತ್ತಿರುವ ವಿಯೆಟ್ನಾಂಗೆ ನಾನು ಶುಭ ಹಾರೈಸುತ್ತೇನೆ.
ಭಾರತ ಮತ್ತು ಆಸಿಯಾನ್ ನಡುವಿನ ಇಂಡೋ-ಪೆಸಿಫಿಕ್ ಇಂಡೋ-ಪೆಸಿಫಿಕ್ ದೃಷ್ಟಿಕೋನವನ್ನು, ಪರಸ್ಪರ ಸಮನ್ವಯವನ್ನು ನಾನು ಸ್ವಾಗತಿಸುತ್ತೇನೆ. ಭಾರತದ ಆಕ್ಟ್ ಈಸ್ಟ್ ಪಾಲಿಸ ಯ ನಮ್ಮ ಇಂಡೋ-ಪೆಸಿಫಿಕ್ ಗುರಿಯ ಒಂದು ಪ್ರಮುಖ ಭಾಗವಾಗಿದೆ. ಆಸಿಯಾನ್ ಮತ್ತು ಯಾವಾಗಲೂ ನಮ್ಮ ಆಕ್ಟ್ ಈಸ್ಟ್ ಪಾಲಿಸಿಯ ಮುಖ್ಯಭಾಗವಾಗಿರುತ್ತದೆ. ಸಮಗ್ರ, ಸಂಘಟಿತ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಆಸಿಯಾನ್ ಭಾರತದ ಮೂಲ ಹಿತಾಸಕ್ತಿಯಲ್ಲಿದೆ. ಬಲವಾದ ಭೂಮಾರ್ಗ, ಕಡಲ ಮತ್ತು ವಾಯು-ಸಂಪರ್ಕ ಮತ್ತು ಡಿಜಿಟಲ್-ಲಿಂಕ್ ಮೂಲಕ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಭೌತಿಕ ಮತ್ತು ಡಿಜಿಟಲ್ ಸಂಪರ್ಕಕ್ಕಾಗಿ 1 ಬಿಲಿಯನ್ ಸಾಲವು ಉಪಯುಕ್ತವಾಗಿರುತ್ತದೆ. ಅಧ್ಯಯನ, ಸಂಶೋಧನೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಜನರನ್ನು ಸೆಳೆಯುವುದು ನಮ್ಮ ಉದ್ದೇಶ.
ಬಲವಾದ ಭೂಮಾರ್ಗ, ಕಡಲ ಮತ್ತು ವಾಯು-ಸಂಪರ್ಕ ಮತ್ತು ಡಿಜಿಟಲ್-ಲಿಂಕ್ ಮೂಲಕ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಭೌತಿಕ ಮತ್ತು ಡಿಜಿಟಲ್ ಸಂಪರ್ಕಕ್ಕಾಗಿ 1 ಬಿಲಿಯನ್ ಸಾಲವು ಉಪಯುಕ್ತವಾಗಿರುತ್ತದೆ. ಅಧ್ಯಯನ, ಸಂಶೋಧನೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕಾಗಿ ಹೆಚ್ಚಿನ ಜನರನ್ನು ಸೆಳೆಯುವುದು ನಮ್ಮ ಉದ್ದೇಶ.
ಈ ಗುರಿಯನ್ನು ಸಾಧಿಸಲು, ಪರಸ್ಪರ ಹಿತಾಸಕ್ತಿ ಕ್ಷೇತ್ರದಲ್ಲಿ ಆಸಿಯಾನ್ ಜೊತೆಗಿನ ಪಾಲುದಾರಿಕೆಯನ್ನು ಹೆಚ್ಚಿಸಲು ಭಾರತ ಸಿದ್ಧವಾಗಿದೆ. ಕಳೆದ ವರ್ಷ ಸ್ಮಾರಕ ಶೃಂಗಸಭೆ ಮತ್ತು ಸಿಂಗಾಪುರದಲ್ಲಿ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಗೊಳಿಸುವಿಕೆ ನಮ್ಮನ್ನು ಹತ್ತಿರಕ್ಕೆ ತಂದಿದೆ. ಕೃಷಿ, ವಿಜ್ಞಾನ, ಸಂಶೋಧನೆ, ಐಸಿಟಿ ಮತ್ತು ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸಲು ನಾವು ಸಿದ್ಧರಿದ್ದೇವೆ.
ಆಸಿಯಾನ್-ಇಂಡಿಯಾ ಎಫ್ ಟಿಎ ಪರಿಶೀಲಿಸುವ ಇತ್ತೀಚಿನ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಇದು ನಮ್ಮ ಆರ್ಥಿಕ ಸಂಬಂಧಗಳನ್ನು ಹೆಚ್ಚು ಬಲಪಡಿಸುವುದಲ್ಲದೆ, ನಮ್ಮ ವ್ಯಾಪಾರವೂ ಸಮತೋಲಿತವಾಗಿರುತ್ತದೆ. ಕಡಲ ಸುರಕ್ಷತೆ, ಸಾಗರ ವ್ಯವಹಾರದ ಆರ್ಥಿಕತೆ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ನಮ್ಮ ಸಹಭಾಗಿತ್ವವನ್ನು ಬಲಪಡಿಸಲು ನಾವು ಬಯಸುತ್ತೇವೆ.
ನಿಮ್ಮ ಅಭಿಪ್ರಾಯಗಳನ್ನು ಕೇಳಿದ ನಂತರ, ನಾನು ಕೆಲವು ಅಂಶಗಳನ್ನು ವಿವರವಾಗಿ ಮಾತನಾಡಲು ಬಯಸುತ್ತೇನೆ. ನಾನು ಮತ್ತೊಮ್ಮೆ ಥೈಲ್ಯಾಂಡ್ ಮತ್ತು ನಿಮ್ಮೆಲ್ಲರಿಗೂ ಹೃದಯದಿಂದ ನನ್ನ ತುಂಬು ಹೃದಯದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
Disclaimer: PM's speech was delivered in Hindi. This is an approximate translation of the speech