India shares the ASEAN vision for the rule based societies and values of peace: PM
We are committed to work with ASEAN nations to enhance collaboration in the maritime domain: PM Modi

ಘನತೆವೆತ್ತ ಪ್ರಧಾನಮಂತ್ರಿ ಲೀ ಹಸೈನ್ ಲೂಂಗ್ ಅವರೇ,

 

ಘನತೆವೆತ್ತರೆ,

 

ನಿಮ್ಮೆಲ್ಲರನ್ನೂ ಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗಸಭೆಗೆ ಸ್ವಾಗತಿಸಲು ಹರ್ಷಿಸುತ್ತೇನೆ.

 

ನಾವು ನಮ್ಮ ಪಾಲುದಾರಿಕೆಯ 25ನೇ ವರ್ಷ ಆಚರಿಸುತ್ತಿದ್ದರೂ, ನಮ್ಮ ಹಂಚಿಕೆಯ ಸಾಗರ ಯಾನ ಸಾವಿರಾರು ವರ್ಷಗಳ ಹಿಂದಕ್ಕೆ ಸಾಗುತ್ತದೆ.

 

ಐದು ವರ್ಷಗಳ ಅವಧಿಯಲ್ಲಿ ಎಲ್ಲ ಆಸಿಯಾನ್ ನಾಯಕರಿಗೂ ಎರಡನೇ ಬಾರಿಗೆ ಆತಿಥ್ಯ ನೀಡುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ನಾಳೆ, ಗಣರಾಜ್ಯೋತ್ಸವ ಸಮಾರಂಭದಲ್ಲಿ ನೀವು ನಮ್ಮ ಗೌರವಾನ್ವಿತ ಅತಿಥಿಗಳಾಗಿದ್ದೀರಿ. ಈ ಸಂತಸಮಯ ಸಮಾರಂಭದಲ್ಲಿ ಆಸಿಯಾನ್ ಪಾಲುದಾರ ರಾಷ್ಟ್ರದ ನಮ್ಮ ಎಲ್ಲ ಸಹೋದರ ಸಹೋದರಿಯರ ಉಪಸ್ಥಿತಿ ಅಭೂತಪೂರ್ವವಾದ್ದು.

 

ಇಲ್ಲಿ ನಿಮ್ಮ ಸಂಘಟಿತ ಉಪಸ್ಥಿತಿ 125 ಕೋಟಿ ಭಾರತೀಯರ ಹೃದಯವನ್ನು ತಟ್ಟಿದೆ. 

 

ಇದು ನಮ್ಮ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ಆಸಿಯಾನ್ ಅರನ್ನು ಭಾರತದ ಪೂರ್ವದತ್ತ ಕ್ರಮದ ನೀತಿಯಲ್ಲಿ ಕೇಂದ್ರದಲ್ಲಿರಿಸಿರುವುದನ್ನು ಒತ್ತಿ ಹೇಳುತ್ತದೆ.

ನಮ್ಮ ಸ್ನೇಹವು ನಮ್ಮ ನಾಗರಿಕತೆ ಮತ್ತು ಹಂಚಿಕೆಯ ಸಂಸ್ಕೃತಿಯ ಸಂಪರ್ಕದಿಂದ ಪೋಷಿಸಲ್ಪಟ್ಟಿದೆ. ಭಾರತದ ಪುರಾತನ ಗ್ರಂಥ ರಾಮಾಯಣ, ಆಸಿಯಾನ್ ಮತ್ತು ಭಾರತ ಉಪಖಂಡದಲ್ಲಿ ಹಂಚಿಕೆಯ ಮೌಲ್ಯಯುತ ಪರಂಪರೆಯಾಗಿ ಮುಂದುವರಿದಿದೆ.

ಈ ಶ್ರೇಷ್ಠ ಗ್ರಂಥದ ಮೂಲಕ ನಮ್ಮ ಸಮಾನ ಸಾಂಸ್ಕೃತಿಕ ಭಂಡಾರವನ್ನು ಅನಾವರಣಗೊಳಿಸಲುನಾವು ಆಸಿಯಾನ್ ರಾಷ್ಟ್ರಗಳ ತಂಡಗಳೊಂದಿಗೆ ರಾಮಾಯಣ ಉತ್ಸವವನ್ನು ಆಯೋಜಿಸಿದ್ದೆವು.

ಬೌದ್ಧಮತ ಸೇರಿದಂತೆ ಇತರ ಪ್ರಮುಖ ಧರ್ಮಗಳು ಕೂಡ ನಮ್ಮ ಸಮಾಜವನ್ನು ಬೆಸೆದಿವೆ. ಇಸ್ಲಾಂ ಧರ್ಮವು ದಕ್ಷಿಣ ಏಷ್ಯಾದ ಅನೇಕ ಭಾಗಗಳಲ್ಲಿ ಹಲವಾರು ಶತಮಾನಗಳ ಹಿಂದೆಯೇ ವಿಭಿನ್ನ ಭಾರತೀಯ ಸಂಪರ್ಕಗಳನ್ನು ಹೊಂದಿದೆ.

 

ನಾವು ನಮ್ಮ ಸಮಾನ ಪರಂಪರೆಯನ್ನು ಆಚರಿಸಲು ಜಂಟಿಯಾಗಿ ಸ್ಮರಣಾರ್ಥ ಅಂಚೆ ಚೀಟಿಗಳನ್ನೂ ಬಿಡುಗಡೆ ಮಾಡಿದೆವು. 

ಘನತೆವೆತ್ತರೇ,

 

ಈ ಶೃಂಗಸಭೆಯು, ನಾವು ಭಾರತ  ಮತ್ತು ಆಸಿಯಾನ್ ರಾಷ್ಟ್ರಗಳಲ್ಲಿ ಜಂಟಿಯಾಗಿ ವರ್ಷವಿಡೀ ಆಚರಿಸಿದ ಸ್ಮರಣಾರ್ಥ ಕಾರ್ಯಕ್ರಮಗಳ ಸಮಾರೋಪವಾಗಿದೆ, ಇದು ನಮಗೆ ನಮ್ಮ ಈವರೆಗಿನ ಪಯಣ ಮತ್ತು ಮುಂದಿನ ಹಾದಿಯ ಬಗ್ಗೆ ಪರಾಮರ್ಶಿಸಲು ಒಂದು ಅಮೂಲ್ಯ ಅವಕಾಶವನ್ನು ಕಲ್ಪಿಸಿದೆ.

ಈ ಉದ್ದೇಶವು, ನನ್ನ ದೃಷ್ಟಿಯಲ್ಲಿ, ನಮ್ಮೊಂದಿಗೆ ಮುಕ್ತ ಮತ್ತು ಸ್ನೇಹಪರ ಚರ್ಚೆಗೆ ಉತ್ತಮ ಅವಕಾಶ ಕೊಟ್ಟಿದೆ.

 

ಘನತೆವೆತ್ತರೆ,

 

1992ರಿಂದ ವಲಯವಾರು ಸಂವಾದದಿಂದ ವ್ಯೂಹಾತ್ಮಕ ಪಾಲುದಾರಿಕೆಯವರೆಗೆ ನಮ್ಮ ಪಾಲುದಾರಿಕೆ ಬೆಳೆದಿದೆ. ಇಂದು, ವಾರ್ಷಿಕ ಶೃಂಗಸಭೆಗಳ ಜೊತೆಗೆ ನಾವು 30 ವಲಯವಾರು ಸಂವಾದ ಮತ್ತು ಏಳು ಸಚಿವರುಗಳ ಮಟ್ಟದ ಸಂವಾದದ ವ್ಯವಸ್ಥೆ ಹೊಂದಿದ್ದೇವೆ.

 

ಶಾಂತಿ, ಪ್ರಗತಿ ಮತ್ತು ಹಂಚಿಕೆಯ ಸಮೃದ್ಧಿಗಾಗಿ ಪಂಚವಾರ್ಷಿಕ ಯೋಜನೆಯಗಳ ಮೂಲಕ ಆಸಿಯಾನ್ – ಭಾರತ ಪಾಲುದಾರಿಕೆಯ ಉದ್ದೇಶಗಳನ್ನು ಜಾರಿ ಮಾಡುವಲ್ಲಿ ನಾವು ಅದ್ಭುತ ಪ್ರಗತಿ ಸಾಧಿಸಿದ್ದೇವೆ. 

 

2016-2020ರ ಅವಧಿಗೆ ನಮ್ಮ ಮೂರನೇ ಕ್ರಿಯಾ ಯೋಜನೆಯ ಜಾರಿಯ ಪ್ರಗತಿ ಶ್ಲಾಘನಾರ್ಹವಾಗಿದೆ.

 

ಆಸಿಯಾನ್ – ಭಾರತ ಸಹಕಾರ ನಿಧಿ, ಆಸಿಯಾನ್ – ಭಾರತ ಹಸಿರು ನಿಧಿ ಮತ್ತು ಆಸಿಯಾನ್ – ಭಾರತ ವಿಜ್ಞಾನ ಹಾಗೂ ತಂತ್ರಜ್ಞಾನ ನಿಧಿಯ ಮೂಲಕ ನಾವು ಹಲವು ಸಾಮರ್ಥ್ಯ ವರ್ಧನೆ ಯೋಜನೆಗಳನ್ನು ಕೈಗೊಂಡಿದ್ದೇವೆ. 

 

ಘನತೆವೆತ್ತರೇ,

 

ಸಾಗರ ಮತ್ತು ಸಮುದ್ರಗಳಲ್ಲಿ ನಿಯಮ ಆಧಾರಿತ ವ್ಯವಸ್ಥೆಯ ಮೂಲಕ ಶಾಂತಿ ಮತ್ತು ಸಮೃದ್ಧಿಯ ಆಸಿಯಾನ್ ನೋಟವನ್ನು ಭಾರತ ಹಂಚಿಕೊಂಡಿದೆ. ಇದಕ್ಕೆ ಮಹತ್ವವಾದ ಉಲ್ಲೇಖಾರ್ಹ ಯು.ಎನ್.ಸಿ.ಎಲ್.ಓ.ಎಸ್. ಸೇರಿದಂತೆ ಅಂತಾರಾಷ್ಟ್ರೀಯ ಕಾನೂನುಗಳಿಗೆ ಗೌರವ ನೀಡಿದೆ.

 

ಪ್ರಾಯೋಗಿಕ ಸಹಕಾರ ಮತ್ತು ನಮ್ಮ ಸಾಗರ ಸ್ವರೂಪದ ಹಂಚಿಕೆಯ ಸಹಯೋಗದೊಂದಿಗೆ ನಾವು ಆಸಿಯಾನ್ ನೊಂದಿಗೆ ಶ್ರಮಿಸಲು ಬದ್ಧರಾಗಿದ್ದೇವೆ. 

ರಿಟ್ರೀಟ್ ಅಧಿವೇಶನದ ವೇಳೆ, ಭಾರತ-ಫೆಸಿಪಿಕ್ ವಲಯದ ಪ್ರಗತಿ ಮತ್ತು ಅಭಿವೃದ್ಧಿಯ  ಪ್ರಮುಖ ಗಮನಾರ್ಹ ಕ್ಷೇತ್ರವಾದ ಆಸಿಯಾನ್ ಭಾರತ ಸಾಗರ ಸ್ವರೂಪ ಸಹಕಾರದ ಬಗ್ಗ ಚರ್ಚಿಸುವ ಅವಕಾಶ ನಮಗೆ ದೊರೆತಿದೆ.

 

ವಾಸ್ತವವಾಗಿ, ಆಸಿಯಾನ್ – ಭಾರತ ಸಂಪರ್ಕ ಶೃಂಗಸಭೆಯಲ್ಲಿ, ನೀತಿ ಆರ್ಥಿಕತೆ ಕುರಿತ ಕಾರ್ಯಾಗಾರದಲ್ಲಿ ಮತ್ತು ನಿರಂತರ ಸಂವಾದದ ವ್ಯವಸ್ಥೆಯಲ್ಲಿ ಪ್ರತಿಧ್ವನಿಸಿದ ಧ್ಯೇಯವಾಕ್ಯ ಸಾಗರ ಸಹಕಾರ ನಮ್ಮ ಸ್ಮರಣಾರ್ಥ ಚಟುವಟಿಕೆಗಳ ಉದ್ದಕ್ಕೂ ನಮ್ಮ ಸಂವಾದದ ಒಂದು ಅವಿಭಾಜ್ಯ ಅಂಗವಾಗಿತ್ತು.

ಮಾನವೀಯ ಮತ್ತು ವಿಪತ್ತು ಪರಿಹಾರ ಪ್ರಯತ್ನಗಳು, ಭದ್ರತೆಯ ಸಹಕಾರ ಮತ್ತು ಪಥದರ್ಶಕದ ಸ್ವಾತಂತ್ರ್ಯ ನಮ್ಮ ಸಾಗರ ಸಹಕಾರದ ಪ್ರಮುಖ ಗಮನಾರ್ಹ ಕ್ಷೇತ್ರಗಳಾಗಿವೆ. 

ಸಂಪರ್ಕ ಶೃಂಗವು, ಆಸಿಯಾನ್ ನೊಂದಿಗೆ ಭಾರತ ಹಂಚಿಕೊಂಡಿರುವ ಭೂ, ವಾಯು, ಸಾಗರ, ಸಾಂಸ್ಕೃತಿಕ, ನಾಗರಿಕತೆಯ ಮತ್ತು ಶತಮಾನಗಳಿಂದ ಜನರೊಂದಿಗಿನ ಸಂಪರ್ಕದ ದ್ಯೋತಕವಾಗಿದೆ.

 

ಘನತೆವೆತ್ತರೇ,

 

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ನಮ್ಮೊಳಗೆ ಡಿಜಿಟಲ್ ಸಂಪರ್ಕದ ಹೊಸ ಬಾಂಧವ್ಯ ಬೆಸೆದಿದೆ.  

 

ಇವು, ಪ್ರಾದೇಶಿಕ ಉನ್ನತ ಸಾಮರ್ಥ್ಯದ ಫೈಬರ್ ಆಪ್ಟಿಕ್ ಜಾಲ ಮತ್ತು ದೂರದ ಪ್ರದೇಶಗಳನ್ನೂ ಡಿಜಿಟಲ್ ಮೂಲಕ ಸಂಪರ್ಕಿಸುವ ರಾಷ್ಟ್ರೀಯ ಗ್ರಾಮೀಣ ಬ್ರಾಡ್ ಬ್ಯಾಂಡ್ ಜಾಲ ಸೇರಿದಂತೆ ಹೊಸ ಕ್ಷೇತ್ರಗಳ ಸಹಕಾರವನ್ನು ಒಳಗೊಂಡಿದೆ.

 

ಭಾರತವು ಗ್ರಾಮೀಣ ಸಂಪರ್ಕ ಕುರಿತ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳುವ ಅವಕಾಶ ಒದಗಿಸಿದೆ, ಇದು ಕಾಂಬೋಡಿಯಾ, ಲಾವೋ ಪಿಡಿಆರ್, ಮ್ಯಾನ್ಮಾರ್ ಮತ್ತು ವಿಯಟ್ನಾಂಗಳಲ್ಲಿ ಡಿಜಿಟಲ್ ಗ್ರಾಮಗಳನ್ನು ರೂಪಿಸಲಿದೆ. ಈ ಯೋಜನೆಗಳ ಯಶಸ್ಸು ಇತರ ಆಸಿಯಾನ್ ರಾಷ್ಟ್ರಗಳಲ್ಲಿಯೂ ಪುನರಾವರ್ತನೆಯಾಗಲಿದೆ. 

 

ಆಸಿಯಾನ್ ರಾಷ್ಟ್ರಗಳ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ವೃತ್ತಿಪರರಿಗಾಗಿ ನಾವು ನೀತಿಗಳಲ್ಲಿ ಉತ್ತಮ ಪದ್ಧತಿಗಳು, ನಿಯಂತ್ರಣ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಹಂಚಿಕೆಗಾಗಿ ದೂರಸಂಪರ್ಕ ಮತ್ತು ನೆಟ್ ವರ್ಕಿಂಗ್ ತಂತ್ರಜ್ಞಾನ ಕುರಿತಂತೆ ತರಬೇತಿ ಕಾರ್ಯಕ್ರಮಗಳನ್ನೂ ನೀಡುವುದಾಗಿ ಹೇಳಿದ್ದೇವೆ. 

 

ಹಣಕಾಸು ವಿಚಾರಗಳಲ್ಲಿ ನಮ್ಮ ಸಹಕಾರ ಮತ್ತು ತಿಳಿವಳಿಕೆಯನ್ನು ಆಳಗೊಳಿಸುವ ಸಲುವಾಗಿ, ನಾನು ಡಿಜಿಟಲ್ ಹಣಕಾಸು ಪೂರಣ ಮತ್ತು ಹೂಡಿಕೆ ಉತ್ತೇಜನ ಮತ್ತು ಮೂಲಸೌಕರ್ಯ ಸಂವಾದದ ಪ್ರಸ್ತಾಪ ಮಾಡಿದ್ದೇನೆ. 

 

ಭಯೋತ್ಪಾದಕರಿಗೆ ಹಣ ಹೋಗುವುದರ ವಿರುದ್ಧದ ಹೋರಾಟ ನಾವು ಒಗ್ಗೂಡಿ ಕೆಲಸ ಮಾಡಬಹುದಾದ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ.  

 

ಘನತೆವೆತ್ತರೆ,

 

ನಮ್ಮ 70 ಶತಕೋಟಿ ಡಾಲರ್ ವಾಣಿಜ್ಯ 25 ವರ್ಷಗಳ ಅವಧಿಯಲ್ಲಿ 25 ಪಟ್ಟು ವೃದ್ಧಿಸಿದೆ. ಆಸಿಯಾನ್ ಮತ್ತು ಭಾರತದ ಹೂಡಿಕೆ ಚೈತನ್ಯದಾಯಿಯಾಗಿದೆ ಮತ್ತು ವೃದ್ಧಿಸುತ್ತಿದೆ.

ನಾವು ನಮ್ಮ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ವಾಣಿಜ್ಯ ಸಮುದಾಯಗೊಂದಿಗೆ ನಮ್ಮ ಮಾತುಕತೆಗೆ ಅವಕಾಶ ನೀಡಲು ಆಸಿಯಾನ್ ಜೊತೆಗೂಡಿ ಕೆಲಸ ಮುಂದುವರಿಸುತ್ತೇವೆ.  

 

ಇತ್ತೀಚಿನ ಯಶಸ್ವೀ ಕಾರ್ಯಕ್ರಮಗಳಾದ ವಾಣಿಜ್ಯ ಮತ್ತು ಹೂಡಿಕೆ ಸಭೆ ಹಾಗೂ ಎಕ್ಸ್ ಪೋ, ಆಸಿಯಾನ್ ಭಾರತ ವಾಣಿಜ್ಯ ಮಂಡಳಿ ಸಭೆ, ಬಿಜ್ ನೆಟ್ ಸಮಾವೇಶ, ನವೋದ್ಯಮ ಉತ್ಸವ ಮತ್ತು ಹ್ಯಾಕಥಾನ್ ಹಾಗೂ ಐಸಿಟಿ ಎಕ್ಸ್ ಪೋ ಈ ನಿಟ್ಟಿನಲ್ಲಿ ಉತ್ತೇಜನ ನೀಡುವ ಫಲಿತಾಂಶ ಕೊಟ್ಟಿವೆ. 

 

ನಮ್ಮ ಯೋಜನಾ ಅಭಿವೃದ್ಧಿ ನಿಧಿ ಮತ್ತು ತ್ವರಿತ ಪರಿಣಾಮದ ಯೋಜನೆಗಳು ನಮ್ಮ ಕಂಪನಿಗಳಿಗೆ ಪ್ರಾದೇಶಿಕ ಮೌಲ್ಯ ಸರಣಿಯಲ್ಲಿ ಸೇರಲು ಅದರಲ್ಲೂ ಜವಳಿ ಮತ್ತು ಸಿದ್ಧ ಉಡುಪು, ಔಷಧ, ಕೃಷಿ ಸಂಸ್ಕರಣೆ ಹಾಗೂ ವಿಧ್ಯುನ್ಮಾನದಲ್ಲಿ ತೊಡಗಲು ನೆರವಾಗುತ್ತದೆ. 

 

ಘನತೆವೆತ್ತರೇ,

 

ಜನರೊಂದಿಗಿನ ಸಂಪರ್ಕವು, ನಮ್ಮ ನೂರಾರು ವರ್ಷಗಳ ಆಪ್ತ ಬಾಂಧವ್ಯಕ್ಕೆ ಭದ್ರ ಬುನಾದಿಯಾಗಿವೆ. 

 

ಆಗ್ನೇಯ ಏಷ್ಯಾದಲ್ಲಿ ಭಾರತೀಯ ಸಮುದಾಯ ವಿಸ್ತೃತವಾಗಿ ನೆಲೆಸಿದೆ. ಅವರನ್ನು ಸ್ಥಳೀಯ ಸಮುದಾಯ ಆಪ್ತವಾಗಿ ಅಂಗೀಕರಿಸಿದೆ. 

 

ಈ ತಿಂಗಳ ಆರಂಭದಲ್ಲಿ, ಸಿಂಗಾಪೂರದಲ್ಲಿ ನಡೆದ ಆಸಿಯಾನ್ ಭಾರತ ಪ್ರವಾಸಿ ಭಾರತೀಯ ದಿವಸ್, ನಮ್ಮ ನಡುವೆ ಆಪ್ತವಾದ ಬಾಂಧವ್ಯ ವರ್ಧಿಸುವುದರಲ್ಲಿ ಅವರ ಕೊಡುಗೆಯನ್ನು ಗುರುತಿಸಿತು. 

 

ಅದೇ ವೇಳೆ ದೆಹಲಿಯಲ್ಲಿ ನಡೆದ ಭಾರತೀಯ ಪರಂಪರೆಯ ಮೇಯರ್ ಗಳು ಮತ್ತು ಸಂಸದೀಯ ಸದಸ್ಯರ ಪ್ರಥಮ ಸಮಾವೇಶದಲ್ಲಿ ಆಸಿಯಾನ್ ರಾಷ್ಟ್ರಗಳ ಬಹುದೊಡ್ಡ ಪ್ರತಿನಿಧಿತ್ವವಿತ್ತು. 

 

ನಮ್ಮ ಐತಿಹಾಸಿಕ ಬಾಂಧವ್ಯ ನಿರ್ಮಾಣಕ್ಕಾಗಿ, ನಾನು, 2019ನ್ನು ಆಸಿಯಾನ್ ಭಾರತ ಪ್ರವಾಸೋದ್ಯಮ ವರ್ಷ ಎಂದು ಘೋಷಿಸಲು ಪ್ರಸ್ತಾಪಿಸಿದ್ದೇನೆ. ನಾವು    ಪ್ರವಾಸೋದ್ಯಮವನ್ನು ಇನ್ನಷ್ಟು ಉತ್ತೇಜಿಸಲು ಸ್ಪಷ್ಟವಾದ ಮತ್ತು ಅಮೂರ್ತವಾದ ಸಾಂಸ್ಕೃತಿಕ ಪರಂಪರೆ ವಲಯಗಳನ್ನು ಸ್ಥಾಪಿಸಬಹುದಾಗಿದೆ.

 

ಬೌದ್ಧ ಪ್ರವಾಸಿ ವರ್ತುಲವು ನಮ್ಮ ವಲಯದ ಪ್ರವಾಸಿಗರನ್ನು ಮತ್ತು ಯಾತ್ರಿಕರನ್ನು ಸೆಳೆಯುವ ಮಹತ್ವದ ಭಾಗವಾಗಿದೆ.

ಘನತೆವೆತ್ತರೆ,

 

ನಮ್ಮ ನಾಗರಿಕತೆಯ ನಂಟನ್ನು ಬಿಂಬಿಸುವ ಐತಿಹಾಸಿಕ ಸ್ಮಾರಕಗಳ ಜೀರ್ಣೋದ್ಧಾರದ ಕಾರ್ಯದಲ್ಲಿ ಭಾರತವು ಭಾಗಿಯಾಗಿದೆ. 

 

ಕಾಂಬೋಡಿಯಾ, ಮ್ಯಾನ್ಮಾರ್ ಮತ್ತು ಲಾವೋ ಪಿಡಿಆರ್ ಹಾಗೂ ವಿಯೆಟ್ನಾಗಳಲ್ಲಿ ದೇವಾಲಯಗಳ ಸಂರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿರುವುದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. 

 

ಆಸಿಯಾನ್ ಭಾರತ ವಸ್ತುಪ್ರದರ್ಶನಗಳ ಜಾಲದ ವಾಸ್ತವ ಅರಿವಿನ ಪೋರ್ಟಲ್ ಈ ಹಂಚಿಕೆಯ ಪರಂಪರೆಯನ್ನು ಗ್ರಹಿಸುತ್ತದೆ.

 

ನಮ್ಮ ಸ್ಮರಣಾರ್ಥ ಕಾರ್ಯಕ್ರಮ ಆಚರಣೆಯ ಮಹತ್ವದ ಗಮನ, ನಮ್ಮ ಯುವಕರು ಮತ್ತು ನಮ್ಮ ಭವಿಷ್ಯವಾಗಿದೆ.  

 

ಯುವ ಶೃಂಗ, ಕಲಾವಿದರ ನಿವಾಸ, ಸಂಗೀತೋತ್ಸವ, ಮತ್ತು ನಮ್ಮ ಯುವಕರೊಳಗೆ ಡಿಜಿಟಲ್ ವಾಣಿಜ್ಯಕ್ಕಾಗಿ ನವೋದ್ಯಮ ಉತ್ಸವ ಇದಕ್ಕಾಗಿ ಆಯೋಜಿತವಾಗಿತ್ತು. ನಾವು 24ನೇ ಜನವರಿಯಂದು ಯುವ ಪ್ರಶಸ್ತಿ ನೀಡುವ ಮೂಲಕ ಅವರ ಸ್ಫೂರ್ತಿಯನ್ನು ಉತ್ತೇಜಿಸಿದ್ದೇವೆ.

 

ವಲಯದ ನಮ್ಮ ಯುವಕರನ್ನು ಮತ್ತಷ್ಟು ಸಬಲೀಕರಿಸಲು, ಆಸಿಯಾನ್ ರಾಷ್ಟ್ರಗಳ  1000 ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಭಾರತದ ಮುಂಚೂಣಿಯ ಜ್ಞಾನ ಕೇಂದ್ರವಾದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಪಿಎಚ್ ಡಿ ಒಳಗೊಂಡ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ಪ್ರಕಟಿಸಲು ಹರ್ಷಿಸುತ್ತೇನೆ.

 

ಆಸಿಯಾನ್ ಹೆದ್ದಾರಿ ವೃತ್ತಿಪರರಿಗೆ ಭಾರತೀಯ ಹೆದ್ದಾರಿ ಎಂಜಿನಿಯರುಗಳ ಅಕಾಡಮಿಯಲ್ಲಿ ಸಮರ್ಪಿತ ತರಬೇತಿ ಕೋರ್ಸ್ ಪಡೆಸಲು ನಾವು ಅವಕಾಶ ಕಲ್ಪಿಸಲು ಇಚ್ಛಿಸುತ್ತೇವೆ. 

ಹೆಚ್ಚಿನ ಅಂತರ ವಿಶ್ವವಿದ್ಯಾಲಯ ವಿನಿಮಯವನ್ನು ಉತ್ತೇಜಿಸಲು ನಾವು ವಿಶ್ವವಿದ್ಯಾನಿಲಯಗಳ ಜಾಲವನ್ನು ಸ್ಥಾಪಿಸಲುದ್ದೇಶಿದ್ದೇವೆ.

 

ಘನತೆವೆತ್ತರೇ,

 

ಕೊನೆಯದಾಗಿ, ಈ ಸ್ಮರಣಾರ್ಥ ಶೃಂಗದಲ್ಲಿ ಭಾಗಿಯಾಗಲು ನಮ್ಮ ಆಹ್ವಾನವನ್ನು ಮನ್ನಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಲು ನಾನು ನನ್ನ ಜನರೊಂದಿಗೆ ಜೊತೆಗೂಡುತ್ತೇನೆ.  

 

ನಾನು ಸಿಂಗಾಪೂರ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ಲೀ ಹಸೈನ್ ಲೂಂಗ್ ಅವರಿಗೆ ಆಸಿಯಾನ್ ನ 2018ರ ಅಧ್ಯಕ್ಷತೆ ವಹಿಸಿರುವ ಸಿಂಗಾಪೂರದ ಪರವಾಗಿ ಈ ಮಹಾಧಿವೇಶನದಲ್ಲಿ ತಮ್ಮ ಸ್ವಾಗತ ಹೇಳಿಕೆಗಾಗಿ ಆಹ್ವಾನಿಸುತ್ತೇನೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.