ಯುನೈಟೆಡ್ ಕಿಂಗ್ ಡಂ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಯುನೈಟೆಡ್ ಕಿಂಗ್ ಡಂ ನ (ಯು.ಕೆ.) ಪ್ರಧಾನ ಮಂತ್ರಿ ಬೋರ್ಸ್ ಜಾನ್ಸನ್ ಅವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮೂಲಕ ಅಭಿನಂದನೆ ಸಲ್ಲಿಸಿದರು.
ಶ್ರೀ ಜಾನ್ಸನ್ ಅವರು ಪ್ರಧಾನ ಮಂತ್ರಿಯಾಗಿ ಪುನರಾಯ್ಕೆಯಾಗಿರುವುದು ಯು.ಕೆ. ಜನತೆ ಅವರ ಮೇಲೆ ಮತ್ತು ಅವರ ಕನ್ಸರ್ವೇಟಿವ್ ಪಕ್ಷದ ಮೇಲಿಟ್ಟ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ ಮಂತ್ರಿ ಅವರು ತಿಳಿಸಿದರು.
ಭಾರತದ ಜನತೆಯ ಪರವಾಗಿ ಮತ್ತು ತಮ್ಮ ಪರವಾದ ಶುಭ ಹಾರೈಕೆಯನ್ನು ತಿಳಿಸಿದ ಪ್ರಧಾನ ಮಂತ್ರಿ ಅವರು ಸಮರ್ಥ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಭಾರತ ಮತ್ತು ಯು.ಕೆ. ನಡುವಣ ವ್ಯೂಹಾತ್ಮಕ ಸಹಭಾಗಿತ್ವ ಇನ್ನಷ್ಟು ಬಲಗೊಳ್ಳುವುದೆಂಬ ಆಶಯವನ್ನೂ ವ್ಯಕ್ತಪಡಿಸಿದರು.
ಶ್ರೀ ಬೋರಿಸ್ ಜಾನ್ಸನ್ ಅವರು ಪ್ರಧಾನ ಮಂತ್ರಿ ಶುಭ ಹಾರೈಕೆಗಾಗಿ ಧನ್ಯವಾದ ತಿಳಿಸಿ, ಭಾರತ-ಯು.ಕೆ. ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವುದಾಗಿ ತಮ್ಮ ಬದ್ದತೆಯನ್ನು ವ್ಯಕ್ತಪಡಿಸಿದರು.
ಪ್ರಧಾನ ಮಂತ್ರಿ ಅವರು ಶ್ರೀ ಜಾನ್ಸನ್ ಅವರಿಗೆ ಭಾರತದ ಭೇಟಿಗೆ ನೀಡಿದ ಆಹ್ವಾನವನ್ನು ಅವರು ಸಮ್ಮತಿಸಿದ್ದಾರೆ.