​​​​​​​"ಗುರ್ಬಾನಿಯಿಂದ ನಾವು ಪಡೆದ ಮಾರ್ಗದರ್ಶನ ಸಂಪ್ರದಾಯ, ನಂಬಿಕೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವಾಗಿದೆ"
"ಪ್ರತಿ ಪ್ರಕಾಶ ಪರ್ವದ ಬೆಳಕು ದೇಶಕ್ಕೆ ಮಾರ್ಗದರ್ಶನ ನೀಡುತ್ತಿದೆ"
"ಗುರುನಾನಕ್ ದೇವ್ ಅವರ ಆಲೋಚನೆಗಳಿಂದ ಪ್ರೇರಿತವಾದ ದೇಶವು 130 ಕೋಟಿ ಭಾರತೀಯರ ಕ್ಷೇಮಾಭಿವೃದ್ಧಿಯ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ"
"ಆಜಾದಿ ಕಾ ಅಮೃತ ಕಾಲದಲ್ಲಿ, ದೇಶವು ರಾಷ್ಟ್ರದ ವೈಭವ ಮತ್ತು ಆಧ್ಯಾತ್ಮಿಕ ಅಸ್ಮಿತೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಪುನಶ್ಚೇತನಗೊಳಿಸಿದೆ"
"ಅತ್ಯುನ್ನತ ಕರ್ತವ್ಯ ಪ್ರಜ್ಞೆಯನ್ನು ಉತ್ತೇಜಿಸುವ ಸಲುವಾಗಿ, ದೇಶವು ಈ ಕಾಲಘಟ್ಟವನ್ನು ಕರ್ತವ್ಯ ಕಾಲ ಎಂದು ಆಚರಿಸಲು ನಿರ್ಧರಿಸಿದೆ"

वाहेगुरु जी का खालसा, वाहेगुरु जी की फतह, जो बोले सो निहाल! सत् श्री अकाल!

ಗುರುಪೌರಬ್ ನ ಶುಭ ಸಂದರ್ಭದಲ್ಲಿ ತಮ್ಮ ಜೊತೆ ಇರುವ ನಮ್ಮ ಸಹೋದ್ಯೋಗಿ ಶ್ರೀ ಹರ್ದೀಪ್ ಸಿಂಗ್ ಪುರಿ ಜೀ, ಶ್ರೀ ಜಾನ್ ಬರ್ಲಾ ಜೀ, ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಸಿಂಗ್ ಲಾಲಪುರ ಜೀ, ಸಹೋದರ ರಂಜಿತ್ ಸಿಂಗ್ ಜೀ, ಶ್ರೀ ಹರ್ಮೀತ್ ಸಿಂಗ್ ಕಲ್ಕಾ ಜೀ ಮತ್ತು ನನ್ನ ಎಲ್ಲಾ ಸಹೋದರರು ಮತ್ತು ಸಹೋದರಿಯರೇ!

2022 ರ ಪ್ರಕಾಶ್ ಪೌರ್ವ್ ನ ಗುರುಪೌರಬ್ ಸಂದರ್ಭದಲ್ಲಿ ದೇಶದ ಎಲ್ಲಾ ಜನರಿಗೆ ಮತ್ತು ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದೇನೆ. ದೇಶದಲ್ಲಿ ದೇವ್ – ದೀಪಾವಳಿಯನ್ನು ಸಹ ಇಂದು ಆಚರಿಸಲಾಗುತ್ತಿದೆ. ಕಾಶಿಯಲ್ಲಿ ಅತಿದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಲಕ್ಷಾಂತರ ದೀಪಗಳೊಂದಿಗೆ ದೇವತೆಗಳನ್ನು ಸ್ವಾಗತಿಸಲಾಗುತ್ತಿದೆ. ದೇವ್ – ದೀಪಾವಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ!

ಸ್ನೇಹಿತರೇ

ನಾನು ಕಾರ್ಯಕರ್ತನಾಗಿದ್ದಾಗ ದೀರ್ಘ ಸಮಯವನ್ನು ಪಂಜಾಬ್ ನಲ್ಲಿ ಕಳೆದಿದ್ದೇನೆ ಎಂಬುದು ತಮಗೆ ತಿಳಿದಿದೆ. ಆಗಿನ ಕಾಲದಲ್ಲಿ ಗುರು ಪುರಬ್ ಸಂದರ್ಭದಲ್ಲಿ ಅಮೃತಸರದ ಹರ್ಮಂದಿರ್ ಸಾಹಿಬ್ ಗೆ ಹಲವಾರು ಬಾರಿ ನಮಸ್ಕರಿಸುವ ಸುಯೋಗವನ್ನು ನಾನು ಪಡೆದುಕೊಂಡಿದ್ದೇನೆ. ಇದೀಗ ನಾನು ಸರ್ಕಾರದಲ್ಲಿದ್ದೇನೆ. ಗುರುಗಳ ಇಂತಹ ಪ್ರಮುಖ ಹಬ್ಬಗಳು ನಮ್ಮ ಸರ್ಕಾರದ ಆಡಳಿತದೊಂದಿಗೆ ಹೊಂದಿಕೆಯಾಗಿದ್ದರಿಂದ ನಾನು ಮತ್ತು ನನ್ನ ಸರ್ಕಾರ ಅದೃಷ್ಟಶಾಲಿ ಎಂದೇ ಭಾವಿಸಿದ್ದೇನೆ. ಗುರು ಗೋವಿಂದ್ ಸಿಂಗ್ ಜೀ ಅವರ 350 ನೇ ಪ್ರಕಾಶ್ ಪೌರ್ವ್ ಆಚರಿಸುವ ಅವಕಾಶ ನಮಗೆ ದೊರೆತಿದೆ. ಗುರು ತೇಗ್ ಬಹಾದ್ದೂರ್ ಜೀ ಅವರ 400 ನೇ ಪ್ರಕಾಶ್ ಪರ್ವ್ ಆಚರಿಸುವ ಸುಯೋಗವೂ ನಮಗೆ ದೊರೆತಿದೆ ಮತ್ತು ಈಗಾಗಲೇ ಉಲ್ಲೇಖಿಸಿರುವಂತೆ ಇಡೀ ಜಗತ್ತಿಗೆ ಸಂದೇಶ ರವಾನಿಸಲು ಕೆಂಪುಕೋಟೆಯಲ್ಲಿ ಭವ್ಯವಾದ ಮತ್ತು ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮೂರು ವರ್ಷಗಳ ಹಿಂದೆ ಗುರು ನಾನಕ್ ದೇವ್ ಜೀ ಅವರ 550 ನೇ ಪ್ರಕಾಶೋತ್ಸವವನ್ನು ನಾವು ದೇಶ ಮತ್ತು ವಿದೇಶಗಳಲ್ಲಿ ಉತ್ಸಾಹದಿಂದ ಆಚರಿಸಿದ್ದೇವೆ.

ಸ್ನೇಹಿತರೇ

ದೇಶದ ನಮ್ಮ ಗುರುಗಳಿಂದ ಇಂತಹ ವಿಶೇಷ ಸಂದರ್ಭಗಳಲ್ಲಿ ನಾವು ಆಶೀರ್ವಾದ ಮತ್ತು ಸ್ಫೂರ್ತಿಯನ್ನು ಪಡೆದುಕೊಂಡಿದ್ದು, ಇದರಿಂದ ನವ ಭಾರತ ನಿರ್ಮಿಸಲು ನಮಗೆ ಚೈತನ್ಯ ಬಂದಂತಾಗಿದೆ. ಇಂದು ನಾವು ಗುರು ನಾನಕ್ ದೇವ್ ಜೀ ಅವರ 553 ನೇ ಪ್ರಕಾಶ್ ಪರ್ವ್ ಆಚರಿಸುತ್ತಿದ್ದು, ಈ ಎಲ್ಲಾ ವರ್ಷಗಳಲ್ಲಿ ಗುರು ನಾನಕ್ ಅವರ ಆಶೀರ್ವಾದದಿಂದ ಹೇಗೆ ದೇಶ ಐತಿಹಾಸಿಕ ಸಾಧನೆಗಳನ್ನು ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ

ಸಿಖ್ ಸಂಪ್ರದಾಯದಲ್ಲಿ ಪ್ರಕಾಶ್ ಪರ್ವ್ ನ ಮಹತ್ವವನ್ನು ಅರ್ಥಮಾಡಿಕೊಂಡಿದ್ದು, ದೇಶ ಇಂತಹ ಸಂಪ್ರದಾಯವನ್ನು ಕರ್ತವ್ಯದಂತೆ ಮತ್ತು ಇಂದು ಅದೇ ಸೇವೆಯನ್ನು ಶ್ರೆದ್ಧೆಯಿಂದ ಮಾಡುತ್ತಿದೆ. ಪ್ರತಿಯೊಂದು ಪ್ರಕಾಶ್ ಪರ್ವ ದೇಶಕ್ಕೆ ಸ್ಫೂರ್ತಿಯ ಮೂಲವಾಗಿದೆ. ಅದೃಷ್ಟವಶಾತ್  ನಿರಂತರವಾಗಿ ಇಂತಹ ಸೇವೆ ಮಾಡಲು ಮತ್ತು ಅಸಾಧಾರಣ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತಮಗೆ ಅವಕಾಶ ದೊರೆಯುತ್ತಿದೆ. ಗುರು ಗ್ರಂಥ್ ಸಾಹೀಬ್ ಗೆ ನಮಿಸುವ ಮತ್ತು ಭಕ್ತಿ ಪೂರ್ವಕ  ಗುರ್ಬಾನಿಯನ್ನು ಆಲಿಸುವ ಮತ್ತು ಲಂಗರ್ ನ ಪ್ರಸಾದವನ್ನು ಆನಂದಿಸುವ, ಆನಂದದ ಸ್ಥಿತಿಯಲ್ಲಿರಬೇಕು ಎಂದು ನಾನು ಆಶಿಸುತ್ತೇನೆ. ಇದರಿಂದ ಜೀವನದಲ್ಲಿ ಅಪಾರ ತೃಪ್ತಿಯ ಅನುಭವ ಮತ್ತು ಸಮಾಜ, ದೇಶಕ್ಕೆ ಸಮರ್ಪಣಾ ಪ್ರಜ್ಞೆಯಿಂದ ಕಾರ್ಯನಿರ್ವಹಿಸಲು ಅವಕಾಶ ದೊರೆಯುತ್ತದೆ. ಸಮಾಜ ಮತ್ತು ರಾಷ್ಟ್ರಕ್ಕಾಗಿ ಅರ್ಪಣಾ ಮನೋಭಾವನೆಯಲ್ಲಿ ಕೆಲಸ ಮಾಡಲು ಶಾಶ್ವತ ಶಕ್ತಿಯೂ ಮರುಪೂರಣಗೊಳ್ಳುತ್ತಲೇ ಇರುತ್ತದೆ ಎಂದು ನಾನು ಭಾವಿಸುತ್ತೇನೆ. ಆಶೀರ್ವಾದ ಪಡೆಯಲು ಎಷ್ಟು ಬಾರಿ ಗುರು ನಾನಕ್ ದೇವ್ ಜೀ ಮತ್ತು ಎಲ್ಲಾ ಗುರುಗಳ ಪಾದಗಳಿಗೆ ನಮಿಸಿದ್ದೇನೆ ಎಂಬುದು ವಿಷಯವಲ್ಲ ಮತ್ತು ಇದು ಸಾಕಾಗುವುದಿಲ್ಲ.

ಸ್ನೇಹಿತರೇ
ಗುರು ನಾನಕ್ ದೇವ್ ಜೀ ಅವರು ನಮಗೆ ಜೀವನ ಪಥ ತೋರಿಸಿದ್ದಾರೆ. ಅವರು ಹೇಳಿದ್ದಾರೆ – “ಜಪೋ ನಾಮ್. ಕೀರತ್ ಕರೋ, ವಾಂಡ್ ಛಾಕೋ”. ಅಂದರೆ ದೇವರ ನಾಮವನ್ನು ಪಠಿಸಿ, ನಿಮ್ಮ ಕರ್ತವ್ಯದ ಹಾದಿಯಲ್ಲಿ ನಡೆಯುವಾಗ ಕಷ್ಟಪಟ್ಟು ಕೆಲಸ ಮಾಡಿ ಮತ್ತು ಆಹಾರವನ್ನು ಪರಸ್ಪರ ಹಂಚಿಕೊಳ್ಳಿ ಎಂಬುದಾಗಿದೆ. ಇದೊಂದು ವಾಕ್ಯ ಧಾರ್ಮಿಕ ಅರ್ಥವನ್ನು ಹೊಂದಿದ್ದು, ಲೌಕಿಕ ಸಮೃದ್ಧತೆಯ ಸೂತ್ರ ಮತ್ತು ಸಾಮಾಜಿಕ ಸಾಮರಸ್ಯದ ಸ್ಪೂರ್ತಿಯನ್ನು ನೀಡುತ್ತದೆ. ಆಜಾದಿ ಕಾ ಅಮೃತ್ ಕಾಲದ ಸಂದರ್ಭದಲ್ಲಿ ದೇಶದ 130 ಕೋಟಿ ಜನರ ಕಲ್ಯಾಣಕ್ಕಾಗಿ ಗುರು ಮಂತ್ರದ ಸ್ಪೂರ್ತಿಯೊಂದಿಗೆ ದೇಶ ಮುನ್ನಡೆಯುತ್ತಿದೆ. ಆಜಾದಿ ಕಾ ಅಮೃತ್ ಕಾಲದಲ್ಲಿ ದೇಶ ತನ್ನ ಸಂಸ್ಕೃತಿ, ಪರಂಪರೆ ಮತ್ತು ಆಧ್ಮಾತ್ಮಿಕ ಅಸ್ಮಿತೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಪುನರುಜ್ಜೀವನಗೊಳಿಸಿದೆ. ಕರ್ತವ್ಯದ ಪರಮೋಚ್ಛ ಪ್ರಜ್ಞೆಯನ್ನು ಉತ್ತೇಜಿಸಲು ಆಜಾದಿ ಕಾ ಅಮೃತ್ ಕಾಲವನ್ನು ಕರ್ತವ್ಯ ಕಾಲ ಎಂದು ಆಚರಿಸಲು ನಿರ್ಧರಿಸಿದೆ ಮತ್ತು ಇದು ‘ಆಜಾದಿ ಕಾ ಅಮೃತ್ ಕಾಲ’ ಆಗಿದೆ. ದೇಶ ‘ಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ, ಎಲ್ಲರ ಪ್ರಯತ್ನದ ಮೂಲಕ ಸಮಾನತೆ, ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಏಕತೆಯ ಮಂತ್ರವನ್ನು ದೇಶ ಅನುಸರಿಸುತ್ತಿದೆ. ಶತಮಾನಗಳ ಹಿಂದೆ ಗುರ್ಬಾನಿ ಮೂಲಕ ದೇಶ ಇಂತಹ ಮಾರ್ಗದರ್ಶವನ್ನು ಪಡೆದುಕೊಂಡಿದ್ದು, ಇದು ನಮ್ಮ ಸಂಪ್ರದಾಯ, ನಂಬಿಕೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವೂ ಆಗಿದೆ.

ಸ್ನೇಹಿತರೇ

ಗುರು ಗ್ರಂಥ ಸಾಹಿಬ್ ರಂತಹ ರತ್ನದ ವೈಭವ ಮತ್ತು ಮಹತ್ವ ಸಮಯ ಮತ್ತು ಭೌಗೋಳಿಕ ಮಿತಿಯನ್ನು ಇದು ಮೀರಿದೆ. ಬಿಕ್ಕಟ್ಟುಗಳು ದೊಡ್ಡ ಪ್ರಮಾಣದಲ್ಲಿದ್ದರೆ ಈ ಪರಿಹಾರದ ಪ್ರಸ್ತುತತೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ನಾವು ಅರಿತುಕೊಂಡಿದ್ದೇವೆ. ಇಂದು ಜಗತ್ತಿನಲ್ಲಿ ಅಶಾಂತಿ ಮತ್ತು ಅಸ್ಥಿರತೆಯ ಸಮಯದಲ್ಲಿ ಗುರು ಗ್ರಂಥ ಸಾಹಿಬ್ ಅವರ ಬೋಧನೆಗಳು ಗುರು ನಾನಕ್ ಜೀ ಅವರ ಜೀವನ ಜಗತ್ತಿಗೆ ಬೆಳಕಿನಂತೆ ದಿಕ್ಕು ತೋರಿಸುತ್ತದೆ. ಗುರು ನಾನಕ್ ಅವರ ಪ್ರೀತಿಯ ಸಂದೇಶ ದೊಡ್ಡ ಅಂತರವನ್ನು ಸರಿದೂಗಿಸಲು ಸೇತುವೆಯಾಗುತ್ತದೆ ಮತ್ತು ಇದಕ್ಕೆ ಪುರಾವೆ ಭಾರತದ ನೆಲದಿಂದ ಹೊರ ಹೊಮ್ಮುತ್ತದೆ. ಅನೇಕ ಭಾಷೆಗಳು, ಉಪ ಭಾಷೆಗಳು, ವಿವಿಧ ಆಹಾರ ಪದ್ಧತಿಗಳು ಮತ್ತು ವಿಭಿನ್ನ ಜೀವನ ಶೈಲಿಗಳ ಹೊರತಾಗಿಯೂ ನಾವು ಭಾರತೀಯರಾಗಿ ಬದುಕುತ್ತಿದ್ದೇವೆ ಮತ್ತು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಆದ್ದರಿಂದ ನಾವು ನಮ್ಮ ಗುರುಗಳ ಆದರ್ಶಗಳಿಗೆ ಅನುಗುಣವಾಗಿ ಹೆಚ್ಚು ಹೆಚ್ಚು ಬದುಕಿದಷ್ಟೂ ಪರಸ್ಪರ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕುವ ಮೂಲಕ “ಏಕ್ ಭಾರತ್ ಶ್ರೇಷ್ಠ ಭಾರತ”ದ ಸ್ಫೂರ್ತಿಯನ್ನು ನಾವು ಹೆಚ್ಚು ಸಾಕಾರಗೊಳಿಸುತ್ತೇವೆ. ನಾವು ಮಾನವೀಯ ಮೌಲ್ಯಗಳಿಗೆ ಹೆಚ್ಚು ಒತ್ತು ನೀಡುತ್ತೇವೆ, ನಮ್ಮ ಗುರುಗಳ ಬೋಧನೆ ಜಗತ್ತಿನಾದ್ಯಂತ ಪ್ರತಿಯೊಬ್ಬ ವ್ಯಕ್ತಿಯನ್ನು ಹೆಚ್ಚು ವೇಗವಾಗಿ ಮತ್ತು ಸ್ಪಷ್ಟವಾಗಿ ತಲುಪುತ್ತವೆ.

ಸ್ನೇಹಿತರೇ
ಕಳೆದ 8 ವರ್ಷಗಳಲ್ಲಿ ಗುರು ನಾನಕ್ ದೇವ್ ಜೀ ಅವರ ಆಶೀರ್ವಾದಿಂದ ಸಿಖ್ ಸಂಪ್ರದಾಯದ ವೈಭವವನ್ನು ಎತ್ತಿ ಹಿಡಿಯುವ ಅವಕಾಶ ದೊರೆತಿದ್ದು, ಸರ್ಕಾರ ಅವಿರತವಾಗಿ ಕೆಲಸ ಮಾಡುತ್ತಿದೆ ಮತ್ತು ಇದು ಇಂದಿಗೂ ಇದು ಮುಂದುವರೆದಿದೆ. ನಿಮಗೆ ಗೊತ್ತಿರಬಹುದು, ಇತ್ತೀಚೆಗೆ ಕೆಲ ದಿನಗಳ ಹಿಂದೆ ಉತ್ತರಾಖಂಡದ ಮಾನ ಹಳ್ಳಿಗೆ ಭೇಟಿ ನೀಡಿದ್ದೆ. ಈ ಸಂದರ್ಭದಲ್ಲಿ ಗೋವಿಂದ್ ಘಾಟ್ ನಿಂದ ಹೇಮಕುಂದ್ ಸಾಹೀಬ್ ವರೆಗೆ ಸಂಪರ್ಕ ಕಲ್ಪಿಸುವ ರೋಪ್ ವೇ ಗೆ ಶಿಲಾನ್ಯಾಸ ನೆರವೇರಿಸುವ ಅವಕಾಶ ದೊರೆತಿತ್ತು. ಇದೇ ರೀತಿ ದೆಹಲಿ – ಉನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ದೇನೆ. ಇದರಿಂದ ಆನಂದ್ ಪುರ್ ಸಾಹೀಬ್ ಗೆ ತೆರಳಲು ಭಕ್ತಾದಿಗಳಿಗೆ ಆಧುನಿಕ ಸೌಲಭ್ಯ ದೊರೆಯಲು ಸಾಧ್ಯವಾಗಲಿದೆ. ಗುರು ಗೋವಿಂದ್ ಸಿಂಗ್ ಜೀ ಅವರ ಪ್ರದೇಶಗಳಿಗೆ ಇದಕ್ಕೂ ಮುಂಚೆ ರೈಲ್ವೆ ಸೌಲಭ್ಯವನ್ನು ಆಧುನೀಕರಣಗೊಳಿಸಲಾಗಿತ್ತು. ದೆಹಲಿ-ಕತ್ರಾ-ಅಮೃತ್ ಸರ್ ಎಕ್ಸ್ ಪ್ರೆಸ್ ಮಾರ್ಗವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯೋನ್ಮುಖವಾಗಿದೆ. ಇದರಿಂದ ದೆಹಲಿ ಮತ್ತು  ಅಮೃತಸರ ನಡುವಿನ ಪ್ರಯಾಣದ ಅವಧಿ 3 ರಿಂದ 4 ಗಂಟೆಗಳ ಕಾಲ ಕಡಿಮೆಯಾಗಲಿದೆ. ಇದಕ್ಕಾಗಿ ನಮ್ಮ ಸರ್ಕಾರ 35,000 ಕೋಟಿ ರೂಪಾಯಿಗಿಂತ ಹೆಚ್ಚು ವೆಚ್ಚ ಮಾಡುತ್ತಿದೆ. ಇದು ಹರ್ಮಂದರ್ ಸಾಹಿಬ್ ನ ದರ್ಶನವನ್ನು ಸುಲಭಗೊಳಿಸಲು ನಮ್ಮ ಸರ್ಕಾರ ಕೈಗೊಂಡ ಸದ್ಭಾವನೆಯ ಪ್ರಯತ್ನವಾಗಿದೆ.

ಮತ್ತು ಸ್ನೇಹಿತರೇ, 

ಇದು ಕೇವಲ ಅನುಕೂಲತೆ ಮತ್ತು ಪ್ರವಾಸೋದ್ಯಮದ ಸಾಮರ್ಥ್ಯದ ವಿಷಯವಲ್ಲ. ಇದರಲ್ಲಿ ನಮ್ಮ ಯಾತ್ರಾರ್ಥಿಗಳ ಶಕ್ತಿ, ಸಿಖ್ ಸಂಪ್ರದಾಯದ ಪರಂಪರೆ ಮತ್ತು ವಿಸ್ತಾರವಾಗಿ ಅರ್ಥಮಾಡಿಕೊಂಡಿರುವ ಅಂಶಗಳು ಸಹ ಸೇರಿವೆ. ಈ ತಿಳಿವಳಿಕೆಯು ಸೇವೆ, ಪ್ರೀತಿ, ಭಕ್ತಿ ಮತ್ತು ಸ್ವಂತಿಕೆಯ ಪ್ರಜ್ಞೆಯಾಗಿದೆ. ದಶಕಗಳ ಕಾಯುವಿಕೆಯ ನಂತರ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಮುಕ್ತಗೊಂಡ ಸಂದರ್ಭದ ಅನುಭವವನ್ನು ಶಬ್ದಗಳಲ್ಲಿ ಹೇಳಲು ಕಷ್ಟವಾಗುತ್ತಿದೆ. ಸಿಖ್ ಸಂಪ್ರದಾಯಗಳು ಮತ್ತು ಸಿಖ್ ಪರಂಪರೆಯನ್ನು ಬಲಪಡಿಸುವುದನ್ನು ಮುಂದುವರೆಸುವುದು ನಮ್ಮ ಪ್ರಯತ್ನವಾಗಿದೆ. ಕೆಲವು ಸಮಯದ ಹಿಂದೆ ಆಪ್ಘಾನಿಸ್ತಾನದ ಪರಿಸ್ಥಿತಿ ಹೇಗೆ ಹದಗೆಟ್ಟಿತ್ತು ಎಂಬುದು ತಮಗೆ ಚೆನ್ನಾಗಿ ತಿಳಿದಿದೆ. ನಾವು ಹಿಂದೂ ಮತ್ತು ಸಿಖ್ ಕುಟುಂಬಗಳನ್ನು ಕರೆತರಲು ಅಭಿಯಾನ ಆರಂಭಿಸಿದ್ದೇವು. ನಾವು ಗುರು ಗ್ರಂಥ್ ಸಾಹಿಬ್ ಅವರ ಪವಿತ್ರ ಪ್ರತಿಗಳನ್ನು ಸುರಕ್ಷಿತವಾಗಿ ಮರಳಿ ತಂದಿದ್ದೇವು. ಗುರು ಗೋವಿಂದ್ ಸಿಂಗ್ ಅವರ ಸಾಹಿಬ್ಜಾದೇಸ್ ಅವರ ಮಹಾನ್ ತ್ಯಾಗದ ಸ್ಮರಣೆಗಾಗಿ ಡಿಸೆಂಬರ್ 26 ರಂದು ವೀರ ಬಾಲ ದಿವಸ್ ಆಚರಿಸಲು ದೇಶ ನಿರ್ಧರಿಸಿದೆ. ದೇಶದ ಮೂಲೆ ಮೂಲೆಗಳಲ್ಲಿ ಈಗಿನ ಪೀಳಿಗೆ ಭಾರತದ ಭವಿಷ್ಯದ ಪೀಳಿಗೆಗಳು, ಭಾರತದ ಪರಮೋಚ್ಛ ಭೂಮಿಯ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡಿದೆ. ನಾವು ಹುಟ್ಟಿದ ಭೂಮಿಗಾಗಿ, ನಮ್ಮ ಮಾತೃಭೂಮಿಗಾಗಿ ಸಾಹಿದ್ಜಾದೆಗಳಂತೆ ತ್ಯಾಗ ಮಾಡುವುದು ಹೇಗೆಂದು ತಿಳಿದುಕೊಳ್ಳಬೇಕು. ಇಡೀ ಜಗತ್ತಿನಲ್ಲಿಯೇ ಇಂತಹ ತ್ಯಾಗ ಮತ್ತು ಕರ್ತವ್ಯದ ಸ್ಫೂರ್ತಿಯನ್ನು ಮುಂದಾಗಿಯೇ ಪತ್ತೆ ಮಾಡಲಾಗಿತ್ತು.

ಸ್ನೇಹಿತರೇ,

ವಿಭಜನೆ ಸಂದರ್ಭದಲ್ಲಿ ನಮ್ಮ ಪಂಜಾಬ್ ನ ಜನತೆ ಮಾಡಿರುವ ತ್ಯಾಗದ ಸ್ಮರಣೆಗಾಗಿ ದೇಶ ‘ವಿಭಜನ್ ವಿಭಿಶಿಕ ಸ್ಮೃತಿ ದಿವಸ್’ ಆಚರಿಸುವುದನ್ನು ಆರಂಭಿಸಿದೆ. ಸಿಎಎ ಕಾನೂನಿನ ಮೂಲಕ ವಿಭಜನೆ ಸಂದರ್ಭದಲ್ಲಿ ತೊಂದರೆಗೊಳಗಾದ ಹಿಂದು – ಸಿಖ್ ಕುಟುಂಬಗಳಿಗೆ ಪೌರತ್ವ ನೀಡುವ ಮೂಲಕ ಮಾರ್ಗ ಸೃಷ್ಟಿಸುತ್ತಿದ್ದೇವೆ. ವಿದೇಶಗಳಲ್ಲಿ ಬಲಿಪಶುಗಳಾದ ಮತ್ತು ತುಳಿತಕ್ಕೊಳಗಾದ ಕುಟುಂಬಳಿಗೆ ಗುಜರಾತ್ ಪೌರತ್ವವನ್ನು ನೀಡಿದೆ. ಜಗತ್ತಿನಲ್ಲಿ ಸಿಖ್ ಸಮುದಾಯ ಎಲ್ಲಿಯೇ ಇದ್ದರೂ ಭಾರತ ಅವರಿಗೆ ತವರು ಎಂಬುದನ್ನು ಮನವರಿಕೆಮಾಡಿಕೊಟ್ಟಿರುವುದನ್ನು ನೋಡಿದ್ದೇವೆ. ಗುಜರಾತ್ ಮುಖ್ಯಮಂತ್ರಿಯಾಗಿ ಗುರುದ್ವಾರ ಕೋಟ್ ಲಖಪತ್ ಸಾಹಿಬ್ ಅನ್ನು ನವೀಕರಿಸುವ ಮತ್ತು ಪುನರುಜ್ಜೀವನಗೊಳಿಸುವ ಸೌಭಾಗ್ಯ ತಮಗೆ ಒದಗಿ ಬಂದಿತ್ತು.

ಸ್ನೇಹಿತರೇ,

ಈ ಎಲ್ಲಾ ಕೆಲಸದ ಮೂಲದಲ್ಲಿ ಗುರು ನಾನಕ್ ದೇವ್ ಜೀ ಅವರು ತೋರಿಸಿದ ಮಾರ್ಗಕ್ಕೆ ಕೃತಜ್ಞತೆ ಇದೆ. ಗುರು ಅರ್ಜುನದೇವ್ ಮತ್ತು ಗುರು ಗೋವಿಂದ್ ಸಿಂಗ್ ಅವರು ಮಾಡಿದ ಅನಂತ ತ್ಯಾಗಗಳ ಋಣ ಈ ಅವಿರತ ಕೆಲಸದ ತಿರುಳಾಗಿದೆ.

ಮತ್ತು ಪ್ರತಿ ಹಂತದಲ್ಲೂ ಸಾಲವನ್ನು ಮರುಪಾವತಿಸುವುದು ದೇಶದ ಕರ್ತವ್ಯವಾಗಿದೆ. ಗುರುಗಳ ಕೃಪೆಯಿಂದ ಭಾರತ ತನ್ನ ಸಿಖ್ ಸಂಪ್ರದಾಯದ ವೈಭವವನ್ನು ಮುಂದುವರೆಸುತ್ತದೆ ಮತ್ತು ಅಭ್ಯುದಯದ ಪಥದಲ್ಲಿ ಸಾಗುತ್ತದೆ ಎಂಬುದು ತಮಗೆ ಖಾತ್ರಿಯಿದೆ. ಈ ಸ್ಫೂರ್ತಿಯೊಂದಿಗೆ ಮತ್ತೊಮ್ಮೆ ನಾನು ಗುರುಗಳ ಚರಣಗಳಿಗೆ ನಮಿಸುತ್ತೇನೆ. ಮತ್ತೊಮ್ಮೆ ನಿಮಗೆಲ್ಲರಿಗೂ ಮತ್ತು ದೇಶದ ಜನರಿಗೆ ಗುರುಪೌರಬ್ ಗೆ ಹೃತ್ಪೂರ್ವಕ ಶುಭಾಶಯಗಳು. ತುಂಬಾ ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.