ಉದ್ಘಾಟಿಸಲಾದ ಕಾಮಗಾರಿಗಳು ವಿಸ್ತೃತ ಶ್ರೇಣಿಗೆ ಸಂಬಂಧಿಸಿದ್ದು ಭಾರತದ ಪ್ರಗತಿಯ ಪಥಕ್ಕೆ ಚೈತನ್ಯ ನೀಡುತ್ತವೆ
ಕೇರಳದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಸುಧಾರಣೆಗೆ ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡುತ್ತಿದೆ
ಗಲ್ಫ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯರಿಗೆ ಸರ್ಕಾರ ಪೂರ್ಣ ಬೆಂಬಲ ನೀಡಿದೆ
ತಮ್ಮ ಮನವಿಗೆ ಸ್ಪಂದಿಸಿದ ಮತ್ತು ಗಲ್ಫ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ವಿಶೇಷ ಕಾಳಜಿ ತೋರಿದ ಗಲ್ಫ್ ಸಾಮ್ರಾಜ್ಯಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ

ಕೇರಳದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಅರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್, ಸಂಪುಟ ಸಹೋದ್ಯೋಗಿ ಶ್ರೀ ಧರ್ಮೇಂದ್ರ ಪ್ರಧಾನ್, ಸಹಾಯಕ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಜೀ, ರಾಜ್ಯ ಸಚಿವರಾದ ಶ್ರೀಮುರಳೀಧರನ್ ಜೀ,

ವೇದಿಕೆಯಲ್ಲಿರುವ ಗಣ್ಯರೆ,

ಸ್ನೇಹಿತರೆ,

ನಮಸ್ಕಾರಂ ಕೊಚ್ಚಿ, ನಮಸ್ಕಾರಂ ಕೇರಳ. ಅರಬ್ಬಿ ಸಮುದ್ರ ರಾಣಿ ಯಾವಾಗಲೂ ಸುಂದರ ಮತ್ತು ಅದ್ಭುತ. ನಿಮ್ಮೆಲ್ಲರ ಜತೆ ಇರುವುದು ನನಗೆ ಸಂತಸ ತಂದಿದೆ. ಕೇರಳ ಮತ್ತು ಭಾರತದ ಅಭಿವೃದ್ಧಿಯನ್ನು ಸಂಭ್ರಮಾಚರಣೆಗೆ ನಾವೆಲ್ಲಾ ಇಲ್ಲಿ ಸೇರಿದ್ದೇವೆ. ನಾವಿಂದು ಉದ್ಘಾಟಿಸುತ್ತಿರುವ ನೌಕಾ ನೆಲೆ (ಕ್ರೂಸ್ ಟರ್ಮಿನಲ್) ಯೋಜನೆಯು ಹಲವು ವಲಯಗಳಿಗೆ ಪ್ರಯೋಜನ ಒದಗಿಸಲಿದೆ. ಈ ಯೋಜನೆಯು ಭಾರತದ ಬೆಳವಣಿಗೆ ಪಥವನ್ನು ಚೈತನ್ಯಗೊಳಿಸಲಿದೆ.

ಸ್ನೇಹಿತರೆ,

ಎರಡು ವರ್ಷಗಳ ಹಿಂದೆ ಕೊಚ್ಚಿ ಸಂಸ್ಕರಣಾ ಘಟಕಕ್ಕೆ ಹೋಗಿದ್ದೆ. ಅದು ದೇಶಧಲ್ಲಿರು ಅತ್ಯಂತ ಆಧುನಿಕ ಸಂಸ್ಕರಣಾ ಘಟಕಗಳಲ್ಲಿ ಒಂದಾಗಿದೆ. ಇಂದು ನಾವು ಮತ್ತೊಮ್ಮೆ ಕೊಚ್ಚಿಯಲ್ಲಿ ಪೆಟ್ರೋಕೆಮಿಕಲ್ಸ್ ಸಂಕೀರ್ಣವನ್ನು ದೇಶಕ್ಕೆ ಸಮರ್ಪಿಸುತ್ತಿದ್ದೇವೆ. ಆತ್ಮನಿರ್ಭರ್ ಭಾರತ ನಿರ್ಮಾಣ ಮಾಡುವ ಪಯಣಕ್ಕೆ ಇದೊಂದು ಯೋಜನೆ ಬಲ ನೀಡಲಿದೆ. ಈ ಸಂಕೀರ್ಣಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಇದು ವಿದೇಶಿ ವಿನಿಮಯವನ್ನು ಉಳಿಸಲಿದೆ. ಹಲವಾರು ಕೈಗಾರಿಕೆಗಳು ಇದರ ಲಾಭ ಪೆಯಲಿವೆ ಮತ್ತು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.

ಸ್ನೇಹಿತರೆ,

ಕೊಚ್ಚಿ ವ್ಯಾಪಾರ ಮತ್ತು ವಾಣೀಜ್ಯ ಕೇಂದ್ರವಾಗಿದೆ. ಸಮಯ ಅತ್ಯಮೂಲ್ಯ ಎಂಬುದನ್ನು ಈ ನಗರದ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಸಮರ್ಪಕ ಸಂಪರ್ಕದ ಮಹತ್ವವನ್ನು ಅವರು ಪ್ರಶಂಸಿಸುತ್ತಾರೆ. ಅದಕ್ಕಾಗಿಯೇ, ದೇಶಕ್ಕೆ ರೊ-ರೊ ವೆಸೆಲ್ಸ್ ಸಮರ್ಪಣೆ ವಿಶೇಷವಾಗಿದೆ. ರಸ್ತೆಯಲ್ಲಿನ ಸುಮಾರು 30 ಕಿಲೋಮೀಟರ್ ದೂರ ಜಲಮಾರ್ಗದಲ್ಲಿ 3.5 ಕಿಲೋ ಮೀಟರ್’ಗೆ ತಗ್ಗಿದೆ. ಇದರರ್ಥ ಅನುಕೂಲತೆ ಜಾಸ್ತಿಯಾಗಿದೆ, ವಾಣಿಜ್ತ ಹೆಚ್ಚಾಗಿದೆ, ಸಾಮರ್ಥ್ಯ ನಿರ್ಮಾಣ ಹೆಚ್ಚಳವಾಗಿದೆ. ಸಂಚಾರ ದಟ್ಟಣೆ, ಮಾಲಿನ್ಯ ಮತ್ತು ಶಾರಿಗೆ ವೆಚ್ಚ ಕಡಿಮೆ ಆಗಿದೆ.

ಪ್ರವಾಸಿಗರು ಕೇರಳದ ಇನ್ನಿತರೆ ಸ್ಥಳಗಳಿಗೆ ತೆರಳಲು ಮಾತ್ರ ಕೊಚ್ಚಿಗೆ ಆಗಮಿಸದೆ, ಇಲ್ಲಿನ ಸಂಸ್ಕೃತಿ, ಬೀಚ್’ಗಳು, ಮಾರುಕಟ್ಟೆ ಸ್ಥಳಗಳು, ಐತಿಹಾಸಿಕ ಸ್ಥಳಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳನ್ನು ವೀಕ್ಷಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ. ಇವೆಲ್ಲವೂ ಜಗತ್ಪ್ರಸಿದ್ಧವಾಗಿವೆ. ಈ ನಿಟ್ಟಿನಲ್ಲಿ ಭಾರತ ಸರಕಾರ, ಇಲ್ಲಿನ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ. ಕೊಚ್ಚಿಯಲ್ಲಿ ಉದ್ಘಾಟನೆಯಾದ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಸಾಗರಿಕಾ ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಸಾಗರಿಕಾ ನೌಕಾನೆಲೆಯು ಪ್ರವಾಸಿಗರಿಗೆ ಆರಾಮ ಮತ್ತು ಅನುಕೂಲತೆ ತರಲಿದೆ. ಇದು 1 ಲಕ್ಷಕ್ಕಿಂತ ಹೆಚ್ಚಿನ ಪ್ರವಾಸಿಗರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.

ಬಹಳಷ್ಟು ಜನರು ಸ್ಥಳೀಯ ಪ್ರವಾಸ ಕುರಿತು ನನಗೆ ಬರೆಯುತ್ತಿದ್ದಾರೆ, ಅಪರೂಪದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನಾನು ಕಳೆದ ಕೆಲವು ತಿಂಗಳಿಂದ ನೋಡುತ್ತಾ ಬಂದಿದ್ದೇನೆ. ಕೊರೊನಾ ಸೋಂಕು ಇಡೀ ವಿಶ್ವವನ್ನೇ ವ್ಯಾಪಿಸಿದಾಗ ಅಂತಾರಾಷ್ಟ್ರೀಯ ಪ್ರವಾಸೋದ್ಯಮದ ಮೇಲೆ ಪರಿಣಾಮ ಸೃಷ್ಟಿಸಿತು. ಹಾಗಾಗಿ ಜನರು ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ತೊಡಗಿದರು. ನಮ್ಮೆಲ್ಲರಿಗೂ ಇದೊಂದು ಅದ್ಭುತ ಅವಕಾಶವಾಗಿದೆ. ಒಂದೆಡೆ, ಸ್ಥಳೀಯ ಪ್ರವಾಸೋದ್ಯಮದಲ್ಲಿ ಇರುವವರಿಗೆ ಜೀವನೋಪಾಯ ನೀಡುವ ಜತೆಗೆ, ಇನ್ನೊಂದೆಡೆ, ನಮ್ಮ ಯುವ ಸಮುದಾಯ ಮತ್ತು ಸಂಸ್ಕೃತಿಯನ್ನು ಬಲಿಷ್ಠವಾಗಿ ಬೆಸೆಯುತ್ತಿದೆ. ಸ್ಥಳೀಯ ಪ್ರವಾಸೋದ್ಯಮದಲ್ಲಿ ನೋಡಲು, ಕಲಿಯಲು ಮತ್ತು ಅನ್ವೇಷಿಸಲು ಸಾಕಷ್ಟು ವಿಷಯಗಳಿವೆ. ನವೋದ್ಯಮಗಳನ್ನು ನಡೆಸುತ್ತಿರುವ ನಮ್ಮ ಯುವಕರು, ಪ್ರವಾಸೋದ್ಯಮ ಸಂಬಂಧಿತ ಉತ್ಪನ್ನಗಳನ್ನು ತಯಾರಿಸಲು ಆಲೋಚಿಸುವಂತೆ ನಾನು ಒತ್ತಾಯಿಸುತ್ತೇನೆ. ಅಲ್ಲದೆ, ಈ ಸಮಯವನ್ನು ಬಳಸಿಕೊಂಡು ಸ್ಥಳೀಯ ಪ್ರವಾಸಿ ತಾಣಗಳನ್ನು ಸಾಧ್ಯವಾದಷ್ಟು ನೋಡುವಂತೆ ನಾನು ಒತ್ತಾಯಿಸುತ್ತೇನೆ. ಕಳೆದ ಐದು ವರ್ಷಗಳಿಂದ ಭಾರತದ ಪ್ರವಾಸೋದ್ಯಮ ವಲಯ ತ್ವರಿತವಾಗಿ ಬೆಳವಣಿಗೆ ಕಾಣುತ್ತಿದೆ ಎಂಬುದನ್ನು ತಿಳಿಯಲು ನೀವೆಲ್ಲಾ ಸಂತಸಪಡುತ್ತೀರಿ. ವಿಶ್ವ ಪ್ರವಾಸೋದ್ಯಮ ಸೂಚ್ಯಂಕ ರಾಂಕಿಂಗ್’ನಲ್ಲಿ ಭಾರತವು 65ನೇ ಸ್ಥಾನದಿಂದ 34ನೇ ಸ್ಥಾನಕ್ಕೆ ಜಿಗಿದಿದೆ. ಆದರೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ಈ ನಿಟ್ಟಿನಲ್ಲಿ ನಾವು ಇನ್ನಷ್ಟು ಸುಧಾರಣೆ ಮಾಡುತ್ತೇವೆ ಎಂಬ ವಿಶ್ವಾಸ ನಮಗಿದೆ.

ಸ್ನೇಹಿತರೆ,

ಆರ್ಥಿಕ ಅಭಿವೃದ್ಧಿಯನ್ನು ರೂಪಿಸುವ 2 ಪ್ರಮುಖ ಅಂಶಗಳೆಂದರೆ, 1. ಸಾಮರ್ಥ್ಯ ನಿರ್ಮಾಣ ಮತ್ತು 2. ಭವಿಷ್ಯದ ಅಗತ್ಯಗಳಿಗೆ ಮೂಲಸೌಕರ್ಯ ಆಧುನೀಕರಣಗೊಳಿಸುವುದೇ ಆಗಿದೆ. ಮುಂದಿನ ಎರಡು ಅಭಿವೃದ್ಧಿ ಕಾರ್ಯಗಳು ಈ ವಿಷಯಗಳಿಗೆ ಸಂಬಂಧಿಸಿದ್ದಾಗಿವೆ. ಕೊಚ್ಚಿ ನೌಕಾನೆಲೆಯಲ್ಲಿ ವಿಜ್ಞಾನ್ ಸಾಗರ್ ಹೆಸರಿನ ಹೊಸ ಜ್ಞಾನ ಕ್ಯಾಂಪಸ್ ನಿರ್ಮಾಣ ಸ್ಥಾಪಿಸುವುದಾಗಿದೆ. ಇದರ ಮೂಲಕ ನಾವುಮಾನವ ಅಭಿವೃದ್ಧಿ ಸಂಪನ್ಮೂಲ ಬಂಡವಾಳವನ್ನು ವಿಸ್ತರಿಸುತ್ತಿದ್ದೇವೆ. ಈ ಕ್ಯಾಂಪಸ್ ಕೌಶಲ್ಯ ಅಭಿವೃದ್ಧಿಯ ಮಹತ್ವದ ಪ್ರತಿಫಲನವಾಗಿದೆ. ಮರೀನ್ ಇಂಜಿನಿಯರಿಂಗ್ ಕಲಿಯಲು ಬಯಸುವ ಯುವ ಸಮುದಾಯಕ್ಕೆ ಇದು ಸಹಾಯಕವಾಗಲಿದೆ. ಮುಂಬರುವ ದಿನಗಳಲ್ಲಿ ಜಲ ನೌಕೆ ಅಥವಾ ಸಾಗರ ವಲಯಕ್ಕೆ ಆದ್ಯತೆಯ ಸ್ಥಾನ ಸಿಲಿದೆ. ಈ ವಲಯದಲ್ಲಿ ಜ್ಞಾನ ಗಳಿಸಿರುವ ಯುವ ಸಮುದಾಯಕ್ಕೆ ಮನೆ ಬಾಗಿಲಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ನಾನು ಈ ಮೊದಲೇ ಹೇಳಿದಂತೆ, ಆರ್ಥಿಕ ಬೆಳವಣಿಗೆಗ ಅಸ್ತಿತ್ವದಲ್ಲಿರುವ ಸಾಮರ್ಥ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ. ಇಲ್ಲಿ, ನಾವು ದಕ್ಷಿಣ ಕಲ್ಲಿದ್ದಲು ರೇವು ಪುರ್’ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಇದರಿಂದ ಸಾಗಣೆ ವೆಚ್ಚ ತಗ್ಗಿ, ಸರಕು ಸಾಮರ್ಥ್ಯಗಳು ಹೆಚ್ಚಾಗಲಿವೆ. ವ್ಯಾಪಾರ ಮತ್ತು ವಾಣಿಜ್ಯ ಸಮೃದ್ಧಿಯಾಗಲು ಇವೆರಡೂ ಅಗತ್ಯ.

ಸ್ನೇಹಿತರೆ,

ಇಂದು ಮೂಲಸೌಕರ್ಯದ ವ್ಯಾಖ್ಯಾನ ಮತ್ತು ವ್ಯಾಪ್ತಿ ಬದಲಾಗಿದೆ. ಉತ್ತಮ ರಸ್ತೆಗಳು, ಅಭಿವೃದ್ಧಿ ಕಾಮಗಾರಿಗಳು ಮತ್ತು ಕೆಲವು ನಗರ ಸಂಪರ್ಕಗಳ ನಡುವಿನ ಸಂಪರ್ಕ ಇತ್ಯಾದಿ ದಾಟಿದ ಮೂಲಸೌಕರ್ಯ ವ್ಯಾಪ್ತಿ ಈಗ ಪ್ರಾಮುಖ್ಯತೆ ಪಡೆದಿದೆ. ನಾವೀಗ ಮುಂಬರುವ ಪೀಳಿಗೆಗೆ ಅತ್ಯುನ್ನತ ಗುಣಮಟ್ಟದ ಮತ್ತು ಶ್ರೇಷ್ಠ ಗುಣಮಟ್ಟದ ಮೂಲಸೌಕರ್ಯ ನೋಡುತ್ತಿದ್ದೇವೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್’ಲೈನ್ ಮೂಲಕ ಮೂಸೌಕರ್ಯ ಸೃಷ್ಟಿಗೆ 110 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಅದರಲ್ಲಿ ಕರಾವಳಿ ಭಾಗಗಳು, ಈಶಾನ್ಯ ಭಾಗಗಳು ಮತ್ತು ಬೆಟ್ಟಗುಡ್ಡ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗಿದೆ. ಭಾರತವು ಇಂದು ಪ್ರತಿ ಗ್ರಾಮಕ್ಕೆ ಬ್ರಾಡ್”ಬ್ಯಾಂಡ್ ಸಂಪರ್ಕದ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ದೇಶದಲ್ಲಿ ನೀಲಿ ಆರ್ಥಿಕತೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಹೆಚ್ಚಿನ ಬಂದರುಗಳ ನಿರ್ಮಾಣ, ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಕಡಲಾಳದಲ್ಲಿ ಇಂಧನ, ಸುಸ್ಥಿರ ಕರಾವಳಿ ಅಭಿವೃದ್ಧಿ, ಕರಾವಳಿ ಸಂಪರ್ಕ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಇದರಲ್ಲಿ ಪ್ರಮುಖವಾದುದು. ಮೀನುಗಾರರಿಗೆ ಈ ಯೋಜನೆ ಹಲವು ಅನುಕೂಲಗಳನ್ನು ಒದಗಿಸಲಿದೆ. ಮೀನುಗಾರರಿಗೂ ಕಿಸಾನ್ ಕ್ರೆಡಿಡ್ ಕಾರ್ಡ್’ಗಳನ್ನು ವಿಸ್ತರಿಸಲಾಗಿದೆ. ಭಾರತವನ್ನು ಸಾಗರ ಆಹಾರ ಉತ್ಪನ್ನಗಳ ರಫ್ತಿನ ಜಾಗತಿಕ ತಾವಾಗಿ ರೂಪಿಸುವ ಕೆಲಸ ಪ್ರಗತಿಯಲ್ಲಿದೆ.

ಸ್ನೇಹಿತರೆ,

ಈ ಸಾಲಿನ ಬಜೆಟ್’ನಲ್ಲಿ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಿಗೆ ಗಣನೀಯ ಸಂಪನ್ಮೂಲ ಹಂಚಿಕೆ ಮಾಡಲಾಗಿದೆ. ಕೊಚ್ಚಿ ಮೆಟ್ರೋ ಯೋಜನೆಗೂ ಅನುದಾನ ಮೀಸಲಿಡಲಾಗಿದೆ.

ಸ್ನೇಹಿತರೆ,

ಹಿಂದೆಂದೂ ಕಾಣದ ಹಲವು ಸವಾಲುಗಳು ಮತ್ತು ಸಂಕಷ್ಟಗಳ ಜತೆಗೆ 2019 ಕಳೆದುಹೋಯಿತು. 130 ಕೋಟಿ ಜನರ ನೇತೃತ್ವದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಯಶಸ್ಸು ಕಂಡಿದ್ದೇವೆ. ಭಾರತೀಯ ಸಮುದಾಯದ ಅಗತ್ಯಗಳಿಗೆ ಸರ್ಕಾರ ಸದಾ ಸೂಕ್ಷ್ಮತೆ ಹೊಂದಿದೆ. ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದಿದೆ. ಗಲ್ಫ್’ನಲ್ಲಿರುವ ಭಾರತೀಯರೊಂದಿಗೆ ನಾನು ಸಮಯ ಹಂಚಿಕೊಂಡಿದ್ದೇನೆ. ಅವರ ಜತೆ ಆಹಾರ ಸವಿದಿದ್ದೇನೆ. ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದೇನೆ.ವಂದೇ ಭಾರತ್ ಕಾರ್ಯಕ್ರಮದಡಿ, ಹೊರರಾಷ್ಟ್ರಗಳಲ್ಲಿ ನೆಲೆಸಿದ್ದ ಸುಮಾರು 50 ಲಕ್ಷ ಭಾರತೀಯರನ್ನು ತಾಯ್ನಾಡಿಗೆ ಸುರಕ್ಷಿತವಾಗಿ ವಿಮಾನಗಳಲ್ಲಿ ಕರೆತರಲಾಯಿತು. ಅದರಲ್ಲಿ ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೊಲ್ಲಿ ರಾಷ್ಟ್ರಗಳ ಜೈಲುಗಳಲ್ಲಿ ಬಂಧಿಯಾಗಿದ್ದ ಭಾರತೀಯರನ್ನು ಬಿಡುಗಡೆ ಮಾಡಲು ಸರ್ಕಾರ ಅಲ್ಲಿನ ಸರ್ಕಾರಗಳ ಜತೆ ಮಾತುಕತೆ ನಡೆಸಿ ಯಶಸ್ವಿಯಾಗಿದೆ. ನಮ್ಮ ಭಾರತೀಯರ ರಕ್ಷಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸ್ನೇಹಿತರೆ,

ನಾವಿಂದು ಐತಿಹಾಸಿಕ ಹಂತದಲ್ಲಿದ್ದೇವೆ. ಇಂದಿನ ನಮ್ಮೆಲ್ಲಾ ಕ್ರಮಗಳು ಮುಂದಿನ ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ಪಥವನ್ನು ರೂಪಿಸುತ್ತವೆ. ತ್ವರಿತವಾಗಿ ಅಭಿವೃದ್ಧಿ ಹೊಂದಲು, ಜಾಗತಿಕ ಒಳಿತಗಾಗಿ ಕೊಡುಗೆ ನೀಡಲು ಭಾರತ ಸಮರ್ಥವಾಗಿದೆ. ಸಮರ್ಪಕ ಅವಕಾಶಗಳಿಂದ ಅದ್ಭುತಗಳನ್ನು ಸೃಷ್ಟಿಸಬಲ್ಲರು ಎಂಬುದನ್ನು ಭಾರತೀಯರು ಈಗಾಗಲೇ ಸಾಬೀತು ಮಾಡಿದ್ದಾರೆ. ಅಂತಹ ಅವಕಾಶಗಳಿಗಾಗಿ ನಾವೆಲ್ಲ ಕೆಲಸ ಮಾಡುವುದನ್ನು ಮುಂದುವರಿಸೋಣ. ನಾವೆಲ್ಲಾ ಜತೆಗೂಡಿ ಆತ್ಮನಿರ್ಭರ್ ಭಾರತ ಕಟ್ಟೋಣ. ಮತ್ತೊಮ್ಮೆ ನಾನು ಕೇರಳ ಜನತೆಯನ್ನು ಅಭಿನಂದಿಸುತ್ತೇನೆ.

ಧನ್ಯವಾದಗಳು.

ಒರಾಯಿರಾಮ್ ನಂದಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi