ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ರಾಜ್ಯಸಭೆಯಲ್ಲಿಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತಂತೆ ಮಾತನಾಡಿದರು. ಪ್ರಧಾನಮಂತ್ರಿ ಅವರು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಅತ್ಯಂತ ಮಹತ್ವಾಕಾಂಕ್ಷೆಯದ್ದು, ಆದರೆ ನಾವು ದೊಡ್ಡದಾಗಿ ಆಲೋಚಿಸಿ ಮುನ್ನಡೆಯಬೇಕಿದೆ ಎಂದರು. “ಭಾರತದ ಆರ್ಥಿಕತೆ ಅತ್ಯಂತ ಬಲಿಷ್ಠವಾಗಿದೆ ಎಂದು ನಾನು ನಿಮಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ಭಾರತ 5 ಟ್ರಿಲಿಯನ್ ಆರ್ಥಿಕತೆಯ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಸಂಪೂರ್ಣ ವೇಗ ಮತ್ತು ಪೂರ್ಣ ಸಾಮರ್ಥ್ಯದೊಂದಿಗೆ ಮುನ್ನಡೆಯುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
5 ಟ್ರಿಲಿಯನ್ ಆರ್ಥಿಕತೆಯ ಗುರಿ ಸಾಧನೆಗೆ ಸರ್ಕಾರ ಗ್ರಾಮಗಳ ಮತ್ತು ನಗರಗಳ ಮೂಲಸೌಕರ್ಯವೃದ್ಧಿಗೆ, ಎಂಎಸ್ಎಂಇಗಳಿಗೆ, ಜವಳಿ, ತಂತ್ರಜ್ಞಾನ ಮತ್ತು ಪ್ರವಾಸೋದ್ಯಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಈ ಎಲ್ಲ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ವೇಗ ನೀಡಲು ತೆರಿಗೆ ವ್ಯವಸ್ಥೆ ಸರಳೀಕರಣ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಕ್ರಮಗಳಿಂದಾಗಿ ದೇಶದ ಉತ್ಪಾದನಾ ವಲಯದಲ್ಲಿ ಹೊಸ ಉತ್ಸಾಹ ಮೂಡಿದೆ. ಬ್ಯಾಂಕಿಂಗ್ ವಲಯದಲ್ಲಿನ ವಿಲೀನ ನೀತಿ ಈಗಾಗಲೇ ಅರ್ಥಪೂರ್ಣ ಫಲಿತಾಂಶಗಳನ್ನು ನೀಡತೊಡಗಿದೆ.
ನವ ಭಾರತಕ್ಕೆ ಸಣ್ಣ ನಗರಗಳ ಅಡಿಪಾಯ
ದೇಶದ ಬಹುತೇಕ ಆಸೆ ಆಕಾಂಕ್ಷೆಗಳನ್ನು ಹೊಂದಿರುವ ಯುವಜನರು ಸಣ್ಣ ನಗರಗಳಲ್ಲಿ ಜೀವಿಸುತ್ತಿದ್ದಾರೆ. ಆ ನಗರಗಳು ನವ ಭಾರತಕ್ಕೆ ಅಡಿಪಾಯವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. “ಇಂದು ದೇಶದ ಡಿಜಿಟಲ್ ವಹಿವಾಟಿನ ಅರ್ಧಕ್ಕೂ ಹೆಚ್ಚು ವಹಿವಾಟು ಸಣ್ಣ ನಗರಗಳಲ್ಲಿ ನಡೆಯುತ್ತಿದೆ. ಅರ್ಧಕ್ಕೂ ಹೆಚ್ಚು ನವೋದ್ಯಮಗಳು ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ನೋಂದಣಿಯಾಗುತ್ತಿವೆ. ಅದೇ ಕಾರಣಕ್ಕೆ ನಾವು ಕ್ಷಿಪ್ರಗತಿಯಲ್ಲಿ ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲಿ ಆಧುನಿಕ ಮೂಲಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡುತ್ತಿದ್ದೇವೆ. ಹೆದ್ದಾರಿ ಮತ್ತು ರೈಲ್ವೆ ಸಂಪರ್ಕವನ್ನು ಕ್ಷಿಪ್ರ ರೀತಿಯಲ್ಲಿ ಸುಧಾರಿಸಲಾಗುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು.
2024ರ ವೇಳೆಗೆ ನೂರಕ್ಕೂ ಅಧಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿ
ಪ್ರಧಾನಮಂತ್ರಿ ಅವರು, ಉಡಾನ್ ಯೋಜನೆಯಲ್ಲಿ ಇತ್ತೀಚೆಗೆ 250ನೇ ಮಾರ್ಗವನ್ನು ಉದ್ಘಾಟಿಸಲಾಯಿತು ಎಂದು ಹೇಳಿದರು. ಇದರಿಂದಾಗಿ ಭಾರತದ 250 ಸಣ್ಣ ಪಟ್ಟಣಗಳಲ್ಲಿ ಕೈಗೆಟಕುವ ದರದಲ್ಲಿ ವಿಮಾನಯಾನ ಸಂಪರ್ಕ ಒದಗಿಸಲಾಗಿದೆ. “ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ ದೇಶಾದ್ಯಂತ 65 ವಿಮಾನ ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಕಳೆದ 5 ವರ್ಷಗಳಲ್ಲಿ ನೂರಕ್ಕೂ ಅಧಿಕ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ, ಬಹುತೇಕ ಎರಡೂ ಮತ್ತು ಮೂರನೇ ದರ್ಜೆ ನಗರಗಳಲ್ಲಿ 2024ರ ವೇಳೆಗೆ ನೂರಕ್ಕೂ ಅಧಿಕ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವ ಗುರಿ ಇದೆ” ಎಂದು ಪ್ರಧಾನಮಂತ್ರಿ ಹೇಳಿದರು.
There is no question of thinking small.
— PMO India (@PMOIndia) February 6, 2020
Pessimism and gloom do not help us.
We talk about a five trillion dollar economy. Yes, the aim is ambitious but we have to think big and think ahead: PM @narendramodi
निराशा देश का भला कभी नहीं करती, इसलिए 5 ट्रिलियन डॉलर की इकोनॉमी की बात का सुखद परिणाम यह हुआ कि जो विरोध करते हैं, उन्हें भी 5 ट्रिलियन डॉलर की बात करनी पड़ती है। मानसिकता तो बदली है हमने: PM @narendramodi
— PMO India (@PMOIndia) February 6, 2020
आज छोटे स्थानों पर डिजिटल ट्रांजैक्शन सबसे ज्यादा देखने को मिल रहा है और आधुनिक इन्फ्रास्ट्रक्चर के निर्माण में भी टियर-2, टियर-3 शहर आगे बढ़ रहे हैं : PM @narendramodi
— PMO India (@PMOIndia) February 6, 2020