ಸೆಶೆಲ್ಸ್ ಸಂಸತ್ತಿನ 12 ಸದಸ್ಯರ ನಿಯೋಗ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಸ್ಪೀಕರ್ ಮಾನ್ಯ ಪ್ಯಾಟ್ರಿಕ್ ಪಿಲ್ಲೈ ನೇತೃತ್ವದ ಈ ನಿಯೋಗದಲ್ಲಿ ಸರ್ಕಾರದ ಕಲಾಪಗಳ ನಾಯಕ ಮಾನ್ಯ ಚಾರ್ಲ್ಸ್ ಡಿ ಕಮಾರ್ಮಂಡ್ ಸಹ ಇದ್ದರು.
ಪ್ರಧಾನಮಂತ್ರಿಯವರು ಎರಡೂ ದೇಶಗಳ ಶಾಸಕಾಂಗ ಸದಸ್ಯರ ಹೆಚ್ಚಿನ ವಿನಿಮಯವನ್ನು ಸ್ವಾಗತಿಸಿದರು. ಹಿಂದೂ ಮಹಾಸಾಗರವೂ ಸೇರಿದಂತೆ ಭಾರತ ಮತ್ತು ಸೆಶೆಲ್ಸ್ ನಡುವೆ ಆಪ್ತ ಪಾಲುದಾರರಾಗಿ ಎರಡೂ ದೇಶಗಳ ನಡುವೆ ಬಲವಾದ ಮತ್ತು ಚೈತನ್ಯದಾಯಕ ಬಾಂಧವ್ಯ ಎತ್ತಿಹಿಡಿಯುವಲ್ಲಿ ಅವರ ಪಾತ್ರವನ್ನು ಪ್ರಶಂಸಿಸಿದರು. 2015ರ ಮಾರ್ಚ್ ನಲ್ಲಿ ಸೆಶೆಲ್ಸ್ ಗೆ ತಾವು ನೀಡಿದ್ದ ಫಲಪ್ರದ ಭೇಟಿಯನ್ನು ಪ್ರಧಾನಮಂತ್ರಿ ಸ್ಮರಿಸಿದರು, ಇದು ಎರಡೂ ರಾಷ್ಟ್ರಗಳಿಗೆ ಸಹಕಾರವನ್ನು ಇನ್ನೂ ಆಳಗೊಳಿಸಲು ನೆರವಾಗುತ್ತದೆ ಎಂದರು.
ನಿಯೋಗವು ಪ್ರಧಾನಿಯವರೊಂದಿಗೆ ಎರಡೂ ದೇಶಗಳ ನಡುವೆ ಸಹಕಾರವರ್ಧನೆ ಮತ್ತು ಜನರೊಂದಿಗಿನ ವಿನಿಮಯವನ್ನು ಮತ್ತಷ್ಟು ಬಲಪಡಿಸುವ ಕುರಿತ ದೃಷ್ಟಿಕೋನವನ್ನು ಹಂಚಿಕೊಂಡಿತು.
ಲೋಕಸಭಾಧ್ಯಕ್ಷರ ಆಹ್ವಾನದ ಮೇರೆಗೆ ಸೆಶೆಲ್ಸ್ ನ ಸಂಸದೀಯ ನಿಯೋಗವು ಅಧಿಕೃತ ಭೇಟಿಯಲ್ಲಿದೆ.