ಭಾರತ ಸರ್ಕಾರ ಉದ್ಯೋಗ ಸೃಷ್ಟಿಗೆ ಅತಿ ಹೆಚ್ಚಿನ ಆದ್ಯತೆ ನೀಡಿದೆ. ಉದ್ಯೋಗ ಕುರಿತಂತೆ ಸಕಾಲದಲ್ಲಿ ಸರಿಯಾದ ದತ್ತಾಂಶ ಲಭ್ಯತೆಯ ಕೊರತೆಯಿಂದ ನೀತಿ ನಿರೂಪಕರಿಗೆ ಮತ್ತು ವೈಯಕ್ತಿಕ ವೀಕ್ಷಕರಿಗೆ ವಿವಿಧ ಕಾಲಘಟ್ಟದಲ್ಲಿ ಉದ್ಯೋಗ ಸೃಷ್ಟಿಯ ನಿರ್ಣಯ ತ್ರಾಸದಾಯಕವಾಗಿದೆ. ಕಾರ್ಮಿಕ ಶಾಖೆಗಳೂ ಸೇರಿದಂತೆ ಕೆಲವು ಏಜೆನ್ಸಿಗಳು ದತ್ತಾಂಶ ಸಂಗ್ರಹಿಸಿ ಪ್ರಕಟಿಸಿವೆಯಾದರೂ, ಅದರ ವ್ಯಾಪ್ತಿ ಅತ್ಯಲ್ಪ. ಕಾರ್ಮಿಕ ಶಾಖೆಯ ದತ್ತಾಂಶ ಕೆಲವೇ ವಲಯಗಳ ವ್ಯಾಪ್ತಿಯದಾಗಿದೆ ಮತ್ತು ಅನುಸರಿಸುವ ವಿಧಾನ ಸಮೀಕ್ಷಾ ಸ್ಪಂದನದ ಸಮಿತಿಯ ನವೀಕರಣಕ್ಕೆ ಅನುಗುಣವಾಗಿಲ್ಲ. ಇದರ ಫಲವಾಗಿ ನೀತಿ ನಿರೂಪಕರು ಮತ್ತು ವಿಶ್ಲೇಷಕರಿಗೆ ಮಾಹಿತಿಯ ನಿರ್ವಾತವೇರ್ಪಟ್ಟಿದೆ.
ಸಕಾಲದಲ್ಲಿ ಮತ್ತು ವಿಶ್ವಾಸಾರ್ಹವಾದ ದತ್ತಾಂಶದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನಮಂತ್ರಿಯವರು, ದೇಶದಲ್ಲಿ ದೀರ್ಘಕಾಲದಿಂದ ಇರುವ ದತ್ತಾಂಶ ವಿನ್ಯಾಸದ ಸಮಸ್ಯೆಗೆ ಪರಿಹಾರ ಹುಡುಕುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯ ಮತ್ತು ಸಂಬಂಧಿತ ಸಚಿವಾಲಯಗಳಿಗೆ ಸೂಚಿಸಿದ್ದರು. ಆ ಪ್ರಕಾರವಾಗಿ ನೀತಿ ಆಯೋಗದ ಉಪಾಧ್ಯಕ್ಷ ಡಾ. ಅರವಿಂದ ಪನಗರಿಯಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಶ್ರೀಮತಿ. ಸತ್ಯವತಿ, ಅಂಕಿಅಂಶ ಕಾರ್ಯದರ್ಶಿ ಡಾ. ಟಿ.ಸಿ.ಎ. ಅನಂತ್, ನೀತಿ ಆಯೋಗದ ಪ್ರೊ. ಪುಲಕ್ ಘೋಶ್ ಮತ್ತು ಶ್ರೀ. ಮನೀಶ್ ಸಬರ್ವಾಲ್ (ಆರ್.ಬಿ.ಐ. ಮಂಡಳಿ ಸದಸ್ಯ) ಇದರ ಸದಸ್ಯರಾಗಿದ್ದಾರೆ. ಈ ಕಾರ್ಯಪಡೆಯು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಬಹುದಾದ ಪರಿಹಾರಗಳನ್ನು ಶಿಫಾರಸು ಮಾಡುತ್ತದೆ. ಪ್ರಧಾನಮಂತ್ರಿಯವರು ಈ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ನಿರ್ದೇಶಿಸಿದ್ದಾರೆ, ಇದರಿಂದಾಗಿ ವಿಶ್ವಾಸಾರ್ಹತೆ ಆಧಾರದ ಮೇಲೆ ಸೂಕ್ತ ಪರಿಣಾಮ ಬೀರುವ ಉದ್ಯೋಗ ಕುರಿತ ನೀತಿಗಳನ್ನು ರೂಪಿಸಬಹುದಾಗಿದೆ.
.