ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಓಮನ್ ಸುಲ್ತಾನ್ ಘನತೆವೆತ್ತ ಸುಲ್ತಾನ್ ಹೈತ್ಹಮ್ ಬಿನ್ ತಾರಿಕ್ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಭಾರತ ಕೋವಿಡ್ -19 ಲಸಿಕೆಯನ್ನು ಓಮನ್ ಗೆ ಪೂರೈಸಿರುವ ಬಗ್ಗೆ ಓಮನ್ ಸುಲ್ತಾನ್ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು. ಇಬ್ಬರೂ ನಾಯಕರು ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರಕ್ಕೆ ಸಮ್ಮತಿಸಿದರು.
ಸುಲ್ತಾನ್ ತಮ್ಮ ಆಳ್ವಿಕೆಯ ಒಂದು ವರ್ಷ ಪೂರ್ಣಗೊಳಿಸಿರುವುದಕ್ಕಾಗಿ ಮತ್ತು ಒಮನ್ ಗಾಗಿ ಅವರ ದೃಷ್ಟಿಕೋನ 2040ನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದರು.
ರಕ್ಷಣೆ, ಆರೋಗ್ಯ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವೃದ್ಧಿಸುತ್ತಿರುವ ಭಾರತ-ಒಮನ್ ಸಹಕಾರದ ಬಗ್ಗೆ ನಾಯಕರು ಸಂತೃಪ್ತಿ ವ್ಯಕ್ತಪಡಿಸಿದರು.
ವ್ಯೂಹಾತ್ಮಕ ಪಾಲುದಾರರ ನಡುವಿನ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವರ್ಧನೆಯಲ್ಲಿ ಭಾರತೀಯ ಸಮುದಾಯದ ಪಾತ್ರವನ್ನು ಉಭಯ ನಾಯಕರು ಶ್ಲಾಘಿಸಿದರು.