When the entire country stands with our forces, the strength of our jawans increases 125 crore times: PM Modi during #MannKiBaat
Decision to implement demonetisation wasn’t easy. There will be inconvenience to rid the country of troubles of 70 years: PM #MannKiBaat
Govt, post offices, banks are working hard & with dedication to fight evils of black money & corruption: PM Modi during #MannKiBaat
Despite inconvenience, people across the country have accepted demonetisation drive. This shows their potential: PM during #MannKiBaat
Villages, farmers & small traders have a pivotal role in our country’s economy: PM Modi during #MannKiBaat
Urge small traders to embrace technology by using banking apps & digital payment systems: PM Modi during #MannKiBaat
By embracing technology, we can build a cashless society. This will be a big transformation: PM during #MannKiBaat
We can gradually move from a ‘less-cash’ society to a cashless society. Youth can play a major role in this: PM Modi during #MannKiBaat
Youth can be the agents of change in fighting black money & corruption: PM Narendra Modi during #MannKiBaat

ನನ್ನೊಲವಿನ ದೇಶಬಾಂಧವರೇ, ನಮಸ್ಕಾರಗಳು.
ಕಳೆದ ತಿಂಗಳು ನಾವೆಲ್ಲರೂ ದೀಪಾವಳಿಯ ಸಂಭ್ರ್ರಮದಲ್ಲಿದ್ದೆವು.

 

ಪ್ರತಿವರ್ಷದಂತೆ ಈ ಬಾರಿಯೂ ನಾನು ದೀಪಾವಳಿ ಆಚರಣೆಗೆಂದು ಚೀನಾ ಗಡಿಯ ನಮ್ಮ ಸೇನಾನಿಗಳ ಬಳಿ ಹೋಗಿದ್ದೆ  ITBP ಸೈನಿಕರು, ಭೂ ಸೇನೆಯ ಸೈನಿಕರೆಲ್ಲರ ಜೊತೆ ಹಿಮಾಲಯದ ಉತ್ತುಂಗದಲ್ಲಿ ದೀಪಾವಳಿ ಆಚರಿಸಿದೆ.

ನಾನು ಪ್ರತಿ ಬಾರಿ ಹೋಗುತ್ತೇನೆ ಆದರೆ ಈ ಬಾರಿಯ ಅನುಭವ ವಿಭಿನ್ನವಾಗಿತ್ತು.

ದೇಶದ 125 ಕೋಟಿ ಜನರು ವಿಶಿಷ್ಟವಾದ ರೀತಿಯಲ್ಲಿ ಸೈನಿಕರಿಗೆ, ಸುರಕ್ಷಾ ಬಲದ ವೀರರಿಗೆ ದೀಪಾವಳಿ ಸಮರ್ಪಿಸಿದ್ದರು.
ಅದರ ಪರಿಣಾಮ ಪ್ರತಿ ಸೇನಾನಿಯ ಮುಖದ ಮೇಲೆ ಬಿಂಬಿಸುತ್ತಿತ್ತು. ಅವರೆಲ್ಲರೂ ಭಾವನಾಪೂರಿತರಾಗಿದ್ದುದು ಕಂಡುಬರುತ್ತಿತ್ತು.
ಇಷ್ಟೇ ಅಲ್ಲ ದೇಶದ ಜನತೆ ಕಳುಹಿಸಿದ ಶುಭ ಸಂದೇಶಗಳು, ತಮ್ಮ ಸಂತಸದಲ್ಲಿ ಸೇನಾನಿಗಳನ್ನು ಭಾಗಿಯಾಗಿಸಿಕೊಂಡಿದ್ದು ಒಂದು ಅದ್ಭುತ ಪ್ರತಿಸ್ಪಂದನೆಯಾಗಿತ್ತು.

ಜನರು ಕೇವಲ ಸಂದೇಶ ಮಾತ್ರ ತಿಳಿಸಿದರು ಎಂದಲ್ಲಾ, ಮನಃಪೂರ್ವಕವಾಗಿ ಇದರಲ್ಲಿ ಬೆರೆತಿದ್ದರು.

ಒಬ್ಬರು ಕವಿತೆ ಬರೆದರೆ, ಮತ್ತೊಬ್ಬರು ಚಿತ್ರ ಬರೆದರು, ಮಗದೊಬ್ಬರು ಕಾರ್ಟೂನ್ ಬರೆದರು, ವಿಡಿಯೋ ಕಳುಹಿಸಿದರು, ಅಂದರೆ ಪ್ರತಿ ಮನೆಯೂ ಸೇನಾನಿಗಳ ಠಾಣೆ ತರಹ ಆಗಿ ಹೋಗಿತ್ತು. ನಾನೂ ಈ ಪತ್ರಗಳನ್ನು ನೋಡ್ತಾ ಇದ್ದರೆ ಎಷ್ಟೊಂದು ಕಲ್ಪನೆಗಳಿವೆ, ಎಷ್ಟೊಂದು ಭಾವನೆಗಳಿವೆ ಎಂದು ಆಶ್ಚರ್ಯವಾಗ್ತಾ ಇತ್ತು ಮತ್ತು ಇದೇ ವೇಳೆ ಇದರಲ್ಲಿ ಕೆಲವು ಉತ್ತಮವಾದುವನ್ನು ಆಯ್ಕೆ ಮಾಡಿಕೊಂಡು ಅದರಿಂದ   COFFEE TABLE BOOK ಮಾಡಬಹುದು ಎಂದು ಮೈ ಗೌ ಗೆ ಒಂದು ವಿಚಾರ ಬಂತು.

ಕೆಲಸ ಸಾಗಿದೆ, ನಿಮ್ಮೆಲ್ಲರ ಸಹಕಾರದಿಂದ, ದೇಶದ ಸೇನಾನಿಗಳ ಬಗ್ಗೆ ನಿಮಗಿರುವ ಭಾವನೆಗಳು, ನಿಮ್ಮಲ್ಲರ ಕಲ್ಪನೆಗಳು, ದೇಶದ ಸುರಕ್ಷಾ ಬಲದ ಬಗ್ಗೆ ನಿಮ್ಮ ಭಾವನೆಗಳೇನಿವೆಯೋ ಅವೆಲ್ಲ ಈ ಗ್ರಂಥದಲ್ಲಿ ಅಡಕವಾಗಲಿವೆ. ಪ್ರಧಾನ ಮಂತ್ರಿಯವರೇ, ಸೈನಿಕರಿಗೆ ಹೋಳಿ ಹಬ್ಬ, ದೀಪಾವಳಿ ಎಲ್ಲವೂ ಗಡಿಯಲ್ಲೇ ಆಗತ್ತೆ ಎಂದು ಒಬ್ಬ ಸೇನಾನಿ ನನಗೆ ಪತ್ರ ಬರೆದ.

ಪ್ರತಿ ಘಳಿಗೆಯೂ ದೇಶದ ಸುರಕ್ಷತೆಯಲ್ಲಿ ತೊಡಗಿರುತ್ತಾರೆ.
ಆದರೂ ಹಬ್ಬ ಹರಿದಿನಗಳಲ್ಲಿ ಮನೆಯ ನೆನಪು ಬಂದೇ ಬರುತ್ತದೆ.
ಆದರೆ ಈ ಬಾರಿ ಹಾಗೆ ಅನ್ನಿಸಲೇ ಇಲ್ಲ.
ನಾನು ಮನೆಗೆ ಹೋಗಿಲ್ಲ ಎನ್ನುವ ಭಾವನೆ ಒಂದಿಷ್ಟೂ ಕಂಡುಬರಲಿಲ್ಲ.

ಹೇಗೆ ಅನ್ನಿಸುತ್ತಿತ್ತು ಎಂದರೆ ನಾವೂ 125 ಕೋಟಿ ಭಾರತೀಯರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎನ್ನುವಂತಿತ್ತು.  
ನನ್ನ ಪ್ರೀತಿಯ ದೇಶಬಾಂಧವರೇ, ಈ ದೀಪಾವಳಿಯಂದು, ಇಂಥದೊಂದು ವಾತಾವರಣದಲ್ಲಿ ನಮ್ಮ ದೇಶದ ಸುರಕ್ಷಾ ಬಲದ ಸೈನಿಕರ ಮನದಲ್ಲಿ ಮೂಡಿದಂಥ ಭಾವನೆಗಳು ಕೇವಲ ಕೆಲ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿರಬೇಕೇ? ಇದನ್ನು ನಾವೆಲ್ಲ ಒಂದೇ ರಾಷ್ಟ್ರದ ರೀತಿಯಲ್ಲಿ, ಒಂದೇ ಸಮಾಜದ ರೀತಿಯಲ್ಲಿ ನಮ್ಮ ಸ್ವಭಾವದಂತೆ, ಅಭ್ಯಾಸದಂತೆ ರೂಢಿಸಿಕೊಳ್ಳೋಣ.

ಯಾವುದೇ ಉತ್ಸವವಿರಲಿ, ಹಬ್ಬವಿರಲಿ, ಸಂತಸದ ಸಮಯವಿರಲಿ ನಮ್ಮ ದೇಶದ ಸೈನಿಕರನ್ನು ನಾವು ಒಂದಲ್ಲ ಒಂದು ರೂಪದಲ್ಲಿ ನೆನಪಿಸಿಕೊಳ್ಳೋಣ.

ಸಂಪೂರ್ಣ ದೇಶ ಸೈನಿಕರ ಜೊತೆಯಾಗಿ ನಿಂತಾಗ ಅವರ ಶಕ್ತಿ 125 ಕೋಟಿಯಷ್ಟು ಹೆಚ್ಚಾಗುತ್ತದೆ.  ಕೆಲ ದಿನಗಳ ಹಿಂದೆ ಜಮ್ಮು ಕಾಶ್ಮೀರದಿಂದ ಅಲ್ಲಿನ ಗ್ರಾಮ ಮುಖ್ಯಸ್ಥರೆಲ್ಲರೂ ನನ್ನ ಭೇಟಿಗೆ ಬಂದಿದ್ದರು.
ಅವರೆಲ್ಲ JAMMU – KASHMIR PANCHAYAT CONFERENCEಗೆ  ಸಂಬಂಧಿಸಿದವರಾಗಿದ್ದರು.
ಕಾಶ್ಮೀರ ಕಣಿವೆಯ ಬೇರೆ ಬೇರೆ ಗ್ರಾಮಗಳಿಂದ ಬಂದಿದ್ದರು.
ಸುಮಾರು 40 – 50  ಜನ ಮುಖ್ಯಸ್ಥರಿದ್ದರು.

ತುಂಬಾ ಹೊತ್ತು ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. ಅವರೆಲ್ಲ ತಮ್ಮ ಗ್ರಾಮ ವಿಕಾಸದ ಕೆಲ ವಿಷಯಗಳನ್ನು ಹೊತ್ತು ಬಂದಿದ್ದರು.  ಕೆಲ ಬೇಡಿಕೆಗಳನ್ನು ಮುಂದಿಟ್ಟರು.  ಆದರೆ ಮಾತುಕತೆ ಆರಂಭವಾದಾಗ, ಕಣಿವೆ ಪ್ರದೇಶದ ಪರಿಸ್ಥಿತಿ, ಕಾನೂನು ವ್ಯವಸ್ಥೆ, ಮಕ್ಕಳ ಭವಿಷ್ಯ ಇವೆಲ್ಲ ಮಾತುಗಳು ಬರುವುದು ಸಹಜವಾಗೇ ಇತ್ತು. ಗ್ರಾಮ ಮುಖ್ಯಸ್ಥರೆಲ್ಲ ಎಷ್ಟು ಮುಕ್ತವಾಗಿ, ಎಷ್ಟು ಪ್ರೀತಿಯಿಂದ ಮಾತನಾಡಿದರು ಎಂದರೆ ಅವರ ಪ್ರತಿ ಮಾತೂ ಹೃದಯಸ್ಪರ್ಶಿಯಾಗಿದ್ದವು.  

ಮಾತು ಮುಂದುವರಿದಾಗ ಕಾಶ್ಮೀರದಲ್ಲಿ ಶಾಲೆಗಳನ್ನು ಸುಡುತ್ತಿರುವ ಬಗ್ಗೆ ಕೂಡ ಚರ್ಚೆ ಆಯ್ತು ಮತ್ತು ನನ್ನ ದೇಶವಾಸಿಗಳಿಗೆ ಎಷ್ಟು ದುಖಃವಾಗುತ್ತದೋ ಅಷ್ಟೇ ಈ ಗ್ರಾಮ ಮುಖ್ಯಸ್ಥರೂ ಸಂಕಟ ಅನುಭವಿಸುತ್ತಿದ್ದಾರೆ ಎಂಬುದನ್ನು ನಾನು ಗಮನಿಸಿದೆ.  ಸುಟ್ಟಿದ್ದು ಶಾಲೆಗಳಲ್ಲ ಮಕ್ಕಳ ಭವಿಷ್ಯ ಎಂಬುದನ್ನು ಅವರೂ ಒಪ್ಪಿಕೊಂಡಿದ್ದರು.  ಈ ಮಕ್ಕಳ ಭವಿಷ್ಯದತ್ತ ತಾವೆಲ್ಲ ಗಮನಹರಿಸಿ ಎಂದು ನಾನು ಅವರನ್ನು ಆಗ್ರಹಿಸಿದ್ದೆ. ಕಾಶ್ಮೀರ ಕಣಿವೆಯಿಂದ ಬಂದಿದ್ದ ಮುಖ್ಯಸ್ಥರೆಲ್ಲ ತಾವು ಕೊಟ್ಟ ಮಾತನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂಬ ಬಗ್ಗೆ ನನಗೆ ಆನಂದವೆನಿಸುತ್ತದೆ.

ಗ್ರಾಮಗಳಿಗೆ ತೆರಳಿ ಎಲ್ಲ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಇತ್ತೀಚೆಗೆ ಕೆಲ ದಿನಗಳ ಹಿಂದೆBOARD EXAM ಆಯ್ತಲ್ಲ ಅದರಲ್ಲಿ ಕಾಶ್ಮೀರದ ಶೇಕಡಾ 95ರಷ್ಟು ಬಾಲಕ ಬಾಲಕಿಯರು ಪರೀಕ್ಷೆ ಬರೆದರು. BOARD EXAMನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದರೆ ಜಮ್ಮು ಕಾಶ್ಮೀರದ ನಮ್ಮ ಮಕ್ಕಳು ಶಿಕ್ಷಣದ ಮೂಲಕ ಉಜ್ವಲ ಭವಿಷ್ಯಕ್ಕಾಗಿ, ವಿಕಾಸ ಪಥದೆಡೆ ಹೆಜ್ಜೆ ಹಾಕಲು ಸಂಕಲ್ಪಗೈದಿದ್ದಾರೆ ಎಂಬುದನ್ನು ಇದು ಸೂಚಿಸುತ್ತದೆ.

ಅವರ ಈ ಉತ್ಸಾಹಕ್ಕೆ ನಾನು ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ.  ಜೊತೆಗೆ ಅವರ ತಂದೆ ತಾಯಂದಿರು, ಪರಿವಾರದವರು, ಅವರ ಶಿಕ್ಷಕರು ಮತ್ತು ಗ್ರಾಮ ಮುಖ್ಯಸ್ಥರಿಗೂ ನಾನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ.

ಪ್ರೀತಿಯ ಸೋದರ ಸೋದರಿಯರೇ, ಈ ಬಾರಿ ಮನದಾಳದ ಮಾತಿಗಾಗಿ ನಾನು ಜನರನ್ನು ಸಲಹೆ ನೀಡುವಂತೆ ಕೇಳಿದಾಗ ಹೆಚ್ಚು ಕಡಿಮೆ ಎಲ್ಲರಿಂದ 500 ಮತ್ತು 1 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಎಂಬ ಏಕಮುಖ ಸಲಹೆಗಳು ಬಂದವು.  ನವೆಂಬರ್ 8ರಂದು ರಾತ್ರಿ 8 ಗಂಟೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ದೇಶದಲ್ಲಿ ಸುಧಾರಣೆ ತರಲು ಒಂದು ಮಹಾ ಅಭಿಯಾನವನ್ನು ಆರಂಭಿಸುವ ಕುರಿತು ನಾನು ಚರ್ಚಿಸಿದ್ದೆ.

ನಾನು ಈ ಕುರಿತು ನಿರ್ಣಯ ಕೈಗೊಂಡಾಗ, ನಿಮ್ಮ ಮುಂದೆ ಪ್ರಸ್ತುತಪಡಿಸಿದಾಗ, ಆಗಲೂ ನಾನು ಎಲ್ಲರಿಗೆ ಹೇಳಿದ್ದೆ ನಿರ್ಣಯ ಸಾಮಾನ್ಯವಾದದ್ದಲ್ಲ, ತುಂಬಾ ಕ್ಲಿಷ್ಟತೆಗಳಿಂದ ತುಂಬಿದೆ ಎಂದು.

ಆದರೆ ನಿರ್ಣಯ ಎಷ್ಟು ಮಹತ್ವಪೂರ್ಣದ್ದೋ ಅಷ್ಟೇ ಮಹತ್ವ ಅದರ ಜಾರಿಗೂ ನೀಡಬೇಕಾಗುತ್ತದೆ.  ನಮ್ಮ ಸಾಮಾನ್ಯ ಜನಜೀವನದಲ್ಲಿ ಹೊಸ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಬಗ್ಗೆಯೂ ನನಗೆ ಕಲ್ಪನೆಯಿತ್ತು.
ನಿರ್ಣಯ ಎಷ್ಟು ಸುದೀರ್ಘವಾದದ್ದೆಂದರೆ ಅದರಿಂದ ಹೊರಬರಲು ಸುಮಾರು 50 ದಿನಗಳೇ ಬೇಕಾಗುತ್ತದೆ ಎಂದೂ ಹೇಳಿದ್ದೆ.

ಈಗ ಸಾಮಾನ್ಯ ಸ್ಥಿತಿಗೆ ಮರಳುತ್ತಾ ಇದ್ದೇವೆ.  70 ರ್ಷಗಳಿಂದ ಅಂಟಿಕೊಂಡ ಜಾಡ್ಯದಿಂದ, ರೋಗದಿಂದ ಮುಕ್ತಿ ಪಡೆಯುವ ಅಭಿಯಾನ ಅಷ್ಟು ಸರಳವಾಗಿರಲು ಸಾಧ್ಯವಿಲ್ಲ. ನಿಮ್ಮ ಕಷ್ಟಗಳನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ.  ಆದರೆ ನಿಮ್ಮನ್ನು ಭ್ರಮೆಗೆ ಒಳಪಡಿಸುವ ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ, ಕೆಲವೊಮ್ಮೆ ಮನಸ್ಸನ್ನು ವಿಚಲಿತಗೊಳಿಸುವ ಘಟನೆಗಳು ಕಣ್ಣ ಮುಂದೆ ನಡೆದರೂ ನಿಮ್ಮ ಸಮರ್ಥನೆ ಮತ್ತು ಸಹಯೋಗ ನೋಡಿದರೆ ನೀವು ಸತ್ಯಯುತವಾದ ಈ ಮಾರ್ಗವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ, ದೇಶದ ಹಿತದ ದೃಷ್ಟಿಯಿಂದ ಈ ವಿಷಯವನ್ನು ಸಂಪೂರ್ಣ ಸ್ವೀಕರಿಸಿದ್ದೀರಿ ಎನಿಸುತ್ತದೆ.

500 ಮತ್ತು 1 ಸಾವಿರ ನೋಟುಗಳು ಮತ್ತು ಇಷ್ಟು ದೊಡ್ಡ ದೇಶ, ಲಕ್ಷಗಟ್ಟಲೆ ಕೋಟಿಗಟ್ಟಲೆ ನೋಟಿನ ಸಂಗ್ರಹ ಮತ್ತು ಈ ನಿರ್ಣಯ, ಸಂಪೂರ್ಣ ವಿಶ್ವದ ದೃಷ್ಟಿ ನಮ್ಮ ಮೇಲಿತ್ತು.

ಪ್ರತಿಯೊಬ್ಬ ಅರ್ಥ ಶಾಸ್ತ್ರಜ್ಞ ಇದರ ವಿಶ್ಲೇಷಣೆಯಲ್ಲಿ ತೊಡಗಿದ್ದ, ಮೌಲ್ಯಮಾಪನ ಮಾಡುತ್ತಿದ್ದ.

ಹಿಂದುಸ್ತಾನದ ಜನತೆ ಕಠಿಣ ಪರಿಸ್ಥಿತಿಗಳನ್ನು ಎದುರಿಸಿಯೂ ಯಶಸ್ಸನ್ನು ಸಾಧಿಸಬಲ್ಲರೇ ಎಂದು ಸಂಪೂರ್ಣ ವಿಶ್ವ ನೋಡುತ್ತಾ ಇದೆ.  ವಿಶ್ವದ ಮನದಲ್ಲಿ ಪ್ರಶ್ನಾರ್ಥಕ ಚಿನ್ಹೆಗಳು ಮೂಡುತ್ತಿರಬಹುದು! ಭಾರತಕ್ಕೆ ದೇಶದ 125 ಕೋಟಿ ಜನರತ್ತ ಕೇವಲ ಶೃದ್ಧೆಯೇ ಇದೆ, 125 ಕೋಟಿ ಜನರು ಸಂಕಲ್ಪವನ್ನು ಪೂರೈಸಿಯೇ ತೀರುತ್ತಾರೆ ಎಂಬ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.  ಮತ್ತು ನಮ್ಮ ದೇಶ ಎಲ್ಲ ರೀತಿಯ ಕಠಿಣ ಪರೀಕ್ಷೆಗೊಳಪಟ್ಟು, ಬೆಂಕಿಯಲ್ಲಿ ಬೆಂದು ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತದೆ.  ಮತ್ತು ಅದಕ್ಕೆ ಕಾರಣೀಕರ್ತರು ನಮ್ಮ ದೇಶದ ನಾಗರೀಕರು.  ಇದಕ್ಕೆ ಕಾರಣೀಕರ್ತರು ನೀವು.  

ಈ ಸಫಲತೆಯ ಮಾರ್ಗ ಕೂಡಾ ನಿಮ್ಮಿಂದಲೇ ಸುಗಮವಾಗಿ ಸಾಧಿಸಲು ಸಾಧ್ಯವಾಗಿದೆ.  ಸಂಪೂರ್ಣ ದೇಶದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಎಲ್ಲ ಘಟಕಗಳು, 1 ಲಕ್ಷ 30 ಸಾವಿರ ಬ್ಯಾಂಕ್ ಬ್ರಾಂಚ್‍ಗಳು, ಲಕ್ಷಗಟ್ಟಲೆ ಬ್ಯಾಂಕ್ ಉದ್ಯೋಗಿಗಳು, ಒಂದೂವರೆ ಲಕ್ಷಕ್ಕಿಂತ ಹೆಚ್ಚು ಪೆÇೀಸ್ಟ್ ಆಫೀಸ್‍ಗಳು, ಒಂದು ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಮಿತ್ರರು, ಹಗಲು ರಾತ್ರಿ ಈ ಕೆಲಸದಲ್ಲಿ ಸಮರ್ಪಣಾ ಭಾವದಿಂದ ನಿರತರಾಗಿದ್ದಾರೆ.
ಚಿತ್ರ ವಿಚಿತ್ರ ಒತ್ತಡಗಳ ನಡುವೆಯೂ ಇವರೆಲ್ಲರೂ ಅತ್ಯಂತ ಶಾಂತಚಿತ್ತರಾಗಿ ಈ ದೇಶಸೇವೆಯನ್ನು ಒಂದು ಯಾಗವೆಂದು ಭಾವಿಸಿ, ಪರಿವರ್ತನೆಯ ಒಂದು ಮಹಾ ಪ್ರಯತ್ನ ಎಂದು ಭಾವಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಆರಂಭಿಸಿದರೆ ರಾತ್ರಿ ಯಾವಾಗ ಕಳೆಯುತ್ತೋ ಗೊತ್ತಾಗೊಲ್ಲ ಆದರೆ ಎಲ್ಲರೂ ಕೆಲಸ ಮಾಡುತ್ತಿದ್ದಾರೆ.
ಹಾಗಾಗಿಯೇ ಭಾರತ ಇದರಲ್ಲಿ ಸಫಲವಾಗಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಬ್ಯಾಂಕ್ ಉದ್ಯೋಗಿಗಳು ಮತ್ತು ಪೋಸ್ಟ್ ಆಫೀಸ್‍ನವರು ಕೆಲಸ ಮಾಡುತ್ತಿದ್ದಾರೆ.
ಮಾನವೀಯತೆ ಬಗ್ಗೆ ಹೇಳುವುದಾದರೆ ಅವರೆಲ್ಲ ಒಂದು ಹೆಜ್ಜೆ ಮುಂದೆ ಇದ್ದಾರೆ ಎನ್ನಬಹುದು.
‘ ಖಂಡವಾ ‘ ದಲ್ಲಿ ಒಬ್ಬ ಹಿರಿಯ ನಾಗರಿಕರ ACCIDENT ಆಯ್ತು ಎಂದು ಯಾರೋ ನನಗೆ ಹೇಳಿದರು ಅಕಸ್ಮಾತ್ತಾಗಿ ಹಣದ ಅವಶ್ಯಕತೆ ತಲೆದೋರಿತು.

ಅಲ್ಲಿಯ ಸ್ಥಳೀಯ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ವಿಷಯ ತಿಳಿದು ಸ್ವತಃ ಅವರು ಆ ಹಿರಿಯರ ಮನೆಗೆ ಹೋಗಿ ಹಣ ತಲುಪಿಸಿದ್ದಾರೆ ಎಂಬುದನ್ನು ಕೇಳಿ ಬಹಳ ಆನಂದವಾಯ್ತು.  ಇಂಥ ಹಲವಾರು ಘಟನೆಗಳು ಪ್ರತಿದಿನ ಟಿ ವಿ ಯಲ್ಲಿ, ರೇಡಿಯೋದಲ್ಲಿ, ದಿನಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಲೇ ಇವೆ.

ಈ ಮಹಾಯಜ್ಞದಲ್ಲಿ ಶ್ರಮಿಸುತ್ತಿರುವ, ಕಟಿಬದ್ಧರಾಗಿರುವ ಎಲ್ಲ ಜೊತೆಗಾರರಿಗೂ ನಾನು ಹೃದಯ ತುಂಬಿ ಧನ್ಯವಾದ ಅರ್ಪಿಸುತ್ತೇನೆ.

ಪರೀಕ್ಷೆ ಎದುರಿಸಿ ದಾಟಿ ಬಂದಾಗಲೇ ನಮ್ಮ ಶಕ್ತಿಯ ಅರಿವಾಗುತ್ತದೆ.

ನನಗೆ ಚೆನ್ನಾಗಿ ನೆನಪಿದೆ ಪ್ರಧಾನ ಮಂತ್ರಿಯವರಿಂದ ಜನ್‍ಧನ್ ಯೋಜನೆ ಅಭಿಯಾನ ಆರಂಭಿಸಿದಾಗ ಬ್ಯಾಂಕ್ ಉದ್ಯೋಗಿಗಳು ಹೇಗೆ ಅದನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು ಮತ್ತು 70 ವರ್ಷಗಳವರೆಗೆ ಆಗದ ಕೆಲಸವನ್ನು ಮಾಡಿ ತೋರಿಸಿದರು ಎಂಬುದು ನನಗೆ ಚೆನ್ನಾಗಿ ನೆನಪಿದೆ.  ಅವರ ಸಾಮರ್ಥ್ಯದ ಪರಿಚಯವಾಯಿತು.
ಇಂದು ಮತ್ತೊಮ್ಮೆ ಈ ಚಾಲೆಂಜ್‍ನ್ನು ಅವರು ಎತ್ತಿಕೊಂಡಿದ್ದಾರೆ.

ಮತ್ತು 125 ಕೋಟಿ ಜನರ ಸಂಕಲ್ಪ, ಎಲ್ಲರ ಸಾಮೂಹಿಕ ಪರಿಶ್ರಮ ಈ ದೇಶವನ್ನು ಒಂದು ಹೊಸ ಶಕ್ತಿಯನ್ನಾಗಿ ರೂಪಿಸಬಲ್ಲದು ಎಂಬ ವಿಶ್ವಾಸ ನನಗಿದೆ. ಆದರೆ ಅನೀತಿ ಎಷ್ಟು ಹಬ್ಬಿದೆ ಎಂದರೆ ಇಂದಿಗೂ ಕೆಲ ಜನರ ಅನೀತಿ ಬುದ್ಧಿ ಹೋಗೋದಿಲ್ಲ.

ಈಗಲೂ ಕೆಲವರಿಗೆ ಈ ಭ್ರಷ್ಟಾಚಾರದ ಹಣ, ಕಪ್ಪು ಹಣ, ಅನೀತಿಯ ಹಣ, ಲೆಕ್ಕಕ್ಕೆ ಬಾರದ ಹಣವನ್ನು ಯಾವುದಾದರೂ ಮಾರ್ಗವನ್ನು ಶೋಧಿಸಿ ಆ ಮೂಲಕ ಮುಖ್ಯ ವ್ಯವಸ್ಥೆಗೆ ಹೇಗೆ ತರುವುದು ಎಂದು ಹುನ್ನಾರ ಹೂಡುತ್ತಿದ್ದಾರೆ. ಅವರು ತಮ್ಮ ಹಣವನ್ನು ಉಳಿಸಲು ಅನೀತಿಯ ಮಾರ್ಗ ಹುಡುಕುತ್ತಿದ್ದಾರೆ.

ದುಃಖದ ವಿಷಯ ಎಂದರೆ ಈ ಬಾರಿಯೂ ಅವರು ಬಡವರನ್ನೇ ಈ ಕೆಲಸಕ್ಕೆ ಆಯ್ದುಕೊಂಡಿರುವುದು. ಬಡಜನರನ್ನು ಭ್ರಮಿತರನ್ನಾಗಿ ಮಾಡಿ, ಆಸೆ, ಪ್ರಲೋಭನೆಯ ಮಾತಾಡಿ, ಅವರ ಖಾತೆಗಳಲ್ಲಿ ಹಣ ಜಮೆ ಮಾಡಿ, ಅವರಿಂದ ಕೆಲವು ಕೆಲಸ ಮಾಡಿಸಿಕೊಂಡು ಹಣ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಇಂಥ ಜನರಿಗೆ ಹೇಳಬಯಸುತ್ತೇನೆ – ಸುಧಾರಿಸುವುದು, ಸುಧಾರಿಸದೇ ಇರುವುದು ನಿಮ್ಮ ಇಷ್ಟ, ಕಾನೂನಿನ ಪಾಲನೆ ಮಾಡುವುದು, ಬಿಡುವುದು ನಿಮ್ಮಿಷ್ಟ, ಅದನ್ನು ಕಾನೂನು ನೋಡಿಕೊಳ್ಳುತ್ತದೆ.  ಆದರೆ, ದಯಮಾಡಿ ಬಡವರ ಜೀವನದೊಂದಿಗೆ ಆಟ ಆಡಬೇಡಿ..
ರೆಕಾರ್ಡ್‍ನಲ್ಲಿ ಬಡವರ ಹೆಸರು ಬಂದು, ಅದನ್ನು ನಂತರ ಪರಿಶೀಲಿಸಿದಾಗ ನಿಮ್ಮ ಪಾಪಕರ್ಮದಿಂದ ನನ್ನ ಪ್ರಿಯ ಬಡ ಬಂಧು ತೊಂದರೆಗೆ ಸಿಲುಕಿಕೊಳ್ಳುವಂತಹ ಕೆಲಸವನ್ನು ಮಾಡಬೇಡಿ.

ಅಲ್ಲದೆ ಬೇನಾಮಿ ಸಂಪತ್ತಿನ ಬಗ್ಗೆ ಎಂಥ ಕಠಿಣ ಕಾನೂನು ಇದ್ದು, ಅದು ಇಲ್ಲಿ ಜಾರಿ ಆಗುತ್ತದೆ.  ಅಂದರೆ ಬಹಳಷ್ಟು ಸಂಕಷ್ಟಗಳು ಎದುರಾಗಲಿವೆ ಮತ್ತು ನಮ್ಮ ದೇಶವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಆಗಲಿ ಎಂದು ಸರ್ಕಾರ ಬಯಸುವುದಿಲ್ಲ.

ಮಧ್ಯ ಪ್ರದೇಶದಿಂದ ಶ್ರೀಯುತ ಆಶಿಷ್ ಎಂಬುವರು ದೂರವಾಣಿ ಕರೆ ಮಾಡಿ 500 ಮತ್ತು 1 ಸಾವಿರ ರೂಪಾಯಿ ನೋಟುಗಳನ್ನು ರದ್ದುಗೊಳಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಕಪ್ಪು ಹಣದ ವಿರುದ್ಧ ಸಾರಿದ ಸಮರದ ಕುರಿತು ಮಾತನಾಡಿದ್ದಾರೆ.  ಈ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಸರ್, ನಮಸ್ತೆ.  ನನ್ನ ಹೆಸರು ಆಶೀಶ್ ಪಾರೆ ಎಂದು.  ನಾನು ತಿರಾಲಿ ಗ್ರಾಮ, ಅಂಚೆ ಪೆಟ್ಟಿಗೆ ತಿರಾಲಿ, ಹರದಾ ಜಿಲ್ಲೆ, ಮಧ್ಯ ಪ್ರದೇಶದ ಒಬ್ಬ ಸಾಮಾನ್ಯ ನಾಗರಿಕನಾಗಿದ್ದೇನೆ.  ತಾವು 500 ಮತ್ತು 1 ಸಾವಿರ ರೂಪಾಯಿ ನೋಟುಗಳನ್ನು ರದ್ದುಗೊಳಿಸಿರುವುದು ತುಂಬಾ ಪ್ರಶಂಸನೀಯ ಕಾರ್ಯವಾಗಿದೆ.  ನಿಮ್ಮ ಮನದಾಳದ ಮಾತಿನಲ್ಲಿ ಜನರು ಸಂಕಷ್ಟಗಳನ್ನು ಎದುರಿಸಿಯೂ ರಾಷ್ಟ್ರ ಉನ್ನತಿಗಾಗಿ ಈ ಕಠಿಣ ನಿರ್ಣಯವನ್ನು ಹೇಗೆ ಸ್ವಾಗತಿಸಿದ್ದಾರೆ ಎಂಬ ಕುರಿತು ಹೆಚ್ಚೆಚ್ಚು ಉದಾಹರಣೆಗಳನ್ನು ನೀಡಿ.  

ಇದರಿಂದ ಜನರು ಇನ್ನಷ್ಟು ಉತ್ಸಾಹಭರಿತರಾಗುತ್ತಾರೆ.  ರಾಷ್ಟ್ರ ನಿರ್ಮಾಣಕ್ಕೆ ಕ್ಯಾಶ್‍ಲೆಸ್ ವ್ಯವಸ್ಥೆ ತುಂಬಾ ಅವಶ್ಯ ಮತ್ತು ನಾನು ಕೂಡ ಸಂಪೂರ್ಣ ದೇಶದೊಂದಿಗೆ ಇದ್ದೇನೆ.  ನೀವು 500 ಮತ್ತು 1 ಸಾವಿರ ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ್ದಕ್ಕೆ ನಾನು ತುಂಬಾ ಸಂತೋಷಿಸುತ್ತೇನೆ .

ಇದೇ ರೀತಿ ಕರ್ನಾಟಕದಿಂದ ನನಗೆ ಯಲ್ಲಪ್ಪಾ ವೇಲಾಂಕರ್ ಎಂಬುವರು ಕರೆ ಮಾಡಿದ್ದರು.  
ಮೋದಿ ಜಿ ಅವರೆ ನಮಸ್ಕಾರ.  ನಾನು ಕೊಪ್ಪಳ ಜಿಲ್ಲೆಯ ಗ್ರಾಮವೊಂದರಿಂದ ಯಲ್ಲಪ್ಪಾ ವೇಲಾಂಕರ್ ಮಾತಾಡ್ತಾ ಇದ್ದೀನಿ.  ನಾನು ಮನಃಪೂರ್ವಕವಾಗಿ ನಿಮಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.  

ನೀವು ಒಳ್ಳೇ ದಿನಗಳು ಬರುತ್ತವೆ ಎಂದು ಹೇಳಿದ್ದಿರಿ ಆದರೆ ಇಂಥ ದೊಡ್ಡ ಕ್ರಮ ಕೈಗೊಳ್ಳಬಹುದು ಎಂದು ಯಾರೂ ಊಹಿಸಿರಲಿಲ್ಲ.  500 ಮತ್ತು 1 ಸಾವಿರ ರೂಪಾಯಿ ನೋಟುಗಳನ್ನು ರದ್ದುಗೊಳಿಸಿ ನೀವು ಭೃಷ್ಟಾಚಾರಿಗಳು ಮತ್ತು ಕಪ್ಪು ಹಣ ಇಟ್ಟುಕೊಂಡವರಿಗೆ ಒಳ್ಳೇ ಪಾಠ ಕಲಿಸಿದ್ದೀರಿ.  ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಇದಕ್ಕಿಂತ ಒಳ್ಳೇ ದಿನ ಎಂದೂ ಬರಲಾರದು.  

ಅದಕ್ಕಾಗಿಯೇ ಮನಸಾರೆ ನಿಮಗೆ ಧನ್ಯವಾದ ತಿಳಿಸಬಯಸುತ್ತೇನೆ.  

ಕೆಲವು ವಿಷಯಗಳು ಮಾಧ್ಯಮದ ಮೂಲಕ, ಜನರಿಂದ, ಸರ್ಕಾರೀ ವ್ಯವಸ್ಥೆ ಮೂಲಕ ತಿಳಿಯುತ್ತವೆ ಎಂದಾಗ ಕೆಲಸ ಮಾಡುವ ಹುಮ್ಮಸ್ಸು ದ್ವಿಗುಣಗೊಳ್ಳುತ್ತದೆ.

ನನ್ನ ದೇಶದ ಸಾಮಾನ್ಯ ಮನುಷ್ಯನ ಸಾಮರ್ಥ್ಯ ಕಂಡು ಎಷ್ಟು ಆನಂದವಾಗುತ್ತದೆ, ಎಷ್ಟು ಹೆಮ್ಮೆ ಎನಿಸುತ್ತದೆ.
ಮಹಾರಾಷ್ಟ್ರದ ಅಕೋಲಾದ NATIONAL HIGHWAY – 6ರಲ್ಲೊಂದು RESTAURANT ಇದೆ.  ನಿಮ್ಮ ಜೇಬಿನಲ್ಲಿ ಹಳೆಯ ನೋಟುಗಳಿದ್ದು ನೀವು ಊಟ ಮಾಡಬಯಸಿದಲ್ಲಿ ಹಣದ ಬಗ್ಗೆ ಚಿಂತಿಸಬೇಡಿ, ಇಲ್ಲಿಂದ ಉಪವಾಸ ಹೋಗಬೇಡಿ.  ಊಟ ಮಾಡಿಕೊಂಡೇ ಹೋಗಿ ಮತ್ತು ಮುಂದೆಂದಾದರೂ ಈ ರಸ್ತೆಯಿಂದ ಹಾದು ಹೋಗುವ ಅವಕಾಶ ದೊರೆತಲ್ಲಿ ಖಂಡಿತ ಹಣ ನೀಡಿ ಹೋಗಬಹುದು ಎಂದು ಅವರು ಒಂದು ದೊಡ್ಡ ಬೋರ್ಡ ಹಾಕಿದ್ದಾರೆ ಮತ್ತು ಜನರು ಅಲ್ಲಿಗೆ ಹೋಗುತ್ತಾರೆ, ಊಟ ಮಾಡುತ್ತಾರೆ ಮತ್ತು  

2 – 4 – 6  ದಿನಗಳ ನಂತರ ಅಲ್ಲಿಂದ ಮತ್ತೆ ಹಾದು ಹೋಗುತ್ತಾರೆ ಮತ್ತು ಹಣವನ್ನು ನೀಡಿ ಹೋಗುತ್ತಾರೆ.  ಇದು ನನ್ನ ದೇಶದ ತಾಕತ್ತು.  ಇದರಲ್ಲಿ ಸೇವಾ ಭಾವನೆ ಮತ್ತು ತ್ಯಾಗದ ಭಾವನೆಯೂ ಇದೆ ಮತ್ತು ಪ್ರಾಮಾಣಿಕತೆಯೂ ಇದೆ.  

ನಾನು ಚುನಾವಣೆ ಸಂದರ್ಭದಲ್ಲಿ ಚಹಾ ಜೊತೆಗೆ ಮಾತುಕತೆ ಮಾಡುತ್ತಿದ್ದೆ.  

ಮತ್ತು ವಿಶ್ವದೆಲ್ಲೆಡೆ ಈ ಮಾತು ಹರಡಿತ್ತು.  ವಿಶ್ವದ ಎಷ್ಟೋ ದೇಶದ ಜನರು ಚಹಾ ಜೊತೆಗೆ ಮಾತುಕತೆ ಎಂಬ ಶಬ್ದಗಳನ್ನು ಕಲಿತಿದ್ದರು.  ಆದರೆ ನನಗೆ ಚಹಾ ಜೊತೆಗೆ ಮಾತುಕತೆಯಲ್ಲಿ ಮದುವೆಗಳೂ ನಡೆಯುತ್ತವೆ ಎಂದು ತಿಳಿದಿರಲಿಲ್ಲ.  17 ನವೆಂಬರ್ ಗೆ ಸೂರತ್‍ನಲ್ಲಿ ಇಂಥದೇ ಒಂದು ಮದುವೆಯಾಯ್ತು ಎಂದು ನನಗೆ ತಿಳಿದು ಬಂತು.

ಗುಜರಾತ್‍ನ ಸೂರತ್‍ನಲ್ಲಿ ಒಬ್ಬಳು ಯುವತಿ ತನ್ನ ಮದುವೆಗೆ ಬಂದ ಅತಿಥಿಗಳಿಗೆ ಕೇವಲ ಚಹಾ ಮಾತ್ರ ಕೊಟ್ಟಿದ್ದಾಳಂತೆ ಮತ್ತು ಮದುವೆಯಲ್ಲಿ ಯಾವ  ಭರಾಟೆಯೂ ಇರಲಿಲ್ಲ, ಊಟ, ಪಾಟ ಎಂಥದೂ ಇಲ್ಲ.

ಯಾಕೆ ಅಂದ್ರೆ ನೋಟ್ ರದ್ದು ಮಾಡಿರುವ ಕಾರಣದಿಂದ ಮದುವೆಗೆ   ಹಣದ ಅಡಚಣೆ ಉಂಟಾಗಿತ್ತು.  ಬೀಗರೂ ಅದನ್ನು ಸಮ್ಮಾನಪೂರ್ವಕವಾಗಿ ಸ್ವಾಗತಿಸಿದ್ದರು.  ಸೂರತ್‍ನ ಭರತ್ ಮಾರೂ ಮತ್ತು ದಕ್ಷಾ ಪರಮಾರ್ ತಮ್ಮ ವಿವಾಹದ ಮೂಲಕ ಭ್ರಷ್ಟಾಚಾರದ ವಿರುದ್ಧ, ಕಪ್ಪು ಹಣದ ವಿರುದ್ಧ, ನಮ್ಮ ಸಮರಕ್ಕೆ ಕೈಜೋಡಿಸಿರುವುದು ತುಂಬಾ ಪ್ರೇರಣಾದಾಯಕವಾಗಿದೆ.

ನವವಿವಾಹಿತ ಭರತ್ ಮತ್ತು ದಕ್ಷಾ ಅವರಿಗೆ ನಾನು ಆಶೀರ್ವದಿಸುತ್ತಿದ್ದೇನೆ.  ಅಲ್ಲದೆ ಮದುವೆಯಂಥ ಸಮಾರಂಭವನ್ನೂ ಈ ಮಹಾ ಯಜ್ಞದ ರೂಪದಲ್ಲಿ ಪರಿವರ್ತನೆಗೊಳಿಸಿ ಒಂದು ಹೊಸ ಸಂದರ್ಭವಾಗಿ ಬದಲಾಯಿಸಿದ್ದಕ್ಕೆ ಅಭಿನಂದಿಸುತ್ತೇನೆ ಮತ್ತು ಇಂಥ ಸಂಕಟಗಳು ಬಂದಾಗ ಜನರು ಅದ್ಭುತವಾದ ದಾರಿಯನ್ನೂ ಹುಡುಕಿಕೊಳ್ಳುತ್ತಾರೆ.

ನಾನೊಮ್ಮೆ ಟಿ ವಿ ನ್ಯೂಸ್‍ನಲ್ಲಿ ನೋಡಿದೆ.  ರಾತ್ರಿ ತಡವಾಗಿ ಬಂದಿದ್ದೆ ಸುಮ್ಮನೇ ನೋಡ್ತಾ ಇದ್ದೆ.  ಅಸ್ಸಾಂನಲ್ಲಿ ಧೆಕಿಯಾಜುಲಿ ಎಂಬ ಪುಟ್ಟ ಗ್ರಾಮವಿದೆ.  ಟೀ ವರ್ಕರ್ಸ್  ಅಲ್ಲಿ ಇರುತ್ತಾರೆ ಮತ್ತು ಅವರಿಗೆ ವಾರಕ್ಕೆ ಒಮ್ಮೆ ಹಣ ಸಿಗತ್ತೆ.  

ಈಗ 2 ಸಾವಿರ ರೂಪಾಯಿ ನೋಟು ಸಿಕ್ಕಿದೆ ಎಂದರೆ ಅವರೇನು ಮಾಡಿದರು? ಅಕ್ಕಪಕ್ಕದ ಮನೆಯ ನಾಲ್ಕಾರು ಜನ ಮಹಿಳೆಯರು ಒಟ್ಟು ಗೂಡಿ ಜೊತೆ ಜೊತೆಗೇ ಅವಶ್ಯಕ ಸಾಮಾನುಗಳನ್ನು ಖರೀದಿಸಿ ಹಣ ಪಾವತಿಸಿದರು.  ಹಾಗಾಗಿ ಅವರಿಗೆ ಚಿಲ್ಲರೆ ಹಣದ ಅವಶ್ಯಕತೆಯೆನಿಸಲಿಲ್ಲ.  

ನಾಲ್ಕಾರು ಜನ ಸೇರಿ ಖರೀದಿಸಿದರು ಮತ್ತು ಮುಂದಿನ ವಾರ ಸಿಕ್ಕಾಗ ಅದರ ಲೆಕ್ಕಪತ್ರ ನೋಡಿಕೊಳ್ಳೋಣ ಎಂದು ನಿರ್ಧರಿಸಿದರು.  ಹೀಗೆ ಜನರು ತಮ್ಮಷ್ಟಕ್ಕೇ ದಾರಿ ಹುಡುಕಿಕೊಳ್ಳುತ್ತಾರೆ ಮತ್ತು ಇದರ ಬದಲಾವಣೆ ಕೂಡ ನೋಡಿ, ಅಸ್ಸಾಂ ಟೀ ಗಾರ್ಡನ್ ಜನರು ತಮ್ಮಲ್ಲಿ ಎ ಟಿ ಎಂ ಬೇಕು ಎಂದು ಕೇಳುತ್ತಿದ್ದಾರೆ ಎಂದು ಸರ್ಕಾರಕ್ಕೆ ಒಂದು ಮೆಸೇಜ್ ಬಂತು,ನೋಡಿ ಹೇಗೆ ಗ್ರಾಮ್ಯ ಜೀವನದಲ್ಲೂ ಬದಲಾವಣೆಗಳು ಆಗುತ್ತಿವೆ ಎಂದು.
ಈ ಅಭಿಯಾನದಿಂದ ಕೆಲ ಜನರಿಗೆ ತಾತ್ಕಾಲಿಕ ಲಾಭ ದೊರೆತಿದೆ.

ದೇಶಕ್ಕೂ ಮುಂಬರುವ ದಿನಗಳಲ್ಲಿ ಲಾಭವಾಗಲಿದೆ.  ಆದರೆ ಕೆಲ ಜನರಿಗೆ ತುರ್ತು ಲಾಭಗಳಾಗಿವೆ.
ಲೆಕ್ಕಪತ್ರದ ಬಗ್ಗೆ ಕೇಳಿದಾಗ, ನನಗೆ ಸಣ್ಣ ಪುಟ್ಟ ನಗರಗಳಿಂದ ಸ್ವಲ್ಪ ಮಾಹಿತಿ ಬಂದಿದೆ.  ನನಗೆ ಮಾಹಿತಿ ಸಿಕ್ಕ ಸುಮಾರು 40 – 50 ನಗರಗಳ ಪ್ರಕಾರ ನೋಟ್ ಬ್ಯಾನ್ ಮಾಡಿದ್ದರಿಂದ ಅವರ ಉಳಿದ ಬಾಕಿ ಎಲ್ಲ ವಾಪಸ್ ಬಂದಿದೆ.  ಕೆಲ ಜನರು ಟ್ಯಾಕ್ಸ ಕಟ್ಟುತ್ತಿರಲಿಲ್ಲ, ನೀರಿನ ಮತ್ತು ವಿದ್ಯುತ್ ಟ್ಯಾಕ್ಸ ಕಟ್ಟುತ್ತಿರಲಿಲ್ಲ.  

ಹಣ ನೀಡುತ್ತಲೇ ಇರಲಿಲ್ಲ.  ನಿಮಗೂ ಅದು ಚೆನ್ನಾಗಿ ಗೊತ್ತಿದೆ.  ಪಾಪ ಬಡ ಜನರು ಕೊನೇ ದಿನಾಂಕದಂದು ಹೋಗಿ ಒಂದೊಂದು ರೂಪಾಯಿಯೂ ಪಾವತಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಈ ದೊಡ್ಡ ಜನರಿದ್ದಾರಲ್ಲ, ಯಾರಿಗೆ ದೊಡ್ಡ ಜನರ ಶಿಫಾರಸ್ಸಿರುತ್ತದಲ್ಲಾ ಅವರಿಗೆ ತಮ್ಮನ್ನು ಯಾರೂ ಕೇಳುವುದಿಲ್ಲ ಎಂದು ಗೊತ್ತು, ಅಂಥವರೇ ಹಣ ಸಂದಾಯ ಮಾಡುವುದಿಲ್ಲ.  ಆದ್ದರಿಂದ ಬಹಳಷ್ಟು ಬಾಕಿ ಉಳಿಯುತ್ತದೆ.  ಪ್ರತಿ ಮುನಿಸಿಪಾಲ್ಟಿಗಳಿಗೆ ಟ್ಯಾಕ್ಸ ಅತ್ಯಂತ ದುರ್ಲಭ ರೀತಿಯಲ್ಲಿ ಅರ್ಧದಷ್ಟು ಮಾತ್ರ ಬರುತ್ತದೆ.  

ಆದರೆ ಈ 8ನೇ ತಾರೀಖಿನ ನಿರ್ಣಯದಿಂದಾಗಿ ತಮ್ಮ ಹಳೇ ನೋಟುಗಳನ್ನು ಜಮಾ ಮಾಡಲು ಓಡಿದರು.  47 ನಗರಗಳ ಘಟಕಗಳಲ್ಲಿ ಕಳೆದ ವರ್ಷ ಈ ಸಮಯಕ್ಕೆ ಸುಮಾರು 3 ರಿಂದ ಮೂರುವರೆ ಸಾವಿರ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು.  ಈ ಬಾರಿ ಈ ಒಂದು ವಾರದಲ್ಲಿ  13 ಸಾವಿರ ಕೋಟಿ ರೂಪಾಯಿ ಜಮೆ ಆಗಿದೆ ಎಂದು ಕೇಳಿ ತಮಗೆ ಆಶ್ಚರ್ಯವೂ ಆಗಬಹುದು, ಆನಂದವೂ ಆಗಬಹುದು.  

ಎಲ್ಲಿಯ 3ರಿಂದ ಮೂರುವರೆ ಸಾವಿರ ಕೋಟಿ, ಎಲ್ಲಿಯ 13 ಸಾವಿರ ಕೋಟಿ ರೂಪಾಯಿ.  ಈಗ ಆ ನಗರಪಾಲಿಕೆಗಳಲ್ಲಿ 4 ಪಟ್ಟು ಹಣ ಬಂದಿದೆ ಅಂದ ಮೇಲೆ ಸಹಜವಾಗಿಯೇ ಬಡವರ ಗಲ್ಲಿಗಳಲ್ಲಿ ಚರಂಡಿ ವ್ಯವಸ್ಥೆ ಆಗುತ್ತದೆ.  ನೀರಿನ ವ್ಯವಸ್ಥೆ ಆಗುತ್ತದೆ.  ಅಂಗನವಾಡಿಗಳ ವ್ಯವಸ್ಥೆ ಆಗುತ್ತದೆ.  ಇದರ ನೇರ ಲಾಭವಾಗುತ್ತಿರುವ ಇಂಥ ಕೆಲವು ಉದಾಹರಣೆಗಳು ಕೇಳಿ ಬರುತ್ತಿವೆ.  

ಸೋದರ ಸೋದರಿಯರೇ, ನಮ್ಮ ಗ್ರಾಮಗಳು, ನಮ್ಮ ರೈತಾಪಿ ಜನರು, ಇವರೆಲ್ಲ ನಮ್ಮ ದೇಶದ ಅರ್ಥವ್ಯವಸ್ಥೆಯ ಗಟ್ಟಿಯಾದ ಆಧಾರ ಸ್ಥಂಭಗಳಿದ್ದಂತೆ.  ಒಂದು ರೀತಿ ಅರ್ಥ ವ್ಯವಸ್ಥೆಯಲ್ಲಿ ಈ ಹೊಸ ಬದಲಾವಣೆಯಿಂದಾಗಿ ಸಮಸ್ಯೆಗಳ ಜೊತೆಗೆ ಪ್ರತಿಯೊಬ್ಬ ನಾಗರಿಕನು ADJUST ಮಾಡಿಕೊಳ್ಳುತ್ತಿದ್ದಾನೆ.  ಆದರೆ ನಮ್ಮ ದೇಶದ ರೈತಾಪಿ ಜನರನ್ನು ಇಂದು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ.  ಇನ್ನು ಫಸಲಿನ ಬಿತ್ತನೆಯ ಲೆಕ್ಕ ತೆಗೆದುಕೊಳ್ಳುತ್ತಾ ಇದ್ದೆ.  ನನಗೆ ಸಂತೋಷವೆನಿಸಿದೆ.  ಅದು ಗೋಧಿಯಾಗಿರಲಿ, ಬೇಳೆಕಾಳುಗಳಾಗಿರಲಿ, ಎಣ್ಣೆಕಾಳುಗಳಾಗಿರಲಿ, ನವೆಂಬರ್ 20 ತಾರೀಖಿನವರೆಗೆ ನನ್ನ ಬಳಿ ಲೆಕ್ಕವಿದೆ.  ಹಿಂದಿನ ವರ್ಷಕ್ಕೆ ಹೊಲಿಸಿದರೆ ಈ ಬಾರಿ ಬಿತ್ತನೆ ಪ್ರಮಾಣ ಹೆಚ್ಚಿದೆ.  ಸಂಕಷ್ಟ ಪರಿಸ್ಥಿತಿಗಳ ಮಧ್ಯೆಯೂ ರೈತರು ದಾರಿ ಹುಡುಕಿಕೊಂಡಿದ್ದಾರೆ ಸರ್ಕಾರವು ಕೂಡಾ ರೈತರಿಗೆ ಮತ್ತು ಗ್ರಾಮಗಳಿಗೆ ಪ್ರಾಧಾನ್ಯತೆ ನೀಡುವ ಹಲವು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಂಡಿದೆ.  

ಆದಾಗ್ಯೂ ಸಮಸ್ಯೆಗಳು ಇವೆ.  ಆದರೆ ಪ್ರಾಕೃತಿಕ ವಿಕೋಪದಂತಹ ಪರಿಸ್ಥಿತಿಗಳನ್ನು ದಿಟ್ಟತನದಿಂದ ಎದುರಿಸುವ ನಮ್ಮ ರೈತರು ಈ ಪರಿಸ್ಥತಿಗಳನ್ನು ಕೂಡ ದಿಟ್ಟತನದಿಂದ ಎದುರಿಸಲಿದ್ದಾರೆ ಎಂದು ನನಗೆ ವಿಶ್ವಾಸವಿದೆ.
ನಮ್ಮ ದೇಶದ ಸಣ್ಣ ವ್ಯಾಪಾರಿಗಳು ಉದ್ಯೋಗವನ್ನು ನೀಡುತ್ತಾರೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೈ ಜೋಡಿಸುತ್ತಾರೆ.  ಹಿಂದಿನ ಬಜೆಟ್‍ನಲ್ಲಿ ಒಂದು ಮಹತ್ವಪೂರ್ಣ ನಿರ್ಣಯ ಕೈಗೊಳ್ಳಲಾಗಿತ್ತು.

ಅದರಂತೆ ದೊಡ್ಡ ದೊಡ್ಡ ಮಾಲ್‍ಗಳಂತೆ ಗ್ರಾಮಗಳ ಪುಟ್ಟ ಪುಟ್ಟ ವ್ಯಾಪಾರಸ್ಥರು ಈಗ 24 ಗಂಟೆಯು ತಮ್ಮ ವ್ಯಾಪಾರ ಮಾಡಬಹುದು, ಯಾವ ಕಾನೂನು ಅವರನ್ನು ಬಾಧಿಸಲಾರದು.

ದೊಡ್ಡ ದೊಡ್ಡ ಮಾಲ್‍ಗಳಿಗೆ 24 ಗಂಟೆ ವ್ಯಾಪಾರ ಮಾಡುವ ಅವಕಾಶವಿದೆ ಎಂದಾದಲ್ಲಿ ಗ್ರಾಮದ ಚಿಕ್ಕ ಪುಟ್ಟ ಅಂಗಡಿಕಾರರಿಗೆ ಯಾಕೆ ಈ ಅವಕಾಶ ಸಿಗಬಾರದು ಎಂಬುದು ನನ್ನ ಅಭಿಮತವಾಗಿತ್ತು. ಮುದ್ರಾ ಯೋಜನೆಯ ಮೂಲಕ ಅವರಿಗೆ ಲೋನ್ ಕೊಡುವ ನಿಟ್ಟಿನಲ್ಲಿ INITIATIVE ತೆಗೆದುಕೊಳ್ಳಲಾಯಿತು.

ಲಕ್ಷಾಂತರ, ಕೋಟ್ಯಾಂತರ ರೂಪಾಯಿಗಳನ್ನು ಮುದ್ರಾ ಯೋಜನೆ ಮೂಲಕ ಇಂತಹ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೀಡಲಾಯಿತು.

ಏಕೆಂದರೆ ಇಂತಹ ಸಣ್ಣ ಪುಟ್ಟ ವ್ಯಾಪಾರವನ್ನು ಕೊಟ್ಯಾಂತರ ಜನರು ಬಹು ದೊಡ್ಡ ಪ್ರಮಾಣದಲ್ಲಿ ಮಾಡುತ್ತಾರೆ ಮತ್ತು ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿಗೆ ದಾರಿ ನೀಡುತ್ತಾರೆ.  ಆದರೆ ಈ ನಿರ್ಣಯದಿಂದಾಗಿ ಅವರಿಗೂ ತೊಂದರೆಗಳಾಗುವುದು ಸಹಜವಾಗಿತು.

ಆದರೆ, ನಮ್ಮ ಸಣ್ಣ ಪುಟ್ಟ ವ್ಯಾಪಾರಿಗಳು ಕೂಡ ಈಗ TECHNOLOGY, MOBILE APP ಮಾಧ್ಯಮದ ಮೂಲಕ ಮೊಬೈಲ್ ಬಾಂಕ್‍ನಿಂದಾಗಿ, ಕ್ರೆಡಿಟ್ ಕಾರ್ಡ ಬಳಸಿ ತಮ್ಮ ತಮ್ಮದೇ ಆದ ರೀತಿಯಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ.  ವಿಸ್ವಾಸದಿಂದಲೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ.  ನನ್ನ ಸಣ್ಣ ಪುಟ್ಟ ವ್ಯಾಪಾರಿ ಬಂಧುಗಳಿಗೆ ಹೇಳ ಬಯಸುವುದೇನೆಂದರೆ, ಈಗ ಅವಕಾಶವಿದೆ.  ತಾವು ಕೂಡ ಡಿಜಿಟಲ್ ಜಗತ್ತಿಗೆ ಪ್ರವೇಶಿಸಿ ಎಂದು.
ನೀವು ನಿಮ್ಮ ಮೊಬೈಲ್‍ಗಳಲ್ಲಿ ಬ್ಯಾಂಕ್‍ಗಳ APP DOWNLOAD ಮಾಡಿಕೊಳ್ಳಿ.  

ನೀವು ಕೂಡ ಕ್ರೆಡಿಟ್ ಕಾರ್ಡಗಳಿಗಾಗಿ POS ಮಶಿನ್ ಇಟ್ಟುಕೊಳ್ಳಿ.  ನೀವು ಕೂಡಾ ನೋಟುಗಳ ಹೊರತಾಗಿಯೂ ಹೇಗೆ ವ್ಯಾಪಾರ ನಡೆಯುತ್ತದೆ ಎಂಬುದನ್ನು ಕಲಿತುಕೊಳ್ಳಿ.  ನೋಡಿ ದೊಡ್ಡ ದೊಡ್ಡ ಮಾಲ್‍ಗಳು TECHNOLOGY ಮಾಧ್ಯಮದ ಮೂಲಕ ತಮ್ಮ ವ್ಯಾಪಾರವನ್ನು ಹೇಗೆ ವೃದ್ಧಿಸುತ್ತಾರೆ ಎಂದು.  ಒಬ್ಬ ಸಾಮಾನ್ಯ ವ್ಯಾಪಾರಿಯೂ ಈ USER FRIENDLY TECHNOLOGY ಮೂಲಕ ತನ್ನ ವ್ಯಾಪಾರವನ್ನು ವೃದ್ಧಿಸಬಹುದಾಗಿದೆ.  ಹಾಳಾಗುವ ಪ್ರಶ್ನೆಯೇ ಇಲ್ಲ.  ಬದಲಾಗಿ ವೃದ್ಧಿಯ ಅವಕಾಶಗಳೇ ಹೆಚ್ಚು.

ನಾನು CASHLESS SOCIETY  ನಿರ್ಮಿಸಲು ನಿಮ್ಮನ್ನು ಆಮಂತ್ರಿಸುತ್ತೇನೆ.  ಈ ನಿಟ್ಟಿನಲ್ಲಿ ನೀವು ಬಹು ದೊಡ್ಡ ಪಾಲುದಾರಿಕೆ ನೀಡಬಲ್ಲಿರಿ.  ನಿಮ್ಮ ವ್ಯಾಪಾರ ವೃದ್ಧಿಸಲು ನೀವು ಮೊಬೈಲ್ ಫೋನ್ ನಲ್ಲೇ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿಕೊಳ್ಳಬಹುದು ಮತ್ತು ಇಂದು ನೋಟಿನ ಹೊರತಾಗಿ ವ್ಯಾಪಾರ ಮಾಡುವ ಅನೇಕ ಮಾರ್ಗಗಳಿವೆ.  TECHNOLOGICAL ಮಾರ್ಗಗಳು SAFE ಆಗಿವೆ.  SECURE ಆಗಿವೆ ಮತ್ತು ಶೀಘ್ರವಾಗಿವೆ.  

ಈ ಅಭಿಯಾನವನ್ನು ಸಫಲಗೊಳಿಸಲು ಕೇವಲ ಸಹಾಯಮಾಡಿರೆಂದು ನಾನು ಬಯಸುತ್ತೇನೆ.  ಇಷ್ಟೇ ಅಲ್ಲ ನೀವು ಬದಲಾವಣೆಯ ನೇತೃತ್ವವಹಿಸಿ ಮತ್ತು ನೀವು ಅದನ್ನು ಮಾಡಬಲ್ಲಿರಿ ಎಂಬ ವಿಶ್ವಾಸ ನನಗಿದೆ.  ನೀವು ಸಂಪೂರ್ಣ ಗ್ರಾಮದ ವಹಿವಾಟನ್ನು ಈ TECHNOLOGY ಮೂಲಕ ಮಾಡಬಹುದಾಗಿದೆ.  

ನಾನು ಕೂಲಿ ಕಾರ್ಮಿಕ ಸೋದರ ಸೋದರಿಯರಿಗೆ ಹೇಳ ಬಯಸುವುದೇನೆಂದರೆ ನಿಮ್ಮ ಶೋಷಣೆ ಬಹಳಷ್ಟಾಗಿದೆ.  ಕಾಗದದ ಮೇಲೆ ಒಂದು ಮೊತ್ತವಿದ್ದರೆ, ಕೈಗೆ ನೀಡುವ ಮೊತ್ತವೇ ಬೇರೆಯಾಗಿರುತ್ತದೆ.  ಒಮ್ಮೊಮ್ಮೆ ಪೂರ್ತಿ ಹಣ ಕೈಗೆ ಬಂದರೂ ಹೊರಗಡೆ ನಿಂತ ವ್ಯಕ್ತಿ ಆ ಹಣದಲ್ಲಿ ಕತ್ತರಿಯಾಡಿಸುತ್ತಾನೆ.  ಅನಿವಾರ್ಯವಾಗಿ ಕಾರ್ಮಿಕರಿಕರಿಗೆ ಈ ಶೋಷಣೆ ಜೀವನದ ಅಂಗವಾಗಿ ಬಿಡುತ್ತದೆ.  ಈ ಹೊಸ ವ್ವವಸ್ಥೆಯಿಂದಾಗಿ ಬ್ಯಾಂಕ್ ಖಾತೆ ನಿಮಗೆ ದೊರೆಯಲಿ ಎಂದು ನಾವು ಬಯಸುತ್ತೇವೆ.  ನಿಮ್ಮ ದುಡಿಮೆಯ ಹಣ ನಿಮ್ಮ ಖಾತೆಯಲ್ಲಿ ಜಮೆಯಾಗಲಿ ಇದರಿಂದ MINIMUM WAGES ಪಾಲನೆಯಾಗಲಿ.  

ನಿಮ್ಮ ಶೋಷಣೆ ಆಗಕೂಡದು ಯಾವುದೇ ಕಡಿತ ಇಲ್ಲದೇ ನಿಮ್ಮ ಹಣ ನಿಮಗೆ ಸೇರಬೇಕು.  ಮತ್ತು ಒಮ್ಮೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಬಂದರೆ, ನೀವು ಕೂಡ ಒಂದು ಪುಟ್ಟ ಮೊಬೈಲ್ ಫೋನ್ ನಲ್ಲಿ- ದೊಡ್ಡ SMART PHONE  ಅವಶ್ಯಕತೆಯೇನಿಲ್ಲ.  ಈ ಮಧ್ಯೆ ನಿಮ್ಮ MOBILE PHONE ಕೂಡ ನಿಮ್ಮ ಈ – ಪರ್ಸ್‍ನಂತೆ ಕೆಲಸ ಮಾಡುತ್ತದೆ.  ನೀವು ಇದೇ MOBILE PHONE ನಿಂದ ನೆರೆ ಹೊರೆಯ ಸಣ್ಣ ಪುಟ್ಟ ಅಂಗಡಿಗಳಿಂದ ಅವಶ್ಯಕ ವಸ್ತುಗಳನ್ನು ಖರೀದಿಸಬಹುದು ಮತ್ತು ಹಣ ಸಂದಾಯ ಮಾಡಲೂ ಬಹುದು.  ಆದ್ದರಿಂದ ಕಾರ್ಮಿಕ ಸೊದರ ಸೊದರಿಯರಿಗೆ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ವಿಶೇಷವಾಗಿ ಆಗ್ರಹಿಸುತ್ತೇನೆ.

ನಾನು ಇಂತಹ ದೊಡ್ಡ ನಿರ್ಣಯ ಕೈಗೊಂಡಿದ್ದಾದರೂ ಯಾವ ಕಾರಣಕ್ಕೆ? ದೇಶದ ಬಡ ಜನತೆಗಾಗಿ, ರೈತಬಾಂಧವರಿಗಾಗಿ, ಕಾರ್ಮಿಕರಿಗಾಗಿ, ವಂಚಿತರಿಗಾಗಿ, ಪೀಡಿತರಿಗಾಗಿ, ಅವರಿಗೆ ಇದರ ಲಾಭ ಸಿಗಬೇಕು ಎಂದು.  
ಇಂದು ವಿಶೇಷವಾಗಿ ಯುವ ಮಿತ್ರರೊಂದಿಗೆ ಮಾತನಾಡ ಬಯಸುತ್ತೇನೆ.  

ಭಾರತದ ಒಟ್ಟು ಜನಸಂಖ್ಯೆಯ ಶೇಕಡ 65ರಷ್ಟು 35ರ ವಯೋಮಾನದವರಿದ್ದಾರೆಂದು ವಿಶ್ವದಲ್ಲೆಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ.  ನನ್ನ ದೇಶದ ಯುವಕ-ಯುವತಿಯರೇ, ನಿಮಗೆ ನನ್ನ ನಿರ್ಣಯ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.  ನೀವು ಈ ನಿರ್ಣಯವನ್ನು ಸಮರ್ಥಿಸಿಕೊಳ್ಳುತ್ತೀರೆಂದು ನನಗೆ ಗೊತ್ತು.

ನೀವು ಈ ನಿರ್ಣಯವನ್ನು ಸಕಾರಾತ್ಮಕವಾಗಿ ಮುಂದಕ್ಕೆ ಕೊಂಡೊಯ್ಯಲು ಸಹಾಯ ಮಾಡುವಿರೆಂದು ನನಗೆ ಗೊತ್ತು.  ಆದರೆ, ಗೆಳೆಯರೆ ನೀವು ನನ್ನ ನಿಜವಾದ ಸೇನಾನಿಗಳು ನನ್ನ ನಿಜವಾದ ಮಿತ್ರರು. ತಾಯಿ ಭಾರತಾಂಬೆಯ ಸೇವೆ ಮಾಡಲು ಒಂದು ಅದ್ಭುತವಾದ ಅವಕಾಶ ನಮ್ಮೆದುರಿಗಿದೆ.  ದೇಶವನ್ನು ಆರ್ಥಿಕ ಉತ್ತುಂಗಕ್ಕೇರಿಸುವ ಸಮಯ ಬಂದಿದೆ.  

ನನ್ನ ಯುವ ಜನರೇ ನೀವು ನನಗೆ ಸಹಾಯ ಮಾಡುವಿರಾ? ನನ್ನ ಜೊತೆ ಗೂಡುವಿರಾ? ಇಷ್ಟರಿಂದಲೇ ಕೆಲಸವಾಗುವದಿಲ್ಲ.  ನಿಮಗೆ ಇಂದಿನ ಜಗತ್ತಿನ ಅನುಭವ ಎಷ್ಟಿದೆಯೋ ಅಷ್ಟು ಹಿಂದಿನ ಪೀಳಿಗೆಗೆ ಇಲ್ಲ.  ನಿಮ್ಮ ಕುಟುಂಬದಲ್ಲೂ ದೊಡ್ಡ ಅಣ್ಣನಿಗೆ ಇದರ ಮಾಹಿತಿ ಇರಲಿಕ್ಕಿಲ್ಲ ಮತ್ತು ತಂದೆ-ತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಮಾವ-ಅತ್ತೆಯವರಿಗೂ ತಿಳಿದಿರಲಿಕ್ಕಿಲ್ಲ.  ನಿಮಗೆ APP ಎಂದರೆ ಏನು ಗೊತ್ತಿದೆ.  ONLINE BANKING  ಹೇಗಿರುತ್ತದೆ ತಿಳಿದಿದೆ.  ONLINE TICKET BOOKING ಹೇಗೆ ಆಗುತ್ತದೆ ಗೊತ್ತು.  

ನಿಮಗೆ ಈ ವಿಷಯಗಳು ಅತ್ಯಂತ ಸಾಮಾನ್ಯ ಮತ್ತು ನೀವು ಅವನ್ನು ಬಳಸುತ್ತಲೂ ಇದ್ದೀರಿ.  ಆದರೆ ಇಂದು ದೇಶ ನನ್ನ ಕನಸಾದ CASHLESS  SOCIETY ಸಾಧಿಸಲು ಬಯಸುತ್ತದೆ.  ನೂರು ಪ್ರತಿಶತ CASHLESS  SOCIETY ಸಂಭವವಿಲ್ಲ.  

ಆದರೆ ಭಾರತ LESS – CASH SOCIETY ಆರಂಭವನ್ನಾದರೂ ಮಾಡಲಿ.  ಇಂದು ನಾವು LESS – CASH SOCIETY ಆರಂಭ ಮಾಡಿದರೆ, CASH – LESS SOCIETY ಗುರಿ ದೂರವೇನಿಲ್ಲ ಮತ್ತು ನನಗೆ ಇದರಲ್ಲಿ ನಿಮ್ಮ PHYSICAL  ಸಹಾಯ ಬೇಕು.

ನಿಮ್ಮ ಸಮಯ ಬೇಕು, ನಿಮ್ಮ ಸಂಕಲ್ಪಬೇಕು.  ನೀವು ನನಗೆಂದಿಗೂ ನಿರಾಸೆಗೊಳಿಸುವುದಿಲ್ಲ ಎಂದು ವಿಶ್ವಾಸವಿದೆ.  ಯಾಕೆಂದರೆ ನಾವೆಲ್ಲ ಹಿಂದುಸ್ತಾನದ ಬಡವನ ಜೀವನ ಬದಲಾಯಿಸುವ ಇಚ್ಚೆ ಉಳ್ಳವರಾಗಿದ್ದೇವೆ.  ನಿಮಗೆ ಗೊತ್ತು.  ಇಂದು CASHLESS SOCIETYಗಾಗಿ DIGITAL BANKINGಗಾಗಿ ಅಥವಾ MOBILE BANKINGಗಾಗಿ ಎಷ್ಟೊಂದು ಅವಕಾಶಗಳಿವೆ ಎಂದು.  

ಪ್ರತಿಯೊಂದು ಬ್ಯಾಂಕ್  ONLINE ಸೌಲಭ್ಯ ನೀಡುತ್ತದೆ.  ಹಿಂದುಸ್ತಾನದ ಪ್ರತಿ ಬ್ಯಾಂಕ್ ತನ್ನದೇ ಆದ MOBILE APP  ಹೊಂದಿದೆ.  ಪ್ರತಿ ಬ್ಯಾಂಕ್‍ಗೆ ತನ್ನದೇ  WALLET ಇದೆ.   WALLET  ಅರ್ಥ , ಎಲೆಕ್ಟ್ರಾನಿಕ್ ಹಣ, ಇ – ಹಣದ ಚೀಲ ಎಂದು.  ಬಹಳಷ್ಟು ವಿಧದ CARD ಲಭ್ಯವಿವೆ.  ಜನಧನ ಯೋಜನೆಯ ಮೂಲಕ ಭಾರತದ ಕೋಟಿ ಕೋಟಿ ಬಡ ಕುಟಂಬಗಳ ಬಳಿ RUPAY CARD ಇದೆ.
ಮತ್ತು ಎಂಟನೇ ತಾರೀಖಿನ ನಂತರ ಯಾವ RUPAY CARD  ಕಡಿಮೆ ಉಪಯೋಗವಾಗುತ್ತಿತ್ತೊ ಈಗ ಅಂತ ಬಡವರೂ ಇದರ ಹೆಚ್ಚು ಬಳಕೆ ಮಾಡುತ್ತಿದ್ದಾರೆ.  
ಸರಿ ಸುಮಾರು 300 ಪ್ರತಿಶತ ಇದರಲ್ಲಿ ವೃದ್ಧಿಯಾಗಿದೆ.  ಹೇಗೆ MOBILE PHONEನಲ್ಲಿ PREPAID CARD ಬರುತ್ತದೆಯೋ ಹಾಗೇ ಬ್ಯಾಂಕಗಳಲ್ಲಿ ಹಣ ಖರ್ಚು ಮಾಡಲು PREPAID CARD  ದೊರೆಯುತ್ತದೆ.  ವಹಿವಾಟು ಮಾಡಲು ಒಂದು ದೊಡ್ಡ PLATFORM  ಇದಾಗಿದೆ.  ಇದರಿಂದ ನೀವು ಖರೀದಿ ಮಾಡಬಹುದು ಹಣ ಕಳುಹಿಸಬಹುದು, ಹಣ ಪಡೆಯಬಹುದು ಮತ್ತು ಕೆಲಸ ಎಷ್ಟು ಸರಳವೆಂದರೆ ನೀವು WHATSAPP ಸಂದೇಶ ಕಳುಹಿಸಿದಂತೆ.  

ಓದು ಬರಹ ಬಾರದೇ ಇರುವ ವ್ಯಕ್ತಿಗೂ WHATSAPP ಸಂದೇಶ ಕಳುಹಿಸಲು, ಸಂದೇಶ FORWARD ಮಾಡಲು ಬರುತ್ತದೆ.  ಇಷ್ಟೇ ಅಲ್ಲ TECHNOLOGY ಎಷ್ಟು ಸರಳವಾಗುತ್ತಾ ಸಾಗಿದೆ ಎಂದರೆ ಈ ಕೆಲಸಕ್ಕೆ ದೊಡ್ಡ SMART PHONEನ ಅವಶ್ಯಕತೆಯೂ ಇಲ್ಲ.

ಸಾಧಾರಣವಾದ FEATURE PHONE ಇದೆಯಲ್ಲ.
ಅದರಿಂದ ಕೂಡ CASH TRANSFER ಮಾಡಬಹುದಾಗಿದೆ.

ದೋಭಿ ಆಗಿರಲಿ, ತರಕಾರಿ ಮಾರುವವನಾಗಿರಲಿ, ಹಾಲು ಮಾರುವವನಾಗಿರಲಿ, ಪೇಪರ್ ಮಾರುವವನಾಗಿರಲಿ, ಚಹಾ ಮಾರುವವನಾಗಿರಲಿ, ಪ್ರತಿಯೊಬ್ಬರೂ ಆರಾಮವಾಗಿ ಇದರ ಉಪಯೋಗ ಮಾಡಬಹುದಾಗಿದೆ.  ನಾನು ಕೂಡ ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಲು ಹೆಚ್ಚು ಒತ್ತು ನೀಡಿದ್ದೇನೆ.  

ಎಲ್ಲ ಬ್ಯಾಂಕ್‍ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.  ಅಲ್ಲದೆ ಈಗ ONLINE SURCHARGE ಖರ್ಚು ಬರುತ್ತಿತ್ತಲ್ಲಾ ಅದನ್ನು ನಾವು CANCEL ಮಾಡಿದ್ದೇವೆ.  CASHLESS SOCIETY MOVEMENTಗೆ ಒತ್ತು ನೀಡಲು ಇನ್ನೂ ಇಂಥ ಹಲವಾರು ಕಾರ್ಡಗಳಿಗೆ ಏನು ಖರ್ಚಾಗುತ್ತಿತ್ತೋ ಅದನ್ನೂ CANCEL  ಮಾಡಿದ್ದೇವೆ ಎಂಬುದನ್ನು ಕಳೆದ 2 – 3 ದಿನಗಳಿಂದ ನೀವು ಪತ್ರಿಕೆಗಳಲ್ಲಿ ಓದಿರಬಹುದು.

ನನ್ನ ಯುವ ಮಿತ್ರರೇ, ಇಷ್ಟೆಲ್ಲಾ ಆದ ಮೇಲೂ ಈ ವಿದ್ಯಮಾನಗಳಿಂದ ಅಪರಿಚಿತವಾಗಿರುವ ಒಂದು ಪೀಳಿಗೆ ಇದೆ.
ನೀವೆಲ್ಲ ಈ ಮಹಾನ್ ಕೆಲಸದಲ್ಲಿ ಸಕ್ರಿಯವಾಗಿದ್ದಿರೆಂದು ನನಗೆ ಗೊತ್ತು.  WHATSAPPನಲ್ಲಿ ಎಂತೆಂಥ CREATIVE MESSAGE ನೀವು ಕಳುಹಿಸುತ್ತೀರಿ, SLOGANಗಳು ಕವಿತೆಗಳು, ವಿಷಯಗಳು, CARTOONಗಳು ಹೊಸ ಹೊಸ ಕಲ್ಪನೆಗಳು, ನಗು, ಹಾಸ್ಯ ಚಟಾಕಿ ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ.
ಮತ್ತು ಸವಾಲುಗಳ ಮಧ್ಯೆಯೇ ಈ ನಮ್ಮ ಯುವ ಪೀಳಿಗೆ ಸೃಜನಾತ್ಮಕ ಶಕ್ತಿ ಹೊಂದಿದೆ ಎಂಬುದು, ನನಗನ್ನಿಸುತ್ತದೆ, ಹಿಂದೊಮ್ಮೆ ಯುದ್ಧ ಭೂಮಿಯಲ್ಲಿ ಗೀತೆಯ ಉದ್ಭವವಾದಂತಹ ಭರತ ಭೂಮಿಯ ವಿಶೇಷತೆ ಇದು ಎಂಬುದಕ್ಕೆ ಸಾಕ್ಷಿ ಎಂದು.

ಅದರಂತೆ ಇಂಥ ಬಹು ದೊಡ್ಡ ಬದಲಾವಣೆಯ ಘಟ್ಟದಿಂದ ನಾವು ಸಾಗುತ್ತಿರುವ ಸಮಯದಲ್ಲಿ ನಿಮ್ಮಲ್ಲಿಯೂ ಮೌಲ್ಯಯುಕ್ತ CREATIVITY ಪ್ರಕಟವಾಗುತ್ತಿದೆ.
 
ಆದರೆ ನನ್ನ ಪ್ರಿಯ ಯುವ ಮಿತ್ರರೇ, ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ.  ನನಗೆ ನಿಮ್ಮ ಸಹಾಯ ಬೇಕು.  ಹೌದು, ನಾನು ಮತ್ತೊಮ್ಮೆ ಮಗದೊಮ್ಮೆ ಹೇಳುತ್ತಿದ್ದೇನೆ.  ನನಗೆ ನಿಮ್ಮ ಸಹಾಯ ಬೇಕು ಮತ್ತು ನೀವು ನನ್ನ ದೇಶದ ಯುವಕರು ಈ ಕೆಲಸ ಮಾಡುವಿರೆಂದು ನನಗೆ ವಿಶ್ವಾಸವಿದೆ.  ನೀವು ಒಂದು ಕೆಲಸ ಮಾಡಿ.

ಇಂದೇ ಸ್ವತಃ CASHLESS SOCIETYಯ ಭಾಗೀದಾರರಾಗುವಿರೆಂದು ಸಂಕಲ್ಪ ಕೈಗೊಳ್ಳಿ.  ನಿಮ್ಮ MOBILE PHONEನಲ್ಲಿ ONLINE ಖರ್ಚು ಮಾಡುವ ಎಷ್ಟೆಲ್ಲ TECHNOLOGYಗಳಿವೆಯೋ ಅವೆಲ್ಲವೂ ಇರುತ್ತವೆ.  ಇಷ್ಟೇ ಅಲ್ಲ, ಪ್ರತಿದಿನ ಅರ್ಧ ಗಂಟೆ, ಒಂದು ಗಂಟೆ ಇಲ್ಲ ಎರಡು ಗಂಟೆ ಸಮಯ ಮೀಸಲಿಟ್ಟು ಕಡಿಮೆ ಎಂದರೂ 10 ಕುಟುಂಬಗಳಿಗೆ TECHNOLOGY  ಅಂದರೇನು?  TECHNOLOGY ಯನ್ನು ಹೇಗೆ ಬಳಸಲಾಗುತ್ತದೆ, ಹೇಗೆ ತಮ್ಮ ಬ್ಯಾಂಕ್‍ಗಳ APP DOWNLOAD ಮಾಡಲಾಗುತ್ತದೆ.  ತಮ್ಮ ಖಾತೆಯಲ್ಲಿರುವ ಹಣವನ್ನು ಹೇಗೆ ಖರ್ಚು ಮಾಡಬಹುದು, ಹೇಗೆ ಅಂಗಡಿಕಾರರಿಗೆ ಕೊಡಬಹುದು ಎಂಬುದನ್ನು ತಿಳಿಸಿಕೊಡಿ. ಅಂಗಡಿಕಾರರಿಗೂ ಹೇಗೆ ವ್ಯಾಪಾರ ಮಾಡಬಹುದು ಎಂದು ಕಲಿಸಿಕೊಡಿ.  

ನೀವು ಸ್ವತಃ ಈ CASHLESS SOCIETY, ನೋಟಿನ ಗೊಂದಲದಿಂದ ಹೊರಬರುವ ಅಭಿಯಾನ, ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಅಭಿಯಾನ, ಕಪ್ಪು ಹಣದಿಂದ ಮುಕ್ತಿ ಹೊಂದುವ ಅಭಿಯಾನ, ಜನರನ್ನು ಸಂಕಷ್ಟಗಳಿಂದ-ಸಮಸ್ಯೆಗಳಿಂದ ಮುಕ್ತಗೊಳಿಸುವ ಅಭಿಯಾನ ಇವುಗಳ ನೇತೃತ್ವ ವಹಿಸಬೇಕಾಗಿದೆ.  
ಒಮ್ಮೆ ಜನರಿಗೆ RUPAY CARD ಬಳಕೆ ಹೇಗೆ ಎಂದು ಕಲಿಸಿದರೆ, ಬಡವರ ಆಶೀರ್ವಾದ ನಿಮಗೆ ಲಭಿಸುತ್ತದೆ.  ಸಾಮಾನ್ಯ ನಾಗರಿಕನಿಗೆ ಈ ವ್ಯವಸ್ಥೆ ಬಗ್ಗೆ ತಿಳಿಸಿಕೊಟ್ಟರೆ ಬಹುಶಃ ಅವನು ಎಲ್ಲ ಚಿಂತೆಗಳಿಂದ ಮುಕ್ತನಾಗಬಹುದು  ಮತ್ತು ಈ ಕೆಲಸವನ್ನು ಹಿಂದುಸ್ತಾನದ ಎಲ್ಲ ಯುವಕರು ಮಾಡಲಾರಂಭಿಸಿದರೆ, ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ.  

ಒಂದು ತಿಂಗಳೊಳಗಾಗಿಯೇ ನಾವು ವಿಶ್ವದಲ್ಲೇ ಒಂದು ಆಧುನಿಕ ಹಿಂದುಸ್ತಾನವಾಗಿ ಹೊರಹೊಮ್ಮಬಹುದಾಗಿದೆ  ಮತ್ತು ಈ ಕೆಲಸವನ್ನು ನೀವು ನಿಮ್ಮ MOBILE PHONE ಮೂಲಕ ಮಾಡಬಹುದು.  ಪ್ರತಿ ದಿನ 10 ಮನೆಗಳಿಗೆ ಹೋಗಿ ಮಾಡಬಹುದು.  ಪ್ರತಿ ದಿನ 10 ಕುಟುಂಬಗಳನ್ನು ಇದರೊಂದಿಗೆ ಜೋಡಣೆ ಮಾಡಬಹುದು.  ನಿಮಗೆ ಆಮಂತ್ರಿಸುತ್ತಿದ್ದೇನೆ.  ಕೇವಲ ಸಮರ್ಥನೆ ಸಲ್ಲದು.  

ನಾವು ಪರಿವರ್ತನೆಯ ಸೇನಾನಿಗಳಾಗಬೇಕಿದೆ ಮತ್ತು ಪರಿವರ್ತನೆಯನ್ನು ಸಾಧಿಸಿಯೇ ತೀರುತ್ತೇವೆ.  ದೇಶವನ್ನು ಭ್ರಷ್ಟಾಚಾರ ಮತ್ತು ಕಪ್ಪು ಹಣದಿಂದ ಮುಕ್ತಗೊಳಿಸುವ ಸಮರವನ್ನು ನಾವು ಮುದುವರಿಸುತ್ತೇವೆ ಮತ್ತು ತಮ್ಮ ರಾಷ್ಟ್ರದ ಜೀವನವನ್ನೇ ಯುವಕರು ಬದಲಾಯಿಸಿದ ದೇಶಗಳು ವಿಶ್ವದಲ್ಲಿ ಬಹಳಷ್ಟಿವೆ.  

ಬದಲಾವಣೆ ಆಗುವುದಾದರೆ ಅದು ಯುವಕರಿಂದ.  ಕ್ರಾಂತಿಯಾಗುವುದಾದರೆ ಅದೂ ಯುವಕರಿಂದ ಎಂಬ ಒಂದು ವಿಷಯವನ್ನ ಒಪ್ಪಿಕೊಳ್ಳಲೇಬೇಕು.  ಕೀನ್ಯಾ ಒಂದು ಸಂಕಲ್ಪ ತೊಟ್ಟಿತು.  M-PESA  ಎಂಬ MOBILE ವ್ಯವಸ್ಥೆಯನ್ನು ಜಾರಿಗೆ ತಂದಿತು. TECHNOLOGY ಉಪಯೋಗ ಮಾಡಿತು.

M-PESA ಎಂಬ ಹೆಸರಿಟ್ಟು ಸಂಪೂರ್ಣ AFRICA ದೇಶದ ಕೀನ್ಯಾ ಭಾಗ, ತನ್ನ ವಹಿವಾಟನ್ನು ಇದಕ್ಕೆ SHIFT ಮಾಡುವ ತಯಾರಿಯಲ್ಲಿ ತೊಡಗಿದೆ.  ಈ ದೇಶ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಪ್ರಿಯ ಯುವ ಜನರೇ, ನಾನು ಮತ್ತೊಮ್ಮೆ ಮಗದೊಮ್ಮೆ ಆಗ್ರಹಿಸುತ್ತಿದ್ದೇನೆ.  ನೀವು ಈ ಅಭಿಯಾನವನ್ನು ಮುಂದುವರೆಸಿ.

ಪ್ರತಿ SCHOOL, COLLEGE, UNIVERSITY, NCC, NSSಗಳಲ್ಲಿ ಸಾಮೂಹಿಕ ರೂಪದಲ್ಲಿ, ವ್ಯಕ್ತಿಗತವಾಗಿ ಈ ಕೆಲಸವನ್ನು ಮಾಡಿ ಎಂದು ಆಮಂತ್ರಿಸುತ್ತಿದ್ದೇನೆ.  ನಾವು ಈ ಅಭಿಯಾನವನ್ನು ಮುಂದುವರಿಸೋಣ.  ದೇಶ ಸೇವೆ ಮಾಡುವ ಅತ್ಯುತ್ತಮ ಅವಕಾಶ ನಮಗೆ ದೊರೆತಿದೆ.  ಅದನ್ನು ಕಳೆದುಕೊಳ್ಳುವುದು ಬೇಡ.

ನನ್ನ ಸೋದರ ಸೋದರಿಯರೇ, ಇಂದು ನಮ್ಮ ದೇಶದ ಒಬ್ಬ ಮಹಾನ್ ಕವಿ ಶ್ರೀಯುತ ಹರಿವಂಶರಾಯ್ ಬಚ್ಚನ್ ಅವರ ಜನ್ಮದಿನ.

ಈ ಪ್ರಯುಕ್ತ ಶ್ರೀಯುತ ಅಮಿತಾಭ್ ಬಚ್ಚನ್ ಅವರು ಸ್ವಚ್ಛತಾ ಅಭಿಯಾನಕ್ಕಾಗಿ ಒಂದು ಘೋಷವಾಕ್ಯ ನೀಡಿದ್ದಾರೆ.
ಈ ಶತಮಾನದ ಅತ್ಯಂತ ಜನಪ್ರಿಯ ನಟ ಅಮಿತಾಭ್ ಅವರು ಸ್ಚಚ್ಛತೆಯ ಅಭಿಯಾನವನ್ನು ತನು ಮನ ಧನದಿಂದ ಮುಂದುವರಿಸುತ್ತಿರುವುದನ್ನು ನೀವು ನೋಡಿರಬಹುದು.  ಅವರ ನರನಾಡಿಗಳಲ್ಲಿ ಸ್ಚಚ್ಛತೆಯ ವಿಷಯ ಸೇರಿಹೊಗಿದೆ ಎನಿಸುತ್ತಿದೆ.

ಅದಕ್ಕಾಗಿಯೇ ತಮ್ಮ ತಂದೆಯವರ ಜನ್ಮ ಜಯಂತಿಯಂದು ಅವರಿಗೆ ಸ್ಚಚ್ಛತೆಯ ಕುರಿತು ಗಮನ ಹರಿಸುವಂತೆನಿಸಿದೆ.  ಮಿಟ್ಟಿಕಾ ತನ್, ಮಸ್ತಿ ಕಾ ಮನ್, ಕ್ಷಣಭರ್ ಕಾ ಜೀವನ್, ಮೇರಾ ಪರಿಚಯ- ಎಂಬ ಹರಿವಂಶರಾಯ್‍ಜೀ ಅವರ ಕವಿತೆಯ ಮೊದಲ ಸಾಲನ್ನ ಅವರು ಬರೆದಿದ್ದಾರೆ.  ಹರಿವಂಶರಾಯ್ ಅವರು ಈ ಮಾಧ್ಯಮದ ಮೂಲಕ ತಮ್ಮ ಪರಿಚಯ ನೀಡುತ್ತಿದ್ದರು.  ಮಣ್ಣಿನ ದೇಹ, ಮೋಜಿನ ಮನಸ್ಸು, ಕ್ಷಣಗಳ ಜೀವನ ಇದೇ ನನ್ನ ಪರಿಚಯ ಎಂದು ತಂದೆ ಹೇಳಿದ್ದನ್ನು, ಬದಲಿಸಿ ಸ್ವಚ್ಛ ತನ್, ಸ್ವಚ್ಛ ಮನ್, ಸ್ವಚ್ಛ ಭಾರತ್, ಮೇರಾ ಪರಿಚಯ್ ಎಂದು ಅವರ ಸುಪುತ್ರ ಅಮಿತಾಭ್‍ಜೀ ನನಗೆ ಬರೆದು ಕಳಿಸಿದ್ದಾರೆ.  ನಾನು ಹರಿವಂಶ್ ರಾಯ ಅವರಿಗೆ ಆದರದಿಂದ ವಂದಿಸುವೆ.  ಅಮಿತಾಭ್ ಬಚ್ಚನ್ ಅವರಿಗೂ ಕೂಡ ಮನದಾಳದ ಮಾತಿನಲ್ಲಿ ಪಾಲ್ಗೊಂಡಿದ್ದಕ್ಕೆ ಮತ್ತು ಸ್ವಚ್ಛತಾ ಕಾರ್ಯವನ್ನು ಮುಂದುವರಿಸಿದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಈಗ ಮನದಾಳದ ಮಾತಿನ ಮೂಲಕ ನಿಮ್ಮ ವಿಚಾರಗಳ ಮೂಲಕ ನಿಮ್ಮ ಭಾವನೆಗಳು ಮತ್ತು ಪತ್ರಗಳ ಮೂಲಕ mygov.in ಮತ್ತು ನರೇಂದ್ರಮೋದಿ ಆಪ್‍ನಲ್ಲಿ ( narendramodi.in/downloadapp ) ನಿರಂತರವಾಗಿ ನಿಮ್ಮೊಂದಿಗೆ ನನ್ನ ಸಂಪರ್ಕ ಇರುತ್ತದೆ.  
ಈಗಂತೂ 11 ಗಂಟೆಗೆ ಮನದಾಳದ ಮಾತು ಕೇಳುತ್ತೀರಿ.  ಪ್ರಾದೇಶಿಕ ಭಾಷೆಗಳಲ್ಲಿ ಇದರ ಅನುವಾದವನ್ನು ತಕ್ಷಣವೇ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.  ನಾನು ಆಕಾಶವಾಣಿಯವರಿಗೆ ಆಭಾರಿಯಾಗಿದ್ದೇನೆ.  ಈಗ ಆಕಾಶವಾಣಿಯವರು ಹೊಸ INITIVATIVE ತೆಗೆದುಕೊಂಡಿದ್ದಾರೆ.  ಇದರಿಂದ ಎಲ್ಲಿ ಹಿಂದಿ ಭಾಷೆಯ ಬಳಕೆ ಇಲ್ಲವೋ ಅಲ್ಲಿಯ ನನ್ನ ದೇಶವಾಸಿಗಳು ಕೂಡ ಇದರಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ.  

ನಿಮ್ಮೆಲ್ಲರಿಗೂ ನನ್ನ ಮನಃಪೂರ್ವಕ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi govt created 17.19 crore jobs in 10 years compared to UPA's 2.9 crore

Media Coverage

PM Modi govt created 17.19 crore jobs in 10 years compared to UPA's 2.9 crore
NM on the go

Nm on the go

Always be the first to hear from the PM. Get the App Now!
...
Prime Minister greets on the occasion of Urs of Khwaja Moinuddin Chishti
January 02, 2025

The Prime Minister, Shri Narendra Modi today greeted on the occasion of Urs of Khwaja Moinuddin Chishti.

Responding to a post by Shri Kiren Rijiju on X, Shri Modi wrote:

“Greetings on the Urs of Khwaja Moinuddin Chishti. May this occasion bring happiness and peace into everyone’s lives.