ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಬಾಂಗ್ಲಾ ದೇಶದ ಗಡಿಯಲ್ಲಿ ಮಾರುಕಟ್ಟೆ ಸ್ಥಾಪಿಸಲು, ಬಾಂಗ್ಲಾ ಮತ್ತು ಭಾರತ ನಡುವೆ ಕಾರ್ಯ ವಿಧಾನ ಹಾಗೂ ಪರಿಷ್ಕೃತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಸ್ಥಳೀಯ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯ ಮೂಲಕ ಸಾಂಪ್ರದಾಯಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಎರಡೂ ರಾಷ್ಟ್ರಗಳ ಗಡಿಯ ದೂರ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಒಳಿತನ್ನು ಉತ್ತೇಜಿಸುವ ಗುರಿಯನ್ನು ಈ ಗಡಿ ಮಾರುಕಟ್ಟೆಗಳು ಹೊಂದಿವೆ.
ಈ ಕ್ರಮಗಳು ಸಮಾಜದ ಅಂಚಿನಲ್ಲಿರುವ ಜನರ ಆರ್ಥಿಕ ಉತ್ತಮಿಕೆಯ ಸುಧಾರಣೆಗೂ ನೆರವಾಗಲಿದೆ. ಪ್ರಸ್ತುತ ನಾಲ್ಕು ಗಡಿ ಮಾರುಕಟ್ಟೆಗಳು ಕಾರ್ಯಾಚರಣೆ ಮಾಡುತ್ತಿವೆ, ಇದರಲ್ಲಿ ಮೇಘಾಲಯ ಮತ್ತು ತ್ರಿಪುರಾದಲ್ಲಿ ತಲಾ ಎರಡು ಮಾರುಕಟ್ಟೆಗಳಿದ್ದು, ಇವುಗಳನ್ನು 2010ರ ಅಕ್ಟೋಬರ್ 23ರಂದು ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ ಅಂಕಿತ ಹಾಕಲಾದ ತಿಳಿವಳಿಕೆ ಒಪ್ಪಂದ ಮತ್ತು ಗಡಿ ಮಾರುಕಟ್ಟೆ ಕಾರ್ಯಾಚರಣೆ ವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿದೆ. ತರುವಾಯ ಗಡಿ ಮಾರುಕಟ್ಟೆಯ ಮಾದರಿಗೆ ಅನುಬಂಧಕ್ಕೆ 2012ರ ಮೇ 15ರಂದು ಸಹಿ ಹಾಕಲಾಗಿದೆ. ಪರಿಷ್ಕೃತ ತಿಳಿವಳಿಕೆ ಒಪ್ಪಂದ ಮತ್ತು ಕಾರ್ಯಾಚರಣೆ ವಿಧಾನವು ಹೆಚ್ಚುವರಿ ಗಡಿ ಮಾರುಕಟ್ಟೆಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಕಾನೂನು ಚೌಕಟ್ಟು ಒದಗಿಸುತ್ತದೆ.