Dedicates National Atomic Timescale and Bhartiya Nirdeshak Dravya to the Nation
Lays Foundation Stone of National Environmental Standards Laboratory
Urges CSIR to interact with students to inspire them become future scientists
Bhartiya Nirdeshak Dravya’s 'Certified Reference Material System' would help in improving the Quality of Indian products
Exhorts Scientific Community to Promote ‘value creation cycle’ of Science, Technology and Industry
Strong Research will Lead to Stronger Brand India: PM

ನನ್ನ ಕ್ಯಾಬಿನೆಟ್ ಸಹೋದ್ಯೋಗಿಯವರಾದ  ಡಾ. ಹರ್ಷ್ ವರ್ಧನ್‌ ರವರೇ; ಪ್ರಧಾನ ವೈಜ್ಞಾನಿಕ ಸಲಹೆಗಾರ ವೈದ್ಯರಾದ ವಿಜಯ್ ರಾಘವನ್ ರವರೇ; ಸಿಎಸ್‌ಐಆರ್ ಮುಖ್ಯಸ್ಥರಾದ ಡಾ.ಶೇಖರ್ ಸಿ. ಮಾಂಡೆಯವರೇ; ವೈಜ್ಞಾನಿಕ ಸಮುದಾಯದ ಇತರ ಗಣ್ಯರೇ; ಮಹಿಳೆಯರೇ ಮತ್ತು ಮಹನೀಯರೇ!

ರಾಷ್ಟ್ರೀಯ ಭೌತಿಕ ಪ್ರಯೋಗಾಲಯದ ಪ್ಲಾಟಿನಂ ಮಹೋತ್ಸವದ ಆಚರಣೆಗಾಗಿ ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು.

ಇಂದು, ನಮ್ಮ ವಿಜ್ಞಾನಿಗಳು ರಾಷ್ಟ್ರೀಯ ಪರಮಾಣು ಸಮಯ–ಪ್ರಮಾಣದ ಮತ್ತು ʼಭಾರತೀಯ ನಿರ್ದೇಶಕ್ ದ್ರವ್ಯ ಪ್ರಣಾಲಿಯನ್ನುʼ ರಾಷ್ಟ್ರಕ್ಕೆ ಅರ್ಪಿಸುತ್ತಿದ್ದಾರೆ ಮತ್ತು ದೇಶದ ಮೊದಲ ರಾಷ್ಟ್ರೀಯ ಪರಿಸರ ಗುಣಮಟ್ಟ ಪ್ರಯೋಗಾಲಯಕ್ಕೆ ಶಂಖುಸ್ಥಾಪನೆಯನ್ನು ಸಹ ಮಾಡಲಾಗುತ್ತಿದೆ. ಹೊಸ ದಶಕದಲ್ಲಿ ಈ ಕಾರ್ಯಕ್ರಮಗಳು ದೇಶದ ಗೌರವವನ್ನು ಹೆಚ್ಚಿಸಲಿವೆ.

ಸ್ನೇಹಿತರೇ,

ಹೊಸ ವರ್ಷವು ಮತ್ತೊಂದು ಪ್ರಮುಖ ಸಾಧನೆಯನ್ನು ತಂದಿದೆ. ಭಾರತದ ವಿಜ್ಞಾನಿಗಳು ಒಂದಲ್ಲ, ಎರಡು ‘ಮೇಡ್ ಇನ್ ಇಂಡಿಯಾ’ ಕೋವಿಡ್–19 ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ವಿಶ್ವದ ಅತಿದೊಡ್ಡ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವು ಭಾರತದಲ್ಲಿಯೂ ಪ್ರಾರಂಭವಾಗಲಿದೆ.  ಇದಕ್ಕಾಗಿ, ದೇಶವು ತನ್ನ ತಂತ್ರಜ್ಞರು ಮತ್ತು ವಿಜ್ಞಾನಿಗಳ ಕೊಡುಗೆಯ ಬಗ್ಗೆ ಹೆಮ್ಮೆಪಡುತ್ತದೆ; ಪ್ರತಿಯೊಬ್ಬ ದೇಶವಾಸಿಗಳು ನಿಮಗೆ ಕೃತಜ್ಞರಾಗಿದ್ದಾರೆ.

ಸ್ನೇಹಿತರೇ,

ಇಂದು, ನಮ್ಮ ವೈಜ್ಞಾನಿಕ ಸಂಸ್ಥೆಗಳು, ಕೊರೊನಾದ ವಿರುದ್ಧ ಹೋರಾಡಲು, ಲಸಿಕೆ ಅಭಿವೃದ್ಧಿಪಡಿಸಲು ನೀವೆಲ್ಲರೂ ಹಗಲು ರಾತ್ರಿಯನ್ನದೆ ಮುಡಿಪಿಟ್ಟ ಸಮಯವನ್ನು ನೆನೆಸಿಕೊಳ್ಳುವ ದಿನವೂ ಹೌದು.  ಸಿಎಸ್ಐಆರ್ ಸೇರಿದಂತೆ ಇತರ ಸಂಸ್ಥೆಗಳು ಪ್ರತಿ ಸವಾಲನ್ನು ಎದುರಿಸಲು, ಹೊಸ ಸನ್ನಿವೇಶಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಒಂದುಗೂಡಿದ್ದವು. ಈ ಸಮರ್ಪಣೆಯೊಂದಿಗೆ, ಈ ವಿಜ್ಞಾನ ಸಂಸ್ಥೆಗಳ ಬಗ್ಗೆ ಜಾಗೃತಿ ಮತ್ತು ಗೌರವದ ಹೊಸ ಅರಿವುಇಂದು ದೇಶದಲ್ಲಿ ಹುಟ್ಟಿಕೊಂಡಿದೆ.

ನಮ್ಮ ಯುವಕರು ಇಂದು ಸಿಎಸ್‌ಐಆರ್‌ನಂತಹ ಸಂಸ್ಥೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಾರೆ. ಅದಕ್ಕಾಗಿಯೇ ಸಿಎಸ್ಐಆರ್‌ ನ ವಿಜ್ಞಾನಿಗಳು ದೇಶದ ಹೆಚ್ಚು ಹೆಚ್ಚು ಶಾಲೆಗಳೊಂದಿಗೆ, ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಬೇಕೆಂದು ನಾನು ಬಯಸುತ್ತೇನೆ.  ಕೊರೊನಾ ಅವಧಿಯ ನಿಮ್ಮ ಅನುಭವಗಳನ್ನು ಮತ್ತು ಈ ಸಂಶೋಧನಾ ಪ್ರದೇಶದಲ್ಲಿ ಮಾಡಿದ ಕಾರ್ಯಗಳನ್ನು ಹೊಸ ಪೀಳಿಗೆಯೊಂದಿಗೆ ಹಂಚಿಕೊಳ್ಳಿರಿ. ಮುಂಬರುವ ಹೊಸ ತಲೆಮಾರಿನ ಯುವ ವಿಜ್ಞಾನಿಗಳನ್ನು ಪ್ರೇರೇಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಸ್ನೇಹಿತರೇ,

ಸ್ವಲ್ಪ ಸಮಯದ ಹಿಂದೆ;  ಏಳೂವರೆ ದಶಕಗಳ ನಿಮ್ಮ ಸಾಧನೆಗಳನ್ನು ಇಲ್ಲಿ ವಿವರಿಸಲಾಗಿದೆ. ಈ ವರ್ಷಗಳಲ್ಲಿ, ಈ ಸಂಸ್ಥೆಯ ಅನೇಕ ಶ್ರೇಷ್ಠ ವ್ಯಕ್ತಿಗಳು ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಇಲ್ಲಿಂದ ಹೊರಹೊಮ್ಮುವ ಪರಿಹಾರಗಳು ದೇಶಕ್ಕೆ ದಾರಿ ಮಾಡಿಕೊಟ್ಟಿವೆ. ವೈಜ್ಞಾನಿಕ ವಿಕಸನ ಮತ್ತು ದೇಶದ ಅಭಿವೃದ್ಧಿಯ ಮೌಲ್ಯಮಾಪನದಲ್ಲಿ ಸಿಎಸ್ಐಆರ್ ಎನ್‌ ಪಿಎಲ್ ಪ್ರಮುಖ ಪಾತ್ರ ವಹಿಸಿದೆ. ಕಳೆದ ವರ್ಷಗಳ ಸಾಧನೆಗಳು ಮತ್ತು ದೇಶದ ಭವಿಷ್ಯದ ಸವಾಲುಗಳನ್ನು ಚರ್ಚಿಸಲು ಇಂದು ಇಲ್ಲಿ ಕಾನ್ಕ್ಲೇವ್ ಆಯೋಜಿಸಲಾಗಿದೆ.

ಸ್ನೇಹಿತರೇ,

ನಾವು ಹಿಂತಿರುಗಿ ನೋಡಿದಾಗ, ವಸಾಹತುಶಾಹಿ ಆಡಳಿತದಿಂದ ಹೊರಬಂದ ಭಾರತವನ್ನು ಪುನರ್ನಿರ್ಮಿಸಲು ಇದನ್ನು ಪ್ರಾರಂಭಿಸಲಾಯಿತು.  ನಿಮ್ಮ ಪಾತ್ರವು ಕಾಲಾನಂತರದಲ್ಲಿ ಮತ್ತಷ್ಟು ವಿಸ್ತಾರವಾಗಿದೆ; ಈಗ ದೇಶದ ಮುಂದೆ ಹೊಸ ಗುರಿಗಳು ಮತ್ತು ಹೊಸ ಗಮ್ಯಸ್ಥಾನಗಳಿವೆ.  2022 ರ ವೇಳೆಗೆ ರಾಷ್ಟ್ರವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುತ್ತದೆ ಮತ್ತು 2047 ರಲ್ಲಿ ಅದು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುತ್ತದೆ.  ಈ ಅವಧಿಯಲ್ಲಿ, ನಾವು ಸ್ವಾವಲಂಬಿ ಭಾರತದ ಹೊಸ ನಿರ್ಣಯಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾನದಂಡಗಳನ್ನು, ಹೊಸ  ಬೆಂಚ್‌ ಮಾರ್ಕ್‌ ಗಳನ್ನು ಹೊಂದಿಸಬೇಕು

ಸ್ನೇಹಿತರೇ,

ಸಿಎಸ್ಐಆರ್–ಎನ್ ಪಿಎಲ್ ಭಾರತದ  ಟೈಮ್ ಕೀಪರ್ ಆಗಿದೆ ಅಂದರೆ, ಇದು ಭಾರತದ ಸಮಯದ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡುತ್ತದೆ.  ಸಮಯದ ಜವಾಬ್ದಾರಿ ನಿಮ್ಮದಾಗಿರುವುದರಿಂದ, ಸಮಯವು ನಿಮ್ಮಿಂದ ಬದಲಾಗಲು ಆರಂಭವಾಗಬೇಕು. ಹೊಸ ಸಮಯ ಮತ್ತು ಹೊಸ ಭವಿಷ್ಯದ ಪ್ರಾರಂಭವು ನಿಮ್ಮಿಂದಲೂ ಪ್ರಾರಂಭವಾಗುತ್ತದೆ.

ಸ್ನೇಹಿತರೇ,

ನಮ್ಮ ದೇಶವು ದಶಕಗಳಿಂದ ಗುಣಮಟ್ಟ ಮತ್ತು ಅಳತೆಯ ವಿಷಯದಲ್ಲಿ ವಿದೇಶಿ ಮಾನದಂಡಗಳನ್ನು ಅವಲಂಬಿಸಿದೆ. ಆದರೆ ಈ ದಶಕದಲ್ಲಿ ಭಾರತ ತನ್ನದೇ ಆದ ಮಾನದಂಡಗಳನ್ನು ಸಾಧಿಸಲು ಶ್ರಮಿಸಬೇಕು.  ಈ ದಶಕದಲ್ಲಿ, ಭಾರತದ ಗತಿ, ಭಾರತದ ಪ್ರಗತಿ, ಭಾರತದ ಏರಿಕೆ, ಭಾರತದ ಚಿತ್ರಣ, ಭಾರತದ ಶಕ್ತಿ, ನಮ್ಮ ಸಾಮರ್ಥ್ಯ ವೃದ್ಧಿ ನಮ್ಮ ಮಾನದಂಡಗಳಿಂದಲೇ ನಿರ್ಧರಿಸಲ್ಪಡುತ್ತದೆ.  ನಮ್ಮ ದೇಶದಲ್ಲಿ ಸೇವೆಗಳ ಮತ್ತು ಉತ್ಪನ್ನಗಳ ಗುಣಮಟ್ಟ, ಸರ್ಕಾರಿ ವಲಯದಲ್ಲಿರಲಿ ಅಥವಾ ಖಾಸಗಿ ವಲಯದಲ್ಲಿರಲಿ, ಭಾರತ ಮತ್ತು ಭಾರತದ ಉತ್ಪನ್ನಗಳ ಶಕ್ತಿ ಪ್ರಪಂಚದಲ್ಲಿ ಎಷ್ಟು ಹೆಚ್ಚಾಗಬೇಕು ಎಂಬುದನ್ನು ನಮ್ಮ ಗುಣಮಟ್ಟದ ಮಾನದಂಡಗಳೇ ನಿರ್ಧರಿಸುತ್ತವೆ.  

ಸ್ನೇಹಿತರೇ,

ಮಾಪನಶಾಸ್ತ್ರ, ಒಬ್ಬ ಸಾಮಾನ್ಯ ಭಾಷೆಯಲ್ಲಿ ಅಳತೆಯ ವಿಜ್ಞಾನವಾಗಿದೆ.  ಇದು ಯಾವುದೇ ವೈಜ್ಞಾನಿಕ ಸಾಧನೆಗೆ ಅಡಿಪಾಯವಾಗಿಯೂ ಕಾರ್ಯನಿರ್ವಹಿಸುತ್ತದೆ.  ಯಾವುದೇ ಸಂಶೋಧನೆ ಮಾಪನವಿಲ್ಲದೆ ಮುಂದುವರಿಯಲು ಸಾಧ್ಯವಿಲ್ಲ. ನಮ್ಮ ಸಾಧನೆಯನ್ನು ನಾವು ಸ್ವಲ್ಪ ಪ್ರಮಾಣದಲ್ಲಿ ಅಳೆಯಬೇಕಾಗಿದೆ.

ನಮ್ಮ ಸಾಧನೆಯನ್ನು ಸಹ ಯಾವುದಾದರೊಂದು ರೀತಿಯಲ್ಲಿ ಅಳೆಯಬೇಕಾಗಿದೆ. ಆದ್ದರಿಂದ, ಮಾಪನಶಾಸ್ತ್ರವು ಆಧುನಿಕತೆಯ ಮೂಲಾಧಾರವಾಗಿದೆ. ನಿಮ್ಮ ವಿಧಾನವು ಉತ್ತಮವಾಗಿರುತ್ತದೆ, ಉತ್ತಮ ಮಾಪನಶಾಸ್ತ್ರ ಮತ್ತು ಹೆಚ್ಚು ವಿಶ್ವಾಸಾರ್ಹ ಮಾಪನಶಾಸ್ತ್ರವು ಆ ದೇಶದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ. ಮಾಪನಶಾಸ್ತ್ರವು ನಮಗೆ ಕನ್ನಡಿಯಂತಿದೆ. ಜಗತ್ತಿನಲ್ಲಿ ನಮ್ಮ ಉತ್ಪನ್ನಗಳ ಸ್ಥಾನ ಏನು, ನಾವು ಸುಧಾರಿಸಬೇಕಾದದ್ದು ಏನು ಎನ್ನುವುದು ತಿಳಿಯುತ್ತದೆ.  ಇದು ಸ್ವಯಂ ಆತ್ಮಾವಲೋಕನದ ಮಾಪನಶಾಸ್ತ್ರದಿಂದ ಮಾತ್ರ ಸಾಧ್ಯ.    ಆದ್ದರಿಂದ,ಇಂದು, ಆತ್ಮ ನಿರ್ಭರ ಭಾರತ ಅಭಿಯಾನದ ಸಂಕಲ್ಪದೊಂದಿಗೆ ದೇಶವು ಮುಂದುವರಿಯುತ್ತಿರುವಾಗ, ಅದರ ಗುರಿಯು ಪ್ರಮಾಣ ಮತ್ತು ಗುಣಮಟ್ಟ ಎರಡನ್ನೂ ಒಳಗೊಂಡಿರುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು,  ಅಂದರೆ, ಪ್ರಮಾಣ ಮತ್ತು ಗುಣಮಟ್ಟ ಎರಡೂ ಏಕಕಾಲದಲ್ಲಿ ಹೆಚ್ಚಾಗಬೇಕು.  ನಾವು ಭಾರತೀಯ ಉತ್ಪನ್ನಗಳಿಂದ ಜಗತ್ತನ್ನು ತುಂಬಬೇಕಾಗಿಲ್ಲ, ಆದರೆ ಭಾರತೀಯ ಉತ್ಪನ್ನಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕರ ಹೃದಯವನ್ನೂ ಗೆಲ್ಲಬೇಕು.  ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ ಮಾತ್ರವಲ್ಲದೆ ಜಾಗತಿಕ ಅಂಗೀಕಾರವೂ ಇದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು.  ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ದೃಷ್ಟಿಯಿಂದ ನಾವು ಬ್ರಾಂಡ್ ಇಂಡಿಯಾವನ್ನು ಬಲಪಡಿಸುವ ಅಗತ್ಯವಿದೆ

ಸ್ನೇಹಿತರೇ,

ಭಾರತ ಈಗ ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ. ಇಂದು, ಭಾರತವು ತಮ್ಮದೇ ಆದ ಸಂಚರಣೆ ವ್ಯವಸ್ಥೆಯನ್ನು ಹೊಂದಿರುವ  ದೇಶಗಳಲ್ಲೊಂದಾಗಿದೆ. ಭಾರತವು ಈ ಸಾಧನೆಯನ್ನು NAVIC ನೊಂದಿಗೆ ತೋರಿಸಿದೆ.  ಇಂದು, ಈ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆ ಇಡಲಾಗಿದೆ. ಇಂದು ಬಿಡುಗಡೆಯಾದ ಭಾರತೀಯ ನಿರ್ದೇಶಕ್ ದ್ರವ್ಯ (ರಾಷ್ಟ್ರೀಯ ಪರಮಾಣು ಟೈಮ್‌ಸ್ಕೇಲ್)  ನಮ್ಮಉದ್ಯಮಗಳು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉತ್ತೇಜಿಸುತ್ತದೆ.

ಆಹಾರ, ಖಾದ್ಯ ತೈಲಗಳು, ಖನಿಜಗಳು, ಲೋಹಗಳು, ಕೀಟನಾಶಕಗಳು,  ಔಷಧ ಮತ್ತು ಜವಳಿಗಳಂತಹ ವಿವಿಧ ಕ್ಷೇತ್ರಗಳು ತಮ್ಮ ‘ಸರ್ಟಿಫೈಡ್‌ ರೆಫೆರೆನ್ಸ್‌ ಮೆಟೀರಿಯಲ್‌ ಸಿಸ್ಟಮʼ ವ್ಯವಸ್ಥೆಯನ್ನು ಬಲಪಡಿಸುವತ್ತ ವೇಗವಾಗಿ ಸಾಗುತ್ತಿವೆ.  ಈಗ ನಾವು ಉದ್ಯಮವು ನಿಯಂತ್ರಣ ಕೇಂದ್ರಿತ ವಿಧಾನದ ಬದಲಿಗೆ ಗ್ರಾಹಕ ಆಧಾರಿತ ವಿಧಾನದತ್ತ ಸಾಗುವ ಪರಿಸ್ಥಿತಿಯತ್ತ ಸಾಗುತ್ತಿದ್ದೇವೆ. ಈ ಹೊಸ ಮಾನದಂಡಗಳೊಂದಿಗೆ, ದೇಶಾದ್ಯಂತದ ಜಿಲ್ಲೆಗಳಲ್ಲಿ ಸ್ಥಳೀಯ ಉತ್ಪನ್ನಗಳ ಜಾಗತಿಕ ಗುರುತನ್ನು ಹೆಚ್ಚಿಸುವ ಅಭಿಯಾನವು ಹೊಸ ಉತ್ತೇಜನವನ್ನು ಪಡೆಯಲಿದೆ. ಇದು ವಿಶೇಷವಾಗಿ ನಮ್ಮ ಎಂಎಸ್‌ಎಂಇ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ವಿದೇಶದಿಂದ ಭಾರತಕ್ಕೆ ಬರುವ ದೊಡ್ಡ ಉತ್ಪಾದನಾ ಕಂಪನಿಗಳು ಭಾರತದೊಳಗಿನ ಅಂತರರಾಷ್ಟ್ರೀಯ ಮಾನದಂಡಗಳ ಸ್ಥಳೀಯ ಪೂರೈಕೆ ಸರಪಳಿಯನ್ನು ಸ್ವೀಕರಿಸುತ್ತವೆ. ಇದಲ್ಲದೆ, ಹೊಸ ಮಾನದಂಡಗಳೊಂದಿಗೆ ರಫ್ತು ಮತ್ತು ಆಮದು ಎರಡರ ಗುಣಮಟ್ಟವನ್ನು ಖಚಿತಪಡಿಸಲಾಗುತ್ತದೆ.  ಇದು ಭಾರತದ ಸಾಮಾನ್ಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಸಹ ಒದಗಿಸುತ್ತದೆ ಮತ್ತು ರಫ್ತುದಾರರು ಸಹ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಇದರರ್ಥ ನಮ್ಮ ಉತ್ಪಾದನೆ ಮತ್ತು ಉತ್ಪನ್ನಗಳು ಉತ್ತಮವಾಗಿವೆ, ದೇಶದ ಆರ್ಥಿಕತೆಯು ಬಲವಾಗಿರುತ್ತದೆ ಎಂದು.

ಸ್ನೇಹಿತರೇ,

ಹಿಂದಿನ ಕಾಲದಿಂದ ಇಂದಿನವರೆಗಿನ, ದೇಶದ ಪ್ರಯಾಣವನ್ನು ನೀವು ನೋಡಿದರೆ,  ಯಾವ ದೇಶವು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮುನ್ನಡೆಸಿದೆಯೋ ಆ  ದೇಶವು ವೇಗವಾಗಿ ಪ್ರಗತಿ ಹೊಂದಿದೆ. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮದ  'ಮೌಲ್ಯ ಸೃಷ್ಟಿ ಚಕ್ರ'.  ವಿಜ್ಞಾನವು ಆವಿಷ್ಕಾರಕ್ಕೆ ಕಾರಣವಾಗುತ್ತದೆ,  ಅದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತದೆ. ತಂತ್ರಜ್ಞಾನವು ಉದ್ಯಮವನ್ನು ಸೃಷ್ಟಿಸುತ್ತದೆ. ಉದ್ಯಮವು ಹೊಸ ಸಂಶೋಧನೆಗಾಗಿ ವಿಜ್ಞಾನದಲ್ಲಿ ಹೂಡಿಕೆ ಮಾಡುತ್ತದೆ ಮತ್ತು ಈ ಚಕ್ರವು ಹೊಸ ಸಾಧ್ಯತೆಗಳ ದಿಕ್ಕಿನಲ್ಲಿ ಚಲಿಸುತ್ತದೆ.  ಸಿಎಸ್ಐಆರ್  ಎನ್ ಪಿಎಲ್ ಭಾರತದ ಈ ಮೌಲ್ಯ ಚಕ್ರವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.  ಇಂದು, ದೇಶವು ಸ್ವಾವಲಂಬಿ ಭಾರತದ ಗುರಿಯತ್ತ ಸಾಗುತ್ತಿರುವಾಗ, ವಿಜ್ಞಾನದಿಂದ ಸಾಮೂಹಿಕ ಉತ್ಪಾದನೆಯವರೆಗಿನ ಈ ಮೌಲ್ಯ ಸೃಷ್ಟಿ ಚಕ್ರದ ಮಹತ್ವ ಹೆಚ್ಚಾಗುತ್ತದೆ.  ಆದ್ದರಿಂದ, ಸಿಎಸ್ಐಆರ್ ಇದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಬೇಕಾಗುತ್ತದೆ.

ಸ್ನೇಹಿತರೇ,

ಸಿಎಸ್ಐಆರ್ ಎನ್ ಪಿಎಲ್ ಇಂದು ರಾಷ್ಟ್ರೀಯ ಪರಮಾಣು ಟೈಮ್ ಸ್ಕೇಲ್ ಅನ್ನು ಭಾರತಕ್ಕೆ ಮೀಸಲಿಟ್ಟಿದೆ, ಅದರ ಮೂಲಕ ಭಾರತವು 1 ನ್ಯಾನೊ ಸೆಕೆಂಡ್ ಅನ್ನು ಅಳೆಯಲು ಸಾಧ್ಯವಾಗುತ್ತದೆ, ಅಂದರೆ ಸೆಕೆಂಡಿನ 1 ಬಿಲಿಯನ್ ಭಾಗವನ್ನು ಲೆಕ್ಕಾಚಾರ ಮಾಡುವಲ್ಲಿ ಭಾರತವು ಸ್ವಾವಲಂಬಿಯಾಗಿದೆ. 2.8 ನ್ಯಾನೊ–ಸೆಕೆಂಡ್ ನಿಖರತೆಯ ಮಟ್ಟದ ಈ ಸಾಧನೆಯು ಸ್ವತಃ ಒಂದು ದೊಡ್ಡ ಸಾಮರ್ಥ್ಯವಾಗಿದೆ. ಈಗ ನಮ್ಮ ಭಾರತೀಯ ಪ್ರಮಾಣಿತ ಸಮಯವು ಅಂತರರಾಷ್ಟ್ರೀಯ ಪ್ರಮಾಣಿತ ಸಮಯವನ್ನು 3 ನ್ಯಾನೊ ಸೆಕೆಂಡುಗಳಿಗಿಂತ ಕಡಿಮೆ ನಿಖರತೆಯ ಮಟ್ಟದಲ್ಲಿ ಅಳೆಯಲು ಸಾಧ್ಯವಾಗುತ್ತದೆ.  ಇದರೊಂದಿಗೆ, ಇಸ್ರೋ ಸೇರಿದಂತೆ ನಮ್ಮ ಎಲ್ಲಾ ಸಂಸ್ಥೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಮೇಲೆ ಕೆಲಸ ಮಾಡುವುದರಿಂದ ಅಪಾರ ಲಾಭವಾಗಲಿದೆ. ಬ್ಯಾಂಕಿಂಗ್, ರೈಲ್ವೆ, ರಕ್ಷಣಾ, ಆರೋಗ್ಯ, ದೂರಸಂಪರ್ಕ, ಹವಾಮಾನ ಮುನ್ಸೂಚನೆ, ಮತ್ತು ವಿಪತ್ತು ನಿರ್ವಹಣೆಯಂತಹ ವಿವಿಧ ಕ್ಷೇತ್ರಗಳಿಗೆ  ಆಧುನಿಕ ತಂತ್ರಜ್ಞಾನದಿಂದ ಇದರ ಲಾಭವಾಗಲಿದೆ.  ಇದಲ್ಲದೆ, ಇದು ಇಂಡಸ್ಟ್ರಿ 4.0 ಗಾಗಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ.

ಸ್ನೇಹಿತರೇ,

ಇಂದಿನ ಭಾರತವು ಜಗತ್ತನ್ನು ಮಾಲಿನ್ಯರಹಿತ ಪರಿಸರದತ್ತ ಕೊಂಡೊಯ್ಯುವತ್ತ ಸಾಗುತ್ತಿದೆ.  ಆದರೆ ಗಾಳಿಯ ಗುಣಮಟ್ಟ ಮತ್ತು ಹೊರಸೂಸುವಿಕೆ ಮತ್ತು ಸಾಧನಗಳನ್ನು ಅಳೆಯಲು ತಂತ್ರಜ್ಞಾನಕ್ಕಾಗಿ ನಾವು ಇತರರ ಮೇಲೆ ಅವಲಂಬಿತರಾಗಿದ್ದೇವೆ.  ಇಂದು, ಈ ವಿಷಯದಲ್ಲೂ ನಾವು ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ.  ಇದರೊಂದಿಗೆ, ಭಾರತದಲ್ಲಿನ ಮಾಲಿನ್ಯವನ್ನು ಎದುರಿಸಲು ಅಗ್ಗದ ಮತ್ತು ಹೆಚ್ಚು ಪರಿಣಾಮಕಾರಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.  ಅದೇ ಸಮಯದಲ್ಲಿ, ಗಾಳಿಯ ಗುಣಮಟ್ಟ ಮತ್ತು ಹೊರಸೂಸುವಿಕೆಯನ್ನು ಅಳೆಯುವ ತಂತ್ರಜ್ಞಾನಗಳ ವಿಷಯದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ನಮ್ಮ ವಿಜ್ಞಾನಿಗಳ ಸತತ ಪ್ರಯತ್ನದಿಂದ ಭಾರತ ಇಂದು ಈ ಸಾಧನೆಯನ್ನು ಮಾಡುತ್ತಿದೆ.

ಸ್ನೇಹಿತರೇ,

ಯಾವುದೇ ಪ್ರಗತಿಪರ ಸಮಾಜದಲ್ಲಿ ಸಂಶೋಧನಾ ಜೀವನವು ಸರಳ ರೂಪ ಮತ್ತು ಸುಗಮ ಪ್ರಕ್ರಿಯೆಯನ್ನು ಹೊಂದಿದೆ, ಸಂಶೋಧನೆಯ ಪ್ರಭಾವವು ವಾಣಿಜ್ಯ ಮತ್ತು ಸಾಮಾಜಿಕ ಪರಿಣಾಮಗಳನ್ನು ಸಹ ಹೊಂದಿದೆ. ನಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು ವಿಸ್ತರಿಸಲು ಸಂಶೋಧನೆ ಸಹ ಉಪಯುಕ್ತವಾಗಿದೆ.  ಆಗಾಗ್ಗೆ ಸಂಶೋಧನೆ ನಡೆಸುವಾಗ, ಅಂತಿಮ ಗುರಿಯ ಹೊರತಾಗಿ ಅದು ಯಾವ ದಿಕ್ಕಿನಲ್ಲಿ ಹೋಗುತ್ತದೆ ಅಥವಾ ಭವಿಷ್ಯದಲ್ಲಿ ಇದರ ಬಳಕೆ ಏನ್ನುವುದು ತಿಳಿಯುವುದಿಲ್ಲ. ಆದರೆ ಸಂಶೋಧನೆ ಮತ್ತು ಜ್ಞಾನದ ಯಾವುದೇ ಹೊಸ ಅಧ್ಯಾಯವು ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುವುದು ಖಚಿತವಾಗಿರುತ್ತದೆ.  ಇತಿಹಾಸದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ, ಫಾದರ್ ಆಫ್ ಜೆನೆಟಿಕ್ಸ್ ಮೆಂಡೆಲ್ ಅವರ ಮರಣೋತ್ತರವಾಗಿ ಮನ್ನಣೆಯನ್ನು ಪಡೆದರು.  ನಿಕೋಲಾ ಟೆಸ್ಲಾ ಅವರ ಕೆಲಸದ ಸಾಮರ್ಥ್ಯವನ್ನು ಜಗತ್ತು ನಂತರ ಅರ್ಥಮಾಡಿಕೊಂಡಿತು.  ಬಹಳಷ್ಟು ಸಂಶೋಧನಾ ಕಾರ್ಯಗಳು ಉದ್ದೇಶದಿಂದ ಅಥವಾ ನಾವು ಚಲಿಸುವ ದಿಕ್ಕಿನಲ್ಲಿ ಪೂರ್ಣಗೊಳ್ಳುವುದಿಲ್ಲ. ಆದರೆ ಅದೇ ಸಂಶೋಧನೆಯು ಇತರ ಕೆಲವು ವಲಯಗಳಲ್ಲಿ ಒಂದು ಪಾತ್‌ ಬೇಕಿಂಗ್‌ ಸಂಶೋಧನೆ ಅಥವಾ ಆವಿಷ್ಕಾರವಾಗಿ ಬದಲಾಗಬಹುದು.  ಉದಾಹರಣೆಗೆ, ಜಗದೀಶ್ ಚಂದ್ರ ಬೋಸ್ ಜಿ ಅವರು ಕೋಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮೈಕ್ರೊವೇವ್ ಸಿದ್ಧಾಂತವನ್ನು ಮಂಡಿಸಿದ್ದರು. ಸರ್ ಬೋಸ್ ಅದರ ವಾಣಿಜ್ಯ ಬಳಕೆಯ ದಿಕ್ಕಿನಲ್ಲಿ ಯೋಚಿಸಲಿಲ್ಲ ಆದರೆ ಇಂದು ರೇಡಿಯೋ ಸಂವಹನ ವ್ಯವಸ್ಥೆಯು ಅದೇ ತತ್ವವನ್ನು ಆಧರಿಸಿದೆ.  ವಿಶ್ವದ ಮಹಾಯುದ್ಧದ ಸಮಯದಲ್ಲಿ ಯುದ್ಧಗಳಿಗಾಗಿ ಅಥವಾ ಸೈನಿಕರನ್ನು ಉಳಿಸಲು ನಡೆಸಿದ ಸಂಶೋಧನೆಯು ನಂತರ ವಿವಿಧ ಕ್ಷೇತ್ರಗಳಲ್ಲಿ ಕ್ರಾಂತಿಯನ್ನುಂಟು ಮಾಡಿತು.  ಡ್ರೋನ್‌ಗಳನ್ನು ಯುದ್ಧಗಳಿಗೆ ಮಾತ್ರ ತಯಾರಿಸಲಾಗುತ್ತಿತ್ತು.  ಆದರೆ ಇಂದು ಡ್ರೋನ್‌ಗಳನ್ನು ವಸ್ತುಗಳನ್ನು ಸಾಗಿಸುವುದಕ್ಕೂ ಹಾಗೂ  ಛಾಯಾಗ್ರಹಣಕ್ಕೂ ಬಳಸಲಾಗುತ್ತಿದೆ.  ಆದ್ದರಿಂದ, ಇಂದು ನಮ್ಮ ವಿಜ್ಞಾನಿಗಳು, ವಿಶೇಷವಾಗಿ ಯುವ ವಿಜ್ಞಾನಿಗಳು, ಸಂಶೋಧನೆಯ ಬಳಕೆಯ ಎಲ್ಲ ಸಾಧ್ಯತೆಗಳನ್ನು ಅನ್ವೇಷಿಸುವುದು ಮುಖ್ಯವಾಗಿದೆ.  ತಮ್ಮ ಸಂಶೋಧನೆಗಳನ್ನು ತಮ್ಮ ಕ್ಷೇತ್ರಗಳ ಹೊರಗೆ ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಅವರು ಯಾವಾಗಲೂ ಯೋಚಿಸಬೇಕು.

ಸ್ನೇಹಿತರೇ,

ವಿದ್ಯುತ್ , ಇದು ಸಣ್ಣ ಸಂಶೋಧನೆಯು ಪ್ರಪಂಚದ ಭವಿಷ್ಯವನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಒಂದು ಒಳ್ಳೆಯ ಉದಾಹರಣೆಯಾಗಿದೆ.   ಇಂದು, ಸಾರಿಗೆ, ಸಂವಹನ, ಉದ್ಯಮ, ಅಥವಾ ದೈನಂದಿನ ಜೀವನದಿಂದ ಎಲ್ಲವೂ ವಿದ್ಯುಚ್ಛಕ್ತಿಯ ಮೇಲೆ ಅವಲಂಬಿತವಾಗಿದೆ.  ಸೆಮಿ ಕಂಡಕ್ಟರ್‌ನ ಆವಿಷ್ಕಾರದಿಂದ ಜಗತ್ತು ತುಂಬಾ ಬದಲಾಗಿದೆ.  ಡಿಜಿಟಲ್ ಕ್ರಾಂತಿ ನಮ್ಮ ಜೀವನವನ್ನು ಶ್ರೀಮಂತಗೊಳಿಸಿದೆ. ಈ ಹೊಸ ಭವಿಷ್ಯದಲ್ಲಿ ನಮ್ಮ ಯುವ ಸಂಶೋಧಕರ ಮುಂದೆ ಹಲವು ಸಾಧ್ಯತೆಗಳಿವೆ. ಭವಿಷ್ಯವು ಇಂದಿನಿಂದ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಮತ್ತು ಈ ದಿಕ್ಕಿನಲ್ಲಿ, ನೀವು ಆ ಒಂದು ಸಂಶೋಧನೆ ಅಥವಾ ಆವಿಷ್ಕಾರವನ್ನು ನಡೆಸಬೇಕು.

ಕಳೆದ ಆರು ವರ್ಷಗಳಲ್ಲಿ, ದೇಶವು ಭವಿಷ್ಯದಲ್ಲಿ ಸಿದ್ಧವಾದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ.  ಇಂದು, ಜಾಗತಿಕ ನಾವೀನ್ಯತೆ ಶ್ರೇಯಾಂಕದಲ್ಲಿ ಭಾರತ ವಿಶ್ವದ ಅಗ್ರ 50 ದೇಶಗಳಲ್ಲಿ ಒಂದಾಗಿದೆ. ಇಂದು ದೇಶದಲ್ಲಿ ಮೂಲಭೂತ ಸಂಶೋಧನೆಗಳಿಗೆ ಒತ್ತು ನೀಡಲಾಗುತ್ತಿದೆ ಮತ್ತು ಪೀರ್–ರಿವ್ಯೂಡ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತವು ವಿಶ್ವದ ಅಗ್ರ 3 ರಾಷ್ಟ್ರಗಳಲ್ಲಿ ಒಂದಾಗಿದೆ.  ಇಂದು ಭಾರತದಲ್ಲಿ, ಉದ್ಯಮ ಮತ್ತು ಸಂಸ್ಥೆಗಳ ನಡುವಿನ ಸಹಯೋಗವನ್ನು ಸಹ ಬಲಪಡಿಸಲಾಗುತ್ತಿದೆ.  ವಿಶ್ವದ ಪ್ರಮುಖ ಕಂಪನಿಗಳು ತಮ್ಮ ಸಂಶೋಧನಾ ಕೇಂದ್ರಗಳು ಮತ್ತು ಸೌಲಭ್ಯಗಳನ್ನು ಭಾರತದಲ್ಲಿ ಸ್ಥಾಪಿಸುತ್ತಿವೆ. ಕಳೆದ ವರ್ಷಗಳಲ್ಲಿ, ಈ ಸೌಲಭ್ಯಗಳ ಸಂಖ್ಯೆಯೂ ಸಾಕಷ್ಟು ಹೆಚ್ಚಾಗಿದೆ.

ಸ್ನೇಹಿತರೇ,

ಇಂದು, ಭಾರತದ ಯುವಜನರು ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಅಪಾರ ಸಾಧ್ಯತೆಗಳನ್ನು ಹೊಂದಿದ್ದಾರೆ ಆದರೆ ಇಂದು ನಾವೀನ್ಯತೆಯನ್ನು ಸಾಂಸ್ಥೀಕರಣಗೊಳಿಸುವುದು ಅಷ್ಟೇ ಮುಖ್ಯವಾಗಿದೆ. ನಮ್ಮ ಯುವಕರು ಅದನ್ನು ಸಾಧಿಸಬಹುದಾದ ವಿಧಾನಗಳು ಮತ್ತು ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಮಾರ್ಗಗಳ ಬಗ್ಗೆ ಕಲಿಯಬೇಕಾಗಿದೆ. ನಮ್ಮ ಪೇಟೆಂಟ್‌ಗಳು ಹೆಚ್ಚಾದಂತೆ , ಪೇಟೆಂಟ್‌ಗಳ ಉಪಯುಕ್ತತೆ ಹೆಚ್ಚಾಗಿರುತ್ತದೆ,  ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಂಶೋಧನೆಯ ಹರಡುವಿಕೆ ಹೆಚ್ಚಾದಂತೆ, ನಿಮ್ಮ ಗುರುತು ಪ್ರಬಲವಾಗಿರುತ್ತದೆ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು.  ಹಾಗೆಯೇ ಬ್ರಾಂಡ್ ಇಂಡಿಯಾ ಕೂಡ ಅಷ್ಟೇ ಪ್ರಬಲವಾಗಿರುತ್ತದೆ.  'ಕರ್ಮಣ್ಯೇ–ವಾಧಿಕಾರಸ್ಟೆ  ಮಾ ಫಲೇಶು ಕದಾಚನʼ' ಮಂತ್ರದಿಂದ ಸ್ಫೂರ್ತಿ ಮತ್ತು ಶಕ್ತಿಯನ್ನು ಹುಡುಕುತ್ತಾ, ನಾವು ನಮ್ಮ ಕರ್ಮ ಅಥವಾ ಕರ್ತವ್ಯಗಳೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸಬೇಕು. ಮತ್ತು ವಿಜ್ಞಾನಿಗಳು ತಮ್ಮ ಜೀವನದಲ್ಲಿ ಈ ಮಂತ್ರವನ್ನು ಅನುಸರಿಸಿದ್ದಾರೆಂದು ನಾನು ನಂಬುತ್ತೇನೆ.  ಅವರು ಪ್ರಯೋಗಾಲಯಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ತಮ್ಮ ಕೆಲಸದಲ್ಲಿ ಗಮನ ಹರಿಸುತ್ತಾರೆ. .  'ಕರ್ಮಣ್ಯೇ–ವಾಧಿಕಾರಸ್ಟೆ  ಮಾ ಫಲೇಶು ಕದಾಚನʼ' ನ ಮಂತ್ರದಂತೆಯೇ, ಅವರು ಫಲಿತಾಂಶಗಳ ಮೇಲೆ ಕೇಂದ್ರೀಕರಿಸದೆ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ನೀವು ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧಕರು ಮಾತ್ರವಲ್ಲದೆ 130 ಕೋಟಿಗೂ ಹೆಚ್ಚು ಭಾರತೀಯರ ಆಶಯ ಮತ್ತು ಆಕಾಂಕ್ಷೆಗಳನ್ನು ಈಡೇರಿಸುವ ಗುರಿಯನ್ನು ಹೊಂದಿದ್ದೀರಿ.

ನೀವು ಯಶಸ್ವಿಯಾಗುತ್ತೀರಿ ಎಂದು ನಾನು ನಂಬುತ್ತೇನೆ!

ಈ ಹಾರೈಕೆಯೊಂದಿಗೆ ನಾನು ನಿಮಗೆ ಮತ್ತೆ ಹೊಸ ವರ್ಷದ  ಶುಭಾಶಯಗಳನ್ನು ಕೋರುತ್ತೇನೆ!

ಧನ್ಯವಾದಗಳು!

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.