ಅರುಣಾಚಲ ಪ್ರದೇಶದ ಯುವ ಎಕ್ಸಾಮ್ ವಾರಿಯರ್ ಎಲಿನಾ ತಯಾಂಗ್ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ತಾನು ಈ ಪುಸ್ತಕವನ್ನು ಬಹಳವಾಗಿ ಮೆಚ್ಚಿಕೊಂಡಿರುವುದಾಗಿ ಬರೆದು ತಿಳಿಸಿದ್ದಾಳೆ. ಪೋಷಕರು ಮತ್ತು ಶಿಕ್ಷಕರಿಗೆ ಕೆಲ ಕಿವಿ ಮಾತುಗಳನ್ನು ಇದರಲ್ಲಿ ಅಳವಡಿಸುವಂತೆ ಅವಳು ಶ್ರೀ ನರೇಂದ್ರ ಮೋದಿಯವರಿಗೆ ಕೋರಿದ್ದಾಳೆ. ಜನರ ಪ್ರಧಾನಮಂತ್ರಿಯೆನಿಸಿಕೊಂಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಡೀ ರಾಷ್ಟ್ರಕ್ಕೆ ಮನದ ಮಾತಿನಲ್ಲಿ ಈ ಕುರಿತು ಪ್ರಸ್ತಾಪಿಸಿದರು ಮತ್ತು ಈ ಪುಸ್ತಕದಲ್ಲಿ ಇನ್ನೂ ಏನೇನು ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡುವಂತೆ ಕೇಳಿದರು. ಪರೀಕ್ಷೆಗಳು, ಪ್ರಸ್ತುತ ವಿದ್ಯಾರ್ಥಿಗಳು ಎದುರಿಸುತ್ತಿರುವಂತಹ ಸವಾಲುಗಳಿಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋಣಗಳಿದ್ದರೆ ಹಾಗೂ ಆ ಸವಾಲುಗಳಿಗೆ ಪರಿಹಾರಗಳಿದ್ದರೆ ಇನ್ನೂ ಬೇರೆನಾದರೂ ವಿಷಯಗಳಿದ್ದರೆ ಹಂಚಿಕೊಳ್ಳಿ ಎಂದರು. .
ದಯಮಾಡಿ ನಿಮ್ಮ ಅನಿಸಿಕೆ ಮತ್ತು ಇತರೆ ಸಂಬಂಧಿತ ಮಾಹಿತಿಯನ್ನು ಕೆಳಗಿನ ಮಾಡ್ಯೂಲ್ ನಲ್ಲಿ ನಮೂದಿಸಿ ಮತ್ತು ಕಳುಹಿಸಿ.