The Prime Minister also extended his heartiest congratulations and best wishes to Vice President-elect Senator Kamala Harris
The leaders agreed to work closely to further advance the India-U.S. Comprehensive Global Strategic Partnership, built on shared values and common interests

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಚುನಾಯಿತ ಅಧ್ಯಕ್ಷ  ಘನತೆವೆತ್ತ ಜೋಸೆಫ್ ಆರ್ ಬೈಡನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಚುನಾಯಿತ ಅಧ್ಯಕ್ಷ ಬೈಡನ್ ಅವರಿಗೆ ಹೃತ್ಫೂರ್ವಕ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ, ಇದು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರಜಾಪ್ರಭುತ್ವ ಸಂಪ್ರದಾಯಗಳ ಶಕ್ತಿ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.

ಪ್ರಧಾನಮಂತ್ರಿಯವರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸೆನೆಟರ್ ಕಮಲಾ ಹ್ಯಾರಿಸ್ ಅವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಶುಭ ಕೋರಿದರು.

ಪ್ರಧಾನ ಮಂತ್ರಿಯವರು ಘನತೆವೆತ್ತ ಜೋಸೆಫ್ ಆರ್. ಬೈಡೆನ್ ಅವರೊಂದಿಗೆ, 2014ರಲ್ಲಿ ಮತ್ತು 2016ರಲ್ಲಿ ಅಮೆರಿಕದ ತಮ್ಮ ಅಧಿಕೃತ ಭೇಟಿ ವೇಳೆ ನಡೆಸಿದ್ದ ಮಾತುಕತೆಯನ್ನು ಸ್ಮರಿಸಿದರು. 2016ರ ತಮ್ಮ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಯು.ಎಸ್. ಕಾಂಗ್ರೆಸ್ ನ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದ ಸಭೆಯ ಅಧ್ಯಕ್ಷತೆಯನ್ನು ಘನತೆವೆತ್ತ ಜೋಸೆಫ್ ಆರ್. ಬೈಡೆನ್ ಅವರು ವಹಿಸಿದ್ದರು.

ಹಂಚಿಕೆಯ ಮೌಲ್ಯಗಳು ಮತ್ತು ಸಮಾನ ಹಿತಾಸಕ್ತಿಯ ಆಧಾರದ ಮೇಲೆ ನಿರ್ಮಿಸಲಾಗಿರುವ ಭಾರತ – ಅಮೆರಿಕಾ ಸಮಗ್ರ ಜಾಗತಿಕ ವ್ಯೂಹಾತ್ಮಕ ಸಹಯೋಗವನ್ನು ಮತ್ತಷ್ಟು ಮುಂದುವರಿಸಲು ಆಪ್ತವಾಗಿ ಶ್ರಮಿಸಲು ಇಬ್ಬರೂ ನಾಯಕರು ಸಮ್ಮತಿಸಿದರು. ಕೋವಿಡ್ -19 ನಿಗ್ರಹ, ಅಗ್ಗದ ದರದ ಲಸಿಕೆಯ ಲಭ್ಯತೆ ಉತ್ತೇಜನ, ಹವಾಮಾನ ವೈಪರೀತ್ಯದ ತಡೆ ಮತ್ತು ಭಾರತ  ಪೆಸಿಫಿಕ್ ವಲಯದ ಸಹಕಾರ ಸೇರಿದಂತೆ ಆದ್ಯತೆಯ ವಿಚಾರಗಳ ಬಗ್ಗೆ ನಾಯಕರು ಚರ್ಚಿಸಿದರು. 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Double engine govt becoming symbol of good governance, says PM Modi

Media Coverage

Double engine govt becoming symbol of good governance, says PM Modi
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 17 ಡಿಸೆಂಬರ್ 2024
December 17, 2024

Unstoppable Progress: India Continues to Grow Across Diverse Sectors with the Modi Government