Bihar is blessed with both 'Gyaan' and 'Ganga.' This land has a legacy that is unique: PM
From conventional teaching, our universities need to move towards innovative learning: PM Modi
Living in an era of globalisation, we need to understand the changing trends across the world and the increased spirit of competitiveness: PM
A nation seen as a land of snake charmers has distinguished itself in the IT sector: PM Modi
India is a youthful nation, blessed with youthful aspirations. Our youngsters can do a lot for the nation and the world: PM

ಇಲ್ಲಿ ಬಹು ಸಂಖ್ಯೆಯಲ್ಲಿ ನೆರೆದಿರುವ ಎಲ್ಲಾ ಯುವ ಜನರೇ,

ನಮ್ಮ ಮುಖ್ಯಮಂತ್ರಿಗಳು ನನಗೆ ಹೇಳುತ್ತಿದ್ದರು: ನಾನು ಪಾಟ್ನಾ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿರುವ ಮೊದಲ ಪ್ರಧಾನ ಮಂತ್ರಿ ಎಂದು. ನನ್ನ ಹಿಂದಿನವರು ನನಗೆ ಕೆಲ ಒಳ್ಳೆಯ ಕೆಲಸಗಳನ್ನು ಮಾಡಲು ಅವಕಾಶ ಉಳಿಸಿ ಹೋಗಿದ್ದಾರೆ ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ. ಆದ್ದರಿಂದ , ನನಗೆ ಈ ಉತ್ತಮ ಕೆಲಸ ಮಾಡಲು ಈ ಅವಕಾಶ ದೊರಕಿದೆ.

ಎಲ್ಲಕಿಂತ ಮೊದಲಿಗೆ ನಾನು ಈ ಪವಿತ್ರ ಮಣ್ಣಿಗೆ ವಂದಿಸಲು ಬಯಸುತ್ತೇನೆ. ಯಾಕೆಂದರೆ ಈ ವಿಶ್ವವಿದ್ಯಾಲಯದ ಆವರಣ ದೇಶದ ಬೆಳವಣಿಗೆಗೆ ಕೊಡುಗೆ ಕೊಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಚೀನಾದಲ್ಲಿ ಭಾರೀ ಪ್ರಖ್ಯಾತವಾದ ಉಕ್ತಿಯೊಂದಿದೆ- ನಿಮ್ಮ ಯೋಚನೆ/ಕನಸು ಒಂದು ವರ್ಷದ್ದಾದರೆ ಆಹಾರ ಧಾನ್ಯಗಳ ಬೀಜವನ್ನು ಬಿತ್ತು. ನಿನ್ನ ದೃಷ್ಟಿ 10 ರಿಂದ 20 ವರ್ಷದ್ದಾದರೆ ಆಗ ಹಣ್ಣು ಬಿಡುವ ಮರಗಳ ಬೀಜಗಳನ್ನು ಹಾಕು. ನಿಮ್ಮ ದೂರದೃಷ್ಟಿ ಮುಂದಿನ ತಲೆಮಾರಿನವರೆಗಿನದ್ದಾದರೆ ನೀವು ಒಳ್ಳೆಯ ಮಾನವನನ್ನು ರೂಪಿಸಬೇಕು. ಪಾಟ್ನಾ ವಿಶ್ವವಿದ್ಯಾಲಯ ಈ ಮಾತಿಗೆ ಅನುರೂಪದಂತಿದೆ. ನೂರು ವರ್ಷಗಳ ಹಿಂದೆ ಬಿತ್ತಿದ ಬೀಜ , ನೂರು ವರ್ಷಗಳಲ್ಲಿ ಹಲವು ತಲೆಮಾರುಗಳು ಇಲ್ಲಿ ಬಂದು ಕಲಿತಿವೆ. ಅವರಲ್ಲಿ ಕೆಲವರು ರಾಜಕಾರಣಿಗಳಾಗಿದ್ದಾರೆ, ಉತ್ತೀರ್ಣರಾದ ಬಳಿಕ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ಕನಿಷ್ಟ ನಾಲ್ಕೈದು ಮಂದಿ ಹಿರಿಯ ನಾಗರಿಕ ಸೇವಾ ಅಧಿಕಾರಿಗಳು ಇಲ್ಲದ ರಾಜ್ಯಗಳನ್ನು ನಾವು ಕಾಣಲಾರೆವು ಎಂಬುದೊಂದು ವಾಸ್ತವ.

ನಾನು ಸಾಮಾನ್ಯವಾಗಿ ದೇಶದ ವಿವಿಧ ರಾಜ್ಯಗಳ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ. ದಿನ ನಿತ್ಯ 80 ರಿಂದ 100 ಜನರನ್ನು ಸುಮಾರು ಎರಡು ಗಂಟೆಗಳಲ್ಲಿ ಭೇಟಿ ಮಾಡುತ್ತೇನೆ. ಮತ್ತು ಆ ಅಧಿಕಾರಿಗಳಲ್ಲಿ ದೊಡ್ಡ ಪಾಲು ಬಿಹಾರದ್ದು ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರಿಗೆ ಸರಸ್ವತೀ ದೇವಿಯ ಆಶೀರ್ವಾದವಿದೆ. ಆದರೆ ಈಗ ಕಾಲ ಬದಲಾಗಿದೆ.ಬಿಹಾರಕ್ಕೆ ಸರಸ್ವತಿಯ ಆಶೀರ್ವಾದ ಇದ್ದರೂ ಸಹ ಲಕ್ಷ್ಮಿಯ ಆಶೀರ್ವಾದ ಬೇಕಾಗಿದೆ. ಭಾರತ ಸರಕಾರವು ಬಿಹಾರವನ್ನು ಇಬ್ಬರು ದೇವಿಯರ ಆಶೀರ್ವಾದದೊಂದಿಗೆ ಹೊಸ ಎತ್ತರಕ್ಕೆ ಕೊಂಡೊಯ್ಯಲು ಉದ್ದೇಶಿಸಿದೆ.

ನಿತೀಶ್ ಜೀ ಅವರು ಬಿಹಾರದ ಅಭಿವೃದ್ಧಿಗೆ ಬದ್ದರಾಗಿದ್ದಾರೆ. ಮತ್ತು ಭಾರತ ಸರಕಾರ ಕೂಡಾ ಪೂರ್ವ ಭಾರತದ ಅಭಿವೃದ್ಧಿಗೆ ಬದ್ಧವಾಗಿದೆ. ಬಿಹಾರವನ್ನು 2022 ರ ವೇಳೆಗೆ, ದೇಶವು ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸುವ ಸಂಧರ್ಭದಲ್ಲಿ ಭಾರತದ ಇತರ ಅಬಿವೃದ್ಧಿ ಹೊಂದಿದ ರಾಜ್ಯಗಳ ಮಟ್ಟಕ್ಕೆ ಏರಿಸುವುದು ನಮ್ಮ ನಿರ್ಧಾರವಾಗಬೇಕು.

ಪಾಟ್ನಾ ನಗರ ಗಂಗಾ ತಾಯಿಯ ದಡದಲ್ಲಿದೆ. ಬಿಹಾರದ ಜ್ಞಾನ ಮತ್ತು ಪರಂಪರೆ ಗಂಗಾ ನದಿಯಷ್ಟು ಹಳೆಯದು. ಭಾರತದ ಶಿಕ್ಷಣದ ಚರಿತ್ರೆಯನ್ನು ಉಲ್ಲೇಖಿಸುವಾಗ ಯಾರೊಬ್ಬರೂ ನಲಂದಾ ಅಥವಾ ವಿಕ್ರಮಶಿಲಾವನ್ನು ಮರೆಯಲಾರರು.

ಮಾನವ ಜೀವನವನ್ನು ಪರಿವರ್ತಿಸುವಲ್ಲಿ/ಸುಧಾರಿಸುವಲ್ಲಿ ಈ ಮಣ್ಣಿನ ಕೊಡುಗೆ ಬಹಳ ದೊಡ್ಡದು. ಬಹುಷ ಈ ಮಣ್ಣನ್ನು ಮುಟ್ಟದ ಕ್ಷೇತ್ರ ಯಾವುದಾದರೂ ಇರುವುದು ಸಾಧ್ಯವಿಲ್ಲ. ಈ ಬೃಹತ್ ಪರಂಪರೆಯ ಆಸ್ತಿ ತನ್ನಿಂದ ತಾನೇ ಪ್ರೇರಣೆಯ ಒಂದು ದೊಡ್ಡ ಮೂಲ. ಶ್ರೀಮಂತ ಚರಿತ್ರೆಯನ್ನು ನೆನಪಿಸಿಕೊಳ್ಳುವವರು ಅದನ್ನು ಭವಿಷ್ಯದ ಜನಾಂಗಕ್ಕೆ ತಿಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಚರಿತ್ರೆಯನ್ನು ಮರೆತವರು ಬರಡು ಭೂಮಿಯಂತೆ ಖಾಲಿಯಾಗಿರುತ್ತಾರೆ. ಆದ್ದರಿಂದ ಇದರ ಸೃಷ್ಟಿ ಬಲಿಷ್ಟ. ಈ ಮಣ್ಣಿನಲ್ಲಿ ಅದರ ಭಾವರೂಪಕ ಆವಿರ್ಭಾವ ಸಾಧ್ಯ. ಅದಕ್ಕೆ ಈ ಭೂಮಿಯನ್ನು ಜಾಗೃತಿಗೊಳಿಸುವ ಶಕ್ತಿ ಇದೆ. ಯಾಕೆಂದರೆ ಇದಕ್ಕೆ ದೊಡ್ಡ ಚಾರಿತ್ರಿಕ ಪರಂಪರೆ ಇದೆ. ಸಾಂಸ್ಕೃತಿಕ ಪರಂಪರೆ ಇದೆ ಮತ್ತು ಜೀವಂತ ದೃಷ್ಟಾಂತವಿದೆ. ಬೇರೆಲ್ಲಿಯೂ ಇಂತಹ ಸಾಮರ್ಥ್ಯ ಅಥವಾ ಶಕ್ತಿ ಇಲ್ಲ ಎಂದು ನಾನು ಭಾವಿಸುತ್ತೇನೆ.

ನಾವೆಲ್ಲ, ಶಾಲೆ-ಕಾಲೇಜುಗಳಿಗೆ ಕಲಿಯಲು ಹೋಗುತ್ತಿದ್ದ ಕಾಲವಿತ್ತು. ಅದೀಗ ಮುಗಿದಿದೆ. ಇಂದು ಜಗತ್ತು ಬದಲಾಗುತ್ತಿದೆ.

ಯೋಚನೆಗಳು, ಚಿಂತನೆಗಳು ಬದಲಾಗುತ್ತಿವೆ. ತಂತ್ರಜ್ಞಾನದ ಮಧ್ಯಪ್ರವೇಶದಿಂದಾಗಿ ಜೀವನ ವಿಧಾನವೂ ಬದಲಾಗುತ್ತಿದೆ. ಇಂತಹ ವಸ್ತುಸ್ಥಿತಿಯಲ್ಲಿ ವಿದ್ಯಾರ್ಥಿಗಳೂ ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಲ್ಲಿರುವ ಸವಾಲೆಂದರೆ ಹೊಸತೇನನ್ನು ಕಲಿಯಬೇಕು ಎಂಬುದಲ್ಲ. ಪ್ರಸ್ತುತ ಕಾಲಕ್ಕೆ ತಕ್ಕುದಲ್ಲದ, ಅಪ್ರಸ್ಥುತವಾದ ಸಂಗತಿಗಳನ್ನು ಹೇಗೆ ಕಲಿಯದೇ ಬಿಡಬೇಕು ಮತ್ತು ಹೊಸ ಸಂಗತಿಗಳನ್ನು ಹೇಗೆ ಮತ್ತೆ ಕಲಿಯಬೇಕು ಎಂಬುದಾಗಿದೆ..

 

ಒಮ್ಮೆ, ಫೋರ್ಬ್ಸ್ ಮ್ಯಾಗಸಿನ್ ನ ಫೋರ್ಬ್ಸ್ ಒಂದು ಆಸಕ್ತಿದಾಯಕ ವ್ಯಾಖ್ಯೆಯನ್ನು ಕೊಟ್ಟಿದ್ದರು. ಅವರು ಹೇಳಿದ್ದೇನೆಂದರೆ ಜ್ಞಾನದ ಉದ್ದೇಶ ಹೊಸ ಕೆಲಸಗಳನ್ನು ಮಾಡಲು ನಮ್ಮ ಮೆದುಳಿನಲ್ಲಿ ಹೊಸ ವಿಷಯಗಳನ್ನುತುಂಬಿಸುವುದಕ್ಕಾಗಿ ಮೆದುಳನ್ನು ಖಾಲಿ ಮಾಡುವುದು. ಅವರು ಹೇಳುತ್ತಿದ್ದರು- ಜ್ಞಾನ ಮೆದುಳನ್ನು ಖಾಲಿ ಮಾಡಬೇಕು ಮತ್ತು ಚಿಂತನೆಯನ್ನು ವಿಸ್ತರಿಸಬೇಕು . ನಮ್ಮ ಚಿಂತನೆ ಮೆದುಳಿಗೆ ಕೆಲಸ ಕೊಡಬೇಕು . ನಿಜವಾಗಿಯೂ ನಮಗೆ ಬದಲಾವಣೆ ತರಬೇಕು ಎಂದಿದ್ದರೆ, ನಾವೆಲ್ಲರೂ ನಮ್ಮ ಮನೋಭೂಮಿಕೆಯನ್ನು ವಿಸ್ತರಿಸಲು ಆಂದೋಲನವನ್ನು ಆರಂಭಿಸಬೇಕು, ಆಗ ಹೊಸ ಯೋಚನೆಗಳು/ಚಿಂತನೆಗಳು ನಮ್ಮ ಮನಸ್ಸನ್ನು ಪ್ರವೇಶಿಸುತ್ತವೆ. ಆದ್ದರಿಂದ ವಿಶ್ವವಿದ್ಯಾಲಯಗಳು ಕಲಿಕೆಗೆ ಅವಕಾಶ ಒದಗಿಸಬೇಕೇ ಹೊರತು ಬೋಧನೆಗೆ ಅಲ್ಲ. ಆ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳನ್ನು ನಾವು ಕೊಂಡೊಯ್ಯುವುದು ಹೇಗೆ?.

ಮಾನವ ಸಂಸ್ಕೃತಿ ಉಗಮಗೊಂಡಂದಿನಿಂದ ಒಂದು ವಿಷಯದಲ್ಲಿ ದೃಢತೆ ಇದೆ, ಅದೆಂದರೆ ನಾವೀನ್ಯತೆ. ಪ್ರತೀ ಯುಗದಲ್ಲಿಯೂ, ಶಕೆಯಲ್ಲಿಯೂ ಮಾನವರು ತಮ್ಮ ಜೀವನ ಶೈಲಿಗೆ ಒಂದಷ್ಟು ಹೊಸತನ್ನು ಸೇರಿಸಿಕೊಳ್ಳುತ್ತಾ ಬಂದಿದ್ದಾರೆ. ಇವತ್ತು ಹೊಸದು, ನಾವೀನ್ಯತೆ ಸ್ಪರ್ಧಾತ್ಮಕವಾಗಿದೆ. ಹೊಸತನಕ್ಕೆ , ನಾವೀನ್ಯತೆಗೆ ಆದ್ಯತೆ ಕೊಟ್ಟ ದೇಶ ಮಾತ್ರ ಇಂದು ವಿಶ್ವದಲ್ಲಿ ಮುಂದುವರಿಯಲು ಸಾಧ್ಯ. ಆದರೆ ಸಂಸ್ಥೆಗಳಿಗೆ ಬರೇ ಸೌಂದರ್ಯ್ದ ಬದಲಾವಣೆ ಮಾಡಿದರೆ ಅದು ಪರಿವರ್ತನೆ ಎಂದು ಪರಿಗಣಿಸಲಾಗದು. ಈ ಹೊತ್ತಿನ ಆವಶ್ಯಕತೆ ಎಂದರೆ ಹಳೆಯ ಮತ್ತು ಇಂದಿನ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬಾರದ ಯೋಚನೆಗಳನ್ನು/ಚಿಂತನೆಗಳನ್ನು ಕೈಬಿಟ್ಟು,

ಭವಿಷ್ಯವನ್ನು ಗಳಿಸಲು ಹೊಸ ದಾರಿಗಳನ್ನು ಅನ್ವೇಷಿಸುವುದು, ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿ ಜೀವನ ಶೈಲಿಯ ಸುಧಾರಣೆಗೆ ಸಂಪನ್ಮೂಲಗಳನ್ನು ವ್ಯವಸ್ಥೆಗೊಳಿಸುವುದು. ಇಂದು ಪ್ರತೀ ರಂಗವೂ ತಂತ್ರಜ್ಞಾನದ ಸಹಾಯದಿಂದ ಬದಲಾಗಬೇಕಾಗಿದೆ ಮತ್ತು ಸಮಾಜ ಕೂಡಾ ಅದರ ಪ್ರಗತಿಗೆ ಹೊಸ ಹಾದಿಗಳನ್ನು ಹುಡುಕಬೇಕಾದ ಅಗತ್ಯವಿದೆ. ಹಾಗಾಗಿ ಸ್ಪರ್ದೆ ಇಂದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದರಿಂದ ವಿಶ್ವವಿದ್ಯಾಲಯಗಳು ಭಿವಿಷ್ಯದ ಜನಾಂಗದ ಆವಶ್ಯಕತೆಗಳನ್ನು ಈಡೇರಿಸಲು ಪ್ರಮುಖ ಪಾತ್ರವನ್ನು ವಹಿಸಬಲ್ಲವು. ನಾವು ಇಂದು ದೇಶದೊಳಗೆ ಅಥವಾ ನೆರೆ ರಾಷ್ಟ್ರಗಳ ಜತೆ ಮಾತ್ರ ಸ್ಪರ್ಧಿಸುತ್ತಿದ್ದೇವೆ ಎನ್ನಲಾಗದು. ಸ್ಪರ್ಧಾತ್ಮಕತೆ ಜಾಗತೀಕರಣಗೊಂಡಿದೆ. ಆದ್ದರಿಂದ ನಾವು ಈ ಸ್ಪರ್ಧೆಯನ್ನು ಒಂದು ಸವಾಲು ಎಂದು ಪರಿಗಣಿಸಬೇಕು. ದೇಶ ಪ್ರಗತಿ ಹೊಂದಬೇಕಿದ್ದರೆ, ಹೊಸ ಎತ್ತರಕ್ಕೆ ಏರಬೇಕಿದ್ದರೆ ಮತ್ತು ಜಾಗತಿಕ ಕ್ಷಿತಿಜದಲ್ಲಿ ಸ್ಥಾನ ಪಡೆಯಬೇಕಿದ್ದರೆ ಆಗ ನಮ್ಮ ಯುವ ಜನಾಂಗ ನಾವೀನ್ಯತೆ/ಅನ್ವೇಷಣೆಗೆ ಹೆಚ್ಚಿನ ಒತ್ತು ಕೊಡಬೇಕು.

ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಕ್ರಾಂತಿ ಉದ್ಭವಿಸಿದ ಬಳಿಕ ಭಾರತದ ಕುರಿತಂತೆ ವಿಶ್ವದಲ್ಲಿ ಇದ್ದ ಅಭಿಪ್ರಾಯ ಬದಲಾಗತೊಡಗಿತು. ಅದಕ್ಕೆ ಮೊದಲು ಭಾರತವೆಂದರೆ ಹಾವಾಡಿಗರ ದೇಶ ಎಂಬ ನಂಬಿಕೆ ವಿಶ್ವದ್ದಾಗಿತ್ತು. ಭಾರತೀಯರೆಂದರೆ ಮಂತ್ರ ಮಾಟ ಮಾಡುವವರು, ಭೂತಗಳು ಮತ್ತು ಮೂಢನಂಬಿಕೆಯವರು ಎಂದು ಸಾಮಾನ್ಯವಾಗಿ ನಂಬಿತ್ತು. ಆದರೆ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಬಳಿಕ ಯುವ ತಲೆಮಾರಿನ ತಾಂತ್ರಿಕ ಪರಿಣತಿಯನ್ನು ಅದು ಅಚ್ಚರಿಯಿಂದ ನೋಡತೊಡಗಿತು. ಭಾರತದ 18-20 ವರ್ಷ ವಯಸ್ಸಿನ ಯುವಕರು ತಮ್ಮ ಮಾಹಿತಿ ತಂತ್ರಜ್ಞಾನ ಕ್ಶೇತ್ರದ ಪ್ರಾವೀಣ್ಯವನ್ನು ತೋರ್ಪಡಿಸಲು ತೊಡಗಿದಾಗ ಭಾರತದ ಕುರಿತಂತೆ ಇದ್ದ ಧೋರಣೆ ಬದಲಾಯಿತು.

ಬಹಳ ಕಾಲದ ಹಿಂದೆ ನಾನು ಥೈವಾನಿಗೆ ಭೇಟಿ ನೀಡಿದ್ದೆ, ನಾನದನ್ನು ಸ್ಪಷ್ಟವಾಗಿ ನೆನಪಿಟ್ಟುಕೊಂಡಿದ್ದೇನೆ.ಆಗ ನಾನು ಮುಖ್ಯಮಂತ್ರಿ ಕೂಡಾ ಆಗಿರಲಿಲ್ಲ. ಮತ್ತು ಚುನಾವಣೆಯ ಜತೆ ಸಂಪರ್ಕವೂ ಇರಲಿಲ್ಲ. ನಾನಲ್ಲಿಗೆ ಥೈವಾನ್ ಸರಕಾರದ ಆಮಂತ್ರಣದ ಮೇರೆಗೆ ಹೋಗಿದ್ದೆ. ಅದು 10 ದಿನಗಳ ಪ್ರವಾಸ. ಸಂಭಾಷಣೆಯ ಭಾಷಾಂತರಕ್ಕೆ ಭಾಷಾಂತರಕಾರರನ್ನು ನನಗೆ ಒದಗಿಸಲಾಗಿತ್ತು. ಆ ಹತ್ತು ದಿನಗಳಲ್ಲಿ ನಾವು ಸಣ್ಣ ಮಟ್ಟಿನ ಸ್ನೇಹಾಚಾರವನ್ನು ಬೆಳೆಸಿಕೊಂಡಿದ್ದೆವು. ಆರು ಅಥವಾ ಏಳು ದಿನಗಳ ನಂತರ ಅವರು ನಾನೇನಾದರೂ ನಿಮ್ಮ ಬಗ್ಗೆ ಕೇಳಿದರೆ ತಪ್ಪು ತಿಳಿದುಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು. ನಾನು ಹೇಳಿದೆ- ನೀವು ಮುಂದುವರಿಯಿರಿ ಎಂದು. ಆದರೆ ಅವರು ಭಾರೀ ಹಿಂಜರಿಕೆಯಲ್ಲಿದ್ದರು ಮತ್ತು ಏನನ್ನೂ ಕೇಳಲಿಲ್ಲ. ಬಳಿಕ ಪ್ರಯಾಣದಲ್ಲಿರುವಾಗ ನಾನವರನ್ನು ಕೇಳಿದೆ-ಆ ದಿನ ನೀವು ನನ್ನನ್ನು ಏನು ಕೇಳಲಿಕ್ಕಿತ್ತು ಎಂದು. ಅವರು ಮತ್ತೂ ಹಿಂಜರಿಕೆ ಬಿಡಲಿಲ್ಲ. ನಾನವರಿಗೆ ಹೇಳಿದೆ, ಏನೂ ತೊಂದರೆ ಇಲ್ಲ ಮತ್ತು ಅವರು ಮುಕ್ತವಾಗಿ ನನ್ನನ್ನು ಕೇಳಬಹುದು ಎಂದು. ಅವರು ಕಂಪ್ಯೂಟರ್ ಇಂಜಿನಿಯರ್. ಆಮೇಲೆ ಅವರು ಕೇಳಿದರು , ಭಾರತ ಇನ್ನೂ ಹಾಗೇ ಇದೆಯಾ: ಹಾವಾಡಿಗರು, ಮಾಟ ಮಂತ್ರಗಳು, ಮೂಢನಂಬಿಕೆಗಳೇ ಅಲ್ಲಿವೆಯಾ ಎಂದು. ಅವರು ನನ್ನನ್ನು ದೃಷ್ಟಿಸುತ್ತಾ ಇದ್ದರು. ನಾನವರಿಗೆ ಕೇಳಿದೆ-ನಿಮಗೆ ನನ್ನನ್ನು ನೋಡಿದ ಮೇಲೆ ಏನನಿಸುತ್ತದೆ. ಅವರು ಮುಜುಗುರಕ್ಕೆ ಒಳಗಾದರು ಮತ್ತು ಕ್ಷಮೆ ಕೇಳಲು ಪ್ರಾರಂಭಿಸಿದರು. ನಾನು ಹೇಳಿದೆ ’ಇಲ್ಲ ಸಹೋದರ, ಇವತ್ತಿನ ಭಾರತ ಹಾಗೆ ಇಲ್ಲ. ಮತ್ತು ಅಲ್ಲಿ ಮೌಲ್ಯಮಾಪನವಿದೆ”. ಆ ಮೇಲೆ ಅವರು ಕೇಳಿದರು “ಹೇಗೆ”? . ನಾನು ಹೇಳಿದೆ ನಮ್ಮ ಪೂರ್ವಜರು ಹಾವುಗಳೊಂದಿಗೆ ಆಟವಾಡುತ್ತಿದ್ದರು ಮತ್ತು ಈಗಿರುವ ತಲೆಮಾರು ಇಲಿ (ಮೌಸ್ ) ಜತೆ ಆಟವಾಡುತ್ತದೆ!. ಅವರಿಗೆ ಅರ್ಥವಾಯಿತು ನಾನು ಹೇಳಿದ ಇಲಿ ಪ್ರಾಣಿಯಲ್ಲ ಮತ್ತು ಅದು ಕಂಪ್ಯೂಟರ್ ಗಳಲ್ಲಿ ಬಳಸುವಂತಹದ್ದು ಎಂಬುದು.

ನಾನು ಏನನ್ನು ಹೇಳಲು ಬಯಸುತ್ತೇನೆ ಎಂದರೆ, ಈ ಸಂಗತಿಗಳು ದೇಶದ ಶಕ್ತಿಯನ್ನು ಹೆಚ್ಚಿಸುತ್ತವೆ. ಕೆಲವೊಮ್ಮೆ ನಾವು ಒಂದೆರಡು ಯೋಜನೆಗಳನ್ನು ಹಾಕಿಕೊಂಡು ಪ್ರಶಸ್ತಿಗಳನ್ನು ಗಳಿಸುತ್ತೇವೆ. ಆದರೆ ಈ ಕ್ಷಣದ ಅಗತ್ಯವೇನೆಂದರೆ ದೊಡ್ಡ ಪ್ರಮಾಣದಲ್ಲಿ, ವಿಸ್ತಾರ ವ್ಯಾಪ್ತಿಯಲ್ಲಿ ನಾವೀನ್ಯತೆ ಮತ್ತು ಅನ್ವೇಷಣೆ. ನಾನು ಯುವಜನರಿಗೆ ಮನವಿ ಮಾಡುತ್ತೇನೆ-ವಿದ್ಯಾರ್ಥಿಗಳನ್ನು, ಸಿಬಂದಿಗಳನ್ನು ಮತ್ತು ವಿಶವಿದ್ಯಾಲಯಗಳನ್ನು ಕೋರಿಕೊಳ್ಳುತ್ತೇನೆ, ಏನೆಂದರೆ ನೂರು ವರ್ಷ ಹಳೆಯ ಪಾಟ್ನಾ ವಿಶ್ವವಿದ್ಯಾಲಯದ ಪವಿತ್ರ ಮಣ್ಣಿನ ಸಾರವನ್ನು ಹೀರಿ ವರ್ತಮಾನ ಕಾಲದ ಭಾರತ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ನವೀನ ದಾರಿಗಳನ್ನು ಅನ್ವೇಷಿಸಲು ಮುಂದೆ ಬರಬೇಕು. ನಾವು ಕಡಿಮೆ ಖರ್ಚಿನ , ಎಲ್ಲರಿಗೂ ಕೈಗೆಟುಕಬಲ್ಲಂತಹ ಸರಳ ಮತ್ತು ಬಳಕೆದಾರ ಸ್ನೇಹಿ ಸೂಕ್ತ ತಂತ್ರಜ್ಞಾನವನ್ನು ಹುಡುಕಬಲ್ಲೆವೇ?.ನಾನು ಇಂತಹ ಸಣ್ಣ ಯೋಜನೆಗಳಿಗೆ ಬೆಂಬಲ ಪ್ರೋತ್ಸಾಹ ನೀಡಿದರೆ ಆಗ ಅವುಗಳು ಸ್ಟಾರ್ಟಪ್ ಗಳಾಗಿ ಪರಿವರ್ತನೆಗೊಳ್ಳುತ್ತವೆ. ಮುದ್ರಾ ಯೋಜನೆಯಡಿ ಬ್ಯಾಂಕುಗಳಿಂದ ಹಣಕಾಸು ಬಳಸಿಕೊಂಡು ವಿಶ್ವವಿದ್ಯಾಲಯ ಶಿಕ್ಷಣದಲ್ಲಿ ನಾವೀನ್ಯತೆ ಅನ್ವೇಷಿಸುವ ಸ್ಟಾರ್ಟಪ್ ಗಳನ್ನು ಯುವಕರು ಅಭಿವೃದ್ಧಿಪಡಿಸಬಲ್ಲರು. ನೀವು ಊಹಿಸಬಲ್ಲಿರಾ, ಇಂದಿನ ಭಾರತ : ವಿಶ್ವದ ನಾಲ್ಕನೇ ಅತಿ ದೊಡ್ಡ ಸ್ಟಾರ್ಟಪ್ ಗಳ ತಾಣ. ಭಾರತಕ್ಕೆ ಇದರಲ್ಲಿ ಪ್ರಥಮ ಸ್ಥಾನ ಪಡೆಯುವುದಕ್ಕೂ ಸಾಧ್ಯವಿದೆ. ಭಾರತದ ಪ್ರತಿಯೊಬ್ಬ ಯುವಕರೂ ಸ್ಟಾರ್ಟಪ್ ನ ಹೊಸ ಆಲೋಚನೆ/ಚಿಂತನೆ ಹೊಂದಿದ್ದರೆ ಆಗ ಅದರ ಫಲಿತಾಂಶ ಕ್ರಾಂತಿಕಾರಿ ಬದಲಾವಣೆಯನ್ನು ತರುತ್ತದೆ. ಆದ್ದರಿಂದ ನಾನು ಭಾರತದ ವಿಶ್ವವಿದ್ಯಾಲಯಗಳಿಗೆ , ಅದರಲ್ಲೂ ಪಾಟ್ನಾದ ವಿಶ್ವವಿದ್ಯಾಲಯಕ್ಕೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು ಆಹ್ವಾನ ನೀಡುತ್ತೇನೆ. ಈ ವಿಶ್ವದಲ್ಲಿ ನಾವು ಮುಂದಕ್ಕೆ ಹೋಗಬೇಕಿದೆ.

ಭಾರತದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಭಾರತವು 800 ಮಿಲಿಯನ್ ಅಥವಾ ದೇಶದ ಜನಸಂಖ್ಯೆಯ 65 ಶೇಖಡಾ ಜನರು 35 ವರ್ಷಕ್ಕಿಂತ ಕೆಳಗಿನ ವಯೋಮಿತಿಯವರಾಗಿರುವುದು ಒಂದು ಅದೃಷ್ತದ ಸಂಗತಿ. ಭಾರತ ಯುವ ದೇಶ ಮತ್ತು ಅದರ ಕನಸುಗಳು ಕೂಡಾ ಯುವ ಹರೆಯದವು. ಇಂತಹ ಬಲವನ್ನು ಹೊಂದಿರುವ ದೇಶ ಏನು ಬೇಕಾದರೂ ಸಾಧಿಸಬಹುದು ಮತ್ತು ಅದರ ಎಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂದು ನಾನು ನಂಬುತ್ತೇನೆ.

 

ಮತ್ತು , ಈಗಾಗಲೇ ನಿತೀಶ್ ಜೀ ಅವರು ಒಂದು ವಿಷಯವನ್ನು ವಿವರವಾಗಿ ಮುಂದಿಟ್ಟಿದ್ದಾರೆ, ಮತ್ತು ನೀವೆಲ್ಲರೂ ಇದನ್ನು ಚಪ್ಪಾಳೆ ತಟ್ಟುವ ಮೂಲಕ ಬೆಂಬಲಿಸಿದ್ದೀರಿ. ಆದರೆ ನನ್ನ ಭಾವನೆ ಏನೆಂದರೆ ಕೇಂದ್ರೀಯ ವಿಶ್ವವಿದ್ಯಾಲಯ ಭೂತಕಾಲದ ವಿಷಯ. ನಾನಿದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಕೊಂಡೊಯ್ಯಲು ಬಯಸುತ್ತೇನೆ. ಮತ್ತು ನಾನಿಂದು ಈ ವಿಶ್ವವಿದ್ಯಾಲಯದ ಕಾರ್ಯಕ್ರಮಕ್ಕೆ ಬಂದಿರುವುದು ನಿಮ್ಮನ್ನೆಲ್ಲ ಈ ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕಾಗಿ. ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಸುಧಾರಣೆಗಳು ಅತ್ಯಂತ ನಿಧಾನಗತಿಯಿಂದ ಸಾಗಿವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಅತ್ಯಂತ ತೀವ್ರವಾಗಿವೆ. ಆದ್ದರಿಂದ ಪ್ರತೀ ಹಂತದಲ್ಲಿ ಸುಧಾರಣೆಗಳಿಗೆ ಬದಲಾಗಿ ಸಮಸ್ಯೆಗಳು ಹುಟ್ಟಿಕೊಳುತ್ತಿವೆ. ನಾವೀನ್ಯತೆ ಮತ್ತು ಸುಧಾರಣೆಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಅದರಲ್ಲೂ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಿದೆ, ಮತ್ತು ವಿಶ್ವ ದರ್ಜೆಯನ್ನು ತಲುಪಲು ಅವುಗಳು ಅವಶ್ಯವಾಗಿವೆ. ಆದರೆ ಅವುಗಳದ್ದೇ ಕೊರತೆ ಈಗಿದೆ. ಈ ಸರಕಾರ ಕೆಲವು ಅತ್ಯಂತ ಧೈರ್ಯದ ಕ್ರಮಗಳನ್ನು ಕೈಗೊಂಡಿದೆ.

ಐ.ಐ.ಎಂ.ಗಳಿಗೆ ಸ್ವಾಯತ್ತೆ ವಿಷಯ ಕಳೆದ ಕೆಲ ಸಮಯದಿಂದ ವ್ಯಾಪಕ ಚರ್ಚೆಯಾಗುತ್ತಿದೆ. ಈ ಸಂಸ್ಥೆಗಳಿಗೆ ಸರಕಾರ ದೊಡ್ಡ ಮೊತ್ತವನ್ನು ವ್ಯಯಿಸುತ್ತಿದೆ, ಆದರೆ ಈ ಸಂಸ್ಥೆಗಳು ಸರಕಾರದಿಂದ ಯಾವುದೇ ನಿರ್ದೇಶನಗಳನ್ನು ಪಡೆಯುತ್ತಿಲ್ಲ. ಈ ಚರ್ಚೆ ನಡೆಯುತ್ತಿರುವ ಹಲವು ವರ್ಷಗಳ ಬಳಿಕ, ಇದೇ ಮೊದಲ ಬಾರಿಗೆ ಐ.ಐ.ಎಂ.ನ್ನು ಸಂಪೂರ್ಣವಾಗಿ ಸ್ವತಂತ್ರಗೊಳಿಸಲಾಯಿತು ಮತ್ತು ಪೂರ್ಣವಾಗಿ ವೃತ್ತಿಪರಗೊಳಿಸಲಾಯಿತು ಎಂಬುದನ್ನು ತಿಳಿಯಲು ನೀವು ಹರ್ಷಿಸುತ್ತೀರಿ. ಕೆಲವು ವೃತ್ತಪತ್ರಿಕೆಗಳು ಇದಕ್ಕೆ ವ್ಯಾಪಕ ಪ್ರಚಾರ ಕೊಡಲಿಲ್ಲ. ಆದರೆ ಕೆಲವು ಲೇಖನಗಳು ಖಂಡಿತವಾಗಿ ಬರೆಯಲ್ಪಟ್ಟಿವೆ.ಇದೊಂದು ದೊಡ್ಡ ನಿರ್ಧಾರ.

ಐ.ಎ.ಎಸ್., ಐ.ಪಿ.ಎಸ್., ಐ.ಎಫ಼್.ಎಸ್.ಗಳನ್ನು ಸೃಷ್ಟಿಸುತ್ತಿರುವ ಪಾಟ್ನಾ ವಿಶ್ವವಿದ್ಯಾಲಯದಂತೆ , ಅದೇ ರೀತಿ ದೇಶಾದ್ಯಂತ ಐ.ಐ.ಎಂ. ಗಳು ಸಿ.ಇ.ಒ.ಗಳನ್ನು ಸೃಷ್ಟಿಸುತ್ತಿವೆ. ಆದ್ದರಿಂದ ನಾವು ಪ್ರತಿಷ್ಟಿತ ಸಂಸ್ಥೆಗಳನ್ನು ಸರಕಾರದ ನಿಯಮ ಮತ್ತು ನಿಬಂಧನೆಗಳಿಂದ ವಿಮೋಚನೆ ಮಾಡಲು ನಿರ್ಧರಿಸಿದೆವು.ಈಗ ಐ.ಐ.ಎಂ.ಗಳಿಗೆ ಈ ಅವಕಾಶ ನೀಡಲಾಗಿದೆ ಎಂದು ನಾನು ನಂಬಿದ್ದೇನೆ.ಇದರಿಂದ ದೇಶದ ಆಶೋತ್ತರಗಳು ಮತ್ತು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಲಿದೆ. ಐ.ಐ.ಎಂ.ಗಳ ಆಡಳಿತ ನಿರ್ವಹಣೆಯಲ್ಲಿ ಅವುಗಳ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆಯೂ ನಾನು ಕೋರಿಕೊಂಡಿದ್ದೇನೆ. ಪಾಟ್ನಾ ವಿಶ್ವವಿದ್ಯಾಲಯವೂ ತನ್ನ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಅದರ ಶ್ರೀಮಂತ ಮತ್ತು ಸಮರ್ಥ ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೆ ಗೊತ್ತಿರಬಹುದು, ವಿಶ್ವದ ಎಲ್ಲ ಶ್ರೇಷ್ಟ ವಿಶವಿದ್ಯಾಲಯಗಳಲ್ಲಿ ಅದರ ಹಿರಿಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ನೀವೆಲ್ಲ ಗಮನ ಹರಿಸಿರಬಹುದು. ಇವರೆಲ್ಲ ಹಣಕಾಸಿನ ದೃಷ್ಟಿಯಿಂದ ಮಾತ್ರವಲ್ಲ ಬುದ್ಧಿಮತ್ತೆ, ಪರಿಣತಿ, ಅನುಭವ, ಸ್ಥಾನ ಮತ್ತು ಮಾನಗಳ ವಿಷಯದಲ್ಲಿಯೂ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ನಾವು ಸಾಮಾನ್ಯವಾಗಿ ಹಿರಿಯ ವಿದ್ಯಾರ್ಥಿಗಳನ್ನು ಕೆಲವು ಕಾರ್ಯಕ್ರಮಗಳಿಗೆ ಕರೆದು ಹಾರ ಹಾಕಿ ಗೌರವಿಸುತ್ತೇವೆ. ಅವರಿಂದ ದೇಣಿಗೆ ಪಡೆಯುತ್ತೇವೆ.ಮತ್ತು ನಮ್ಮ ಸಹಯೋಗ ಅಲ್ಲಿಗೆ ಮುಗಿಯುತ್ತದೆ. ಹಿರಿಯ ವಿದ್ಯಾರ್ಥಿಗಳು ತಮ್ಮಲ್ಲಿ ಬಲಿಷ್ಟ ಶಕ್ತಿಯನ್ನು ಹೊಂಡಿದ್ದಾರೆ. ಆದ್ದರಿಂದ ವಿಶ್ವವಿದ್ಯಾಲಯದ ಜತೆ ಅವರ ಸಹಭಾಗಿತ್ವ ಸಾಂಕೇತಿಕವಾಗಿರದೆ ಅದಕ್ಕಿಂತ ಹೆಚ್ಚಿನದಾಗಿರಬೇಕು.

 

ಸ್ವಲ್ಪ ಸಮಯದ ಹಿಂದೆ ನಾನು ಇದನ್ನು ಕೇಂದ್ರೀಯ ವಿಶ್ವವಿದ್ಯಾಲಯವನ್ನಾಗಿ ಮಾಡುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಯೋಚನೆ ಮಾಡಿದ್ದೆ. ಮತ್ತು ನಾನು ಪಾಟ್ನಾ ವಿಶವಿದ್ಯಾಲಯಕ್ಕೆ ಬಂದಿರುವುದೂ ಈ ನಿಟ್ಟಿನಲ್ಲಿ ಆಹ್ವಾನ ನೀಡುವುದಕ್ಕೆ. ಬಾರತ ಸರಕಾರವು ದೇಶದ ವಿಶ್ವ ವಿದ್ಯಾಲಯಗಳ ಮುಂದೆ ಕನಸೊಂದನ್ನು ಇಟ್ಟಿದೆ. ವಿಶ್ವದ ಅತ್ಯುಚ್ಚ 500 ವಿಶ್ವವಿದ್ಯಾಲಯಗಳಲ್ಲಿ ಭಾರತದ ವಿಶ್ವವಿದ್ಯಾಲಯಗಳು ಯಾವುದೇ ಸ್ಥಾನವನ್ನು ಪಡೆದಿಲ್ಲ. ನಲಂದಾ,ವಿಕ್ರಮಶಿಲಾ, ತಕ್ಸಿಲಾ, ವಲ್ಲಬ್ಭಿಯಂತಹ ವಿಶ್ವವಿದ್ಯಾಲಯಗಳು 1,300 ಅಥವಾ 1,500 ವರ್ಷಗಳ ಹಿಂದೆ ಇಡೀ ವಿಶ್ವದ ಗಮನ ಸೆಳೆದಿದ್ದವು ಎಂಬುದನ್ನು ನೆನಪಿಸಿಕೊಂದರೆ ಇಂದು ವಿಶ್ವದ ಅತ್ಯುಚ್ಚ 500 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯ ಸ್ಥಾನ ಪಡೆದಿಲ್ಲದಿರುವುದು ವಿಪರ್ಯಾಸದ/ವಿಷಾದದ ಸಂಗತಿ ಎಂದು ನೀವು ಭಾವಿಸುವುದಿಲ್ಲವೇ ?. ಇದನ್ನು ತೊಡೆದು ಹಾಕಿ ನಾವು ಪರಿಸ್ಥಿತಿಯನ್ನು ಬದಲಾಯಿಸಬೇಕೆಂದು ನಿಮಗನಿಸುವುದಿಲ್ಲವೇ.?. ನಾವು ಪರಿಸ್ಥಿತಿಯನ್ನು ಬದಲಾಯಿಸಬೇಕೇ ಹೊರತು ಹೊರಗಿನವರನ್ನಲ್ಲ. ನಾವು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಅದರ ಈಡೇರಿಕೆಗಾಗಿ ಕಠಿಣ ಪರಿಶ್ರಮ ಮಾಡಬೇಕು.

ಇದನ್ನು ಸಾಧಿಸಲು ಭಾರತ ಸರಕಾರ ತನ್ನ ಯೋಜನೆಯ ಮೂಲಕ 10 ಸಾರ್ವಜನಿಕ ಮತ್ತು 10 ಖಾಸಗಿ ವಿಶ್ವವಿದ್ಯಾಲಯಗಳು ಸೇರಿ ಒಟ್ಟು 20 ವಿಶ್ವವಿದ್ಯಾಲಯಗಳನ್ನು ಸರಕಾರಿ ನಿಯಮ ಮತ್ತು ನಿಯಂತ್ರಣಗಳಿಂದ ವಿಮೋಚನೆಗೊಳಿಸಿ ವಿಶ್ವ ದರ್ಜೆಯ ಮಟ್ಟಕ್ಕೇರಿಸಲು ಇಚ್ಚಿಸಿದೆ. ಈ ವಿಶವಿದ್ಯಾಲಯಗಳಿಗೆ 5 ವರ್ಷದ ಅವಧಿಯಲ್ಲಿ 10,000 ಕೋ.ರೂ.ಗಳನ್ನು ಒದಗಿಸಲಾಗುವುದು. ಈ ಕ್ರಮಗಳು ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವೆಂದು ಘೋಷಿಸುವುದಕ್ಕಿಂತ ಬಹಳ ಹೆಚ್ಚಿನ ಮುಂದುವರಿದ ಕ್ರಮಗಳು. ಈ ವಿಶ್ವವಿದ್ಯಾಲಯಗಳನ್ನು ರಾಜಕಾರಣಿಗಳ ಇಚ್ಚಾನುಸಾರ ಆಯ್ಕೆ ಮಾಡುವುದಿಲ್ಲ.ಅಥವಾ ಪ್ರಧಾನ ಮಂತ್ರಿಯವರಾಗಲೀ, ಮುಖ್ಯಮಂತ್ರಿಯವರಾಗಲೀ ಆಯ್ಕೆ ಮಾಡುವುದಲ್ಲ. ಅದನ್ನು ಮುಕ್ತ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಸವಾಲಿಗೆ ಎಲ್ಲ ವಿಶ್ವವಿದ್ಯಾಲಯಗಳಿಗೂ ಆಹ್ವಾನಿಸಲಾಗುತ್ತದೆ. ಈ ಸವಾಲನ್ನು ಎದುರಿಸುವ ಮೂಲಕ ಆ ವಿಶ್ವವಿದ್ಯಾಲಯಗಳು ತಮ್ಮ ಸಾಮರ್ಥ್ಯ ತೋರಿಸಬೇಕಾಗುತ್ತದೆ. ಈ ರೀತಿಯಲ್ಲಿ ಅತ್ಯುಚ್ಚ 10 ಸಾರ್ವಜನಿಕ ಮತ್ತು 10 ಖಾಸಗಿ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಿಮ ಆಯ್ಕೆಯನ್ನು ವೃತ್ತಿಪರರ ಏಜೆನ್ಸಿಯಿಂದ ಮಾಡಲಾಗುತ್ತದೆ. ಈ ಸವಾಲಿನ ಗುಂಪಿಗೆ ರಾಜ್ಯಸರಕಾರಗಳು ಮತ್ತು ವಿಶ್ವವಿದ್ಯಾಲಯಗಳು ಹೊಣೆ. ಅವುಗಳ ಕಾರ್ಯವೈಖರಿಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವುಗಳ ಹಾದಿಯನ್ನೂ ಮೌಲ್ಯಮಾಪನ ಮಾಡಲಾಗುತ್ತದೆ. ಮತ್ತು ಅತ್ಯುಚ್ಚ ವಿಶ್ವವಿದ್ಯಾಲಯಗಳನ್ನು ಸರಕಾರಿ ನಿಯಂತ್ರಣದಿಂದ ಮುಕ್ತ ಮಾಡಿ, ಅವುಗಳಿಗೆ ಸ್ವಾಯತ್ತೆ ನೀಡಲಾಗುತ್ತದೆ. ಅವುಗಳು ತಮ್ಮ ಪ್ರಗತಿ ಪಥವನ್ನು ರೂಪಿಸಿಕೊಳ್ಳಲು ಸ್ವತಂತ್ರವಾಗಿರುತ್ತವೆ. 5 ವರ್ಷದೊಳಗೆ ಈ ವಿಶ್ವವಿದ್ಯಾಲಯಗಳಿಗೆ 10,000 ಕೋ.ರೂ. ಒದಗಿಸಲಾಗುವುದು. ಈ ಚಿಂತನೆ/ಕ್ರಮ ಕೇಂದ್ರೀಯ ವಿಶ್ವವಿದ್ಯಾಲಯದ ಚಿಂತನೆ/ಕ್ರಮಕ್ಕಿಂತ ಹಲವು ಹೆಜ್ಜೆ ಮುಂದಿನದಾಗಿದೆ. ಇದೊಂದು ದೊಡ್ಡ ನಿರ್ಧಾರ ಮತ್ತು ಇದರಲ್ಲಿ ಪಾಟ್ನಾ ಹಿಂದುಳಿಯಬಾರದು. ಆದ್ದರಿಂದ ಪಾಟ್ನಾ ವಿಶ್ವವಿದ್ಯಾಲಯಕ್ಕೆ ಆಹ್ವಾನ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ನಾನು ಈ ವಿಶ್ವವಿದ್ಯಾಲಯ ಮತ್ತು ಅದಕ್ಕೆ ಸಂಬಂಧ ಪಟ್ಟ ಅಂಗಗಳು ಮುಂದೆ ಬಂದು ಬಹಳ ಮುಖ್ಯವಾದ ಈ ಯೋಜನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಂದು ಕೋರುತ್ತೇನೆ. ಈ ಹೊಳೆಯುವ ಪ್ರಭಾವಳಿಯ ಪಾಟ್ನಾ ವಿಶ್ವವಿದ್ಯಾಲಯ ವಿಶ್ವ ನಕಾಶೆಯಲ್ಲಿ ತನ್ನ ಸ್ಥಾನವನ್ನು ರೂಪಿಸಿಕೊಳ್ಳಬೇಕು ಎಂದು ನಾನು ಆಶಿಸುತ್ತೇನೆ. ಪಾಟ್ನಾ ವಿಶ್ವವಿದ್ಯಾಲಯವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಲು ನಿಮ್ಮ ಸಹಕಾರವನ್ನು ನಾನು ಕೋರುತ್ತೇನೆ. ನಿಮಗೆಲ್ಲರಿಗೂ ನನ್ನ ಶುಭಾಶಯಗಳು.

ನೀವು ಈ ಶ್ತತಮಾನೋತ್ಸವ ಆಚರಣೆ ಸಂಧರ್ಭದಲ್ಲಿ ಮಾಡಿದ ಎಲ್ಲ ನಿರ್ಧಾರಗಳನ್ನು ಈಡೇರಿಸಿಕೊಳ್ಳಬೇಕು . ಈ ಭಾವನೆಯೊಂದಿಗೆ ನಾನು ನಿಮಗೆಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Indian economy ends 2024 with strong growth as PMI hits 60.7 in December

Media Coverage

Indian economy ends 2024 with strong growth as PMI hits 60.7 in December
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government