ಭಾರತ್ ಮಾತಾ ಕಿ ಜೈ

ಭಾರತ್ ಮಾತಾ ಕಿ ಜೈ

ಭಾರತ್ ಮಾತಾ ಕಿ ಜೈ

ಅಸ್ಸಾಂ ಜನತೆಗೆ ಈ ವಿಶೇಷ ಸಂದರ್ಭದಲ್ಲಿ ಧೆಮಾಜಿಯಿಂದ ಸ್ವಾಗತಿಸುತ್ತೇನೆ ಮತ್ತು ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ.

ಅಸ್ಸಾಂನ ಗವರ್ನರ್ ಪ್ರೊ. ಜಗದೀಶ್ ಮುಖಿ ಜಿ, ರಾಜ್ಯದ ಜನಪ್ರಿಯ ಮತ್ತು ಪ್ರಸಿದ್ಧ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೊವಾಲ್ ಜಿ, ನನ್ನ ಸಹೋದ್ಯೋಗಿಗಳಾದ ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಜಿ ಮತ್ತು ಶ್ರೀ ರಾಮೇಶ್ವರ ತೆಲಿ ಜಿ, ಅಸ್ಸಾಂ ಸರ್ಕಾರದ ಸಚಿವರಾದ ಡಾ.ಹಿಮಂತ ಬಿಸ್ವಾ ಶರ್ಮಾ ಜಿ, ರಾಜ್ಯ ಸರ್ಕಾರದ ಇತರ ಸಚಿವರು, ಸಂಸದರು, ಶಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಅಸ್ಸಾಂನ ನನ್ನ ಆತ್ಮೀಯ ಸಹೋದರ ಸಹೋದರಿಯರೇ.

ನಾನು ಮೂರನೇ ಬಾರಿಗೆ ಧೆಮಾಜಿಗೆ ಭೇಟಿ ನೀಡುತ್ತಿದ್ದೇನೆ ಮತ್ತು ನಿಮ್ಮೆಲ್ಲರನ್ನೂ ಭೇಟಿಯಾಗುತ್ತಿದ್ದೇನೆ ಮತ್ತು ಪ್ರತಿ ಬಾರಿಯೂ ಇಲ್ಲಿನ ಜನರ ಅನ್ಯೋನ್ಯ, ಆದರ ಮತ್ತು ಆಶೀರ್ವಾದಗಳು ಅಸ್ಸಾಂ ಮತ್ತು ಈಶಾನ್ಯ ಪ್ರದೇಶಕ್ಕೆ ಹೆಚ್ಚು ಕೆಲಸ ಮಾಡಲು ಮತ್ತು ಹೊಸದನ್ನು ಮಾಡಲು ನನಗೆ ಸ್ಫೂರ್ತಿ ನೀಡುತ್ತಿರುವುದು ನನ್ನ ಸೌಭಾಗ್ಯ. ಗೊಗಮುಖ್‌ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಶಂಖು ಸ್ಥಾಪನೆಗೆ ನಾನು ಇಲ್ಲಿಗೆ ಬಂದಾಗ, ಈಶಾನ್ಯ ಪ್ರದೇಶವು ಭಾರತದ ಬೆಳವಣಿಗೆಯ ಹೊಸ ಎಂಜಿನ್ ಆಗಲಿದೆ ಎಂದು ನಾನು ಹೇಳಿದೆ. ಇಂದು ನಾವು ಆ ನಂಬಿಕೆಯ ಪ್ರತಿಬಿಂಬವನ್ನು ನೋಡಬಹುದು.

ಸಹೋದರರು ಮತ್ತು ಸಹೋದರಿಯರೇ,

ಎಂಟು ದಶಕಗಳ ಹಿಂದೆ, ಅಸ್ಸಾಮೀ ಚಿತ್ರರಂಗ ತನ್ನ ಪ್ರಯಾಣವನ್ನು ಬ್ರಹ್ಮಪುತ್ರದ ಉತ್ತರ ದಂಡೆಯಿಂದ ‘ಜಾಯ್‌ಮೋತಿ’ ಚಿತ್ರದೊಂದಿಗೆ ಪ್ರಾರಂಭಿಸಿತು. ಅಸ್ಸಾಂ ಸಂಸ್ಕೃತಿಯ ಹೆಮ್ಮೆಯನ್ನು ಹೆಚ್ಚಿಸಲು ಈ ಪ್ರದೇಶವು ಅನೇಕ ಮೇರುವ್ಯಕ್ತಿಗಳನ್ನು ನೀಡಿದೆ. ರುಪ್ಕೋನ್ವರ್ ಜ್ಯೋತಿ ಪ್ರಸಾದ್ ಅಗರ್ವಾಲಾ, ಕಲಾಗುರು ಬಿಷ್ಣು ಪ್ರಸಾದ್ ರಭಾ, ನಟಸೂರ್ಯ ಫಣಿ ಶರ್ಮಾ, ಇವರೆಲ್ಲರೂ ಅಸ್ಸಾಂನ ಅಸ್ಮಿತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಭಾರತ ರತ್ನ ಡಾ. ಭೂಪೆನ್ ಹಜರಿಕಾ ಜಿ ಒಮ್ಮೆ ಬರೆದಿದ್ದರು: पार दुटि जिलिक उठिब राति, ज्बलि हत देवालीर बन्ति। ಅಂದರೆ, ಬ್ರಹ್ಮಪುತ್ರದ ಎರಡೂ ದಡಗಳು ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸಿದಂತೆ ಬೆಳಗುತ್ತವೆ. ದೀಪಗಳ ಬೆಳಕು ಅಸ್ಸಾಂನಲ್ಲಿ ಶಾಂತಿ ಮತ್ತು ಸ್ಥಿರತೆಯ ಮಧ್ಯೆ ಅಭಿವೃದ್ಧಿಯ ಚಿತ್ರವನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಮತ್ತು ಅಸ್ಸಾಂ ಸರ್ಕಾರ ಅಸ್ಸಾಂನ ಸಮತೋಲಿತ ಅಭಿವೃದ್ಧಿಗೆ ಬದ್ಧವಾಗಿದೆ. ಮತ್ತು ಈ ಅಭಿವೃದ್ಧಿಯ ಪ್ರಮುಖ ಅಡಿಪಾಯವೆಂದರೆ ಅಸ್ಸಾಂನ ಮೂಲಸೌಕರ್ಯ.

ಸ್ನೇಹಿತರೇ,

ನಾರ್ತ ಬ್ಲಾಕ್‌ ನಲ್ಲಿ ಹೇರಳವಾದ ಸಾಮರ್ಥ್ಯದ ಹೊರತಾಗಿಯೂ, ಹಿಂದಿನ ಸರ್ಕಾರಗಳು ಈ ಪ್ರದೇಶದ ಬಗ್ಗೆ ಮಲ ತಾಯಿ ಧೋರಣೆಯನ್ನು ಹೊಂದಿದ್ದವು. ಹಿಂದಿನ ಸರ್ಕಾರಗಳ ಆದ್ಯತೆಯಲ್ಲಿ ಸಂಪರ್ಕ ವ್ಯವಸ್ಥೆ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಇರಲಿಲ್ಲ. ಸಬ್ ಕಾ ಸಾಥ್ ಸಬ್‌ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಮತ್ತು ಸರ್ಬಾನಂದ ಜಿ ಸರ್ಕಾರ ಈ ತಾರತಮ್ಯವನ್ನು ಕೊನೆಗೊಳಿಸಿತು. ಬ್ರಾಡ್ ಗೇಜ್ ರೈಲ್ವೆ ಮಾರ್ಗವು ನಮ್ಮ ಸರ್ಕಾರ ರಚನೆಯಾದ ನಂತರವೇ ನಾರ್ತ್‌ ಬ್ಲಾಕ್ ತಲುಪಿತು. ಬ್ರಹ್ಮಪುತ್ರದ ಎರಡನೆಯದಾದ ಕಲಿಭೂಮುರ ಸೇತುವೆ ಪ್ರದೇಶದ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದನ್ನು ಸಹ ತ್ವರಿತವಾಗಿ ಕಾರ್ಯಗತಗೊಳಿಸಲಾಗುತ್ತಿದೆ. ಈ ಪ್ರದೇಶವು ಹಲವಾರು ವರ್ಷಗಳಿಂದ ಕಾಯುತ್ತಿದ್ದ ಬೊಗಿಬೀಲ್ ಸೇತುವೆಯ ಕೆಲಸವನ್ನು ನಮ್ಮ ಸರ್ಕಾರವು ಚುರುಕುಗೊಳಿಸಿತು, . ನಾರ್ತ್‌ ಬ್ಲಾಕ್‌ ನಲ್ಲಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕೂಡ ವೇಗವಾಗಿ ಪ್ರಗತಿಯಲ್ಲಿದೆ. ಕಳೆದ ವಾರವಷ್ಟೇ, ಮಹಾಬಾಹು ಬ್ರಹ್ಮಪುತ್ರದಿಂದ ಪ್ರದೇಶದ ಜಲಮಾರ್ಗ ಸಂಪರ್ಕಕ್ಕೆ ಸಂಬಂಧಿಸಿದ ಹಲವಾರು ಹೊಸ ಯೋಜನೆಗಳು ಪ್ರಾರಂಭವಾಗಿವೆ. ಬೊಂಗೈಗಾಂವ್‌ನ ಜೋಗಿಗೋಪದಲ್ಲಿ ದೊಡ್ಡ ಟರ್ಮಿನಲ್ ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ನ ಕೆಲಸವೂ ಪ್ರಾರಂಭವಾಗಿದೆ.

ಸ್ನೇಹಿತರೇ,

ಈ ಸರಣಿಯ ಭಾಗವಾಗಿ, ಅಸ್ಸಾಂ ಇಂದು 3,000 ಕೋಟಿ ಮೌಲ್ಯದ ಇಂಧನ ಮತ್ತು ಶಿಕ್ಷಣ ಮೂಲಸೌಕರ್ಯ ಯೋಜನೆಗಳ ಹೊಸ ಉಡುಗೊರೆಯನ್ನು ಪಡೆಯುತ್ತಿದೆ. ಇದು ಧೆಮಾಜಿ ಮತ್ತು ಸುವಾಲ್ಕುಚಿಯಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಾಗಲಿ, ಬೊಂಗೈಗಾಂವ್‌ನಲ್ಲಿ ಸಂಸ್ಕರಣಾಗಾರದ ವಿಸ್ತರಣೆಯಾಗಲಿ, ದಿಬ್ರುಗಢದ ದ್ವಿತೀಯ ಟ್ಯಾಂಕ್ ಫಾರ್ಮ್ ಆಗಿರಲಿ ಅಥವಾ ಟಿನ್ಸುಕಿಯಾದ ಗ್ಯಾಸ್ ಕಂಪ್ರೆಸರ್‌ ಕೇಂದ್ರವಾಗಲಿ, ಈ ಯೋಜನೆಗಳು ಈ ಪ್ರದೇಶದ ಅಸ್ತಿತ್ವವನ್ನು ಶಕ್ತಿ ಮತ್ತು ಶಿಕ್ಷಣದ ಕೇಂದ್ರವಾಗಿ ಸಶಕ್ತಗೊಳಿಸುತ್ತದೆ. ಈ ಯೋಜನೆಗಳು ಅಸ್ಸಾಂ ಮತ್ತು ಪೂರ್ವ ಭಾರತದ ಸಬಲೀಕರಣದ ಸಂಕೇತಗಳಾಗಿವೆ.

ಸ್ನೇಹಿತರೇ,

ಸ್ವಾವಲಂಬನೆಯ ಹಾದಿಯಲ್ಲಿ, ಭಾರತವು ತನ್ನ ಶಕ್ತಿ ಮತ್ತು ಸಾಮರ್ಥ್ಯಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ. ಕಳೆದ ಕೆಲವು ವರ್ಷಗಳಲ್ಲಿ, ಸಂಸ್ಕರಣೆ ಮತ್ತು ತುರ್ತು ಪರಿಸ್ಥಿತಿಗಳಿಗಾಗಿ ನಾವು ಭಾರತದಲ್ಲಿ ತೈಲ ಸಂಗ್ರಹ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. ಬೊಂಗೈಗಾಂವ್ ಸಂಸ್ಕರಣಾಗಾರದಲ್ಲಿ ಪರಿಷ್ಕರಣೆ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಇಂದು ಪ್ರಾರಂಭಿಸಲಾದ ಅನಿಲ ಘಟಕವು ಇಲ್ಲಿ ಎಲ್‌ಪಿಜಿ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ಎಲ್ಲಾ ಯೋಜನೆಗಳು ಅಸ್ಸಾಂ ಮತ್ತು ಈಶಾನ್ಯದ ಜನರ ಜೀವನವನ್ನು ಸುಗಮಗೊಳಿಸುತ್ತದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.

|

ಸಹೋದರರು ಮತ್ತು ಸಹೋದರಿಯರೇ,

ಒಬ್ಬ ವ್ಯಕ್ತಿಯು ಮೂಲಸೌಕರ್ಯಗಳನ್ನು ಪಡೆದಾಗ, ಅವನ ಆತ್ಮವಿಶ್ವಾಸವು ಅಪಾರವಾಗಿ ಬೆಳೆಯುತ್ತದೆ. ಬೆಳೆಯುತ್ತಿರುವ ಆತ್ಮವಿಶ್ವಾಸವು ಪ್ರದೇಶ ಮತ್ತು ದೇಶವನ್ನು ಸಹ ಅಭಿವೃದ್ಧಿಪಡಿಸುತ್ತದೆ. ಇಂದು, ನಮ್ಮ ಸರ್ಕಾರವು ಈ ಜನರು ಮತ್ತು ಮೊದಲು ಸೌಲಭ್ಯಗಳು ಇಲ್ಲದ ಪ್ರದೇಶಗಳನ್ನು ತಲುಪಲು ಪ್ರಯತ್ನಿಸುತ್ತಿದೆ. ಈಗ ಆಡಳಿತವು ಅವರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಒತ್ತು ನೀಡಿದೆ. ಈ ಮೊದಲು, ಜನರನ್ನು ಅವರ ಪಾಡಿಗೆ ಅವರನ್ನು ಹಾಗೇ ಬಿಟ್ಟಿದ್ದರು. ಕೇವಲ ಊಹಿಸಿಕೊಳ್ಳಿ, ದೇಶದ ಪ್ರತಿ 100 ಮನೆಗಳಲ್ಲಿ ಕೇವಲ 50-55 ಕುಟುಂಬಗಳು, ಅಂದರೆ, ಅವರಲ್ಲಿ ಅರ್ಧದಷ್ಟು ಜನರು 2014 ಕ್ಕಿಂತ ಮೊದಲು ಎಲ್‌ಪಿಜಿ ಅನಿಲ ಸಂಪರ್ಕವನ್ನು ಹೊಂದಿದ್ದರು. ಸಂಸ್ಕರಣಾಗಾರಗಳು ಮತ್ತು ಇತರ ಸೌಲಭ್ಯಗಳ ಹೊರತಾಗಿಯೂ, 100 ಜನರಲ್ಲಿ ಕೇವಲ 40 ಜನರು ಅಸ್ಸಾಂನಲ್ಲಿ ಅನಿಲ ಸಂಪರ್ಕವನ್ನು ಹೊಂದಿದ್ದರು. ಅರವತ್ತು ಪ್ರತಿಶತ ಜನರು ಅದನ್ನು ಹೊಂದಿರಲಿಲ್ಲ. ಬಡ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಅಡಿಗೆ ಹೊಗೆಯ ಮತ್ತು ರೋಗಗಳ ಜಾಲದಲ್ಲಿ ವಾಸಿಸವಂತಾಗಿತ್ತು. ನಾವು ಈ ಪರಿಸ್ಥಿತಿಯನ್ನು ಉಜ್ವಲಾ ಯೋಜನೆಯ ಮೂಲಕ ಬದಲಾಯಿಸಿದ್ದೇವೆ. ಅಸ್ಸಾಂನಲ್ಲಿ, ಅನಿಲ ಸಂಪರ್ಕದ ವ್ಯಾಪ್ತಿಯು ಇಂದು ಶೇಕಡಾ 100 ರಷ್ಟಿದೆ. 2014 ರ ನಂತರದ ಬೊಂಗೈಗಾಂವ್ ಸಂಸ್ಕರಣಾಗಾರದ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಲ್‌ಪಿಜಿ ಸಂಪರ್ಕಗಳು ಮೂರು ಪಟ್ಟು ಹೆಚ್ಚಾಗಿದೆ. ಈ ವರ್ಷದ ಕೇಂದ್ರ ಬಜೆಟ್ ಒಂದು ಕೋಟಿ ಹೆಚ್ಚು ಬಡ ಸಹೋದರಿಯರಿಗೆ ಉಚಿತ ಎಲ್‌ಪಿಜಿ ಸಂಪರ್ಕವನ್ನು ಒದಗಿಸುತ್ತದೆ.

ಸ್ನೇಹಿತರೇ,

ಅನಿಲ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ಗೊಬ್ಬರ ಉತ್ಪಾದನೆಯ ಕೊರತೆಯಿಂದ ದೇಶದ ಬಡವರು ಮತ್ತು ಸಣ್ಣ ರೈತರು ಹೆಚ್ಚು ಬಳಲುತ್ತಿದ್ದಾರೆ. ಸ್ವಾತಂತ್ರ್ಯ ಬಂದ ದಶಕಗಳ ನಂತರ ವಿದ್ಯುತ್ ಹೊಂದಿಲ್ಲದ 18,000 ಹಳ್ಳಿಗಳಲ್ಲಿ ಹೆಚ್ಚಿನವು ಈಶಾನ್ಯದ ಅಸ್ಸಾಂನವು. ಪೂರ್ವ ಭಾರತದ ಅನೇಕ ರಸಗೊಬ್ಬರ ಕಾರ್ಖಾನೆಗಳು ಅನಿಲದ ಕಾರಣಕ್ಕಾಗಿ ಮುಚ್ಚಲ್ಪಟ್ಟವು ಅಥವಾ ರೋಗಗ್ರಸ್ತವೆಂದು ಘೋಷಿಸಲ್ಪಟ್ಟವು. ಯಾರು ಬಳಲುತ್ತಿದ್ದರು? ಅವರು ಇಲ್ಲಿನ ಬಡವರು, ಮಧ್ಯಮ ವರ್ಗದ ಜನರು ಮತ್ತು ಯುವಕರು. ನಮ್ಮ ಸರ್ಕಾರ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದೆ. ಇಂದು, ಪೂರ್ವ ಭಾರತವನ್ನು ಪ್ರಧಾನ್ ಮಂತ್ರಿ ಊರ್ಜಾ ಗಂಗಾ ಯೋಜನೆಯು ವಿಶ್ವದ ಅತಿದೊಡ್ಡ ಅನಿಲ ಪೈಪ್‌ಲೈನ್‌ಗಳ ಮೂಲಕ ಸಂಪರ್ಕಿಸಲಾಗುತ್ತಿದೆ. ನೀತಿ ಸರಿಯಾಗಿದ್ದರೆ ಮತ್ತು ಉದ್ದೇಶಗಳು ಸ್ಪಷ್ಟವಾಗಿದ್ದರೆ, ಉದ್ದೇಶಗಳು ಸಹ ಬದಲಾಗುತ್ತವೆ ಮತ್ತು ಭಾಗ್ಯವೂ ಕೂಡ ಆಗುತ್ತದೆ. ಕೆಟ್ಟ ಉದ್ದೇಶಗಳನ್ನು ತೆಗೆದುಹಾಕಲಾಗುತ್ತದೆ ಮತ್ತು ಭಾಗ್ಯವು ಜನರ ಭವಿಷ್ಯವನ್ನು ಸಹ ಬದಲಾಯಿಸುತ್ತದೆ. ಇಂದು, ಅಭಿವೃದ್ಧಿಪಡಿಸುತ್ತಿರುವ ಗ್ಯಾಸ್ ಪೈಪ್‌ಲೈನ್ ನೆಟ್‌ವರ್ಕ್, ಪ್ರತಿ ಹಳ್ಳಿಯಲ್ಲಿ ಹಾಕಲಾಗುತ್ತಿರುವ ಆಪ್ಟಿಕಲ್ ಫೈಬರ್, ಪ್ರತಿ ಮನೆಗೆ ನೀರು ಒದಗಿಸಲು ಹಾಕಲಾಗುತ್ತಿರುವ ಕೊಳವೆಗಳು, ಭಾರತಾಂಬೆಯ ಮಡಿಲಲ್ಲಿ ಇಡುತ್ತಿರುವ ಈ ಎಲ್ಲಾ ಮೂಲಸೌಕರ್ಯಗಳು ಕೇವಲ ಕಬ್ಬಿಣವಲ್ಲ ಪೈಪ್ ಅಥವಾ ಫೈಬರ್ ಅಲ್ಲ. ಇವು ಭಾರತಾಂಬೆಯ ಹೊಸ ಭಾಗ್ಯದ ಮಾರ್ಗಗಳು.

ಸಹೋದರರು ಮತ್ತು ಸಹೋದರಿಯರೇ,

ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ತಂತ್ರಜ್ಞರಿಗೆ ಆತ್ಮನಿರ್ಭರ ಭಾರತಕ್ಕೆ ಒಂದು ದೊಡ್ಡ ಪಾತ್ರವಿದೆ. ನವೋದ್ಯಮಗಳ ಮೂಲಕ ದೇಶದ ಯುವಜನರು ಸಮಸ್ಯೆಗಳನ್ನು ಹೊಸ ನವೀನ ರೀತಿಯಲ್ಲಿ ಪರಿಹರಿಸಬೇಕಾದ ವಾತಾವರಣವನ್ನು ದೇಶದಲ್ಲಿ ಸೃಷ್ಟಿಸಲು ನಾವು ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಇಂದು, ಇಡೀ ಜಗತ್ತು ಭಾರತದ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರ ಪ್ರತಿಭೆಯನ್ನು ಗುರುತಿಸುತ್ತಿದೆ. ಅಸ್ಸಾಂನ ಯುವಕರಿಗೆ ಅಪಾರ ಸಾಮರ್ಥ್ಯವಿದೆ. ಈ ಸಾಮರ್ಥ್ಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅಸ್ಸಾಂ ಸರ್ಕಾರದ ಪ್ರಯತ್ನದಿಂದಾಗಿ 20 ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳು ಇಲ್ಲಿವೆ. ಧೆಮಾಜಿ ಎಂಜಿನಿಯರಿಂಗ್ ಕಾಲೇಜನ್ನು ರಾಷ್ಟ್ರಕ್ಕೆ ಸಮರ್ಪಿಸಿ, ಸುವಾಲ್ಕುಚಿ ಎಂಜಿನಿಯರಿಂಗ್ ಕಾಲೇಜಿನ ಶಂಕುಸ್ಥಾಪನೆಯ ನಂತರ, ಪರಿಸ್ಥಿತಿ ಮತ್ತಷ್ಟು ಬಲಗೊಳ್ಳುತ್ತಿದೆ. ಧೆಮಾಜಿ ಎಂಜಿನಿಯರಿಂಗ್ ಕಾಲೇಜು ನಾರ್ತ್‌ ಬ್ಯಾಂಕಿನ ಮೊದಲ ಎಂಜಿನಿಯರಿಂಗ್ ಕಾಲೇಜು. ಇನ್ನೂ ಮೂರು ಎಂಜಿನಿಯರಿಂಗ್ ಕಾಲೇಜುಗಳನ್ನು ನಿರ್ಮಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನನಗೆ ತಿಳಿಸಲಾಗಿದೆ. ಇದು ವಿಶೇಷ ಕಾಲೇಜುಗಳಿರಲಿ, ಪಾಲಿಟೆಕ್ನಿಕ್ ಕಾಲೇಜುಗಳು ಅಥವಾ ಹೆಣ್ಣುಮಕ್ಕಳಿಗೆ ಇತರ ಸಂಸ್ಥೆಗಳೆ ಆಗಿರಲಿ, ಅಸ್ಸಾಂ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಸಹೋದರರು ಮತ್ತು ಸಹೋದರಿಯರೇ,

ಅಸ್ಸಾಂ ಸರ್ಕಾರ ಕೂಡ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೀಘ್ರವಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಅಸ್ಸಾಂ, ಅದರ ಬುಡಕಟ್ಟು ಸಮಾಜ ಮತ್ತು ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿರುವ ನನ್ನ ಕಾರ್ಮಿಕ ಸಹೋದರ ಸಹೋದರಿಯರ ಮಕ್ಕಳಿಗೆ ಪ್ರಯೋಜನವನ್ನು ನೀಡಲಿದೆ. ಅದು ಸ್ಥಳೀಯ ಭಾಷೆ ಮತ್ತು ಸ್ಥಳೀಯ ವೃತ್ತಿಗಳಿಗೆ ಹಾಗು ಕೌಶಲವೃದ್ಧಿಗೆ ಸಂಬಂಧಿಸಿದ ಅಧ್ಯಯನಗಳಿಗೆ ಒತ್ತು ನೀಡುತ್ತದೆ. ಸ್ಥಳೀಯ ಭಾಷೆಯಲ್ಲಿ ವೈದ್ಯಕೀಯ ಅಥವಾ ತಾಂತ್ರಿಕ ಶಿಕ್ಷಣವನ್ನು ನೀಡಿದಾಗ, ಬಡವರ ಮಕ್ಕಳು ಸಹ ವೈದ್ಯರು ಮತ್ತು ಎಂಜಿನಿಯರ್‌ಗಳಾಗುತ್ತಾರೆ ಮತ್ತು ದೇಶಕ್ಕೆ ಉಪಯೋಗವಾಗುತ್ತದೆ. ಕಡುಬಡವರ ಹೆತ್ತವರ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ. ಚಹಾ, ಪ್ರವಾಸೋದ್ಯಮ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಹೊಂದಿರುವ ಅಸ್ಸಾಂನಂತಹ ರಾಜ್ಯಗಳು ಸ್ವಾವಲಂಬನೆಯ ದೊಡ್ಡ ಶಕ್ತಿಗಳಾಗಿವೆ. ಶಾಲೆಗಳು ಮತ್ತು ಕಾಲೇಜುಗಳಲ್ಲಿ ಈ ಕೌಶಲಗಳನ್ನು ಕಲಿಯುವಾಗ ಇಲ್ಲಿನ ಯುವಕರು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಅಲ್ಲಿ ಸ್ವಾವಲಂಬನೆಗೆ ಅಡಿಪಾಯ ಹಾಕಲಾಗುವುದು. ಈ ವರ್ಷದ ಬಜೆಟ್ ಬುಡಕಟ್ಟು ಪ್ರದೇಶಗಳಲ್ಲಿ ನೂರಾರು ಹೊಸ ಏಕಲವ್ಯ ಮಾದರಿ ಶಾಲೆಗಳನ್ನು ತೆರೆಯಲು ಸಹ ಅವಕಾಶ ನೀಡುತ್ತದೆ, ಇದರಿಂದ ಅಸ್ಸಾಂಗೆ ಸಹ ಪ್ರಯೋಜನವಾಗಲಿದೆ.

ಸ್ನೇಹಿತರೇ,

ಬ್ರಹ್ಮಪುತ್ರದ ಆಶೀರ್ವಾದದಿಂದ ಈ ಪ್ರದೇಶದ ಭೂಮಿ ಬಹಳ ಫಲವತ್ತಾಗಿದೆ. ಇಲ್ಲಿನ ರೈತರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು, ಆಧುನಿಕ ಕೃಷಿ ಸೌಲಭ್ಯಗಳನ್ನು ಪಡೆಯಲು ಮತ್ತು ಆದಾಯವನ್ನು ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ರೈತರ ಪ್ರತಿಯೊಂದು ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಅದು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡುವುದಾಗಲಿ, ಅಥವಾ ಪಿಂಚಣಿ ಯೋಜನೆಯ ಆರಂಭವಾಗಲಿ ಅಥವಾ ಅವರಿಗೆ ಉತ್ತಮ ಬೀಜಗಳನ್ನು ಅಥವಾ ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಒದಗಿಸಲಿ ಎಂದು ಕೆಲಸ ಮಾಡಲಾಗುತ್ತಿದೆ. ಮೀನುಗಾರಿಕೆಗೆ ವಿಶೇಷ ಒತ್ತು ನೀಡಿ, ನಮ್ಮ ಸರ್ಕಾರ ಈಗಾಗಲೇ ಪ್ರತ್ಯೇಕ ಮೀನುಗಾರಿಕೆ ಸಚಿವಾಲಯವನ್ನು ರಚಿಸಿದೆ. ನಮ್ಮ ಸರ್ಕಾರ ಈಗ ಮೀನುಗಾರಿಕೆಯನ್ನು ಉತ್ತೇಜಿಸಲು ಸ್ವಾತಂತ್ರ್ಯಾ ನಂತರ ಖರ್ಚು ಮಾಡದಷ್ಟು ಹಣವನ್ನು ಖರ್ಚು ಮಾಡುತ್ತಿದೆ. ರೂ. ಮೀನು ವ್ಯಾಪಾರಕ್ಕಾಗಿ 20,000 ಕೋಟಿ ರೂಪಾಯಿ ಬೃಹತ್‌ ಯೋಜನೆಯನ್ನು ಸಹ ರೂಪಿಸಲಾಗಿದೆ, ಇದು ಅಸ್ಸಾಂನ ಮೀನುಗಾರ ಸಹೋದರರಿಗೂ ಪ್ರಯೋಜನವನ್ನು ನೀಡುತ್ತದೆ. ಅಸ್ಸಾಂ ಮತ್ತು ದೇಶದ ರೈತರ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅವಕಾಶ ಮಾಡಿಕೊಡುವುದು ಸರ್ಕಾರದ ಪ್ರಯತ್ನವಾಗಿದೆ. ಇದಕ್ಕಾಗಿ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ಸಹ ಸುಧಾರಿಸಲಾಗಿದೆ.

ಸ್ನೇಹಿತರೇ,

ನಾರ್ತ್ ಬ್ಯಾಂಕಿನ ಚಹಾ ತೋಟಗಳು ಅಸ್ಸಾಂನ ಆರ್ಥಿಕತೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ಹೊಂದಿವೆ. ಈ ಚಹಾ ತೋಟಗಳಲ್ಲಿ ಕೆಲಸ ಮಾಡುವ ನಮ್ಮ ಸಹೋದರ ಸಹೋದರಿಯರ ಜೀವನವನ್ನು ಸುಗಮಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಸಣ್ಣ ಚಹಾ ಬೆಳೆಗಾರರಿಗೆ ಭೂಮಿಯನ್ನು ಗುತ್ತಿಗೆ ನೀಡುವ ಅಭಿಯಾನವನ್ನು ಪ್ರಾರಂಭಿಸಿದ್ದಕ್ಕಾಗಿ ನಾನು ಅಸ್ಸಾಂ ಸರ್ಕಾರವನ್ನು ಅಭಿನಂದಿಸುತ್ತೇನೆ.

ಸಹೋದರರು ಮತ್ತು ಸಹೋದರಿಯರೇ,

ದಶಕಗಳಿಂದ ದೇಶವನ್ನು ಆಳಿದವರು ಡಿಸ್ಪುರ್ ದೆಹಲಿಯಿಂದ ದೂರದಲ್ಲಿದ್ದಾರೆ ಎಂದು ಭಾವಿಸಿದ್ದರು. ಈ ಮನಸ್ಥಿತಿ ಅಸ್ಸಾಂಗೆ ಸಾಕಷ್ಟು ಹಾನಿಯನ್ನುಂಟುಮಾಡಿತು. ಆದರೆ ಈಗ ದೆಹಲಿ ನಿಮ್ಮಿಂದ ದೂರವಾಗಿಲ್ಲ. ದೆಹಲಿ ನಿಮ್ಮ ಮನೆ ಬಾಗಿಲಲ್ಲಿ ನಿಂತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಮಂತ್ರಿಗಳನ್ನು ಇಲ್ಲಿಗೆ ನೂರಾರು ಬಾರಿ ಕಳುಹಿಸಲಾಗಿದೆ ಇದರಿಂದ ಅವರು ನಿಮ್ಮ ತೊಂದರೆಗಳನ್ನು ಅರ್ಥಮಾಡಿಕೊಳ್ಳಬಹುದು ಮತ್ತು ನಡೆಯುತ್ತಿರುವ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡಬಹುದು. ನಿಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ತಯಾರಿಸಲು ನಾವು ಪ್ರಯತ್ನಿಸಿದ್ದೇವೆ. ನಾನು ಸಹ ಅನೇಕ ಬಾರಿ ಅಸ್ಸಾಂಗೆ ಬಂದಿದ್ದೇನೆ, ಇದರಿಂದಾಗಿ ನಾನು ಸಹ ನಿಮ್ಮ ಅಭಿವೃದ್ಧಿ ಪ್ರಯಾಣದಲ್ಲಿ ಪಾಲ್ಗೊಳ್ಳುತ್ತೇನೆ. ಅಸ್ಸಾಂ ಪ್ರತಿಯೊಬ್ಬ ನಾಗರಿಕನು ಉತ್ತಮ ಜೀವನಕ್ಕಾಗಿ ಅಗತ್ಯವಿರುವ ಎಲ್ಲವನ್ನೂ ಹೊಂದಿದೆ. ಈಗ, ಅಭಿವೃದ್ಧಿಯ ಮತ್ತು ಪ್ರಗತಿಯ ಡಬಲ್ ಎಂಜಿನ್ ಅನ್ನು ಇನ್ನಷ್ಟು ಬಲಪಡಿಸಲು ನಿಮಗೆ ಅವಕಾಶವಿದೆ. ನಿಮ್ಮ ಸಹಕಾರ ಮತ್ತು ಆಶೀರ್ವಾದದಿಂದ ಅಸ್ಸಾಂನ ಅಭಿವೃದ್ಧಿ ವೇಗವಾಗಲಿದೆ ಮತ್ತು ಅಸ್ಸಾಂ ಅಭಿವೃದ್ಧಿಯ ಹೊಸ ಎತ್ತರಕ್ಕೆ ತಲುಪಲಿದೆ ಎಂದು ನಾನು ಅಸ್ಸಾಂ ಜನರಿಗೆ ಭರವಸೆ ನೀಡುತ್ತೇನೆ.

ಸಹೋದರರು ಮತ್ತು ಸಹೋದರಿಯರೇ,

ನೀವು ಚುನಾವಣೆಗೆ ಕಾಯುತ್ತಿದ್ದೀರಿ ಎಂದು ನನಗೆ ತಿಳಿದಿದೆ. ಕೊನೆಯ ಬಾರಿಗೆ ಚುನಾವಣೆಯನ್ನು ಘೋಷಿಸಿದಾಗ ನನಗೆ ನೆನಪಿರುವಂತೆ, ಅದು ಬಹುಶಃ ಮಾರ್ಚ್ ನಾಲ್ಕನೇ ತಾರೀಖು ಆಗಿರಬಹುದು. ಈ ಬಾರಿ ಸಹ, ಮಾರ್ಚ್ ಮೊದಲ ವಾರದಲ್ಲಿ ಚುನಾವಣಾ ಸಮಯವನ್ನು ಪ್ರಕಟಿಸುವ ಸಾಧ್ಯತೆಯನ್ನು ನಾನು ನೋಡುತ್ತೇನೆ. ಅದು ಚುನಾವಣಾ ಆಯೋಗದ ಕೆಲಸ. ಆದರೆ ಚುನಾವಣೆ ಘೋಷಣೆಯ ಮೊದಲು ನಾನು ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿಗಳಿಗೆ ಹೋಗಲು ಅನೇಕ ಬಾರಿ ಪ್ರಯತ್ನಿಸುತ್ತೇನೆ. ಉದಾಹರಣೆಗೆ, ಮಾರ್ಚ್ 7 ರಂದು ಅಥವಾ ಆ ಸಮಯದಲ್ಲಿ ಎಲ್ಲೋ ಚುನಾವಣೆಗಳನ್ನು ಘೋಷಿಸಿದ್ದರೆ, ಕಳೆದ ಬಾರಿ ಮಾರ್ಚ್ 4 ರಂದು ಘೋಷಿಸಲ್ಪಟ್ಟಿದ್ದರಿಂದ, ಚುನಾವಣೆಗಳು ಘೋಷಣೆಯಾಗುವ ಮೊದಲೇ ಹಲವು ಬಾರಿ ಇಲ್ಲಿಗೆ ಬರಲು ನಾನು ಪ್ರಯತ್ನಿಸುತ್ತೇನೆ. ಮತ್ತು ಸಹೋದರ ಸಹೋದರಿಯರೇ, ಇಂದು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬರುವ ಮೂಲಕ ನಮ್ಮನ್ನು ಆಶೀರ್ವದಿಸಿದ್ದೀರಿ, ಅಭಿವೃದ್ಧಿಯ ಪ್ರಯಾಣದಲ್ಲಿ ನಮ್ಮ ನಂಬಿಕೆಯನ್ನು ನೀವು ಬಲಪಡಿಸಿದ್ದೀರಿ ಮತ್ತು ಇದಕ್ಕಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅಸ್ಸಾಂನ ಮೀನುಗಾರರು, ರೈತರು, ತಾಯಂದಿರು ಮತ್ತು ಸಹೋದರಿಯರು, ನನ್ನ ಬುಡಕಟ್ಟು ಸಹೋದರರು ಮತ್ತು ಸಹೋದರಿಯರನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಅಸ್ಸಾಂ ಅನ್ನು ಸ್ವಾವಲಂಬಿಗಳನ್ನಾಗಿ ಮಾಡಲು, ಭಾರತವನ್ನು ನಿರ್ಮಿಸಲು ಅಸ್ಸಾಂನ ಕೊಡುಗೆಗಾಗಿ ಇಂದು ಪ್ರಾರಂಭಿಸಲಾದ ಅಥವಾ ಅದರ ಅಡಿಪಾಯವನ್ನು ಹಾಕಲಾಗಿದೆ. ಮತ್ತು ಅಸ್ಸಾಂನ ಯುವ ಪೀಳಿಗೆಯ ಉಜ್ವಲ ಭವಿಷ್ಯ. ನಾನು ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನಿಮ್ಮ ಎರಡೂ ಮುಷ್ಟಿಯನ್ನು ಬಿಗಿಗೊಳಿಸಿ ಮತ್ತು ನನ್ನೊಂದಿಗೆ ಪೂರ್ಣ ಶಕ್ತಿಯೊಂದಿಗೆ ಹೇಳಿ ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ, ಭಾರತ್ ಮಾತಾ ಕೀ ಜೈ.

  • Manda krishna BJP Telangana Mahabubabad District mahabubabad June 24, 2022

    👍🏼👍🏼🙏🏻
  • Manda krishna BJP Telangana Mahabubabad District mahabubabad June 24, 2022

    👍🏼👍🏼🙏
  • Manda krishna BJP Telangana Mahabubabad District mahabubabad June 24, 2022

    👍🏼👍🏼🇮🇳
  • Manda krishna BJP Telangana Mahabubabad District mahabubabad June 24, 2022

    👍🏼👍🏼💐
  • Manda krishna BJP Telangana Mahabubabad District mahabubabad June 24, 2022

    👍🏼👍🏼🏝️
  • Manda krishna BJP Telangana Mahabubabad District mahabubabad June 24, 2022

    👍🏼👍🏼🌱
  • Manda krishna BJP Telangana Mahabubabad District mahabubabad June 24, 2022

    👍🏼👍🏼👌
  • Manda krishna BJP Telangana Mahabubabad District mahabubabad June 24, 2022

    👍🏼👍🏼🌹
  • Manda krishna BJP Telangana Mahabubabad District mahabubabad June 24, 2022

    👍🏼👍🏼👍🏼
  • Manda krishna BJP Telangana Mahabubabad District mahabubabad June 24, 2022

    👍🏼👍🏼
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
Prime Minister welcomes Amir of Qatar H.H. Sheikh Tamim Bin Hamad Al Thani to India
February 17, 2025

The Prime Minister, Shri Narendra Modi extended a warm welcome to the Amir of Qatar, H.H. Sheikh Tamim Bin Hamad Al Thani, upon his arrival in India.

|

The Prime Minister said in X post;

“Went to the airport to welcome my brother, Amir of Qatar H.H. Sheikh Tamim Bin Hamad Al Thani. Wishing him a fruitful stay in India and looking forward to our meeting tomorrow.

|

@TamimBinHamad”