ಕೊರಿಯಾ ಗಣರಾಜ್ಯದ ಅಧ್ಯಕ್ಷ ಶ್ರೀ. ಮೂನ್ ಜೇ ಇನ್ ಅವರ ವಿಶೇಷ ರಾಯಭಾರಿ ಶ್ರೀ.ಡೊಂಗ್ಚೆಯಾ ಚುಂಗ್ ಅವರಿಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿಯವರು ತಮ್ಮ ವಿಶೇಷ ಪ್ರತಿನಿಧಿ ಶ್ರೀ. ಚುಂಗ್ ಅವರನ್ನು ಭಾರತಕ್ಕೆ ಕಳುಹಿಸಿದ ಅಧ್ಯಕ್ಷ ಮೂನ್ ಅವರ ಸದ್ಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
2015ರ ಮೇ ತಿಂಗಳಿನಲ್ಲಿ ಕೊರಿಯಾ ಗಣರಾಜ್ಯಕ್ಕೆ ತಾವು ನೀಡಿದ್ದ ಭೇಟಿ, ಹಾಗೂ ಆ ಸಮಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವಿಶೇಷ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಮೇಲ್ದರ್ಜೆಗೇರಿದನ್ನು ಪ್ರಧಾನಿ ಸ್ಮರಿಸಿದರು. ಮತ್ತು ಭಾರತಕ್ಕೆ ಕೊರಿಯಾ ಗಣರಾಜ್ಯ ಮಹತ್ವದ ಅಭಿವೃದ್ಧಿಯ ಪಾಲುದಾರ ಎಂದು ತಿಳಿಸಿದರು.
ಪ್ರಧಾನಮಂತ್ರಿಯವರು ಕೇವಲ ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರದಲ್ಲಷ್ಟೇ ಅಲ್ಲದೆ, ಹೊಸ ಕ್ಷೇತ್ರಗಳಾದ ರಕ್ಷಣಾ ಸಹಕಾರದಲ್ಲಿ ದ್ವಿಪಕ್ಷೀಯ ಪಾಲುದಾರಿಕೆ ಆಳವಾಗುತ್ತಿರುವುದನ್ನು ಸ್ವಾಗತಿಸಿದರು.
ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನೂ ಉತ್ತಮಪಡಿಸಲು ಅಧ್ಯಕ್ಷ ಮೂನ್ ಅವರೊಂದಿಗೆ ಶ್ರಮಿಸಲು ಬದ್ಧವಾಗಿರುವುದಾಗಿ ಮತ್ತು ಅಧ್ಯಕ್ಷ ಮೂನ್ ಅವರನ್ನು ಸಾಧ್ಯವಾದಷ್ಟು ಶೀಘ್ರ ಭೇಟಿ ಮಾಡುವ ಅವಕಾಶ ಎದಿರು ನೋಡುತ್ತಿರುವುದಾಗಿ ಪ್ರಧಾನಮಂತ್ರಿಯವರು ಹೇಳಿದರು.