ತಾವು ಕೈಗೊಂಡಿದ್ದ ಭಾರತ ಪರಿಕ್ರಮ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ತರುವಾಯ ಶ್ರೀ ಸೀತಾರಾಂ ಕೆದಿಲಾಯ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಶ್ರೀ ಕೆದಿಲಾಯ ಅವರ ಪ್ರಕಾರ, ಅವರು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಭಾರತ ಪರಿಕ್ರಮ ಯಾತ್ರೆ ಆರಂಭಿಸಿ, ಈ ವರ್ಷ ಜುಲೈ 9ರಂದು ಕನ್ಯಾಕುಮಾರಿಯಲ್ಲೇ ತಮ್ಮ ಯಾತ್ರೆ ಪೂರ್ಣಗೊಳಿಸಿದ್ದರು.
ಈ ಯಾತ್ರೆಯ ವೇಳೆ ತಾವು 9 ಸಾವಿರ ಗ್ರಾಮಗಳನ್ನು ನೇರವಾಗಿ ತಲುಪಿದ್ದಾಗಿ ಶ್ರೀ ಕೆದಿಲಾಯ ಅವರು ತಿಳಿಸಿದರು. ಈ ಯಾತ್ರೆಯ ಸಂದೇಶ ಹೆಚ್ಚುವರಿಯಾಗಿ 20 ಸಾವಿರ ಗ್ರಾಮಗಳಿಗೆ ಪರೋಕ್ಷವಾಗಿ ತಲುಪಿತು ಎಂದು ತಿಳಿಸಿದರು. ಈ ಯಾತ್ರೆಯ ವೇಳೆ ಅವರು ಲಕ್ಷಾಂತರ ರೈತರು ಮತ್ತು ಯುವಜನರೊಂದಿಗೆ ಸಂವಾದ ನಡೆಸಿದರು.
ಶ್ರೀ ಕೆದಿಲಾಯ ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಕೋರಿದರು.