ತಂತ್ರಜ್ಞಾನವು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದ್ದು, ನಾಗರಿಕರನ್ನು ಸಬಲೀಕರಣಗೊಳಿಸುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸದಸ್ಯ ಶ್ರೀ ನಬಮ್ ರೆಬಿಯಾ ಅವರ ಟ್ವೀಟ್ ಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯಿಸಿ ಈ ರೀತಿ ಬರೆದಿದ್ದಾರೆ. ಶ್ರೀ ನಬಮ್ ರೆಬಿಯಾ ಅವರು ಟ್ವೀಟ್ ಮಾಡಿ, ಸರ್ಕಾರದ 'ಡಿಜಿಟಲ್ ಇಂಡಿಯಾ'ಯೋಜನೆ ಪ್ರಾರಂಭವಾಗುವ ಮುನ್ನ ಅರುಣಾಚಲ ಪ್ರದೇಶದ ಶೇರ್ಗಾಂವ್ ಗ್ರಾಮ ಕೇವಲ ಒಂದು ಮೊಬೈಲ್ ಸೇವಾ ಪೂರೈಕೆದಾರರನ್ನು ಹೊಂದಿತ್ತು. ಈಗ ಇಲ್ಲಿ 3 ಮೊಬೈಲ್ ಸೇವಾ ಪೂರೈಕೆದಾರರು ಇದ್ದು ನಾಗರಿಕರಿಗೆ ತಂತ್ರಜ್ಞಾನದಿಂದ ಬಹಳ ಸಹಕಾರಿಯಾಗಿದೆ ಎಂದು ಅಲ್ಲಿನ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ಈ ಹಿಂದೆ, ಗ್ರಾಮದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಸಂದರ್ಭದಲ್ಲಿ ಜನರು ವೈದ್ಯರನ್ನು ಭೇಟಿ ಮಾಡಲು ಮತ್ತು ಈ ಗ್ರಾಮಕ್ಕೆ ವೈದ್ಯರನ್ನು ಕರೆತರಲು ಇಟಾನಗರಕ್ಕೆ ರಸ್ತೆಯ ಮೂಲಕ ಪ್ರಯಾಣಿಸಲು ಸುಮಾರು 3 ದಿನಗಳು ಹಿಡಿಯುತ್ತಿದ್ದವು. ಇಂದು ಮೊಬೈಲ್ ನಲ್ಲಿ ವಿಡಿಯೊ ಕಾಲ್ ಮಾಡಿ ವೈದ್ಯರನ್ನು ತಕ್ಷಣವೇ ಸಂಪರ್ಕಿಸಲು ಸಾಧ್ಯವಾಗುತ್ತದೆ. ವೈದ್ಯರು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಗೆ ಮಾರ್ಗದರ್ಶನ ನೀಡುತ್ತಾರೆ. ಕೇವಲ 30 ನಿಮಿಷಗಳಲ್ಲಿ ಜನರಿಗೆ ವೈದ್ಯರ ಚಿಕಿತ್ಸಾ ನೆರವು ಸಿಗುತ್ತದೆ. ಇ-ಸಂಜೀವಿನಿ ಪೋರ್ಟಲ್ ಅರುಣಾಚಲ ಪ್ರದೇಶದ ಜನರಿಗೆ ವರದಾನವಾಗಿದೆ ಎಂದು ಸಂಸದರು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ,
ತಂತ್ರಜ್ಞಾನ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡಿರುವುದಲ್ಲದೆ ನಾಗರಿಕರನ್ನು ಸಶಕ್ತೀಕರಣಗೊಳಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
Technology is positively impacting lives and empowering citizens. https://t.co/UvEK4z1XY0
— Narendra Modi (@narendramodi) March 6, 2023