ಘನತೆವೆತ್ತ ಪ್ರಧಾನಮಂತ್ರಿ ಶ್ರೀ ಸ್ಟೀಫೆನ್ ಲಾಫ್ವೆನ್ ಅವರೇ,

ಮಾಧ್ಯಮದ ಮಿತ್ರರೇ,!

ಇದು ಸ್ವೀಡನ್ ಗೆ ನನ್ನ ಪ್ರಥಮ ಭೇಟಿ. ಮೂರು ದಶಕಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಸ್ವೀಡನ್ ಗೆ ಭೇಟಿ ನೀಡಿದ್ದಾರೆ. ಸ್ವೀಡನ್ನಿನಲ್ಲಿ ಆಪ್ತ ಸ್ವಾಗತ ಮತ್ತು ಗೌರವ ನೀಡಿದ್ದಕ್ಕಾಗಿ ನಾನು ಸ್ವೀಡನ್ ಸರ್ಕಾರ ಮತ್ತು ಪ್ರಧಾನಮಂತ್ರಿ ಲಾಫ್ವೆನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಈ ಭೇಟಿಯ ವೇಳೆ, ಪ್ರಧಾನಮಂತ್ರಿ ಲಾಫ್ವೆನ್ ಅವರು ಭಾರತದ ಶೃಂಗಸಭೆಯನ್ನು ಇತರ ನಾರ್ಡಿಕ್ ರಾಷ್ಟ್ರಗಳೊಂದಿಗೆ ಆಯೋಜಿಸಿದ್ದಾರೆ. ನಾನು ಇದಕ್ಕಾಗಿ ನನ್ನ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತೇನೆ.

|

ಭಾರತದ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ, ಸ್ವೀಡನ್ 2016ರಿಂದ ಬಲವಾದ ಪಾಲುದಾರನಾಗಿದೆ. ಮುಂಬೈನಲ್ಲಿ ನಡೆದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಲಾಫ್ವೆನ್ ಅವರು, ದೊಡ್ಡ ವಾಣಿಜ್ಯ ನಿಯೋಗದೊಂದಿಗೆ ಖುದ್ದು ಭಾಗಿಯಾಗಿದ್ದರು. ಭಾರತದ ಹೊರಗೆ ನಡೆದ ಅತಿ ಮುಖ್ಯವಾದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಕಳೆದ ವರ್ಷ ಅಕ್ಟೋಬರ್ ನಲ್ಲಿ ಸ್ವೀಡನ್ ನಲ್ಲಿ ನಡೆದಿದ್ದು. ಇದು ನಮಗೆ ಅತೀವ ಸಂತಸ ಮತ್ತು ಹೆಮ್ಮೆಯ ವಿಚಾರ, ಪ್ರಧಾನಿ ಲಾಫ್ವೆನ್ ಅವರು ಸ್ವಯಂ ಇದರಲ್ಲಿ ಭಾಗಿಯಾಗಿದ್ದರು. ಇಂದು ನಡೆದ ನಮ್ಮ ಮಾತುಕತೆಯಲ್ಲಿ ಪ್ರಮುಖ ಅಂಶವೆಂದರೆ, ಭಾರತದ ಅಭಿವೃದ್ಧಿಯಲ್ಲಿ ಸೃಷ್ಟಿಸಿರುವ ಅವಕಾಶಗಳಲ್ಲಿ ಭಾರತದೊಂದಿಗೆ ಸ್ವೀಡನ್ ಹೇಗೆ ಪರಸ್ಪರ ಗೆಲುವಿನ ಪಾಲುದಾರಿಕೆಯನ್ನು ರೂಪಿಸುತ್ತದೆ ಎಂಬುದಾಗಿತ್ತು ಎಂದು ನಾನು ಭಾವಿಸುತ್ತೇನೆ. ಇದರ ಫಲವಾಗಿ, ಇಂದು ನಾವು, ನಾವಿನ್ಯತೆಯ ಪಾಲುದಾರಿಕೆ ಮತ್ತು ಜಂಟಿ ಕ್ರಿಯಾ ಯೋಜನೆಗೆ ಸಮ್ಮತಿಸಿದ್ದೇವೆ.

ನಾವಿನ್ಯತೆ, ಹೂಡಿಕೆ, ಸ್ಟಾರ್ಟ್ ಅಪ್ ಗಳು, ಉತ್ಪಾದನೆ ಇತ್ಯಾದಿ ಪಾಲುದಾರಿಕೆಯಲ್ಲಿ ನಮ್ಮ ಪ್ರಮುಖ ಆಯಾಮಗಳಾಗಿವೆ. ಅವುಗಳೊಂದಿಗೆ ನಾವು ಹಲವು ವಿಷಯಗಳಾದ ನವೀಕರಿಸಬಹುದಾದ ಇಂಧನ, ನಗರ ಸಾರಿಗೆ, ತ್ಯಾಜ್ಯ ನಿರ್ವಹಣೆಯ ಬಗ್ಗೆ ಗಮನ ಹರಿಸಿದ್ದೇವೆ. ಈ ಎಲ್ಲ ವಿಷಯಗಳೂ ಭಾರತದ ಜನರ ಜೀವನ ಗುಣಮಟ್ಟಕ್ಕೆ ಸಂಬಂಧಿಸಿದ್ದಾಗಿವೆ. ವಾಣಿಜ್ಯ ಮತ್ತು ಹೂಡಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ಇಂದು ಪ್ರಧಾನಿ ಲಾಫ್ವೆನ್ ಅವರು ಮತ್ತು ನಾನು ಸ್ವೀಡನ್ನಿನ ಪ್ರಮುಖ ಸಿ.ಇ.ಓ.ಗಳೊಂದಿಗೆ ಚರ್ಚಿಸಿದ್ದೇವೆ. ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮತ್ತೊಂದು ಪ್ರಮುಖ ಆಧಾರಸ್ತಂಭವೆಂದರೆ ಅದು ನಮ್ಮ ರಕ್ಷಣೆ ಮತ್ತು ಸುರಕ್ಷತಾ ಸಹಕಾರ. ಸ್ವೀಡನ್ ರಕ್ಷಣಾ ವಲಯದಲ್ಲಿ ನಮ್ಮ ದೀರ್ಘ ಕಾಲದ ಪಾಲುದಾರ. ಮತ್ತು ಭವಿಷ್ಯದಲ್ಲಿ ಕೂಡ ಈ ಕ್ಷೇತ್ರದಲ್ಲಿ ಅದರಲ್ಲೂ ರಕ್ಷಣಾ ಉತ್ಪಾದನೆಯ ಕ್ಷೇತ್ರದಲ್ಲಿ ಹಲವು ಹೊಸ ಅವಕಾಶಗಳು ನಮ್ಮ ಸಹಕಾರಕ್ಕೆ ತೆರೆದುಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ.

|

ನಾವು ನಮ್ಮ ಸುರಕ್ಷತಾ ಅದರಲ್ಲೂ, ಸೈಬರ್ ಭದ್ರತೆ ಸಹಕಾರವನ್ನು ಬಲಪಡಿಸಲು ನಿರ್ಧರಿಸಿದ್ದೇವೆ. ನಾವು ಒಂದು ವಿಷಯ ಒಪ್ಪಿಕೊಳ್ಳುತ್ತೇವೆ ಅದೇನೆಂದರೆ, ಪ್ರಾದೇಶಿಕ ಮತ್ತು ಜಾಗತಿಕ ಹಂತದಲ್ಲಿ ನಮ್ಮ ಸಂಬಂಧಗಳಿಗೆ ಪ್ರಾಮುಖ್ಯತೆ ಇದೆ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಾವು ಸಾಕಷ್ಟು ಸಹಕಾರವನ್ನು ಹೊಂದಿದ್ದೇವೆ ಮತ್ತು ಇನ್ನೂ ಮುಂದುವರೆಯುತ್ತೇವೆ.

ಇಂದು ನಾವು ಯೂರೋಪ್ ಮತ್ತು ಏಷ್ಯಾದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರವಾಗಿ ನಮ್ಮ ಅಭಿಪ್ರಾಯ ಹಂಚಿಕೊಂಡಿದ್ದೇವೆ.

ಕೊನೆಯದಾಗಿ, ನಾನು ಮತ್ತೊಮ್ಮೆ ಪ್ರಧಾನಮಂತ್ರಿ ಲಾಫ್ವೆನ್ ಅವರಿಗೆ ನನ್ನ ಹೃದಯದಿಂದ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ.

ಧನ್ಯವಾದಗಳು, ತುಂಬಾ ತುಂಬಾ ಧನ್ಯವಾದಗಳು.

|
  • Reena chaurasia September 03, 2024

    राम
  • Reena chaurasia September 03, 2024

    बीजेपी
  • शिवकुमार गुप्ता January 19, 2022

    हर हर मोदी🙏
  • शिवकुमार गुप्ता January 19, 2022

    जय भारत
  • शिवकुमार गुप्ता January 19, 2022

    जय हिंद
  • शिवकुमार गुप्ता January 19, 2022

    जय श्री सीताराम
  • शिवकुमार गुप्ता January 19, 2022

    जय श्री राम
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India eyes potential to become a hub for submarine cables, global backbone

Media Coverage

India eyes potential to become a hub for submarine cables, global backbone
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 10 ಮಾರ್ಚ್ 2025
March 10, 2025

Appreciation for PM Modi’s Efforts in Strengthening Global Ties