Quoteಆಯುಷ್ಕಾನ್ ಭಾರತ್ ಯೋಜನೆಯಿಂದ ಅಸ್ಸಾಂನ 1.25 ಕೋಟಿ ಜನರಿಗೆ ಪ್ರಯೋಜನಭಾರತೀಯ ಚಹಾದ ವರ್ಚಸ್ಸಿಗೆ ಕಳಂಕ ತರುವ ಪಿತೂರಿ ಯಶಸ್ವಿಯಾಗದು‘ಅಸೋಮ್ ಮಾಲಾ’ ಮೂಲಕ ವಿಸ್ತಾರವಾದ ರಸ್ತೆಗಳ ಜಾಲ ಮತ್ತು ಪ್ರತಿ ಗ್ರಾಮಕ್ಕೂ ಸಂಪರ್ಕ ಕಲ್ಪಿಸುವ ಅಸ್ಸಾಂ ಜನರ ಕನಸು ನನಸು: ಪ್ರಧಾನಮಂತ್ರಿ

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಅಸ್ಸಾಂನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಸರ್ಬಾನಂದ್ ಸೋನೋವಾಲ್ ಅವರೇ, ನನ್ನ ಸಂಪುಟದ ಸಹೋದ್ಯೋಗಿ, ಶ್ರೀ ರಾಮೇಶ್ವರ್ ತೆಲಿ ಅವರೇ, ಅಸ್ಸಾಂ ಸರ್ಕಾರದ ಸಚಿವರುಗಳಾದ ಶ್ರೀ ಹಿಮಂತ್ ಬಿಸ್ವಾಸ್ ಶರ್ಮಾ ಅವರೇ, ಶ್ರೀ ಅತುಲ್ ಬೋರಾ ಅವರೇ, ಶ್ರೀ ಕೇಶವ್ ಮಹಾಂತ ಅವರೇ, ಶ್ರೀ ರಂಜಿತ್ ದತ್ತ ಅವರೇ, ಬೋಡೋ ಲ್ಯಾಂಡ್ ಪ್ರದೇಶದ ಮುಖ್ಯರಾದ ಶ್ರೀ ಪ್ರಮೋದ್ ಬೋರಾ ಅವರೇ, ಎಲ್ಲ ಸಂಸತ್ ಸದಸ್ಯರೇ ಮತ್ತು ಶಾಸಕರೇ, ನನ್ನ ಸಹೋದರ ಮತ್ತು ಸಹೋದರಿಯರೇ.

ನನ್ನ ಸಹೋದರ ಸಹೋದರಿಯರೇ ಹೇಗಿದ್ದೀರಿ? ನೀವೆಲ್ಲರೂ ಕ್ಷೇಮ ಎಂದು ಭಾವಿಸುತ್ತೇನೆ. ಕಳೆದ ತಿಂಗಳು, ಅಸ್ಸಾಂಗೆ ಆಗಮಿಸಿ, ಸಮಾಜದ ವಂಚಿತ, ಶೋಷಿತ, ಬಡವರಿಗೆ ಭೂ ಹಕ್ಕು ವಿತರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸೌಭಾಗ್ಯ ಲಭ್ಯವಾಗಿತ್ತು. ಅಸ್ಸಾಂನ ಜನರ ಪ್ರೀತಿ ಮತ್ತು ವಾತ್ಸಲ್ಯ ಎಷ್ಟು ಆಳವಾಗಿದೆಯೆಂದರೆ ನನ್ನನ್ನು ಪದೇ ಪದೇ ಅಸ್ಸಾಂಗೆ ಬರುವಂತೆ ಮಾಡುತ್ತದೆ ಎಂದು ಆಗ ನಾನು ಹೇಳಿದ್ದೆ. ಈಗ, ಮತ್ತೊಮ್ಮೆ ನಿಮ್ಮೆಲ್ಲರಿಗೂ ಶುಭ ಕೋರಲು ಮತ್ತು ಭೇಟಿ ಮಾಡಲು ಬಂದಿದ್ದೇನೆ. ನಿನ್ನೆ, ಸಾಮಾಜಿಕ ಮಾಧ್ಯಮದಲ್ಲಿ ಧೇಕಿಯಾಜೂಲಿ ಹೇಗೆ ಸಿಂಗಾರಗೊಂಡಿತ್ತು ಎಂಬುದನ್ನು ನೋಡಿದೆ ಮತ್ತು ಆ ಸಂಬಂಧ ಟ್ವೀಟ್ ಕೂಡ ಮಾಡಿದೆ. ನೀವು ಹಲವು ದೀಪಗಳನ್ನು ಬೆಳಗಿಸಿದ್ದಿರಿ. ನಾನು ಅಸ್ಸಾಂನ ಜನರ ವಾತ್ಸಲ್ಯಕ್ಕೆ ನಮಿಸುತ್ತೇನೆ.

|

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಜಿ, ಹಿಮಂತ್ ಜಿ, ರಂಜಿತ್ ದತ್ತಾ ಜಿ, ಮತ್ತು ಅಸ್ಸಾಂ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಮತ್ತು ವೇಗವಾಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರ ಮತ್ತು ಬಿಜೆಪಿ ಸಂಘಟನೆಯಲ್ಲಿರುವ ಎಲ್ಲರನ್ನೂ ನಾನು ಪ್ರಶಂಸಿಸಲು ಬಯಸುತ್ತೇನೆ. ಅಭಿವೃದ್ಧಿ ಕಾರ್ಯಕ್ರಮಗಳ ಭಾಗವಾಗಿ ನಾನು ಪದೇ ಪದೇ ಇಲ್ಲಿಗೆ ಬರುವ ಅವಕಾಶವನ್ನು ಪಡೆಯುತ್ತಿದ್ದೇನೆ. ಇಂದು ಮತ್ತುಂದು ಕಾರಣಕ್ಕೆ ನನಗೆ ಒಂದು ವಿಶೇಷ ದಿನವಾಗಿದೆ, ಇಂದು, ಸೋನಿತ್ಪುರ-ಧೆಕಿಯಾಜುಲಿಯ ಈ ಪವಿತ್ರ ಭೂಮಿಗೆ ನಮಸ್ಕರಿಸಲು ನನಗೆ ಅವಕಾಶ ಸಿಕ್ಕಿದೆ. ರುದ್ರಪಾದ ದೇವಸ್ಥಾನದ ಬಳಿ ಅಸ್ಸಾಂನ ಶತಮಾನಗಳಷ್ಟು ಹಳೆಯ ಇತಿಹಾಸವನ್ನು ನಮಗೆ ಪರಿಚಯಿಸಿದ ಭೂಮಿ ಇದು. ಅಸ್ಸಾಂನ ಜನರು ಆಕ್ರಮಣಕಾರರನ್ನು ಸೋಲಿಸಿ, ಅವರ ಏಕತೆ, ಶಕ್ತಿ ಮತ್ತು ಶೌರ್ಯವನ್ನು ಪ್ರದರ್ಶಿಸಿದ ಭೂಮಿ ಇದು. 1942ರಲ್ಲಿ ಈ ಭೂಮಿಯಲ್ಲಿ, ಅಸ್ಸಾಂನ ಸ್ವಾತಂತ್ರ್ಯ ಹೋರಾಟಗಾರರು ತ್ರಿವರ್ಣ ಧ್ವಜದ ಗೌರವಕ್ಕಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈ ಹುತಾತ್ಮರ ಶೌರ್ಯದ ಮೇಲೆ, ಭೂಪೆನ್ ಹಜರಿಕಾ ಜಿ ಹೀಗೆ ಹೇಳುತ್ತಿದ್ದರು:

भारत हिंहहआजि जाग्रत हय।

प्रति रक्त बिन्दुते,

हहस्र श्वहीदर

हाहत प्रतिज्ञाओ उज्वल हय।

ಅದು, ಭಾರತದ ಸಿಂಹಗಳು ಇಂದು ಜಾಗೃತವಾಗಿದೆ. ಈ ಹುತಾತ್ಮರ ಒಂದೊಂದು ಹನಿ ರಕ್ತವೂ, ಅವರ ಧೈರ್ಯ, ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ. ಹೀಗಾಗಿ ಸೋನಿತ್ಪುರದ ಈ ಭೂಮಿ, ಹುತಾತ್ಮರ ಶೌರ್ಯಕ್ಕೆ ಸಾಕ್ಷಿಯಾಗಿದೆ, ಅಸ್ಸಾಂನ ಭಾಗವಾದ ಇದು, ಅಸ್ಸಾಂನ ಹಿರಿಮೆಯನ್ನು ಮತ್ತೆ ಮತ್ತೆ ನನ್ನ ಮನದಲ್ಲಿ ಹರಿಯುತ್ತದೆ.

ಸ್ನೇಹಿತರೆ,

ದೇಶದ ಮೊದಲ ಬೆಳಗ್ಗೆ ಈಶಾನ್ಯದ ಕಡೆಯಿಂದ ಬರುತ್ತದೆ ಎಂದು ನಾವೆಲ್ಲರೂ ಯಾವಾಗಲೂ ಕೇಳುತ್ತಿರುತ್ತೇವೆ ಮತ್ತು ನೋಡುತ್ತಿರುತ್ತೇವೆ. ಆದರೆ ಈಶಾನ್ಯ ಮತ್ತು ಅಸ್ಸಾಂನಲ್ಲಿ ಅಭಿವೃದ್ಧಿಯ ಬೆಳಕಿಗೆ ಬಹಳ ಸಮಯ ಕಾಯಬೇಕಾಯಿತು ಎಂಬುದೂ ಸತ್ಯ. ಇಡೀ ಈಶಾನ್ಯವು ಈಗ ಹಿಂಸಾಚಾರ, ಅಭಾವ, ಒತ್ತಡ, ತಾರತಮ್ಯ, ತಾರತಮ್ಯ ಮತ್ತು ಸಂಘರ್ಷವನ್ನು ಬಿಟ್ಟು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದೆ ಮತ್ತು ಅಸ್ಸಾಂ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇತ್ತೀಚೆಗೆ ಬೋಡೋ ಲ್ಯಾಂಡ್ ಪ್ರದೇಶ ಮಂಡಳಿ ಚುನಾವಣೆ ಐತಿಹಾಸಿಕ ಬೋಡೋ ಶಾಂತಿ ಒಪ್ಪಂದದ ನಂತರದಲ್ಲಿ ನಡೆದು ಅಭಿವೃದ್ಧಿ ಮತ್ತು ವಿಶ್ವಾಸದ ಹೊಸ ಅಧ್ಯಾಯವನ್ನು ಬರೆದಿವೆ. ಈ ದಿನವು ಅಸ್ಸಾಂನ ಭವಿಷ್ಯ ಮತ್ತು ಭವಿತವ್ಯದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿಯಾಗಿದೆ. ಇಂದು, ಒಂದು ಕಡೆ, ಅಸ್ಸಾಂ ಬಿಸ್ವಾನಾಥ್ ಮತ್ತು ಚಾರೈಡಿಯೊದಲ್ಲಿನ ಎರಡು ವೈದ್ಯಕೀಯ ಕಾಲೇಜುಗಳ ಉಡುಗೊರೆಗಳನ್ನು ಪಡೆಯುತ್ತಿದ್ದರೆ, ಮತ್ತೊಂದೆಡೆ, ಅಸೋಮ್ ಮಾಲಾ ಮೂಲಕ ಆಧುನಿಕ ಮೂಲಸೌಕರ್ಯಗಳಿಗೆ ಅಡಿಪಾಯವನ್ನೂ ಹಾಕಲಾಗಿದೆ. ಇಂದು ಅಸ್ಸಾಂನ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ದಿನವಾಗಿದೆ. ಈ ವಿಶೇಷ ದಿನ, ನಾನು ಅಸ್ಸಾಂ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

|

ಸ್ನೇಹಿತರೆ,

ಒಗ್ಗಟ್ಟಿನ ಪ್ರಯತ್ನಗಳು ಮತ್ತು ನಿರ್ಣಯಗಳು ಉತ್ತಮ ಫಲಿತಾಂಶಗಳಿಗೆ ಹೇಗೆ ಕಾರಣವಾಗುತ್ತವೆ ಎಂಬುದಕ್ಕೆ ಅಸ್ಸಾಂ ಉತ್ತಮ ಉದಾಹರಣೆಯಾಗಿದೆ. ಐದು ವರ್ಷಗಳ ಹಿಂದೆ ಅಸ್ಸಾಂನ ಬಹುತೇಕ ದೂರದ ಪ್ರದೇಶಗಳಲ್ಲಿ ಉತ್ತಮ ಆಸ್ಪತ್ರೆಗಳು ಕೇವಲ ಕನಸಾಗಿದ್ದ ಸಮಯವನ್ನು ನೀವು ನೆನಪಿಸಿಕೊಳ್ಳುತ್ತೀರಿ. ಉತ್ತಮ ಆಸ್ಪತ್ರೆಗಳು, ಉತ್ತಮ ಚಿಕಿತ್ಸೆ ಎಂದರೆ, ಹಲವು ಗಂಟೆಗಳ ಪ್ರಯಾಣ, ಗಂಟೆಗಟ್ಟಲೆ ಕಾಯುವಿಕೆ ಮತ್ತು ಅಸಂಖ್ಯಾತ ಕಷ್ಟಗಳನ್ನು ಅರ್ಥೈಸುತ್ತಿತ್ತು! ಅಸ್ಸಾಂನ ಜನರು ತಮಗೆ ಯಾವುದೇ ವೈದ್ಯಕೀಯ ತುರ್ತುಸ್ಥಿತಿ ಉಂಟಾಗದರೆ ಎಂದು ಸದಾ ಚಿಂತೆ ಮಾಡುತ್ತಿದ್ದರು ಎಂದು ನನಗೆ ತಿಳಿಸಲಾಗಿದೆ! ಆದರೆ ಈ ಸಮಸ್ಯೆಗಳು ಈಗ ವೇಗವಾಗಿ ಪರಿಹಾರವಾಗುತ್ತಾ ಸಾಗುತ್ತಿವೆ.

ನೀವು ಈ ಬದಲಾವಣೆಯನ್ನು ನೋಡುತ್ತಿದ್ದೀರಿ ಮತ್ತು ಅನುಭವಿಸುತ್ತಿದ್ದೀರಿ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅಂದರೆ 2016ರವರೆಗೆ ಅಸ್ಸಾಂನಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳು ಇದ್ದವು. ಈಗ ಈ ಐದು ವರ್ಷಗಳಲ್ಲಿ, ಅಸ್ಸಾಂನಲ್ಲಿ ಮತ್ತೆ ಆರು ವೈದ್ಯಕೀಯ ಕಾಲೇಜು ನಿರ್ಮಾಣ ಕೈಗೊಳ್ಳಲಾಗಿದೆ. ಉತ್ತರ ಅಸ್ಸಾಂ, ಮೇಲಿನ ಅಸ್ಸಾಂನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಎರಡು ವೈದ್ಯಕೀಯ ಕಾಲೇಜುಗಳಿಗೆ ಬಿಶ್ವನಾಥ್ ಮತ್ತು ಚರೈಡಿಯೋದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ವೈದ್ಯಕೀಯ ಕಾಲೇಜುಗಳು, ಆಧುನಿಕ ಆರೋಗ್ಯ ಸೇವೆಯ ಕೇಂದ್ರವಾಗಲಿವೆ. ಮುಂದಿನ ಕೆಲವೇ ವರ್ಷಗಳಲ್ಲಿ, ನಮ್ಮ ಸಾವಿರಾರು ಯುವಕರು ವೈದ್ಯರಾಗಿ ಹೊರಬರುತ್ತಾರೆ. 2016ರವರಗೆ ಕೇವಲ 725 ಎಂ.ಬಿ.ಬಿ.ಎಸ್. ಸೀಟುಗಳು ಅಸ್ಸಾಂನಲ್ಲಿದ್ದವು. ಈ ಎರಡು ಕಾಲೇಜುಗಳು ಆರಂಭವಾಗುತ್ತಿದ್ದಂತೆ 1600 ಹೊಸ ಎಂ.ಬಿ.ಬಿ.ಎಸ್. ವೈದ್ಯರು ಪ್ರತಿ ವರ್ಷ ಹೊರಬರುತ್ತಾರೆ. ನನಗೆ ಮತ್ತೂ ಒಂದು ಕನಸಿದೆ. ಇದು ಅತಿ ಕಠಿಣ ಕನಸೆಂದು ಕಾಣುತ್ತದೆ, ಆದರೆ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ, ಬಡವರ ಮನೆಗಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಅವರಿಗೆ ಅವಕಾಶ ಸಿಗುತ್ತಿಲ್ಲ., ಸ್ವತಂತ್ರ ಭಾರತ 75 ವರ್ಷ ಆಚರಿಸುವಾಗ ನನಗೆ ಒಂದು ಕನಸಿದೆ, ಪ್ರತಿ ರಾಜ್ಯದಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಮತ್ತು ತಾಂತ್ರಿಕ ಕಾಲೇಜು ಇರಬೇಕು ಮತ್ತು ತಮ್ಮ ಮಾತೃಭಾಷೆಯಲ್ಲಿ ಕಲಿಸಲು ಪ್ರಾರಂಭಿಸಬೇಕು. ಅಸ್ಸಾಮೀಸ್ ಭಾಷೆಯಲ್ಲಿ ಅಧ್ಯಯನ ಮಾಡುವ ಮೂಲಕ ಯಾರಾದರೂ ಉತ್ತಮ ವೈದ್ಯರಾಗಲು ಸಾಧ್ಯವಿಲ್ಲವೇ? ದೇಶವು ತನ್ನ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಹೊರಟಿದೆ, ಮತ್ತು ಚುನಾವಣೆಯ ನಂತರ ಅಸ್ಸಾಂನಲ್ಲಿ ಹೊಸ ಸರ್ಕಾರ ರಚನೆಯಾದಾಗ, ನಾನು ಅಸ್ಸಾಂನ ಜನರ ಪರವಾಗಿ ವಾಗ್ದಾನ ಮಾಡಲು ಬಯಸುತ್ತೇನೆ. ನಾವು ಅಸ್ಸಾಂನಲ್ಲಿ ವೈದ್ಯಕೀಯ ಕಾಲೇಜು ಮತ್ತು ತಾಂತ್ರಿಕ ಕಾಲೇಜನ್ನು ಸ್ಥಳೀಯ ಭಾಷೆಯಲ್ಲಿ ಪ್ರಾರಂಭಿಸುತ್ತೇವೆ ಮತ್ತು ಕ್ರಮೇಣ ಅದು ಬೆಳೆಯುತ್ತದೆ. ಯಾರೊಬ್ಬರಿಗೂ ಇದನ್ನು ತಡೆಯಲು ಸಾಧ್ಯವಿಲ್ಲ. ಈ ವೈದ್ಯರು ಅಸ್ಸಾಂನ ದೂರ ದೂರದಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಇದು ಚಿಕಿತ್ಸೆಗೆ ಅವಕಾಶ ನೀಡುವುದರ ಜೊತೆಗೆ ಚಿಕಿತ್ಸೆಗಾಗಿ ಜನರು ದೂರದ ಊರಿಗೆ ಹೋಗುವುದನ್ನು ತಪ್ಪಿಸುತ್ತದೆ.

|

ಸ್ನೇಹಿತರೆ,

ಏಮ್ಸ್ ಗುವಾಹತಿಯ ಕಾಮಗಾರಿ ಸಹ ಇಂದು ತ್ವರಿತಗತಿಯಲ್ಲಿ ಪ್ರಗತಿಯಲ್ಲಿದೆ. ಇದು ಮುಂದಿನ ಒಂದೂವರೆಯಿಂದ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಎಂ.ಬಿ.ಬಿ.ಎಸ್.ನ ಪ್ರಥಮ ತಂಡದ ಶೈಕ್ಷಣಿಕ ವರ್ಷ ಹಾಲಿ ಕ್ಯಾಂಪಸ್ ನಲ್ಲಿ ಆರಂಭಗೊಂಡಿದೆ. ಇನ್ನು ಕೆಲವೇ ವರ್ಷಗಳಲ್ಲಿ ಹೊಸ ಕ್ಯಾಂಪಸ್ ಸಿದ್ಧವಾದ ಬಳಿಕ, ಗುವಾಹತಿ ಆಧುನಿಕ ಆರೋಗ್ಯ ಸೇವೆಗಳ ತಾಣವಾಗಲಿದೆ. ಗುವಾಹತಿ ಅಸ್ಸಾಂ ಜನರ ಜೀವನ ಮಾತ್ರ ಪರಿವರ್ತಿಸುವುದಿಲ್ಲ, ಜೊತೆಗೆ ಇಡೀ ಈಶಾನ್ಯ ಭಾಗದ ಚಿತ್ರಣವನ್ನೇ ಬದಲಿಸುತ್ತದೆ. ಇಂದು, ಏಮ್ಸ್ ಬಗ್ಗೆ ಮಾತನಾಡಿದಾಗ, ನಾನು ನಿಮಗೊಂದು ಪ್ರಶ್ನೆ ಕೇಳುತ್ತೇನೆ. ಹಿಂದಿನ ಸರ್ಕಾರಗಳು ನೀವು ಗುವಾಹತಿಯಲ್ಲಿ ಏಮ್ಸ್ ನಿಂದ ಎಷ್ಟೊಂದು ಪ್ರಯೋಜನ ಪಡಿಯುತ್ತೀರಿ ಎಂಬುದನ್ನು ಏಕೆ ಯೋಚಿಸಲಿಲ್ಲ? ಆ ಜನರು ಈಶಾನ್ಯದಿಂದ ದೂರ ಇದ್ದರು, ಹೀಗಾಗಿ ಅವರಿಗೆ ನಿಮ್ಮ ಸಂಕಷ್ಟ ಅರಿವಾಗಲೇ ಇಲ್ಲ.

ಸ್ನೇಹಿತರೆ,

ಇಂದು, ಕೇಂದ್ರ ಸರ್ಕಾರ ಅಸ್ಸಾಂನ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಅಸ್ಸಾಂ ಕೂಡ ಹೆಗಲಿಗೆ ಹೆಗಲು ಕೊಟ್ಟು ದೇಶದೊಂದಿಗೆ ಸಾಗುತ್ತಿದೆ. ಆಯುಷ್ಮಾನ್ ಭಾರತ ಯೋಜನೆ, ಜನ್ ಔಷಧಿ ಕೇಂದ್ರ, ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮಗಳು, ಅಥವಾ ಆರೋಗ್ಯ ಮತ್ತು ಕ್ಷೇತ್ರಕೇಂದ್ರಗಳಿಂದ ಶ್ರೀಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ಆಗಿದೆ, ಇದೇ ಬದಲಾವಣೆಗಳು ಅಸ್ಸಾಂನಲ್ಲಿಯೂ ಗೋಚರಿಸುತ್ತಿವೆ. ಇಂದು, ಆಯುಷ್ಮಾನ್ ಭಾರತ್ ಯೋಜನೆ ಅಸ್ಸಾಂನಲ್ಲಿ 1.25 ಕೋಟಿ ಜನರಿಗೆ ಪ್ರಯೋಜನ ತರುತ್ತಿದೆ. ಅಸ್ಸಾಂನ 350ಕ್ಕೂ ಹೆಚ್ಚು ಆಸ್ಪತ್ರೆಗಳು ಯೋಜನೆಗೆ ಸೇರ್ಪಡೆಯಾಗಿವೆ. ಇಷ್ಟು ಅಲ್ಪಾವಧಿಯಲ್ಲಿ 1.5 ಲಕ್ಷ ಬಡ ಜನರು ಆಯುಷ್ಮಾನ್ ಭಾರತದಡಿ ಉಚಿತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಎಲ್ಲ ಯೋಜನೆಗಳೂ ಅಸ್ಸಾಂನ ಬಡ ಜನರು ಆರೋಗ್ಯ ಸೇವೆಯ ಮಾಡುತ್ತಿದ್ದ ಕೋಟ್ಯಂತರ ರೂಪಾಯಿ ಹಣ ಉಳಿಸಿವೆ. ಆಯುಷ್ಮಾನ್ ಭಾರತ ಯೋಜನೆಯ ಜೊತೆಗೆ, ಅಸ್ಸಾಂ ಸರ್ಕಾರದ ಅಟಲ್ ಅಮೃತ ಅಭಿಯಾನದಿಂದ ಜನರು ಪ್ರಯೋಜನ ಪಡೆದಿದ್ದಾರೆ. ಈ ಯೋಜನೆ ಅಡಿಯಲ್ಲಿ ಬಡಜನರು ಮತ್ತು ಸಾಮಾನ್ಯ ಪ್ರವರ್ಗದ ಜನರಿಗೆ ಆರೋಗ್ಯ ವಿಮೆಯನ್ನು ಅತ್ಯಂತ ಕಡಿಮೆ ಪ್ರೀಮಿಯಂಗೆ ನೀಡಲಾಗುತ್ತಿದೆ. ಅದೇ ವೇಳೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಅಸ್ಸಾಂನ ಪ್ರತಿ ಮೂಲೆ ಮೂಲೆಯಲ್ಲೂ ತಲೆ ಎತ್ತುತ್ತಿವೆ. ಇದು ಬಡಜನರ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೋಡಿಕೊಳ್ಳುತ್ತಿದೆ. ಅಸ್ಸಾಂನ 55 ಲಕ್ಷ ಸೋದರ ಮತ್ತು ಸೋದರಿಯರು ಈ ಕೇಂದ್ರಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ.

|

ಸ್ನೇಹಿತರೆ,

ಕರೋನಾ ಅವಧಿಯಲ್ಲಿ ಆರೋಗ್ಯ ಸೇವೆಗಳ ಸೂಕ್ಷ್ಮತೆ ಮತ್ತು ಆಧುನಿಕ ಸೌಲಭ್ಯಗಳ ಮಹತ್ವವನ್ನು ದೇಶವು ಅನುಭವಿಸಿದೆ. ಭಾರತವು ಕರೋನಾ ವಿರುದ್ಧ ಹೋರಾಡಿದ ರೀತಿ ಮತ್ತು ಪ್ರಸ್ತುತ ಚಾಲನೆಯಲ್ಲಿರುವ ಪರಿಣಾಮಕಾರಿ ಲಸಿಕೆ ಕಾರ್ಯಕ್ರಮದ ಬಗ್ಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ದೇಶ ಕರೋನಾದಿಂದ ಕಲಿತ ಪಾಠದಿಂದ ದೇಶದ ಪ್ರತಿಯೊಬ್ಬರ ಜೀವನವನ್ನು ಸುರಕ್ಷಿತ ಮತ್ತು ಸುಲಭವಾಗಿಸಲು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸಿದೆ. ಈ ವರ್ಷದ ಬಜೆಟ್‌ ನಲ್ಲಿ ಇದರ ಒಂದು ಚಿತ್ರಣವನ್ನು ಸಹ ನೀವು ನೋಡಿದ್ದೀರಿ. ಈ ವರ್ಷದ ಆಯವ್ಯಯದಲ್ಲಿ ಅಭೂತಪೂರ್ವ ಹಂಚಿಕೆಯನ್ನು ಆರೋಗ್ಯ ವೆಚ್ಚಕ್ಕಾಗಿ ಇಡಲಾಗಿದೆ. ಕೇಂದ್ರ ಸರ್ಕಾರ ಸಮಗ್ರ ಪ್ರಯೋಗಾಲಯಗಳನ್ನು ದೇಶದ 600 ಜಿಲ್ಲೆಗಳಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಇದು ವೈದ್ಯಕೀಯ ಪರೀಕ್ಷೆಗಾಗಿ ದೂರದ ಸ್ಥಳಕ್ಕೆ ಹೋಗಬೇಕಾಗಿದ್ದ ಸಣ್ಣ ಪಟ್ಟಣಗಳ ಮತ್ತು ಗ್ರಾಮಗಳ ಜನರಿಗೆ ತುಂಬಾ ನೆರವಾಗುತ್ತದೆ.

ಸ್ನೇಹಿತರೆ,

ಅಸ್ಸಾಂನ ಚಹಾ ತೋಟಗಳು ಅಸ್ಸಾಂನ ಸುಧಾರಣೆ ಮತ್ತು ಪ್ರಗತಿಯ ಪ್ರಮುಖ ಕೇಂದ್ರಗಳಾಗಿವೆ. ಸೋನಿತ್‌ ಪುರದ ಕೆಂಪು ಚಹಾವು ಅದರ ವಿಶಿಷ್ಟ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸೋನಿತ್‌ ಪುರ ಮತ್ತು ಅಸ್ಸಾಂನ ಚಹಾದ ವಿಶೇಷ ರುಚಿಯನ್ನು ನನಗಿಂತ ಚೆನ್ನಾಗಿ ಯಾರು ಬಲ್ಲರು? ಆದ್ದರಿಂದ, ಇಡೀ ಅಸ್ಸಾಂನ ಪ್ರಗತಿಯೊಂದಿಗೆ ಚಹಾ ಕಾರ್ಮಿಕರ ಪ್ರಗತಿಯನ್ನು ನಾನು ಯಾವಾಗಲೂ ನೋಡುತ್ತೇನೆ. ಈ ನಿಟ್ಟಿನಲ್ಲಿ ಅಸ್ಸಾಂ ಸರ್ಕಾರ ಅನೇಕ ಸಕಾರಾತ್ಮಕ ಪ್ರಯತ್ನಗಳನ್ನು ಮಾಡುತ್ತಿರುವುದು ನನಗೆ ಸಂತೋಷವಾಗಿದೆ. ನಿನ್ನೆಯಷ್ಟೇ, ಅಸ್ಸಾಂ ಚಹಾ ಬಗೀಚರ್ ಧನ್ ಪುರಸ್ಕಾರ್ ಮೇಳ ಯೋಜನೆ ಅಡಿ ಕೋಟ್ಯಂತರ ರೂಪಾಯಿ ನೇರವಾಗಿ ಅಸ್ಸಾಂನ 7.5 ಲಕ್ಷ ಚಹಾ ತೋಟಗಳ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ. ಚಹಾ ತೋಟಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ನೇರವಾಗಿ ವಿಶೇಷ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಸಂಚಾರಿ ವೈದ್ಯಕೀಯ ಘಟಕಗಳನ್ನು ಚಹಾ ತೋಟಗಳಿಗೆ ಕಳುಹಿಸಿ, ಚಹಾ ಕಾರ್ಮಿಕರ ಮತ್ತು ಅವರ ಕುಟುಂಬದವರ ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ ಮತ್ತು ಉಚಿತ ಔಷಧ ವಿತರಿಸಲಾಗುತ್ತಿದೆ. ಅಸ್ಸಾಂ ಸರ್ಕಾರದ ಈ ಪ್ರಯತ್ನಗಳಿಗೆ ಅನುಗುಣವಾಗಿ ದೇಶದ ಚಹಾ ತೋಟದಲ್ಲಿ ಕೆಲಸ ಮಾಡುವ ನಮ್ಮ ಸಹೋದರ ಸಹೋದರಿಯರಿಗಾಗಿ 1000 ಕೋಟಿ ರೂಪಾಯಿಗಳ ವಿಶೇಷ ಯೋಜನೆಯನ್ನು ದೇಶದ ಬಜೆಟ್‌ ನಲ್ಲಿ ಘೋಷಿಸಲಾಗಿದೆ. ಚಹಾ ಕಾರ್ಮಿಕರಿಗೆ ಒಂದು ಸಾವಿರ ಕೋಟಿ ರೂಪಾಯಿ! ಈ ಹಣವು ನೀವು ಪಡೆಯುವ ಸೌಲಭ್ಯಗಳನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಚಹಾ ಕಾರ್ಮಿಕರ ಜೀವನವನ್ನು ಸುಗಮಗೊಳಿಸುತ್ತದೆ.

|

ಸ್ನೇಹಿತರೆ,

ಇಂದು, ನಾನು ಅಸ್ಸಾಂನ ಚಹಾ ಕಾರ್ಮಿಕರ ಬಗ್ಗೆ ಮಾತನಾಡುವಾಗ, ಇತ್ತೀಚಿನ ದಿನಗಳಲ್ಲಿ ದೇಶದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳ ಬಗ್ಗೆಯೂ ಹೇಳಬೇಕು. ಈಗ ಸಂಚುಕೋರರು, ಎಷ್ಟು ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದರೆ, ಭಾರತದ ಚಹಾವನ್ನು ಹೀಗಳೆಯುವ ಮಟ್ಟ ಮುಟ್ಟಿದ್ದಾರೆ. ನೀವು ವಾರ್ತೆಗಳಲ್ಲಿ ಕೇಳಿರಬಹುದು, ಈ ಸಂಚುಕೋರರು, ಭಾರತದ ಚಹಾದ ಛಾಪನ್ನು ಕಳಂಕಿತಗೊಳಿಸಲು ಯೋಜಿತ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಚಹಾದ ಛಾಪನ್ನು ಪ್ರಪಂಚದಾದ್ಯಂತ ಅಪಖ್ಯಾತಿಗೊಳಿಸುತ್ತಿದ್ದಾರೆ. ಭಾರತದ ಗುರುತಾಗಿರುವ ಚಹಾಗೆ ಕಳಂಕ ತರುವ ಕಾರ್ಯಕ್ಕೆ ದೇಶದ ಹೊರಗಿನ ಕೆಲವು ಶಕ್ತಿಗಳು ಸಂಚು ರೂಪಿಸುತ್ತಿವೆ ಎಂಬುದನ್ನು ಸಾಬೀತುಪಡಿಸುವ ಕೆಲವು ದಾಖಲೆಗಳು ಹೊರಬಂದಿವೆ. ಈ ದಾಳಿಯನ್ನು ನೀವು ಅನುಮೋದಿಸುತ್ತೀರಾ? ಈ ದಾಳಿಯ ನಂತರ ಮೌನವಾಗಿರುವ ಜನರನ್ನು ನೀವು ಅನುಮೋದಿಸುತ್ತೀರಾ? ಆ ಗುಂಪುಗಳನ್ನು ಮೆಚ್ಚುವ ಜನರನ್ನು ನೀವು ಅನುಮೋದಿಸುತ್ತೀರಾ? ಪ್ರತಿಯೊಬ್ಬರೂ ಉತ್ತರಿಸಬೇಕಾಗುತ್ತದೆ. ಪ್ರತಿಯೊಂದು ಚಹಾ ತೋಟವೂ ಪ್ರತಿ ಚಹಾ ಭಾರತೀಯ ಚಹಾವನ್ನು ಕೆಣಕಲು ನಿರ್ಧರಿಸಿದವರಿಂದ ಮತ್ತು ಅವರ ಪರವಾಗಿ ಮೌನವಾಗಿರುವ ಎಲ್ಲ ರಾಜಕೀಯ ಪಕ್ಷಗಳಿಂದಲೂ ಉತ್ತರಗಳನ್ನು ಕೇಳುತ್ತದೆ. ಭಾರತೀಯ ಚಹಾ ಕುಡಿಯುವ ಪ್ರತಿಯೊಬ್ಬ ವ್ಯಕ್ತಿಯೂ ಉತ್ತರಕ್ಕಾಗಿ ಒತ್ತಾಯಿಸುತ್ತಾನೆ. ಈ ಸಂಚುಕೋರರಿಗೆ ಅವರ ದುಷ್ಕೃತ್ಯದ ವಿನ್ಯಾಸಗಳು ಯಶಸ್ವಿಯಾಗಲು ದೇಶವು ಅವಕಾಶ ನೀಡುವುದಿಲ್ಲ ಎಂದು ನಾನು ಅಸ್ಸಾಂನ ಈ ಭೂಮಿಯಿಂದ ಹೇಳಲು ಬಯಸುತ್ತೇನೆ. ನನ್ನ ಚಹಾ ಕಾರ್ಮಿಕರು ಈ ಯುದ್ಧವನ್ನು ಗೆಲ್ಲುತ್ತಾರೆ. ಭಾರತದ ಚಹಾದ ಮೇಲಿನ ಈ ದಾಳಿಗಳು ನಮ್ಮ ಚಹಾ ತೋಟದ ಕಾರ್ಮಿಕರ ಕಠಿಣ ಪರಿಶ್ರಮಕ್ಕೆ ಹೊಂದಿಕೆಯಾಗುವ ಶಕ್ತಿಯನ್ನು ಹೊಂದಿಲ್ಲ. ಅಭಿವೃದ್ಧಿ ಮತ್ತು ಪ್ರಗತಿಯ ಹಾದಿಯಲ್ಲಿ ದೇಶವು ಮುಂದುವರಿಯುತ್ತದೆ. ಅಂತೆಯೇ, ಅಸ್ಸಾಂ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿದೆ. ಅಸ್ಸಾಂನ ಅಭಿವೃದ್ಧಿಯ ಚಕ್ರವು ಈ ವೇಗದಲ್ಲಿ ತಿರುಗುತ್ತಲೇ ಇರುತ್ತದೆ.

ಸ್ನೇಹಿತರೆ,

ಇಂದು, ಅಸ್ಸಾಂನ ಎಲ್ಲ ಕ್ಷೇತ್ರದಲ್ಲೂ ಎಷ್ಟೊಂದು ಕೆಲಸ ಆಗುತ್ತಿದೆ ಎಂದರೆ, ಪ್ರತಿಯೊಂದು ವಲಯ, ಪ್ರತಿಯೊಂದು ವಿಭಾಗವೂ ಅಭಿವೃದ್ಧಿಹೊಂದುತ್ತಿದೆ. ಅಸ್ಸಾಂ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಿದೆ. ಆಧುನಿಕ ರಸ್ತೆಗಳು ಮತ್ತು ಮೂಲಸೌಕರ್ಯ ಅಸ್ಸಾಂ ಸಾಮರ್ಥ್ಯ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇಂದು 'ಭಾರತ ಮಾಲಾ' ರೀತಿಯಲ್ಲಿ ಅಸ್ಸಾಂಗಾಗಿ 'ಅಸ್ಸೋಂ ಮಾಲಾ' ಆರಂಭಿಸಲಾಗಿದೆ. ಮುಂದಿನ 15 ವರ್ಷಗಳಲ್ಲಿ, ಅಸೋಂ ಮಾಲಾ ಯೋಜನೆಯು ನಿಮ್ಮ ಕನಸುಗಳನ್ನು ನನಸು ಮಾಡುತ್ತದೆ ಮತ್ತು ಯಾವಾಗ ವಿಶಾಲ ಹೆದ್ದಾರಿ ಜಾಲ, ಎಲ್ಲ ಗ್ರಾಮಗಳೂ ಮುಖ್ಯರಸ್ತೆಯೊಂದಿಗೆ ಸಂಪರ್ಕಿತವಾದಾಗ, ದೇಶದ ದೊಡ್ಡ ನಗರಗಳಂತೆ ನಿಮ್ಮ ರಸ್ತೆಗಳು ಆಧುನಿಕವಾದಾಗ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ, ಸಾವಿರಾರು ಕಿಲೋ ಮೀಟರ್ ರಸ್ತೆಗಳು ಮತ್ತು ಸೇತುವೆಗಳನ್ನು ಅಸ್ಸಾಂನಲ್ಲಿ ನಿರ್ಮೀಸಲಾಗುತ್ತದೆ ಅವು ಆಧುನಿಕ ಅಸ್ಸಾಂನ ಭಾಗವಾಗಲಿವೆ. ಮುಂದಿನ ದಿನಗಳಲ್ಲಿ ಕಾಮಗಾರಿ ತ್ವರಿತವಾಗಲಿದೆ. ಈ ವರ್ಷದ ಬಜೆಟ್ ನಲ್ಲಿ ಮೂಲಸೌಕರ್ಯಕ್ಕೆ ವೃದ್ಧಿಯ ವೇಗ ಮತ್ತು ಪ್ರಗತಿಗಾಗಿ ಹಿಂದೆಂದೂ ನೀಡದಷ್ಟು ಒತ್ತು ನೀಡಲಾಗಿದೆ. ಮತ್ತೊಂದೆಡೆ, ಆಧುನಿಕ ಮೂಲಸೌಕರ್ಯದ ಕಾಮಗಾರಿ, ಅಸೋಂ ಮಾಲಾ ಸಂಪರ್ಕ ಯೋಜನೆಗಳು ಹೆಚ್ಚಳವಾಗಿವೆ. ಮುಂಬರುವ ದಿನಗಳಲ್ಲಿ ಅಸ್ಸಾಂನಲ್ಲಿ ಆಗಲಿರುವ ಕಾಮಗಾರಿಗಳನ್ನು ಮತ್ತು ಎಷ್ಟು ಯುವಜನರು ಉದ್ಯೋಗ ಪಡೆಯಲಿದ್ದಾರೆ ಎಂಬುದನ್ನು ಊಹಿಸಿಕೊಳ್ಳಿ. ಯಾವಾಗ ಹೆದ್ದಾರಿಗಳು ಉತ್ತಮವಾಗಿರುತ್ತವೆಯೋ, ಸಂಪರ್ಕ ಉತ್ತಮವಾಗಿರುತ್ತದೆಯೋ, ವ್ಯಾಪಾರ ಮತ್ತು ಕೈಗಾರಿಕೆ ವೃದ್ಧಿಸುತ್ತದೆ, ಪ್ರವಾಸೋದ್ಯದ ಹೆಚ್ಚುತ್ತದೆ. ಇದು ಹೊಸ ಉದ್ಯೋಗಾವಕಾಶಗಳನ್ನು ನಮ್ಮ ಯುವಕರಿಗೆ ನೀಡುತ್ತದೆ ಮತ್ತು ಅಸ್ಸಾಂನ ಅಭಿವೃದ್ಧಿಗೆ ಹೊಸ ಇಂಬು ನೀಡುತ್ತದೆ.

ಸ್ನೇಹಿತರೆ,

ಇದು ಅಸ್ಸಾಂನ ಹೆಸರಾಂತ ಕವಿ ರೂಪ್ ಕನ್ವರ್ ಜ್ಯೋತಿ ಪ್ರಸಾದ್ ಅಗರ್ವಾಲ್ ಅವರ ಸಾಲುಗಳು:

मेरी नया भारत की,

नया छवि,

जागा रे,

जागा रे,

ಇಂದು ಈ ಸಾಲುಗಳನ್ನು ಸಾಕಾರ ಮಾಡಲು ನಾವು, ನವ ಭಾರತವನ್ನು ಜಾಗೃತಗೊಳಿಸಬೇಕು. ಈ ನವ ಭಾರತ ಆತ್ಮ ನಿರ್ಭರ ಭಾರತವಾಗಿರಬೇಕು, ಈ ನವ ಭಾರತ ಅಸ್ಸಾಂ ಅನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಈ ಶುಭ ಹಾರೈಕೆಗಳೊಂದಿಗೆ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು. ! ನಿಮ್ಮ ಎರಡೂ ಮುಷ್ಟಿಯನ್ನು ಬಿಗಿಹಿಡಿದು ಪೂರ್ಣ ಬಲದಿಂದ ಕೂಗಿ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ. ತುಂಬ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

  • Manda krishna BJP Telangana Mahabubabad District mahabubabad June 24, 2022

    🇮🇳🌱
  • Manda krishna BJP Telangana Mahabubabad District mahabubabad June 24, 2022

    🇮🇳
  • शिवकुमार गुप्ता February 27, 2022

    जय श्री सीताराम
  • शिवकुमार गुप्ता February 27, 2022

    जय श्री राम
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
'Justice is served': Indian Army strikes nine terror camps in Pak and PoJK

Media Coverage

'Justice is served': Indian Army strikes nine terror camps in Pak and PoJK
NM on the go

Nm on the go

Always be the first to hear from the PM. Get the App Now!
...
Cabinet approves National Scheme for ITI Upgradation and Setting up of 5 National COE for Skilling
May 07, 2025

In a major step towards transforming vocational education in India, the Union Cabinet chaired by the Prime Minister Shri Narendra Modi has approved the National Scheme for Industrial Training Institute (ITI) Upgradation and the Setting up of five (5) National Centres of Excellence for Skilling as a Centrally Sponsored Scheme.

National Scheme for Industrial Training Institute (ITI) Upgradation and Setting up of five (5) National Centres of Excellence (NCOE) for Skilling will be implemented as a Centrally Sponsored Scheme as per announcement, made under Budget 2024-25 and Budget 2025-26 with outlay of Rs.60,000 crore (Central Share: Rs.30,000 crore, State Share: Rs.20,000 crore and Industry Share: Rs.10,000 crore), with co-financing to the extent of 50% of Central share by the Asian Development Bank and the World Bank, equally.

The scheme will focus on upgradation of 1,000 Government ITIs in hub and spoke arrangement with industry aligned revamped trades (courses) and Capacity Augmentation of five (5) National Skill Training Institutes (NSTIs), including setting up of five National Centres of Excellence for Skilling in these institutes.

The Scheme aims to position existing ITIs as government-owned, industry-managed aspirational institutes of skills, in collaboration with State Governments and industry. Over a five-year period, 20 lakh youth will be skilled through courses that address the human capital needs of industries. The scheme will focus on ensuring alignment between local workforce supply and industry demand, thereby facilitating industries, including MSMEs, in accessing employment-ready workers.

The financial assistance provided under various schemes in the past was suboptimal to meet the full upgradation needs of ITIs, particularly in addressing growing investment requirements for infrastructure upkeep, capacity expansion, and the introduction of capital-intensive, new-age trades. To overcome this, a need-based investment provision has been kept under the proposed scheme, allowing flexibility in fund allocation based on the specific infrastructure, capacity, and trade-related requirements of each institution. For the first time, the scheme seeks to establish deep industry connect in planning and management of ITI upgradation on a sustained basis. The scheme will adopt an industry-led Special Purpose Vehicle (SPV) model for an outcome-driven implementation strategy, making it distinct from previous efforts to improve the ITI ecosystem.

Under the scheme, infrastructure upgradation for improved Training of Trainers (ToT) facilities will be undertaken in five National Skill. Training Institutes (NSTIs), namely Bhubaneswar, Chennai, Hyderabad, Kanpur, and Ludhiana. Additionally, pre-service and in-service training will be provided to 50,000 trainers.

By addressing long-standing challenges in infrastructure, course relevance, employability, and the perception of vocational training, the scheme aims to position ITIs at the forefront to cater to skilled manpower requirement, aligned to the nation’s journey to becoming a global manufacturing and innovation powerhouse. It will create a pipeline of skilled workers aligned with industry demand, thereby addressing skill shortages in high-growth sectors such as electronics, automotive, and renewable energy. In sum, the proposed scheme aligns with the Prime Minister’s vision of Viksit Bharat, with skilling as a key enabler to meet both current and future industry needs.

Background:

Vocational education and training can be an immense driver of economic growth and productivity, as India embarks on its aspirational journey towards a developed nation by 2047. Industrial Training Institutes (ITIs) have been the backbone of vocational education and training in India since the 1950s, operating under State Governments. While ITI network has expanded by nearly 47% since 2014, reaching 14,615 across with 14.40 lakh enrolment, vocational training via ITIs remains less aspirational and have also suffered from lack of systemic interventions to improve their infrastructure, and appeal.

While in the past there have been schemes to support the upgradation of ITIs, it is perhaps, the best time to scale incremental efforts of the last decade through a nationally scalable program for ITI re-imagination with course content and design aligned with industry needs to create a pool of skilled workforce as one of the key enablers to realize the goal of Viksit Bharat.