ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಗಣತಂತ್ರದ ಅಧ್ಯಕ್ಷ ಘನತೆವೆತ್ತ ಜೊಕೊ ವಿಡೊಡೊ ಅವರಿಗೆ ದೂರವಾಣಿ ಕರೆ ಮಾಡಿದರು.
ಇಂಡೋನೇಷ್ಯಾದ ಸುಲವೆಸಿ ವಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಮತ್ತು ಸುನಾಮಿಗಳಿಂದಾದ ಅಮೂಲ್ಯ ಜೀವ ಹಾನಿಗಳಿಗಾಗಿ ಪ್ರಧಾನಮಂತ್ರಿ ಅವರು ವಯುಕ್ತಿಕವಾಗಿ ಹಾಗೂ ಭಾರತದ ಜನತೆಯ ಪರವಾಗಿ ಅತೀವ ಸಂತಾಪ ವ್ಯಕ್ತಪಡಿಸಿದರು.
ಚಿಂತಾಜನಕವಾದ ನೈಸರ್ಗಿಕ ವಿಪತ್ತಿನಿಂದ ಸರ್ವನಾಶವಾದರೂ ಸವಾಲುಗಳನ್ನು ಎದುರಿಸಿ ಸ್ಥಿತಿಸ್ಥಾಪಕತ್ವದಿಂದ ಮತ್ತು ಧೈರ್ಯಶಾಲಿಗಳಾಗಿ ಪುಟಿದೆದ್ದು ನಿಂತ ಇಂಡೋನೇಷ್ಯಾದ ಜನತೆಯನ್ನು ಪ್ರಧಾನಮಂತ್ರಿ ಅವರು ಅಭಿನಂದಿಸಿದರು.
ಅಂತರರಾಷ್ಟ್ರೀಯ ಸಹಾಯಕ್ಕಾಗಿ ಇಂಡೋನೇಷ್ಯಾ ಮಾಡಿದ ಮನವಿಗೆ ಸ್ಪಂದಿಸಿ, ಪ್ರಧಾನಮಂತ್ರಿ ಅವರು ಸಾಗರ ಕಿನಾರೆಯ ನೆರೆದೇಶ ಹಾಗೂ ಸ್ನೇಹ ರಾಷ್ಟ್ರ ಇಂಡೋನೇಷ್ಯಾಕ್ಕೆ ಭಾರತದಿಂದ ಸಾಧ್ಯವಾಗುವ ಎಲ್ಲ ರೀತಿಯ ಸಹಾಯ ನೀಡುವುದಾಗಿ ಪ್ರಧಾನಮಂತ್ರಿ ಅವರು ಇಂಡೋನೇಷ್ಯಾದ ಅಧ್ಯಕ್ಷರಿಗೆ ತಿಳಿಸಿದರು.
ಸಂತಾಪ ಮತ್ತು ಸಹಾಯಗಳನ್ನು ವ್ಯಕ್ತಪಡಿಸಿದ್ದಕಾಗಿ ಪ್ರಧಾನಮಂತ್ರಿ ಅವರಿಗೆ ಅಧ್ಯಕ್ಷ ವಿಡೊಡೊ ಅವರು ಧನ್ಯವಾದ ಸಲ್ಲಿಸಿದರು.
ಭಾರತದ ಪರಿಹಾರ ಸಹಾಯದ ವಿವರಗಳು ರಾಜತಾಂತ್ರಿಕ ಮತ್ತು ಅಧಿಕೃತ ಕಚೇರಿ ವ್ಯವಸ್ಥೆಗಳ ಮೂಲಕ ನಡೆಸಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ.