ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆರಂಭದ ಸಂಕೇತವಾಗಿ ಮೇ 30, 2019 ರಂದು ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಜನ್ಮ ಪಡೆದ ಮೊದಲ ಪ್ರಧಾನಮಂತ್ರಿ ಶ್ರೀ. ಮೋದಿ ಅವರಾಗಿದ್ದಾರೆ. ಕ್ರಿಯಾಶೀಲ, ಸಮರ್ಪಿತ ಮತ್ತು ನಿರ್ದಿಷ್ಟ, ಶ್ರೀ. ನರೇಂದ್ರ ಮೋದಿ ಅವರು ಒಂದು ಶತಕೋಟಿಗೂ ಅಧಿಕ ಭಾರತೀಯರ ಆಶೋತ್ತರ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತಾರೆ.

ಪ್ರಧಾನ ಮಂತ್ರಿಯಾಗಿ ಮೇ 2014ರಲ್ಲಿ ಜವಾಬ್ದಾರಿ ಪಡೆದ ಮೇಲೆ ಮೊದಲ ಹೆಜ್ಜೆಯಾಗಿ, ಪ್ರತಿಯೊಬ್ಬ ಭಾರತೀಯನೂ ಒಟ್ಟಾರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ಕಾರ್ಯಗಳಲ್ಲಿ ಸಹಪಯಣಿಗನಾಗಿ ತಮ್ಮ ಆಶೋತ್ತರ ಹಾಗೂ ಅಪೇಕ್ಷೆಗಳು ಫಲಕಾಣುವ ಹಾಗೂ ಅವುಗಳ ಅನುಭವಗಳಿಸುವ ಅವಕಾಶ ಸೃಷ್ಠಿಸಿದರು. ಈ ನಿಟ್ಟಿನಲ್ಲಿ, ಸಮಾಜದ ಕೊನೆ ಸಾಲಿನ ಕಟ್ಟಕಡೆಯ ವ್ಯಕ್ತಿಯ ಕೂಡಾ ಸೇವೆಯಲ್ಲಿ ನಿರತನಾಗಲು ಅವರ ಪಾಲಿಗೆ “ಅಂತ್ಯೋದಯ” ನೀತಿ ಸೂತ್ರ ಗಾಢ ಪ್ರಭಾವ ಬೀರಿದೆ

ನಿತ್ಯನೂತನ ಪ್ರಕ್ರಿಯಾ ಯೋಜನೆಗಳೊಂದಿಗೆ ಪ್ರಗತಿಯ ಹಾದಿಹಿಡಿದ ಸರ್ಕಾರ , ತನ್ನ ಉದ್ದೇಶಿತ ಸುಧಾರಣೆಯ ಘಟ್ಟ ತಲುಪಿ, ಪ್ರತಿಯೊಬ್ಬ ಜನಸಾಮಾನ್ಯನಿಗೆ ಇದರ ಪ್ರಯೋಜನ ಸಮಪರ್ಕವಾಗಿ ಲಭ್ಯವಾಗುವ ಸುವ್ಯವಸ್ಥೆಯನ್ನು ಮಾಡಲಾಗಿದೆ. ಸಂಪೂರ್ಣವಾಗಿ ತೆರೆದ ಮುಕ್ತ ವಾತಾವರಣ, ಸುಲಭ ಹಾಗೂ ಪಾರದರ್ಶಕತೆ ಹೊಂದಿದ ಆಡಳಿತವನ್ನು ಸ್ಥಾಪಿಸಲಾಗಿದೆ.

ದೇಶದ ಅರ್ಥಿಕವ್ಯವಸ್ಥೆಯಲ್ಲಿ ಜನಸಾಮಾನ್ಯನೂ ಸೇರ್ಪಡೆಗೊಂಡು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ “ಪ್ರಧಾನ ಮಂತ್ರಿ ಜನ್ ಧನ್ ಯೋಜನಾ” ದೇಶದ ಅರ್ಥ ವ್ಯವಸ್ಥೆ ಬದಲಾವಣೆಯ ನೂತನ ಮೈಲುಗಲ್ಲಾಗಿದೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಲು “ ಮೇಕ್ ಇನ್ ಇಂಡಿಯ” ಯೋಜನೆ ಮೂಲಕ ಸುಲಭವಾಗಿ ವ್ಯವಹಾರನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಡುತ್ತೇವೆ – ಎಂದು ವಿದೇಶಿ ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ನೀಡಿದ ಆಹ್ವಾನ ಅತ್ಯಂತ ಯಶಸ್ವಿಯಾಯಿತು. ಕಾರ್ಮಿಕ ನೀತಿ ಸುಧಾರಣೆ ಹಾಗೂ ಕಾರ್ಮಿಕ ಘನತೆ ಹೆಚ್ಚಿಸುವ “ ಶ್ರಮ ಏವ ಜಯತೆ “ ಯೋಜನೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮಲ್ಲಿ ಯುವ ಜನತೆಯ ಕೌಶಲ್ಯ ಸಂಪನ್ಮೂಲವನ್ನು ಕಾಯ್ದುಕೊಳ್ಳಲು ಸಹಕಾರಿಯಾಯಿತು.

ಜನಸಾಮಾನ್ಯನಿಗಾಗಿ ಪ್ರಪ್ರಥಮವಾಗಿ ಕೇಂದ್ರ ಸರ್ಕಾರ “ಮೂರು ಸಾಮಾಜಿಕ ಭದ್ರತೆಯ ಯೋಜನೆ”ಗಳನ್ನು ಪ್ರಾರಂಭಿಸಿದೆ. ಹಿರಿಯರಿಗೆ ನಿವೃತ್ತಿವೇತನ ಮತ್ತು ಬಡವರಿಗೆ ವಿಮಾ ರಕ್ಷಣೆಯ ಯೋಜನೆಗಳಲ್ಲಿ ಗಮನ ಕೇಂದ್ರೀಕರಿಸುವ ಮೂಲಕ ಜನಪರ ಕಾಳಜಿ ಎತ್ತಿ ಹಿಡಿದಿದೆ. ನೂತನ ತಂತ್ರಜ್ಞಾನದ ಅಳವಡಿಕೆ ಮೂಲಕ ಭಾರತೀಯರ ಜೀವನದಲ್ಲಿ ಮಹತ್ತರ ಹಾಗೂ ಪರಿಣಾಮಕಾರಿ ಬದಲಾವಣೆ ತರುವ ಸದುದ್ಧೇಶದಿಂದ “ಡಿಜಿಟಲ್ ಇಂಡಿಯ ಮಿಷನ್ “ ಯೋಜನೆಯನ್ನು ಪ್ರಧಾನ ಮಂತ್ರಿಯವರು ಜುಲೈ 2015ರಂದು ಅನಾವರಣಗೊಳಿಸಿದರು.

ದೇಶದಾಧ್ಯಂತ ಸ್ವಚ್ಛತೆಯ ಕ್ರಾಂತಿ ಮೂಡಿಸುವ ಸಾಮೂಹಿಕ ಜನಾಂದೋಲನದ ಉದ್ದೇಶದಿಂದ “ಸ್ವಚ್ಛ ಭಾರತ್ ಮಿಷನ್ “ ಯೋಜನೆಯನ್ನು ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2, 2014ರಂದು ಪ್ರಾರಂಭಿಸಿದರು. ಜನಮನಗೆದ್ದ ಈ ಪರಿಣಾಮಕಾರಿ ಯೋಜನೆಯ ವಿಸ್ತಾರ ಹಾಗೂ ಪ್ರಭಾವ ಅಮೂಲ್ಯವಾದುದು ವಾದುದು ಹಾಗೂ ಇದು ಐತಿಹಾಸಿಕ ಆಂದೋಲನವಾಗಿ ಗುರುತಿಸಲ್ಪಟ್ಟಿತು.

ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ದೇಶಕ್ಕೆ ಜಾಗತಿಕವಾಗಿ ಅತ್ಯುನ್ನತ ಸ್ಥಾನಮಾನವಿದೆ ಎಂದು ಗುರುತಿಸಿಕೊಳ್ಳಲು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಯಂತ ಸಧೃಡ ಹಾಗೂ ಬಲಿಷ್ಠ “ ವಿದೇಶಾಂಗ ನೀತಿಗಳು ” ಕಾರಣವಾದವು. “ಸಾರ್ಕ್ (SAARC)” ದೇಶಗಳ ಮುಖ್ಯಸ್ಥರ ಸಮ್ಮುಖದಲ್ಲೇ ಅವರು ಪ್ರಪ್ರಥಮವಾಗಿ ತಮ್ಮ ಕಚೇರಿ ಕೆಲಸಗಳನ್ನು ಪ್ರಾರಂಭಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇವರು ಮಾಡಿದ ಭಾಷಣಕ್ಕೆ ವಿಶ್ವದಾಧ್ಯಂತ ಎಲ್ಲಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂತು. ಹಲವು ದೇಶಗಳ ದ್ವಿಪಕ್ಷೀಯ ಸಂದರ್ಶನ ನಡೆಸಿದ ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಾಗಿದ್ದಾರೆ, ಅಲ್ಲದೆ ಇದೊಂದು ಐತಿಹಾಸಿಕ ದಾಖಲೆ ಕೂಡಾ ಆಗಿದೆ. ಇವುಗಳಲ್ಲಿ 17 ವರ್ಷಗಳ ನಂತರ ನೇಪಾಳ , 28 ವರ್ಷಗಳ ನಂತರ ಆಸ್ಟ್ರೇಲಿಯ, 31 ವರ್ಷಗಳ ನಂತರ ಫಿಜಿ, 34 ವರ್ಷಗಳ ನಂತರ ಸೆಚೆಲೆಸ್ ಮೊದಲಾದ ದೇಶಗಳ ದ್ವಿಪಕ್ಷೀಯ ಸಂದರ್ಶನ ಸೇರಿವೆ. ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ, ಶ್ರೀ ನರೇಂದ್ರ ಮೋದಿಯವರು, ವಿಶ್ವ ಸಂಸ್ಥೆ, ಬ್ರಿಕ್ಸ್ , ಸಾರ್ಕ್ , ಮತ್ತು ಜಿ-20 ಶೃಂಗಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಶೃಂಗಸಭೆಗಳಲ್ಲಿ ಜಾಗತಿಕ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು, ಜಲ್ವಂತ ಸಮಸ್ಯೆಗಳಲ್ಲಿ ಭಾರತದ ಮಧ್ಯಪ್ರವೇಶ ಹಾಗೂ ಅಭಿಪ್ರಾಯ ವ್ಯಕ್ತಪಡಿಸುವಿಕೆಗೆ ವಿಶ್ವದಾಧ್ಯಂತ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.ಶ್ರೀ ಮೋದಿಯವರ ಜಪಾನ್ ಭೇಟಿ ಭಾರತ ಹಾಗೂ ಜಪಾನ್ ದೇಶಗಳ ಸಂಬಂಧಗಳ ಅಧ್ಯಾಯಲ್ಲೊಂದು ಹೊಸಪುಟವನ್ನೇ ತೆರೆಯಿತು. ಮಂಗೋಲಿಯಾ ದೇಶಕ್ಕೆ ಭೇಟಿ ಭಾರತದ ಮೊದಲ ಪ್ರಧಾನ ಮಂತ್ರಿ ಅವರು . ಅವರ ಚೀನಾ ಹಾಗೂ ದಕ್ಷಿಣ ಕೊರಿಯ ಭೇಟಿ ಯಶಸ್ಸು ಕಂಡಿದೆಯಲ್ಲದೆ, ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಸಾಕಷ್ಟು ಪ್ರಯೋಜನವಾಗಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಯುರೋಪ್ ದೇಶಗಳ ಸಂಬಂಧ ಸುಧಾರಣಾ ಪ್ರಯತ್ನ ಫ್ರಾನ್ಸ್ ಹಾಗೂ ಜರ್ಮನಿ ಭೇಟಿವೇಳೆ ಸ್ಪಷ್ಠವಾಗಿ ಗೋಚರಿಸಿತು.

ಅರಬ್ ದೇಶಗಳ ಜೊತೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಅತ್ಯಂತ ಪ್ರಮುಖ ಹಾಗೂ ಬಲಿಷ್ಠ ಸಂಬಂಧ ಹೊಂದಿದ್ದಾರೆ. ಇವರು ಆಗಸ್ಟ್, 2015ರ ಯು.ಏ.ಇ. ಭೇಟಿ, ಕಳೆದ 34 ವರ್ಷಗಳಲ್ಲಿ ಪ್ರಪ್ರಥಮಭಾರಿಗೆ ಭಾರತದ ಪ್ರಧಾನ ಮಂತ್ರಿಯೊಬ್ಬರು ನೀಡಿದ ಐತಿಹಾಸಿಕ ಸಂದರ್ಶನವಾಗಿ ದಾಖಲೆಯಾಗಿದೆ. ಈ ಭೇಟಿ ಗಲ್ಫ್ ರಾಷ್ಟ್ರಗಳ ಜೊತೆ ಭಾರತದ ಆರ್ಥಿಕ ಪಾಲುದಾರಿಕೆಗೆ ಭದ್ರ ಬುನಾದಿ ಹಾಕಲು ಸಾಕಾರವಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜುಲೈ 2015 ಯಲ್ಲಿ ನಡೆದ ಮಧ್ಯ ಏಷ್ಯಾದ ಪಂಚರಾಷ್ಟ್ರಗಳ ಸಂದರ್ಶನ ಇನ್ನೊಂದು ಐತಿಹಾಸಿಕ ಸಾಧನೆಯಾಗಿದೆ. ಇಂಧನ, ವ್ಯಾಪಾರ, ಆರ್ಥಿಕತೆ ಮತ್ತು ಕಲೆ ಮುಂತಾದ ಕ್ಷೇತ್ರಗಳ ವಿವಿಧ ಒಪ್ಪಂದಗಳಿಗೆ ಭಾರತ ಮತ್ತು ಈ ದೇಶಗಳ ನಡುವೆ ಸಹಿ ಹಾಕಲಾಯಿತು. ಅಕ್ಟೋಬರ್ 2015 ರಲ್ಲಿ ನವದೆಹಲಿಯಲ್ಲಿ ನಡೆದ ಭಾರತ – ಆಫ್ರಿಕಾ ಶೃಂಗಸಭೆಯಲ್ಲಿ ಆಫ್ರಿಕಾ ಖಂಡದ 54 ದೇಶಗಳು ಭಾಗವಹಿಸಿದ್ದವು. ಆಫ್ರಿಕಾ ಖಂಡದ 41 ದೇಶಗಳ ನಾಯಕರು ಸ್ವತಃ ಪಾಲ್ಗೊಂಡು ಶೃಂಗಸಭೆಯ ಶೋಭೆಯನ್ನು ಹೆಚ್ಚಿಸಿದ್ದರಲ್ಲದೆ, ಭಾರತ – ಆಫ್ರಿಕಾ ಸಂಬಂಧ ಹೆಚ್ಚಿಸಲು ಗಹನವಾದ ಚಿಂತನ – ಮಂಥನ ನಡೆಸಿದ್ದರು. ಈ ಶೃಂಗಸಭೆಯಲ್ಲಿ ಸ್ವತಃ ಪ್ರಧಾನ ಯವರೇ ಎಲ್ಲಾ ದೇಶಗಳ ನಾಯಕರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

ನವೆಂಬರ್ 2015ರಲ್ಲಿ, ಶ್ರೀ ನರೇಂದ್ರ ಮೋದಿಯವರು ಪ್ಯಾರಿಸ್ ನಲ್ಲಿ ನಡೆದ ”ಕೋಪ್ – 21” ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅಲ್ಲಿ ಇತರ ಹಲವಾರು ವಿಶ್ವ ನಾಯಕರ ಜೊತೆ ಜಾಗತಿಕ ಹವಾಗುಣ ಬದಲಾವಣೆ ಕುರಿತಾಗಿ ಸುಧೀರ್ಘ ಚರ್ಚೆ ನಡೆಸಿದರು. ಸೂರ್ಯನ ಬೆಳಕಿನಿಂದ ಗೃಹ ಬೆಳಗುವ ಸೌರಶಕ್ತಿ ಯೋಜನೆಗಳಿಗಾಗಿ ಅಂತರಾಷ್ಟ್ರೀಯ ಸೌರಶಕ್ತಿ ಒಕ್ಕೂಟ ವನ್ನು ರೂಪಿಸಿದರು, ಇದನ್ನು ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಶ್ರೀ ಹೊಲ್ಲಂಡೆ ಜೊತೆಯಾಗಿ ಉದ್ಘಾಟಿಸಿದರು.

ಅಣ್ವಸ್ತ್ರ ಸುರಕ್ಷಾ ಶೃಂಗಸಭೆಯಲ್ಲಿಪ್ರಧಾನ ಮಂತ್ರಿ ಯವರು ಎಪ್ರಿಲ್ 2016ರಲ್ಲಿ ಸೇರಿಕೊಂಡರಲ್ಲದೆ, ಅಣ್ವಸ್ತ್ರ ಸುರಕ್ಷಾ ವ್ಯವಸ್ಥೆಯ ಆವಶ್ಯಕತೆಯನ್ನು ಬಹಳ ಸ್ಪಷ್ಟ ಸಂದೇಶದ ಮೂಲಕ ಜಾಗತಿಕ ಮಟ್ಟದಲ್ಲಿ ಘಂಟಾಘೋಷವಾಗಿ ಸಾರಿಹೇಳಿದರು. ಅವರು ಸೌದಿ ಅರೇಬಿಯಾ ಭೇಟಿ ಮಾಡಿದಾಗ, ಆ ದೇಶದ ಅತ್ಯುನ್ನತ ಸಾರ್ವಜನಿಕ ಪುರಸ್ಕಾರ “ಸಾಶ್ ಆಫ್ ಕಿಂಗ್ ಅಬ್ದುಲ್ಲಜೀಜ್“ ಪ್ರಶಸ್ತಿ ನೀಡಿ ಗೌರವಿಸಿದರು.

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಶ್ರೀ ಟೋನಿ ಎಬ್ಬೊಟ್ಟ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷ ಶ್ರೀ ಕ್ಸಿ ಜಿಪಿಂಗ್, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ , ರಷ್ಯಾ ಅಧ್ಯಕ್ಷ ಶ್ರೀ ವ್ಲಾಡಿಮಿರ್ ಪುಟಿನ್ , ಮತ್ತು ಜರ್ಮನಿಯ ಛಾನ್ಸಲರ್ ಶ್ರೀಮತಿ ಎಂಜೆಲಾ ಮಾರ್ಕೆಲ್ ಮುಂತಾದ ಜಾಗತಿಕ ನಾಯಕರು ಇವರ ಅವಧಿಯಲ್ಲಿ ಭಾರತವನ್ನು ಸಂದರ್ಶಿಸಿದ್ದಾರೆ. ಇದರಿಂದಾಗಿ ಭಾರತ ಹಾಗೂ ಈ ದೇಶಗಳ ನಡುವಣ ಸಂಬಂಧ ಮತ್ತು ಸಹಕಾರ ಅಭಿವೃದ್ಧಿಯಾಗಲು ಸಾಧ್ಯವಾಯಿತು.2015ರ ಗಣರಾಜ್ಯೋತ್ಸವಕ್ಕೆ ಅಮೇರಿಕಾ ಅಧ್ಯಕ್ಷ ಶ್ರೀ ಬರಾಕ್ ಒಬಾಮ ವಿಶೇಷ ಅತಿಥಿಯಾಗಿ ಪಾಲ್ಗೊಂಡು ವಿಶ್ವದ ಗಮನ ಸೆಳೆದರು. ಇದು ಭಾರತ-ಅಮೇರಿಕಾ ಸಂಬಂಧದ ಇತಿಹಾಸದಲ್ಲೇ ಅತ್ಯಅಪೂರ್ವ ಐತಿಹಾಸಿಕ ಘಟನೆಯಾಗಿದೆ. ಆಗಸ್ಟ್ 2015ರಲ್ಲಿ, ಫಿಪಿಕ್ ಶೃಂಗಸಭೆಗೆ ಭಾರತ ಅತಿಥೇಯ ರಾಷ್ಟ್ರವಾಯಿತು. ಶಾಂತಸಾಗರದ ದ್ವೀಪಗಳ ಪ್ರಮುಖ ನಾಯಕರು ಇದರಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ಭಾರತ ಹಾಗೂ ಈ ಶಾಂತಸಾಗರದ ದ್ವೀಪಗಳ ಸಂಬಂಧಿತ ಪ್ರಮುಖ ವಿಷಯಗಳ ಬಗ್ಗೆ ಗಹನವಾಗಿ ಚರ್ಚಿಸಲಾಯಿತು.

ವಿಶ್ವ ಮಟ್ಟದಲ್ಲಿ ಒಂದು ದಿನವನ್ನು “ ಅಂತರಾಷ್ಟ್ರೀಯ ಯೋಗ ದಿನ”ವಾಗಿ ಆಚರಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ವಿಶ್ವಸಂಸ್ಥೆಗೆ ಸಕಾರಾತ್ಮಕ ಸ್ಪಂದನೆಗಳು ಪ್ರವಾಹೋಪಾದಿಯಲ್ಲಿ ಬಂದವು. ಪ್ರಧಾನ ಮಂತ್ರಿಯವರ ಮನವಿಗೆ ಓಗೊಟ್ಟು ಜಗತ್ತಿನ ಉದ್ದಗಲದ ಒಟ್ಟು 177 ದೇಶಗಳು ಒಂದಾದವು, ಜೂನ್ 21 ನ್ನು ಇನ್ನು ಮುಂದೆ ಪ್ರತಿ ವರ್ಷವೂ “ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನ” ವೆಂದು ಘೋಷಿಸಿ ವಿಶ್ವದಾಧ್ಯಂತ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು.

ಗುಜರಾತಿನ ಸಣ್ಣ ಹಳ್ಳಿಯ “ಒಂದು ರೂಪಾಯೀಗೂ ಗತಿಯಿಲ್ಲದ ” ಕೇವಲ ಪ್ರೀತಿ – ಸ್ನೇಹವೇ ತುಂಬಿತುಳುಕುತ್ತಿದ್ದ ಬಡ ಕುಟುಂಬದಲ್ಲಿ ೧೯೫೦ ರ ಸೆಪ್ಟೆಂಬರ್ ೧೭ ರಂದು ಶ್ರೀ ನರೇಂದ್ರ ಮೋದಿಯವರು ಜನಿಸಿದರು. ಬಾಲ್ಯದ ಕಷ್ಟದ ಜೀವನ ಇವರಪಾಲಿಗೆ ಕಠಿಣಪರಿಶ್ರಮದ ಪಾಠ ಕಲಿಸಿತು. ಅಲ್ಲದೆ, ಜನಸಾಮಾನ್ಯನ ಬದುಕು ಬವಣೆ ಪರಿತಾಪಗಳ ನಡುವಣ ಅನನ್ಯ ಜೀವಿತಾನುಭವ ನೀಡಿತು. ಇದರಿಂದ ಪ್ರೇರಿತರಾದ ಅವರು ಯುವಕರಾಗಿದ್ದಾಗಲೇ ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡರು. ಮೊದಮೊದಲು ತನ್ನ ಪ್ರಾರಂಭಿಕ ವರ್ಷಗಳಲ್ಲಿ ಇವರು ರಾಷ್ಟ್ರೀಯತೆಯ ಸಾಮಾಜಿಕ ಸಂಸ್ಥೆ “ರಾಷ್ಟ್ರೀಯ ಸ್ವಯಂಸೇವಕ ಸಂಘ ( RSS) “ದ ಚಟುವಟಿಕೆಗಳಲ್ಲಿ ತಲ್ಲೀನರಾಗಿ, ದೇಶ ನಿರ್ಮಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡರು. ಆನಂತರ ಭಾರತೀಯ ಜನತಾ ಪಕ್ಷವನ್ನು ಸೇರಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಸಕ್ರಿಯ ಪಾತ್ರವಹಿಸಿ ಕಾರ್ಯಪ್ರವೃತ್ತರಾದರು.ಶ್ರೀ ನರೇಂದ್ರ ಮೋದಿಯವರು ಗುಜರಾತ್ ವಿಶ್ವವಿದ್ಯಾನಿಲಯದಿಂದ ಕಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

2001 ರಲ್ಲಿ ಅವರ ತವರೂರಾದ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುವ ಸುವರ್ಣಾವಕಾಶ ದೊರಕಿತು . ಅನಂತರ ಸತತ ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿ ದಾಖಲೆ ಕಾಲಾವಧಿಯ ಸೇವೆ ಸಲ್ಲಿಸಿದರು. ಗುಜರಾತಲ್ಲಿ ಅತಿಭೀಕರ ಭೂಕಂಪವಾಯಿತು, ಈ ಪ್ರಕೃತಿ ವಿಕೋಪದಿಂದ ರಾಜ್ಯವೇ ತತ್ತರಿಸಿ ಹೋಯಿತು. ಇಂತಹ ಹದಗೆಟ್ಟು ಹೋಗಿದ್ದ ರಾಜ್ಯದ ಪರಿಸ್ಥಿತಿಯನ್ನು ಸರಿಪಡಿಸಿದ್ದಲ್ಲದೆ, ಗುಜರಾತ್ ರಾಜ್ಯವನ್ನು ದೇಶದ ಮುನ್ನಡೆಗೆ ಅಗತ್ಯ ಚುಕ್ಕಾಣಿಯಾದ ಬಲಿಷ್ಠ ಅಭಿವೃದ್ದಿ ಯಂತ್ರವನ್ನಾಗಿ ಮಾಡಿದರು.

ಶ್ರೀ ನರೇಂದ್ರ ಮೋದಿಯವರು “ ಜನತೆಯ ನಾಯಕ”. ಜನಸಾಮಾನ್ಯರ ಕ್ಷೇಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಬಡಜನತೆಯ ಕಷ್ಟಕಾರ್ಪಣ್ಯ ನಿವಾರಣೆಗೆ , ಸಮಸ್ಯೆಗಳ ಪರಿಹಾರಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡವರು. ಜನರ ಜೊತೆ ಬೆರೆವ, ಅವರ ಜೀವನಾನುಭವ ಹಂಚಿಕೊಳ್ಳುವ ವ್ಯಕ್ತಿತ್ವ . ಜನರ ನೋವು, ನಲಿವು, ಸುಖ ದುಃಖಗಳಲ್ಲಿ ಪಾಲುದಾರರಾಗುವುದಕ್ಕಿಂತ ಹೆಚ್ಚಿದ ಏನನ್ನೂ ಅವರು ಬಯಸಿಲ್ಲ.ಅಂತರ್ಜಾಲ ಮೂಲಕ ತನ್ನ ಬಲಿಷ್ಠವಾದ ಪ್ರಭಾವ ಬೆಳೆಸಿಕೊಂಡ ಅವರು ಜನರ ಜೊತೆ “ನೇರ ಖಾಸಗಿ ಸಂಪರ್ಕ” ಇಟ್ಟುಕೊಳ್ಳಲು ಈ ಆಧುನಿಕ ಸೌಲಭ್ಯ ಅನುಕೂಲ ಮಾಡಿಕೊಟ್ಟಿತು. ದೇಶದ ಅತ್ಯಂತ “ಟೆಕ್ನೋ ಸೇವಿ ” ನಾಯಕ ಎಂದೇ ಅವರನ್ನು ಗುರುತಿಸಲಾಗುತ್ತಿದೆ. ಜನರ ಜೀವನದಲ್ಲಿ ಬದಲಾವಣೆ ತರಲು , ದೇಶದಾದ್ಯಂತ ಜನರನ್ನು ನೇರವಾಗಿ ಸಂಪರ್ಕಿಸಲು ಇವರು “ ವೆಬ್” ಬಳಸುತ್ತಾರೆ. ಫೇಸ್ ಬುಕ್, ಟ್ವೀಟರ್, ಗೂಗ್ಲ್ +, ಇನಸ್ಟಾಗ್ರಾಮ್, ಸೌಂಡ್ ಕ್ಲೌಡ್, ಲಿಂಕೆಡಿನ್, ವೈಬೊ ಮತ್ತು ಇತರ ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿಅವರು ಸಕ್ರಿಯರು.

ರಾಜಕಾರಣದ ಹೊರತಾಗಿ ಶ್ರೀ ನರೇಂದ್ರ ಮೋದಿಯವರು ವಿಶೇಷ ಆಸಕ್ತಿ ಹೊಂದಿರುವ ಇನ್ನೊಂದು ಕ್ಷೇತ್ರವೆಂದರೆ, ಅದು ಬರವಣಿಗೆ. ಅವರು ಕವನ ಸಂಕಲನಗಳೂ ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದಾರೆ,

ಅವರ ದಿನಚರಿ ಯೋಗಾಭ್ಯಾಸದೊಂದಿಗೆ ಪ್ರಾರಂಭವಾಗುತ್ತದೆ. ಅತಿವೇಗದ ಗತಿಹೊಂದಿರುವ ಅಧುನಿಕ ನಿತ್ಯಜೀವನದಲ್ಲಿ ತ್ವರಿತ ಗತಿಯ ಕೆಲಸಕಾರ್ಯ ನಿರ್ವಹಿಸಲು ಮನಸ್ಸು ಹಾಗೂ ದೇಹಕ್ಕೆ ಪ್ರೇರಣೆ ಹಾಗೂ ಶಾಂತ ಮನಸ್ಥಿತಿಯ ಶಕ್ತಿಯನ್ನು ಇವರ ದೈನಂದಿನ ಯೋಗ ನೀಡುತ್ತದೆ. ಆತ್ಮಸ್ಥೈರ್ಯ, ಕಾರುಣ್ಯ, ಮತ್ತು ಧೃಡವಾದ ಮನೋನಿಶ್ಚಯಗಳೆಲ್ಲಾ ಸಾಕಾರಗೊಂಡ ವ್ಯಕ್ತಿತ್ವ ಅವರದು. ವಿಶ್ವಕ್ಕೇ ದಾರಿದೀಪವಾಗಬಲ್ಲ ನೂತನ ಉಜ್ವಲ ಭಾರತ ನಿರ್ಮಾಣ ಅವರಿಂದ ಸಾಧ್ಯವೆಂದು ಗಟ್ಟಿಯಾಗಿ ನಂಬಿರುವ ದೇಶದ ಜನತೆ, ತಮ್ಮ ಒಪ್ಪಿಗೆಯ ಅಧ್ಯಾದೇಶ ನೀಡಿ ಅವರನ್ನು ಹರಸಿದ್ದಾರೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.