"ಪ್ರತಿ ಭಾರತೀಯರು ನಮ್ಮ ಸಶಸ್ತ್ರ ಪಡೆಗಳು ಮತ್ತು ವೀರ ಯೋಧರ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ#MannKiBaat "
"ನೀಲಿ ಶಿರಸ್ತ್ರಾಣ ಧರಿಸಿ ಭಾರತೀಯ ಸೈನಿಕರು ದಶಕಗಳಿಂದ ವಿಶ್ವದ ಶಾಂತಿಗೆ ಕೊಡುಗೆ ನೀಡಿದ್ದಾರೆ: ಪ್ರಧಾನಿ ಮೋದಿ#MannKiBaat "
"ನೀಲಿ ಶಿರಸ್ತ್ರಾಣ ಧರಿಸಿ ಭಾರತೀಯ ಸೈನಿಕರು ದಶಕಗಳಿಂದ ವಿಶ್ವದ ಶಾಂತಿಗೆ ಕೊಡುಗೆ ನೀಡಿದ್ದಾರೆ: ಪ್ರಧಾನಿ ಮೋದಿ#MannKiBaat " "ಪ್ರತಿಯೊಬ್ಬ ಭಾರತೀಯ, ಅವರ ಪ್ರದೇಶ, ಜಾತಿ, ಧರ್ಮ ಅಥವಾ ಭಾಷೆ ಏನೇ ಇರಲಿ; ಯಾವಾಗಲೂ ನಮ್ಮ ಸೈನಿಕರಿಗೆ ಬೆಂಬಲ ಮತ್ತು ಅವರ ಯಶಸ್ಸಿಗೆ ಸಂತೋಷವನ್ನು ವ್ಯಕ್ತಪಡಿಸಲು ಸಿದ್ಧವಾಗಿದೆ: ಪ್ರಧಾನಮಂತ್ರಿ#MannKiBaat "
"ಸೈನ್ಯವು ಪುರುಷರಿಂದ ಮಾತ್ರವಲ್ಲದೆ ಮಹಿಳೆಯರಿಂದಲೂ ತನ್ನ ಶಕ್ತಿಯನ್ನು ಪಡೆಯುತ್ತದೆ ಎಂದು ಹೆಮ್ಮೆಯಿಂದ ಭಾರತ ಹೇಳಬಹುದು. ಇಂದು, ಮಹಿಳೆಯರು ಸಬಲೀಕರಣಗೊಂಡಿದ್ದಾರೆ ಮತ್ತು ಸಶಸ್ತ್ರಗೊಂಡಿದ್ದಾರೆ : ಪ್ರಧಾನಿ ಮೋದಿ #MannKiBaat "
"ವಿಪತ್ತುಗಳ ಕಾಲದಲ್ಲಿ ಭಾರತೀಯ ವಾಯುಪಡೆಯು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ #MannKiBaat "
"ಮಹಾತ್ಮ ಗಾಂಧಿ ಅವರ 150 ನೇ ಜನ್ಮ ದಿನಾಚರಣೆಯನ್ನು ಎರಡು ವರ್ಷಗಳ ಕಾಲ ಆಚರಿಸಲಿದೆ ಭಾರತ: ಪ್ರಧಾನಿ ಮೋದಿ #MannKiBaat "
"ಬಾಪೂ ಗಾಂಧಿ ಜಿ ನ ತಾಲಿಸ್ಮನ್ ಎಂದು ಕರೆಯಲ್ಪಡುವ ಎಲ್ಲರಿಗೂ ಸ್ಪೂರ್ತಿದಾಯಕ ಮಂತ್ರವನ್ನು ನೀಡಿದರು. ಈ ಮಂತ್ರ ಇಂದು ಅತ್ಯಂತ ಪ್ರಸ್ತುತವಾಗಿದೆ: ಪ್ರಧಾನಮಂತ್ರಿ #MannKiBaat ಸಮಯದಲ್ಲಿ ಪ್ರಧಾನಮಂತ್ರಿ "
" 'ಜೈ ಜವಾನ್, ಜೈ ಕಿಶನ್' ಅವರ ಘೋಷಣೆಯೊಂದಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರಬಲ ವ್ಯಕ್ತಿತ್ವವನ್ನು ಗುರುತಿಸಲಾಗಿದೆ : ಪ್ರಧಾನಿ ಮೋದಿ #MannKiBaat "
"ಶಾಸ್ತ್ರಿ ಜಿ ಅವರ ಮೃದುವಾದ ವ್ಯಕ್ತಿತ್ವ ನಮ್ಮನ್ನು ಅಪಾರ ಹೆಮ್ಮೆಯಿಂದ ತುಂಬುತ್ತದೆ ಎಂದು ಹೇಳಿದ್ದಾರೆ ಪ್ರಧಾನಿ ಮೋದಿ #MannKiBaat "
"#MannKiBaat 'ಸ್ವಚ್ಛತಾ ಹಿ ಸೇವಾ' ಚಳುವಳಿಯ ಯಶಸ್ಸಿಗೆ ಭಾರತದ ಜನರನ್ನು ಅಭಿನಂದಿಸಿದರು ಪ್ರಧಾನಿ ಮೋದಿ "
"ಅಕ್ಟೋಬರ್ 31 ರಂದು ಬನ್ನಿ 'ರನ್ ಫಾರ್ ಯೂನಿಟ್ ' ಮತ್ತು ಪ್ರತಿಯೊಂದು ಸಮುದಾಯದ ನಾಗರಿಕರು ಒಟ್ಟಾಗಿ ಸೇರಿಕೊಳ್ಳಲು ಮತ್ತು ಯುನೈಟೆಡ್ ಇಂಡಿಯಾಕ್ಕೆ ನಮ್ಮ ಪ್ರಯತ್ನಗಳನ್ನು ಬಲಪಡಿಸಬಹುದು ಎಂದು ಹೇಳಿದ್ದಾರೆ ಪ್ರಧಾನಿ ಮೋದಿ #MannKiBaat "
"#MannKiBaat ಸರ್ದಾರ್ ಪಟೇಲ್ ಅವರು ಯಾವಾಗಲೂ ತಮ್ಮ ಜೀವನದಾದ್ಯಂತ ದೇಶದ ಏಕತೆಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ ಮೋದಿ "
"ಎನ್.ಹೆಚ್.ಆರ್.ಸಿ. ತನ್ನ 25 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ಧವಾಗಿದೆ, ಸರ್ವೆ ಭವಂತು ಸುಖಿನಾ ಅವರ ಭಾರತೀಯ ವೈದಿಕ ಮೌಲ್ಯಗಳನ್ನು ಉತ್ತೇಜಿಸಿದೆ: ಪ್ರಧಾನಿ ಮೋದಿ #MannKiBaat "

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ನಮ್ಮ ಭಾರತೀಯ ಸೇನಾ ಪಡೆ, ನಮ್ಮ ಸೈನಿಕರ ಬಗ್ಗೆ ಹೆಮ್ಮೆಯಿರದ ಒಬ್ಬನೇ ಒಬ್ಬ ಭಾರತೀಯನು ಬಹುಶಃ ಇರಲಿಕ್ಕಿಲ್ಲ. ಯಾವುದೇ ಕ್ಷೇತ್ರ, ಜಾತಿ, ಧರ್ಮ, ಪಂಥ, ಅಥವಾ ಭಾಷೆಯವರೇ ಆಗಿರಲಿ ಪ್ರತಿಯೊಬ್ಬ ಭಾರತೀಯರು ನಮ್ಮ ಸೈನಿಕರ ಕುರಿತು ಸಂತೋಷ, ಸಂಭ್ರಮವನ್ನು ವ್ಯಕ್ತಪಡಿಸಲು ಕಾತುರರಾಗಿರುತ್ತಾರೆ. ನಿನ್ನೆ ಭಾರತದ ಎರಡೂ ಕಾಲು ಕೋಟಿ ಜನತೆ ಪರಾಕ್ರಮ ದಿನವನ್ನು ಆಚರಿಸಿದರು. 2016 ರಲ್ಲಿ ಆದ ಸರ್ಜಿಕಲ್ ಸ್ಟ್ರೈಕ್ನ್ನು  ಸ್ಮರಿಸಲಾಯಿತು.  ಅಂದು ಭಯೋತ್ಪಾದನೆ ನೆಪದಲ್ಲಿ ನಮ್ಮ ದೇಶದ ಮೇಲೆ ನಕಲಿ ಯುದ್ಧವನ್ನು ಮಾಡುವ ಉದ್ಧಟತನ ತೋರಿದವರಿಗೆ ನಮ್ಮ ಸೈನಿಕರು ಸರಿಯಾಗಿ ಎದುರುತ್ತರ ನೀಡಿದ್ದರು. ನಾವು ಎಷ್ಟು ಸಮರ್ಥರು, ನಮ್ಮ ಸೇನೆ ತಮ್ಮ ಜೀವದ ಹಂಗು ತೊರೆದು ಹೇಗೆ ದೇಶದ ಜನತೆಯ ಸಂರಕ್ಷಣೆ ಮಾಡುತ್ತದೆ ಮತ್ತು ನಮ್ಮ ಶಕ್ತಿ ಏನೆಂಬುದು ದೇಶದ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಯುವಜನತೆಗೆ ತಿಳಿಯಲಿ ಎಂಬ ಉದ್ದೇಶದಿಂದ ದೇಶದ ವಿವಿಧ ಭಾಗಗಳಲ್ಲಿ ನಮ್ಮ ಸೇನೆ ಪ್ರದರ್ಶನವನ್ನು ಏರ್ಪಡಿಸಿತ್ತು. ಪರಾಕ್ರಮ ಪರ್ವದಂತಹ ದಿನ ಯುವಜನತೆಗೆ ನಮ್ಮ ಸೇನಾಪಡೆಯ ಗೌರವಯುತ ಇತಿಹಾಸವನ್ನು ನೆನಪಿಸುತ್ತದೆ. ಅಲ್ಲದೆ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಮಗೆ ಪ್ರೇರಣೆಯನ್ನು ನೀಡುತ್ತದೆ. ನಾನು ಕೂಡ ವೀರರ ಭೂಮಿ ರಾಜಸ್ಥಾನದ ಜೋಧ್ಪುಪರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ, ಯಾರೇ ಆಗಲಿ ನಮ್ಮ ದೇಶದ ಶಾಂತಿ ಮತ್ತು ಅಭಿವೃದ್ಧಿಶೀಲ ವಾತಾವರಣವನ್ನು  ಕದಡುವ ಪ್ರಯತ್ನವನ್ನು ಮಾಡಿದಲ್ಲಿ ಅವರಿಗೆ ಸೂಕ್ತ ಉತ್ತರ ನೀಡಲು ಈಗ ನಿರ್ಣಯಿಸಲಾಗಿದೆ. ನಾವು ಶಾಂತಿಪ್ರೀಯರು ಮತ್ತು ಶಾಂತಿ ನೆಲೆಸುವಂತೆ ಮಾಡಲು ಬದ್ಧರಾಗಿದ್ದೇವೆ, ಆದರೆ ಗೌರವಪೂರ್ಣವಾಗಿ ಇದನ್ನು ಸಾಧಿಸಬೇಕು ಹೊರತಾಗಿ ಖಂಡಿತ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದರಿಂದಾಗಲೀ ಅಥವಾ ರಾಷ್ಟ್ರದ ಸಾರ್ವಭೌಮತ್ವವನ್ನು ಪಣಕ್ಕಿಟ್ಟಲ್ಲ. ಭಾರತ ಎಂದಿಗೂ ಶಾಂತಿಯ ಬಗ್ಗೆ ಬದ್ಧತೆಯುಳ್ಳದ್ದಾಗಿದ್ದು ಸಮರ್ಪಿತವಾಗಿದೆ. 20 ನೇ ಶತಮಾನದಲ್ಲಿ ನಡೆದ 2 ವಿಶ್ವಯುದ್ಧಗಳು ನಮಗೆ ಯಾವುದೇ ರೀತಿ ಸಂಬಂಧಿಸಿರದಿದ್ದರೂ ನಮ್ಮ ಒಂದು ಲಕ್ಷಕ್ಕೂ ಹೆಚ್ಚು ಸೈನಿಕರು ಶಾಂತಿಗಾಗಿ ತಮ್ಮ ಸರ್ವಸ್ವವನ್ನೂ ಬಲಿದಾನಗೈದರು. ಪರರ ಭೂಮಿಯ ಮೇಲೆ ಎಂದಿಗೂ ನಾವು ಕಣ್ಣು ಹಾಕಿಲ್ಲ. ಶಾಂತಿಗಾಗಿ ಮಾತ್ರ ನಮ್ಮ ಹೋರಾಟ. ಕೆಲವೇ ದಿನಗಳ ಹಿಂದೆ ಸೆಪ್ಟೆಂಬರ್ 23 ಕ್ಕೆ ಇಸ್ರೇಲ್ನಿ ಹೈಫಾ ಯುದ್ಧಕ್ಕೆ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಆಕ್ರಮಣಕಾರರಿಂದ ಹೈಫಾವನ್ನು ಮುಕ್ತಗೊಳಿಸಿದ್ದ ಮೈಸೂರು, ಹೈದ್ರಾಬಾದ್ ಮತ್ತು ಜೋಧಪುರದ ಲ್ಯಾನ್ಸರ್ಸ್ ನ ನಮ್ಮ ವೀರ ಯೋಧರನ್ನು ಸ್ಮರಿಸಲಾಯಿತು. ಇದು ಕೂಡಾ ಶಾಂತಿಯನ್ನು ಕಾಪಾಡಲು ನಮ್ಮ ಸೈನಿಕರು ತೋರಿದ ಪರಾಕ್ರಮವಾಗಿತ್ತು. ಇಂದಿಗೂ ವಿಶ್ವಸಂಸ್ಥೆಯ ವಿಭಿನ್ನ ಶಾಂತಿ ಪರಿಪಾಲನಾ ಪಡೆಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಸೈನಿಕರನ್ನು ಕಳುಹಿಸುವ ದೇಶಗಳಲ್ಲಿ ಭಾರತ ಒಂದಾಗಿದೆ. ನಮ್ಮ ವೀರ ಯೋಧರು ನೀಲಿ ಬಣ್ಣದ ಹೆಲ್ಮೆಟ್ ಧರಿಸಿ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುವಲ್ಲಿ ದಶಕಗಳಿಂದ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.  

 

ನನ್ನ ಪ್ರಿಯ ದೇಶಬಾಂಧವರೆ, ನೀಲಾಕಾಶದ ವಿಚಾರಗಳು ಬಹಳ ವಿಭಿನ್ನವಾಗಿರುತ್ತವೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಅಂತೆಯೇ ಭಾರತೀಯ ವಾಯುಸೇನೆ ಕೂಡಾ ತಮ್ಮ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದೆ. ನಮ್ಮಲ್ಲಿ ಸುರಕ್ಷತಾ ಭಾವವನ್ನು ಮೂಡಿಸಿದೆ. ಗಣರಾಜ್ಯೋತ್ಸವ ಸಮಾರಂಭದ ದಿನದಂದು ಜನರು ಅತ್ಯಂತ ಉತ್ಸುಕತೆಯಿಂದ ಕಾಯುವ ಹಂತ ಫ್ಲೈ ಪಾಸ್ಟ್. ಇದರಲ್ಲಿ ನಮ್ಮ ವಾಯುಪಡೆ ಅದ್ಭುತವಾದ ಕಸರತ್ತಿನೊಂದಿಗೆ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡುತ್ತದೆ. ಅಕ್ಟೋಬರ್ 8 ರಂದು ನಾವು ವಾಯುಸೇನಾ ದಿನವನ್ನು ಆಚರಿಸುತ್ತೇವೆ. 1932 ರಲ್ಲಿ 6 ಜನ ಪೈಲಟ್ಗಂಳು ಮತ್ತು 19 ವಾಯು ಸೈನಿಕರ  ಒಂದು ಪುಟ್ಟ ಆರಂಭದೊಂದಿಗೆ ವೃದ್ಧಿಸುತ್ತಾ ಸಾಗಿದ ವಾಯುಸೇನೆ ಇಂದು 21 ನೇ ಶತಮಾನದ ಎಲ್ಲರಿಗಿಂತ ಸಾಹಸಮಯ ಮತ್ತು ಶಕ್ತಿಯುತ ಏರ್ ಫೋರ್ಸ್ಗಇಳ ಪಟ್ಟಿಗೆ ಸೇರಿದೆ. ಇದು ಒಂದು ಸ್ಮರಣೀಯ ಯಾತ್ರೆಯಾಗಿದೆ. ದೇಶಕ್ಕೆ ತಮ್ಮ ಸೇವೆಯನ್ನು ಒದಗಿಸುವ ಏರ್ ವಾರಿಯರ್ಸ್ ಮತ್ತು ಅವರ ಕುಟುಂಬಕ್ಕೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. 1947 ನಲ್ಲಿ ಪಾಕಿಸ್ತಾನದ ಆಕ್ರಮಣಕಾರರು ಒಂದು ಅನಿರೀಕ್ಷಿತ ದಾಳಿಯನ್ನು ಆರಂಭಿಸಿದಾಗ, ಶ್ರೀನಗರವನ್ನು ದಾಳಿಕೋರರಿಂದ ರಕ್ಷಿಸಲು ಭಾರತೀಯ ಸೈನಿಕರು ಮತ್ತು ಯುದ್ಧ ಸಾಮಗ್ರಿಗಳು ಯುದ್ಧ ಭೂಮಿಗೆ ಸಕಾಲದಲ್ಲಿ ತಲುಪುವಂತೆ ಮಾಡಿದ್ದು ಇದೇ ವಾಯುಸೇನೆ. 1965 ರಲ್ಲೂ ವಾಯುಸೇನೆ ಶತೃಗಳಿಗೆ ಸಮರ್ಪಕ ಉತ್ತರ ನೀಡಿದ್ದರು. 1971 ರ ಬಾಂಗ್ಲಾದೇಶದ ಸ್ವಾತಂತ್ರ್ಯದ ಯುದ್ಧವನ್ನು ಯಾರು ತಾನೇ ಅರಿಯರು? 1999 ರಲ್ಲಿ ಕಾರ್ಗಿಲ್ನ್ನು  ನುಸುಳುಕೋರರಿಂದ ಮುಕ್ತಗೊಳಿಸುವಲ್ಲಿಯೂ ವಾಯುಸೇನೆಯ ಪಾತ್ರ ಹಿರಿದಾದದ್ದು. ಟೈಗರ್ ಹಿಲ್ನಮಲ್ಲಿ ಹಗಲಿರುಳು ಬಾಂಬ್ ದಾಳಿಯನ್ನು ಮಾಡಿ ಅವರಿಗೆ ಮಣ್ಣು ಮುಕ್ಕಿಸಿತ್ತು. ಪರಿಹಾರ ಮತ್ತು ರಕ್ಷಣಾ ಕಾರ್ಯವಾಗಿರಲಿ ಅಥವಾ ವಿಪತ್ತು ನಿರ್ವಹಣೆಯಾಗಿರಲಿ ನಮ್ಮ ಏರ್ ವಾರಿಯರ್ಸ್ಗುಳ ಸಾಹಸಮಯ ಕೆಲಸಕ್ಕೆ ಸಂಪೂರ್ಣ ದೇಶ ವಾಯುಸೇನೆಗೆ ಕೃತಜ್ಞವಾಗಿದೆ. ಚಂಡಮಾರುತ, ಸುಂಟರಗಾಳಿ, ನೆರೆಯಿಂದ ಹಿಡಿದು ಕಾಡ್ಗಿಚ್ಚಿನಂತಹ ಪ್ರಕೃತಿ ವಿಕೋಪದ ನಿರ್ವಹಣೆ ಮತ್ತು ದೇಶದ ಜನತೆಗೆ ಸಹಾಯ ಒದಗಿಸುವ ಅವರ ಉಮೇದು ಅದ್ಭುತವಾದದ್ದು. ದೇಶದಲ್ಲಿ ಲಿಂಗ ಸಮಾನತೆಯನ್ನು ಖಚಿತಪಡಿಸುವಲ್ಲಿ ವಾಯು ಸೇನೆ ಎಲ್ಲರಿಗೂ ನಿದರ್ಶನವಾಗಿದೆ ಮತ್ತು ದೇಶದ ಹೆಣ್ಣು ಮಕ್ಕಳಿಗೆ ಅವಕಾಶ ಕಲ್ಪಿಸಲು ಪ್ರತ್ಯೇಕ ವಿಭಾಗದ ದ್ವಾರವನ್ನು ಮುಕ್ತವಾಗಿರಿಸಿದೆ. ಈಗ ವಾಯುಸೇನೆ ಮಹಿಳೆಯರಿಗೆ ಅಲ್ಪ ಕಾಲಿಕ ಸೇವಾ ಆಯೋಗ ಜೊತೆಗೆ ಖಾಯಂ ಆಯೋಗದ ಅವಕಾಶವನ್ನೂ ನೀಡುತ್ತಿದೆ. ಇದರ ಘೋಷಣೆಯನ್ನು ಅಗಸ್ಟ 15 ರಂದು ನಾನು ಕೆಂಪುಕೋಟೆಯಿಂದ ಮಾಡಿದ್ದೆ.  ಭಾರತ ಸೇನೆಯ ಸಶಸ್ತ್ರ ಪಡೆಯಲ್ಲಿ ಪುರುಷ ಶಕ್ತಿಯ ಜೊತೆ ಜೊತೆಗೆ ಸ್ತ್ರೀ ಶಕ್ತಿಯ ಪಾಲುದಾರಿಕೆಯೂ ಸಮಾನವಾಗಿದೆ ಎಂದು ಭಾರತ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಸ್ತ್ರೀ ಸಶಕ್ತಳಂತೂ ಹೌದು, ಈಗ ಸಶಸ್ತ್ರಳೂ ಆಗುತ್ತಿದ್ದಾಳೆ.                                       

 

ನನ್ನ ಪ್ರಿಯ ದೇಶಬಾಂಧವರೆ, ಕೆಲ ದಿನಗಳ ಹಿಂದೆ ನಮ್ಮ ನೌಕಾಪಡೆಯ ಅಧಿಕಾರಿಯಾದ ಅಭಿಲಾಶ್ ಟಾಮಿ ಎನ್ನುವವರು ಜೀವನ್ಮರಣದೊಂದಿಗೆ ಹೋರಾಟ ನಡೆಸುತ್ತಿದ್ದರು. ಟಾಮಿಯವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು ದೇಶ ಚಿಂತೆಗೀಡಾಗಿತ್ತು. ಅಭಿಲಾಶ್ ಟಾಮಿ ಒಬ್ಬ ಸಾಹಸಿ, ವೀರ ಅಧಿಕಾರಿ ಎಂಬುದು ನಿಮಗೆ ತಿಳಿದಿದೆಯೇ? ಅವರು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ ಒಂದು ಪುಟ್ಟ ನೌಕೆಯಲ್ಲಿ ವಿಶ್ವ ಪರ್ಯಟನೆ ಕೈಗೊಂಡ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ 80 ದಿನಗಳಿಂದ ಅವರು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಲ್ಡನ್ ಗ್ಲೋಬ್ ರೇಸ್ ನಲ್ಲಿ ಭಾಗವಹಿಸಲು ಸಮುದ್ರದಲ್ಲಿ ತಮ್ಮ ವೇಗವನ್ನು ಸ್ಥಿರವಾಗಿಟ್ಟುಕೊಂಡು ಮುಂದೆ ಸಾಗುತ್ತಿದ್ದರು, ಹಾಗಿದ್ದರೂ ಭಯಂಕರವಾದ ಸಮುದ್ರದ ಚಂಡಮಾರುತ ಅವರಿಗೆ ಆತಂಕವನ್ನು ತಂದೊಡ್ಡಿತು. ಆದರೆ ಭಾರತೀಯ ನೌಕಾಪಡೆಯ ಈ ವೀರ ಸಮುದ್ರ ಮಧ್ಯದಲ್ಲಿ ಬಹು ದಿನಗಳವರೆಗೆ ಹೋರಾಡುತ್ತಲೇ ಇದ್ದ. ನೀರಿನಲ್ಲಿ ಅನ್ನ ನೀರು ಇಲ್ಲದೆಯೇ ಹೋರಾಡುತ್ತಿದ್ದ. ಆದರೆ ಸೋಲೊಪ್ಪಿಕೊಳ್ಳಲಿಲ್ಲ. ಸಾಹಸ, ಸಂಕಲ್ಪಶಕ್ತಿ, ಪರಾಕ್ರಮದ ಒಂದು ಅದ್ಭುತ ಉದಾಹರಣೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಅಭಿಲಾಷ್ ಅವರನ್ನು ಸಮುದ್ರದಿಂದ ಸುರಕ್ಷಿತವಾಗಿ ಹೊರ ತಂದ ಮೇಲೆ ಫೋನ್ ಮೂಲಕ ಅವರೊಂದಿಗೆ ನಾನು ಮಾತನಾಡಿದ್ದೆ. ಹಿಂದೆಯೂ ಟಾಮಿಯವರನ್ನು ನಾನು ಭೇಟಿ ಮಾಡಿದ್ದೆ. ಇಂಥ ಸಂಕಷ್ಟದಿಂದ ಹೊರ ಬಂದ ಮೇಲೆಯೂ ಅವರಲ್ಲಿ ಇದ್ದಂಥ ಹುರುಪು, ಉತ್ಸಾಹ, ಮತ್ತೊಮ್ಮೆ ಏನಾದರೂ ಪರಾಕ್ರಮದ ಕೆಲಸ ಮಾಡುವ ಸಂಕಲ್ಪವನ್ನು ನನ್ನೊಂದಿಗೆ ಹಂಚಿಕೊಂಡಿದ್ದು ನಿಜಕ್ಕೂ ದೇಶದ ಯುವ ಜನತೆಗೆ ಪ್ರೇರಣಾದಾಯಕವಾಗಿದೆ. ನಾನು ಅಭಿಲಾಷ್ ಟಾಮಿಯವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಮತ್ತು ಅವರ ಈ ಸಾಹಸ, ಪರಾಕ್ರಮ, ಅವರ ಸಂಕಲ್ಪ ಶಕ್ತಿ, ಹೋರಾಡುವ ಮತ್ತು ಗೆಲ್ಲುವ ಶಕ್ತಿ ಖಂಡಿತ ನಮ್ಮ ದೇಶದ ಯುವಜನತೆಗೆ ಪ್ರೇರಣೆಯನ್ನು ನೀಡಲಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ದೇಶಕ್ಕೆ ಅಕ್ಟೋಬರ್ 2 – ಈ ದಿನದ ಮಹತ್ವ ಏನು ಎಂಬುದನ್ನು ಚಿಕ್ಕ ಚಿಕ್ಕ ಮಕ್ಕಳು ಕೂಡ ತಿಳಿದಿದ್ದಾರೆ. ಈ ವರ್ಷದ 2 ನೇ ಅಕ್ಟೋಬರ್ ಮತ್ತೊಂದು ವಿಶೇಷ ಮಹತ್ವವನ್ನು ಹೊಂದಿದೆ. ಇಂದಿನಿಂದ 2 ವರ್ಷಗಳ ತನಕ ನಾವು ಮಹಾತ್ಮ ಗಾಂಧಿಯವರ 150ನೇ ಜಯಂತಿಯ ಪ್ರಯುಕ್ತ ದೇಶದೆಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮಹಾತ್ಮಾ ಗಾಂಧಿಯವರ ವಿಚಾರಗಳು ಇಡೀ ಜಗತ್ತನ್ನೇ ಪ್ರೇರಣೆಗೊಳಿಸಿದೆ. ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಆಗಿರಲಿ, ಅಥವಾ ನೆಲ್ಸನ್ ಮಂಡೇಲಾರವರಂತಹ ಮಹಾನ್ ವ್ಯಕ್ತಿಗಳು ಪ್ರತಿಯೊಬ್ಬರೂ ಗಾಂಧೀಜಿಯವರ ವಿಚಾರಗಳಿಂದ ಶಕ್ತಿ ಗಳಿಸಿಕೊಂಡಿದ್ದರು ಮತ್ತು ತಮ್ಮ ಜನತೆಗೆ ಸಮಾನತೆ ಮತ್ತು ಆತ್ಮಗೌರವದ ಹಕ್ಕನ್ನು ಗಳಿಸಿಕೊಡಲು ದೀರ್ಘಕಾಲದ ಹೋರಾಟ ಮಾಡಲು ಶಕ್ತರಾದರು. ಇಂದಿನ ಮನದ ಮಾತಿನಲ್ಲಿ ನಾನು ನಿಮ್ಮೊಂದಿಗೆ ಪೂಜ್ಯ ಬಾಪೂರವರ ಮತ್ತೊಂದು ಮಹತ್ವಪೂರ್ಣ ಕೆಲಸದ ಬಗ್ಗೆ ಚರ್ಚೆ ನಡೆಸಲು ಬಯಸುತ್ತೇನೆ. ಇದನ್ನು ಹೆಚ್ಚು ಹೆಚ್ಹು ದೇಶವಾಸಿಗಳು ತಿಳಿದುಕೊಳ್ಳಬೇಕಾಗಿದೆ. ಸಾವಿರದ ಒಂಬೈನೂರಾ ನಲವತ್ತೊಂದರಲ್ಲಿ ಮಹಾತ್ಮಾ ಗಾಂಧಿಯವರು constructive programme ಅಂದರೆ ರಚನಾತ್ಮಕ ಕಾರ್ಯಕ್ರಮಗಳ ರೂಪದಲ್ಲಿ ಕೆಲವು ವಿಚಾರಗಳನ್ನು ಬರೆಯಲು ಪ್ರಾರಂಭಿಸಿದ್ದರು. ತದನಂತರ 1945ರಲ್ಲಿ ಯಾವಾಗ ಸ್ವಾತಂತ್ರ್ಯ ಸಂಗ್ರಾಮವು ಮಹತ್ವ ಪಡೆದುಕೊಂಡಿತೋ, ಆಗ ಅವರು ಆ ವಿಚಾರಗಳ ತಿದ್ದುಪಡಿ ಮಾಡಲ್ಪಟ್ಟ ಪ್ರತಿಯನ್ನು ತಯಾರು ಮಾಡಿದ್ದರು. ಪೂಜ್ಯ ಬಾಪೂರವರು ರೈತರು, ಹಳ್ಳಿಗಳು, ಕಾರ್ಮಿಕರ ಹಕ್ಕುಗಳ ರಕ್ಷಣೆ, ಸ್ವಚ್ಚತೆ, ಶಿಕ್ಷಣದ ಪ್ರಚಾರ ಹೀಗೆ ಬಹಳಷ್ಟು ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ದೇಶವಾಸಿಗಳ ಮುಂದೆ ಇಟ್ಟಿದ್ದಾರೆ. ಇದನ್ನು ‘ಗಾಂಧಿ ಚಾರ್ಟರ್’ (Gandhi Charter) ಎಂದೂ ಸಹ ಕರೆಯುತ್ತಾರೆ. ಪೂಜ್ಯ ಬಾಪೂರವರು ಜನಾನುರಾಗಿಯಾಗಿದ್ದರು. ಜನರ ಜೊತೆ ಬೆರೆಯುವುದು ಮತ್ತು ಅವರನ್ನು ಬೆಸೆಯುವುದು ಬಾಪೂರವರ ವಿಶೇಷತೆಯಾಗಿತ್ತು, ಇದು ಅವರ ಸ್ವಭಾವದಲ್ಲೇ ಸೇರ್ಪಡೆಯಾಗಿತ್ತು. ಇದು ಅವರ ವ್ಯಕ್ತಿತ್ವದಲ್ಲೇ ಎಲ್ಲಕ್ಕಿಂತ ವಿಶಿಷ್ಟವಾದ ರೂಪದಲ್ಲಿ ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ. ‘ಯಾವುದೇ ವ್ಯಕ್ತಿಯಾಗಿರಲಿ, ಅವರು ದೇಶಕ್ಕೆ ಅತೀ ಪ್ರಮುಖರು ಮತ್ತು ಅತ್ಯಂತ ಮುಖ್ಯರಾದವರು’ ಎಂದು ಪ್ರತಿಯೊಬ್ಬರಿಗೂ ಅವರು ಮನವರಿಕೆ ಮಾಡಿಕೊಟ್ಟಿದ್ದರು.  ಸ್ವಾತಂತ್ರ್ಯ ಸಂಗ್ರಾಮವನ್ನು ಅವರು ಒಂದು ದೊಡ್ಡ ಜನಾಂದೋಳನವನ್ನಾಗಿ ಮಾಡಿದ್ದರು ಎನ್ನುವುದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ಕೊಟ್ಟ ಬಹು ದೊಡ್ಡ ಕೊಡುಗೆ. ಮಹಾತ್ಮಾ ಗಾಂಧಿಯವರ ಆಹ್ವಾನದ ಮೇರೆಗೆ ಸಮಾಜದ ಪ್ರತಿ ಕ್ಷೇತ್ರದ, ಪ್ರತಿ ವರ್ಗದ ಜನರು ಸ್ವಾತಂತ್ರ್ಯ ಸಂಗ್ರಾಮದ ಅಂದೋಳನದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಬಾಪೂರವರು ನಮ್ಮೆಲ್ಲರಿಗೂ ಒಂದು ಪ್ರೇರಣಾದಾಯಕ ಮಂತ್ರವನ್ನು ಕೊಟ್ಟಿದ್ದಾರೆ. ಅದನ್ನು ಸಾಮಾನ್ಯವಾಗಿ ಗಾಂಧೀಜಿಯವರ ಮಂತ್ರ ಎಂದು ಕರೆಯಲಾಗುತ್ತದೆ. ಅದರಲ್ಲಿ ಗಾಂಧೀಜಿಯವರು “ನಾನು ನಿಮಗೆ ಒಂದು ಸಲಹೆಯನ್ನು ಕೊಡುತ್ತೇನೆ. ಯಾವಾಗಲಾದರೂ ನಿಮಗೆ ಅನುಮಾನ ಬಂದರೆ, ನಿಮ್ಮ ಅಹಂಕಾರ ನಿಮ್ಮನ್ನು  ಆವರಿಸಿಕೊಳ್ಳತೊಡಗಿದರೆ ಆಗ ಈ ಪರೀಕ್ಷೆಗೆ ನಿಮ್ಮನ್ನು ನೀವು ಒಡ್ಡಿಕೊಳ್ಳಿ – ನೀವು ನೋಡಿರುವ ಎಲ್ಲರಿಗಿಂತ ಬಡವನಾದ, ನಿಶ್ಶಕ್ತನಾದ ಮನುಷ್ಯನ ಚಿತ್ರವನ್ನು ನೆನಪಿಸಿಕೊಳ್ಳಿ ಮತ್ತು ಯಾವ ಹೆಜ್ಜೆಯನ್ನು ನೀವು ಇಡಲು ಯೋಚಿಸುತ್ತಿದ್ದೀರೋ ಅದು ಆ ಮನುಷ್ಯನಿಗೆ ಎಷ್ಟು ಉಪಯೋಗವಾಗುತ್ತದೆ; ಅದರಿಂದ ಆ ಮನುಷ್ಯನಿಗೆ ಸ್ವಲ್ಪ ಲಾಭವಾಗುತ್ತದೆಯೇ; ಅದರಿಂದ ಅವನು ತನ್ನ ಜೀವನ ಮತ್ತು ಅದೃಷ್ಟದ ಮೇಲೆ ಸ್ವಲ್ಪ ಹಿಡಿತ ಇಟ್ಟುಕೊಳ್ಳಬಹುದೇ; ಅದರಿಂದ ಹೊಟ್ಟೆ ಹಸಿದಿರುವ ಮತ್ತು ಅತೃಪ್ತರಾಗಿರುವ ಕೋಟ್ಯಾಂತರ ಜನರಿಗೆ ಸ್ವಾತಂತ್ರ ಸಿಗಬಹುದೇ; ಎಂದು ನಿಮ್ಮ ಮನಸ್ಸಿಗೆ ನೀವು ಕೇಳಿಕೊಳ್ಳಿ. ಆಗ ನಿಮ್ಮ ಅನುಮಾನ ಕಳೆದು ಹೋಗುತ್ತಿದೆ ಮತ್ತು ಅಹಂಕಾರ ಮುಗಿದುಹೋಗುತ್ತಿದೆ ಎಂದು ನಿಮಗೆ ಅನ್ನಿಸತೊಡಗುತ್ತದೆ.” ಎಂದು ಹೇಳಿದ್ದಾರೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಗಾಂಧೀಜಿಯವರ ಈ ಒಂದು ಮಂತ್ರ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ. ಇಂದು ದೇಶದಲ್ಲಿ ಹೆಚ್ಚುತ್ತಿರುವ ಮಧ್ಯಮ ವರ್ಗ ಮತ್ತು ಹೆಚ್ಚುತ್ತಿರುವ ಅವರ ಅರ್ಥಿಕ ಶಕ್ತಿ, ಅವರ ಖರೀದಿಸುವ ಶಕ್ತಿಯನ್ನು (purchasing power) ಹೆಚ್ಚಿಸಿದೆ. ನಾವು ಏನನ್ನಾದರೂ ಖರೀದಿಸಲು ಹೋದಾಗ ಒಂದು ಕ್ಷಣ ಪೂಜ್ಯ ಬಾಪೂರವರನ್ನು ಸ್ಮರಣೆ ಮಾಡಿಕೊಳ್ಳಬಹುದೇ? ಪೂಜ್ಯ ಬಾಪೂರವರ ಆ ಮಂತ್ರವನ್ನು ನೆನಪಿಸಿಕೊಳ್ಳಬಹುದೇ? ನಾವು ಖರೀದಿ ಮಾಡುವ ಸಮಯದಲ್ಲಿ “ನಾನು ಯಾವ ವಸ್ತುವನ್ನು ಖರೀದಿ ಮಾಡುತ್ತಿದ್ದೇನೆಯೋ ಅದರಿಂದ ನನ್ನ ದೇಶದ ಯಾವ ನಾಗರೀಕನಿಗೆ ಲಾಭವಾಗುತ್ತಿದೆ; ಯಾರ ಮುಖದ ಮೇಲೆ ಸಂತೋಷ ಮೂಡುತ್ತಿದೆ; ನನ್ನ ಖರೀದಿಯಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಲಾಭ ಪಡೆದುಕೊಳ್ಳುವ ಆ ಭಾಗ್ಯಶಾಲಿ ಯಾರಾಗಿರಬಹುದು; ಬಡವರಲ್ಲಿ ಬಡವನಿಗೆ ಇದರಿಂದ ಲಾಭವಾದರೆ ನನ್ನ ಖುಷಿ ಬಹಳಷ್ಟು ಹೆಚ್ಚಾಗುತ್ತದೆ” ಎಂದು ನಾವು ಯೋಚಿಸಬಹುದೇ? ಮುಂಬರುವ ದಿನಗಳಲ್ಲಿ ನಾವು ಯಾವಾಗಲಾದರೂ ಏನನ್ನಾದರೂ ಖರೀದಿಸಿದಾಗ ಗಾಂಧೀಜಿಯವರ ಈ ಮಂತ್ರವನ್ನು ನೆನಪಿಸಿಕೊಳ್ಳೋಣ, ಗಾಂಧೀಜಿಯವರ 150 ನೇ ಜಯಂತಿಯನ್ನು ಆಚರಿಸುವಾಗ ನಾವು ಮಾಡುವ ಪ್ರತಿಯೊಂದು ಖರೀದಿಯಿಂದ ಖಂಡಿತವಾಗಿ ಯಾರಾದರೊಬ್ಬ ದೇಶವಾಸಿಗೆ ಒಳ್ಳೆಯದಾಗಬೇಕು ಮತ್ತು ಅದರಲ್ಲಿಯೂ ಸಹ ಯಾರು ತಮ್ಮ ಬೆವರು ಹರಿಸಿರುತ್ತಾರೋ, ಯಾರು ತಮ್ಮ ಹಣವನ್ನು ಹೂಡಿರುತ್ತಾರೋ, ಯಾರು ತಮ್ಮ ಕೌಶಲ್ಯವನ್ನು ಬೆರೆಸಿರುತ್ತಾರೋ, ಆ ಎಲ್ಲರಿಗೂ ಅಲ್ಪ ಸ್ವಲ್ಪ ಲಾಭವಾಗಬೇಕು ಎಂದು ಯೋಚಿಸೋಣ. ಇದೇ ಗಾಂಧೀಜಿಯವರ ಮಂತ್ರ, ಇದೇ ಗಾಂಧೀಜಿಯವರ ಸಂದೇಶ ಮತ್ತು ನಿಮ್ಮ ಈ ಒಂದು ಸಣ್ಣ ಹೆಜ್ಜೆ ಎಲ್ಲರಿಗಿಂತ ಬಡವ ಮತ್ತು ನಿಶ್ಯಕ್ತನಾಗಿರುವ ವ್ಯಕ್ತಿಯ ಜೀವನದಲ್ಲಿ ಬಹಳ ದೊಡ್ಡ ಪರಿಣಾಮ ಬೀರುತ್ತದೆ.   

ನನ್ನ ಪ್ರೀತಿಯ ದೇಶವಾಸಿಗಳೇ, ಗಾಂಧೀಜಿಯವರು “ನಾವು ಸ್ವಚ್ಚಗೊಳಿಸಿದರೆ ಸ್ವಾತಂತ್ರ್ಯ ದೊರೆಯುತ್ತದೆ” ಎಂದು ಹೇಳಿದಾಗ ಇದು ಹೇಗಾಗುತ್ತದೆ ಎಂದು ಬಹುಶಃ ಅವರಿಗೇ ಗೊತ್ತಿರಲಿಲ್ಲ. ಆದರೆ ಅದು ಆಯಿತು, ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಇದೇ ರೀತಿ “ನನ್ನ ದೇಶದ ಆರ್ಥಿಕ ಬೆಳವಣಿಗೆಗೆ, ಆರ್ಥಿಕ ಸಬಲೀಕರಣಕ್ಕೆ, ಬಡವರು ಬಡತನದ ವಿರುದ್ಧ ಹೋರಾಡಲು ಶಕ್ತಿ ನೀಡುವ ನಿಟ್ಟಿನಲ್ಲಿ, ನನ್ನ ಈ ಸಣ್ಣ ಕೆಲಸವು ಬಹು ದೊಡ್ಡ ಕೊಡುಗೆ ಆಗಬಹುದು” ಎಂದು ನಮಗೆ ಅನ್ನಿಸುತ್ತದೆ. ಇಂದಿನ ದಿನಗಳಲ್ಲಿ ಇದೇ ನಿಜವಾದ ದೇಶಭಕ್ತಿ ಮತ್ತು ಇದೇ ಪೂಜ್ಯ ಬಾಪೂರವರಿಗೆ ನಾವು ಅರ್ಪಿಸುವ ಕಾರ್ಯಾಂಜಲಿ. ವಿಶೇಷ ಸಂದರ್ಭಗಳಲ್ಲಿ ಖಾದಿ ಮತ್ತು ಹ್ಯಾಂಡ್ಲೂರಮ್ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಯೋಚಿಸಿದರೆ, ಇದರಿಂದ ನೇಕಾರರಿಗೆ ಸಹಾಯವಾಗುತ್ತದೆ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಯಾರದ್ದೋ ಪರಿಶ್ರಮ ಅಡಗಿಕೊಂಡಿರುತ್ತದೆ ಎಂಬ ಕಾರಣ ನೀಡಿ ಹಳೆಯ ಅಥವಾ ಹರಿದ ಖಾದಿ ಬಟ್ಟೆಗಳನ್ನು ಸಹ ಜತನದಿಂದ ಇಟ್ಟುಕೊಳ್ಳುತ್ತಿದ್ದರು. ಅವರು “ಈ ಎಲ್ಲಾ ಖಾದಿಯ ಬಟ್ಟೆಗಳು ಬಹಳ ಕಷ್ಟಪಟ್ಟು ಮಾಡಿರುವಂತಹುದಾಗಿದೆ, ಇದರ ಒಂದೊಂದು ನೂಲು ಕೆಲಸಕ್ಕೆ ಬರಬೇಕು” ಎಂದು ಹೇಳುತ್ತಿದ್ದರು. ದೇಶಪ್ರೇಮ ಮತ್ತು ದೇಶವಾಸಿಗಳ ಬಗ್ಗೆ ಪ್ರೀತಿಯ ಭಾವನೆ ಪುಟ್ಟ ದೇಹದ, ಆ ಮಹಾ ಮಾನವನ ನರ ನಾಡಿಗಳಲ್ಲಿ ಹಾಸುಹೊಕ್ಕಾಗಿತ್ತು. ಎರಡು ದಿನಗಳ ನಂತರ ಪೂಜ್ಯ ಬಾಪೂರವರ ಜಯಂತಿಯ ಜೊತೆ ನಾವು ಶಾಸ್ತ್ರೀಜಿಯವರ ಜಯಂತಿಯನ್ನು ಸಹ ಆಚರಿಸುತ್ತೇವೆ. ಶಾಸ್ತ್ರೀಜಿಯವರ ಹೆಸರು ಕೇಳಿದರೆ ನಮ್ಮ ಭಾರತೀಯರ ಮನದಲ್ಲಿ ಒಂದು ಅನನ್ಯ ಭಕ್ತಿಯ ಭಾವನೆ ಉಕ್ಕಿ ಬರುತ್ತದೆ. ಅವರ ಸೌಮ್ಯ ವ್ಯಕ್ತಿತ್ವ ಪ್ರತಿ ದೇಶವಾಸಿಯಲ್ಲೂ ಯಾವಾಗಲೂ ಹೆಮ್ಮೆಯನ್ನು ತುಂಬುತ್ತದೆ.

ಲಾಲ್ ಬಹಾದೂರ್ ಶಾಸ್ತ್ರಿಯವರ ವಿಶೇಷವೆಂದರೆ ಅವರು ಬಾಹ್ಯದಲ್ಲಿ ಬಹಳ ವಿನಮ್ರವಾಗಿ ಕಾಣುತ್ತಿದ್ದರು ಆದರೆ, ಆಂತರ್ಯದಲ್ಲಿ ಕಲ್ಲಿನಂತೆ ದೃಢ ಮನಸ್ಸಿನವರಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎನ್ನುವ ಅವರ ಘೋಷವಾಕ್ಯ ಅವರ ಇದೇ ಧೀಮಂತ ವ್ಯಕ್ತಿತ್ವದ ಗುರುತಾಗಿತ್ತು. ರಾಷ್ಟ್ರಕ್ಕೆ ಅವರ ನಿಸ್ವಾರ್ಥ ಸೇವೆಯ ಪ್ರತಿಫಲದ ಕಾರಣವಾಗಿಯೇ, ಕೇವಲ ಒಂದೂವರೆ ವರ್ಷಗಳ ಕಡಿಮೆ ಕಾರ್ಯಾವಧಿಯಲ್ಲಿ ಅವರು ದೇಶದ ಸೈನಿಕರು ಮತ್ತು ರೈತರು ಸಫಲತೆಯ ಶಿಖರದ ಮೇಲೆ ಏರಲು ಈ ಮಂತ್ರವನ್ನು ನೀಡಿದರು. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಾವು ಯಾವಾಗ ಪೂಜ್ಯ ಬಾಪೂರವರ ಸ್ಮರಣೆಯನ್ನು ಮಾಡುತ್ತೇವೆಯೋ ಆಗ ಸ್ವಚ್ಚತೆಯ ಬಗ್ಗೆ ಮಾತನಾಡದೇ ಇರಲು ಸಾಧ್ಯವಾಗುವುದಿಲ್ಲ. ಇದೇ ಸೆಪ್ಟೆಂಬರ್ 15 ರಿಂದ “ಸ್ವಚ್ಚತೆಯೇ ಸೇವೆ” ಎನ್ನುವ ಒಂದು ಅಭಿಯಾನ ಪ್ರಾರಂಭವಾಯಿತು. ಕೋಟ್ಯಾಂತರ ಜನರು ಈ ಅಭಿಯಾನದಲ್ಲಿ ಸೇರಿಕೊಂಡರು ಮತ್ತು ನನಗೂ ಸಹ ದೆಹಲಿಯ ಅಂಬೇಡ್ಕರ್ ಶಾಲೆಯಲ್ಲಿ ಮಕ್ಕಳ ಜೊತೆಗೆ ಸ್ವಚ್ಚತಾ ಶ್ರಮದಾನ ಮಾಡುವ ಸೌಭಾಗ್ಯ ಸಿಕ್ಕಿತು. ಪೂಜ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಲಾನ್ಯಾಸ ಮಾಡಿದ ಆ ಶಾಲೆಗೆ ನಾನು ಹೋದೆ. ದೇಶದೆಲ್ಲೆಡೆ ಎಲ್ಲಾ ರೀತಿಯ ಜನರೂ ಈ 15 ನೇ ತಾರೀಖಿನಂದು ಶ್ರಮದಾನದಲ್ಲಿ ಭಾಗಿಯಾಗಿದ್ದರು. ಸಂಸ್ಥೆಗಳು ಸಹಾ ಇದಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದವು. ಶಾಲೆಯ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಎನ್ಸಿನಸಿ, ಎನ್ಎ.ಸ್ಎಯಸ್, ಯುವ ಸಂಘಟನೆಗಳು, ಮಾಧ್ಯಮ ತಂಡಗಳು, ಕಾರ್ಪೊರೇಟ್ ಜಗತ್ತು ಇವರೆಲ್ಲರೂ ಅತ್ಯಂತ ಉತ್ಸಾಹದಿಂದ ಸ್ವಚ್ಚತಾ ಶ್ರಮದಾನವನ್ನು ಮಾಡಿದರು. ಇದಕ್ಕಾಗಿ ನಾನು ಈ ಎಲ್ಲಾ ಸ್ವಚ್ಚತಾ ಪ್ರೇಮಿ ದೇಶವಾಸಿಗಳಿಗೆ ಹೃದಯಪೂರ್ವಕವಾಗಿ ಅನಂತಾನಂತ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಬನ್ನಿ, ಒಂದು ದೂರವಾಣಿ ಕರೆಯನ್ನು ಕೇಳೋಣ:

 

“ನಮಸ್ಕಾರ. ನನ್ನ ಹೆಸರು ಶೈತಾನ್ ಸಿಂಗ್. ನಾನು ರಾಜಾಸ್ತಾನದ, ಬಿಕಾನೆರ್ ಜಿಲ್ಲೆಯ ಪೂಗಲ್ ತಾಲೂಕಿನಿಂದ ಮಾತನಾಡುತ್ತಿದ್ದೇನೆ. ನಾನೊಬ್ಬ ಅಂಧ ವ್ಯಕ್ತಿಯಾಗಿದ್ದೇನೆ. ನನಗೆ ಎರಡೂ ಕಣ್ಣುಗಳಿಲ್ಲ, ದೃಷ್ಟಿ ಇಲ್ಲ. ಮನದ ಮಾತು ಕಾರ್ಯಕ್ರಮದಲ್ಲಿ ಸ್ವಚ್ಚ ಭಾರತದ ಬಗ್ಗೆ ಮೋದಿಜಿಯವರು ಇಟ್ಟ ಹೆಜ್ಜೆ ಬಹಳ ದೊಡ್ಡದು. ನಮ್ಮಂತಹ ಅಂಧರು ಶೌಚಕ್ಕೆ ಹೋಗಲು ಕಷ್ಟಪಡುತ್ತಿದ್ದೆವು. ಈಗ ಪ್ರತಿ ಮನೆಯಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ, ಇದರಿಂದ ನಮಗೆ ಬಹು ದೊಡ್ಡ ಲಾಭವಾಗಿದೆ. ಇದು ಬಹಳ ದೊಡ್ಡದಾಗಿ ಇಟ್ಟಿರುವ ಹೆಜ್ಜೆ, ಈ ಕೆಲಸವು ಹೀಗೆಯೇ ಮುಂದುವರೆಯಲಿ”.

 

ಅನಂತಾನಂತ ಧನ್ಯವಾದಗಳು. ನೀವು ಬಹಳ ಒಳ್ಳೆಯ ಮಾತನ್ನು ಹೇಳಿದಿರಿ. ಪ್ರತಿಯೊಬ್ಬರ ಜೀವನದಲ್ಲಿಯೂ ಸ್ವಚ್ಚತೆಯು ಅತೀ ಮಹತ್ವದ್ದಾಗಿದೆ, ಸ್ವಚ್ಚ ಭಾರತ ಅಭಿಯಾನದ ಮೂಲಕ ನಿಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಯಿತು ಮತ್ತು ಇದರಿಂದ ಈಗ ನಿಮಗೆ ಉಪಯೋಗವಾಗುತ್ತಿದೆ. ನಮ್ಮೆಲ್ಲರಿಗೆ ಇದಕ್ಕಿಂತ ಹೆಚ್ಚಿನ ಖುಷಿಯ ವಿಷಯ ಬೇರೆ ಯಾವುದಾಗಬಲ್ಲದು? ತಮ್ಮ ದೃಷ್ಟಿವಿಹೀನತೆಯ ಕಾರಣದಿಂದ ನೀವು ನೋಡಲು ಸಾಧ್ಯವಿಲ್ಲ, ಆದರೆ ಶೌಚಾಲಯ ಇಲ್ಲದೆ ಇದ್ದಾಗ ನೀವು ಎಷ್ಟು ಕಷ್ಟದ ಜೀವನ ನಡೆಸಿದ್ದೀರಿ ಮತ್ತು ಶೌಚಾಲಯ ನಿರ್ಮಿಸಿದ ಮೇಲೆ ಅದು ನಿಮಗೆ ಎಷ್ಟು ದೊಡ್ಡ ವರದಾನವಾಯಿತು ಎನ್ನುವುದನ್ನು ಈ ಅಭಿಯಾನದ ಜೊತೆಗೆ ಸೇರಿಕೊಂಡ ಜನರಿಗೆ ಊಹಿಸಲು ಕೂಡ ಸಾಧ್ಯವಿಲ್ಲ. ಬಹುಶಃ ನೀವೂ ಕೂಡ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದೂರವಾಣಿ ಕರೆ ಮಾಡದೆ ಇದ್ದಿದ್ದರೆ ಸ್ವಚ್ಚತೆಯ ಈ ಅಭಿಯಾನದಲ್ಲಿ ಸೇರಿದ ಜನರ ಮನಸ್ಸಿನಲ್ಲಿ ಇಂತಹ ಸೂಕ್ಷ್ಮ ವಿಚಾರ ಹೊಳೆಯುತ್ತಲೇ  ಇರಲಿಲ್ಲ. ನಾನು ನಿಮ್ಮ ದೂರವಾಣಿ ಕರೆಗೆ ನಿಮಗೆ ವಿಶೇಷವಾಗಿ ಧನ್ಯವಾದ ಹೇಳುತ್ತಿದ್ದೇನೆ. 

 

ನನ್ನ ಪ್ರೀತಿಯ ದೇಶವಾಸಿಗಳೇ, ‘ಸ್ವಚ್ಚ ಭಾರತ ಮಿಶನ್” ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಒಂದು ಸಫಲತೆಯ ಕತೆಯಾಗಿ ಹೋಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ. ಈ ಬಾರಿ ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಜಗತ್ತಿನಲ್ಲೇ ಅತೀ ದೊಡ್ಡದಾದ ಸ್ವಚ್ಚತಾ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.  “ಮಹಾತ್ಮಾ ಗಾಂಧಿ ಅಂತರಾಷ್ಟ್ರೀಯ ಸ್ವಚ್ಚತಾ ಸಮ್ಮೇಳನ” ಅಂದರೆ ‘Mahatma Gandhi International Sanitation Convention’ ಜಗತ್ತಿನ ಎಲ್ಲಾ   Sanitation Ministers ಮತ್ತು ಈ ಕ್ಷೇತ್ರದ ತಜ್ಞರನ್ನು ಒಗ್ಗೊಡಿಸುತ್ತಿದೆ, ಸ್ವಚ್ಚತೆಗೆ ಸಂಬಂಧಪಟ್ಟ ತಮ್ಮ ಪ್ರಯೋಗ ಮತ್ತು ಅನುಭವಗಳನ್ನು ಅವರು ಹಂಚಿಕೊಳ್ಳಲಿದ್ದಾರೆ. ‘Mahatma Gandhi International Sanitation Convention’ ಇದು, 2 ಅಕ್ಟೋಬರ್ 2018 ರಂದು ಬಾಪೂರವರ 150ನೇ ಜಯಂತಿಯ ಕಾರ್ಯಕ್ರಮಗಳ ಶುಭಾರಂಭದೊಂದಿಗೆ ಮುಗಿಯುತ್ತದೆ.  

ನನ್ನ ಪ್ರೀತಿಯ ದೇಶವಾಸಿಗಳೇ, ಸಂಸ್ಕೃತದಲ್ಲಿ ಒಂದು ಉಕ್ತಿ ಹೀಗಿದೆ – ‘ನ್ಯಾಯಮೂಲಂ ಸ್ವರಾಜ್ಯಂ ಸ್ಯಾತ್”. ಅಂದರೆ ಸ್ವರಾಜ್ಯದ ಮೂಲದಲ್ಲೇ ನ್ಯಾಯ ಇರುತ್ತದೆ ಎಂದು. ಯಾವಾಗ ನ್ಯಾಯದ ಚರ್ಚೆ ಆಗುತ್ತದೆಯೋ ಆಗ ಮನುಷ್ಯನ ಹಕ್ಕಿನ ಭಾವನೆ ಅದರಲ್ಲಿ ಸಂಪೂರ್ಣವಾಗಿ ಒಳಗೊಂಡಿರುತ್ತದೆ. ಶೋಷಿತ, ಪೀಡಿತ ಹಾಗೂ ವಂಚಿತರ ಸ್ವಾತಂತ್ರ್ಯ, ಶಾಂತಿಯನ್ನು ಕಾಪಾಡಲು ಮತ್ತು ಅವರಿಗೆ ಕಡ್ಡಾಯವಾಗಿ ನ್ಯಾಯವನ್ನು ಒದಗಿಸಲು ವಿಶೇಷವಾಗಿ ಇದು ಅನಿವಾರ್ಯವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮೂಲಕ ಕೊಡಲ್ಪಟ್ಟ ಸಂವಿಧಾನದಲ್ಲಿ ಬಡವರ ಮೂಲ ಹಕ್ಕಿನ ರಕ್ಷಣೆಗಾಗಿ ಬಹಳಷ್ಟು ಅವಕಾಶಗಳನ್ನು ಮಾಡಲಾಗಿದೆ. ಅವರ ದೂರದೃಷ್ಟಿಯಿಂದ ಪ್ರೇರಣೆಗೊಂಡು 12 ಅಕ್ಟೋಬರ್ 1993 ರಂದು ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ಅಂದರೆ ‘National Human Rights Commission’ (NHRC)  ಯ ರಚನೆ ಮಾಡಲಾಯಿತು. ಕೆಲವೇ ದಿನಗಳ ನಂತರ (NHRC) ಯ 25ನೇ ವರ್ಷ ಸಂಪೂರ್ಣವಾಗಲಿದೆ. ಓಊಖಅ ಯು ಬರೀ ಮಾನವ ಹಕ್ಕುಗಳ ರಕ್ಷಣೆಯನ್ನಷ್ಟೇ ಅಲ್ಲದೆ ಮಾನವೀಯತೆಯ ಹಿರಿಮೆಯನ್ನು ಸಹ ಹೆಚ್ಚಿಸುವ ಕೆಲಸ ಮಾಡಿದೆ. ನಮ್ಮೆಲ್ಲರ ಪ್ರೀತಿಯ ನಾಯಕ, ನಮ್ಮ ದೇಶದ ಮಾಜಿ ಪ್ರಧಾನಮಂತ್ರಿಗಳಾದ ಶ್ರೀಯುತ ಅಟಲ್ ಬಿಹಾರಿ ವಾಜಪೇಯಿಯವರು “ಮಾನವ ಹಕ್ಕು ಎನ್ನುವುದು ನಮಗೆ ಬರೀ ಎರವಲು ಪರಿಕಲ್ಪನೆಯಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದರು. ನಮ್ಮ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಚಿನ್ಹೆಯಲ್ಲಿ ವೇದಗಳ ಕಾಲದ ಆದರ್ಶ ಸೂತ್ರವಾದ “ಸರ್ವೇ ಭವಂತು ಸುಖಿನಃ” ಇದನ್ನು ಬಿಂಬಿಸಲಾಗಿದೆ. NHRC ಯು ಮಾನವ ಹಕ್ಕುಗಳ ಬಗ್ಗೆ ವ್ಯಾಪಕವಾದ ಅರಿವು ಮೂಡಿಸಿದೆ. ಜೊತೆಗೆ ಇದರ ದುರುಪಯೋಗವನ್ನು ತಡೆಗಟ್ಟವುದರಲ್ಲಿ ಸಹ ಪ್ರಶಂಸನೀಯ ಪಾತ್ರ ವಹಿಸಿದೆ. 25 ವರ್ಷಗಳ ಈ ಪಯಣದಲ್ಲಿ ಅದು ದೇಶವಾಸಿಗಳಲ್ಲಿ ಒಂದು ರೀತಿಯ ಭರವಸೆ ಹಾಗೂ ವಿಶ್ವಾಸದ ವಾತಾವರಣವನ್ನು ಹುಟ್ಟುಹಾಕಿದೆ. ಒಂದು ಆರೋಗ್ಯಕರ ಸಮಾಜಕ್ಕಾಗಿ, ಉತ್ತಮವಾದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಇದು ಒಂದು ದೊಡ್ಡ ಭರವಸೆ ಎಂದು ನಾನು ತಿಳಿದಿದ್ದೇನೆ. ಇಂದು ರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳ ಕೆಲಸಗಳ ಜೊತೆಜೊತೆಗೆ 26 ರಾಜ್ಯಗಳಲ್ಲಿ ಮಾನವ ಹಕ್ಕುಗಳ ಆಯೋಗಗಳನ್ನು ಸಹ ರಚಿಸಲಾಗಿದೆ. ಒಂದು ಸಮಾಜದ ರೂಪದಲ್ಲಿ ಮಾನವ ಹಕ್ಕುಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳುವ ಮತ್ತು ಆಚರಣೆಗೆ ತರುವ ಅವಶ್ಯಕತೆಯು ನಮಗಿದೆ. ಇದೇ “ಸಬ್ ಕಾ ಸಾಥ್ – ಸಬ್ ಕಾ ವಿಕಾಸ್” ಎನ್ನುವುದರ ಮೂಲಾಧಾರವಾಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ ತಿಂಗಳಿರಲಿ, ಜಯಪ್ರಕಾಶ್ ನಾರಾಯಣ್ ಅವರ ಜಯಂತಿ ಇರಲಿ, ರಾಜಮಾತೆ ವಿಜಯರಾಜೆ ಸಿಂಧಿಯಾ ಅವರ ಜನ್ಮ ಶತಾಬ್ದಿ ವರ್ಷದ ಪ್ರಾರಂಭವಿರಲಿ – ಈ ಎಲ್ಲಾ ಮಹನೀಯರು  ನಮಗೆಲ್ಲರಿಗೂ ಪ್ರೇರಣೆ ನೀಡುತ್ತಿರುತ್ತಾರೆ, ಅವರಿಗೆ ನಾವು ನಮನ ಸಲ್ಲಿಸುತ್ತೇವೆ. 31 ಅಕ್ಟೋಬರ್ ರಂದು ಸರ್ದಾರ್ ಪಟೇಲರ ಜಯಂತಿ. ನಾನು ಮುಂದಿನ ಮನದ ಮಾತು ಕಾರ್ಯಕ್ರಮದಲ್ಲಿ ಇವರ ಬಗ್ಗೆ ವಿವರವಾಗಿ ಮಾತನಾಡುತ್ತೇನೆ. ಕೆಲವು ವರ್ಷಗಳಿಂದ ಸರ್ದಾರ್ ಪಟೇಲರ  ಜಯಂತಿಯ ಅಂಗವಾಗಿ ಅಕ್ಟೋಬರ್ 31 ರಂದು ಭಾರತದ ಪ್ರತಿ ಸಣ್ಣ-ದೊಡ್ಡ ನಗರಗಳಲ್ಲಿ, ಹೋಬಳಿಗಳಲ್ಲಿ, ಹಳ್ಳಿಗಳಲ್ಲಿ ‘ಏಕತೆಗಾಗಿ ಓಟ’ (Run for Unity) ವನ್ನು ಆಯೋಜಿಸಲಾಗುತ್ತದೆ. ಆದ್ದರಿಂದ ನಾನು ಇಂದು ಖಂಡಿತವಾಗಿಯೂ ಸರ್ದಾರ್ ಪಟೇಲರ ವಿಷಯವನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಈ ವರ್ಷವೂ ಸಹ ನಾವು ಪ್ರಯತ್ನ ಪಟ್ಟು ನಮ್ಮ ಹಳ್ಳಿಗಳಲ್ಲಿ, ಹೋಬಳಿಗಳಲ್ಲಿ, ನಗರ-ಪಟ್ಟಣಗಳಲ್ಲಿ Run for Unity ಯನ್ನು ಆಯೋಜಿಸಬೇಕು. ಏಕತೆಗಾಗಿ ಓಟವು ಸರ್ದಾರ್ ಪಟೇಲರನ್ನು ಸ್ಮರಿಸುವ ಅತ್ಯುತ್ತಮ ಮಾರ್ಗವಾಗಿದೆ. ಏಕೆಂದರೆ, ಅವರು ಜೀವನಪೂರ್ತಿ ದೇಶದ ಏಕತೆಗಾಗಿ ಕೆಲಸ ಮಾಡಿದರು. ಅಕ್ಟೋಬರ್ 31 ರಂದು Run for Unityಯ ಮೂಲಕ ಸಮಾಜದ ಪ್ರತಿ ವರ್ಗವನ್ನೂ, ದೇಶದ ಪ್ರತಿ ಘಟಕವನ್ನೂ ಏಕತೆಯ ಸೂತ್ರದಲ್ಲಿ ಬಂಧಿಸುವ ನಮ್ಮ ಪ್ರಯತ್ನಗಳಿಗೆ ನಾವು ಶಕ್ತಿ ತುಂಬೋಣ ಎಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಮತ್ತು ಇದೇ ಅವರಿಗೆ ನಾವು ನೀಡುವ ಅತ್ಯುತ್ತಮ ಶ್ರದ್ಧಾಂಜಲಿ.

 

ನನ್ನ ಪ್ರೀತಿಯ ದೇಶವಾಸಿಗಳೇ, ನವರಾತ್ರಿಯಾಗಿರಲಿ, ದುರ್ಗಾಪೂಜೆಯಾಗಿರಲಿ, ವಿಜಯದಶಮಿಯಾಗಿರಲಿ, ಈ ಎಲ್ಲಾ ಪವಿತ್ರ ಉತ್ಸವಗಳ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ, ಅನಂತಾನಂತ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. 

 

ಧನ್ಯವಾದಗಳು.  

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.