ಥಾಯ್ ಲ್ಯಾಂಡ್ ನ ಸ್ವರ್ಣ ಭೂಮಿಯಲ್ಲಿ ಆದಿತ್ಯ ಬಿರ್ಲಾ ಸಮೂಹದ ಸುವರ್ಣ ಮಹೋತ್ಸವ ಆಚರಣೆಗಾಗಿ ನಾವೆಲ್ಲರೂ ಸೇರಿದ್ದೇವೆ.

ಭಾರತ ಗಾಢ ಸಾಂಸ್ಕೃತಿಕ ಬಾಂಧವ್ಯ ಹೊಂದಿರುವವರೊಂದಿಗೆ ಥಾಯ್ ಲ್ಯಾಂಡ್ ನಲ್ಲಿ ನಾವಿದ್ದೇವೆ. ನಾವು ಭಾರತದ ಪ್ರಮುಖ ಕೈಗಾರಿಕಾ ತಾಣದ ಐವತ್ತನೇ ವರ್ಷವನ್ನು ನಾವು ಆಚರಿಸುತ್ತಿದ್ದೇವೆ.

ನಾನು, ಭಾರತದ ಇಂದಿನ ಧನಾತ್ಮಕ ಬದಲಾವಣೆಯ ಚಿತ್ರಣವನ್ನು ಹಂಚಿಕೊಳ್ಳಲು ಕಾತುರನಾಗಿದ್ದೇನೆ. ನಾನು ಇದನ್ನು ಸಂಪೂರ್ಣ ವಿಶ್ವಾಸದೊಂದಿಗೆ ಹೇಳುತ್ತೇನೆ – ಭಾರತಕ್ಕೆ ಇದು ಅತ್ಯುತ್ತಮ ಕಾಲ.

ಕಳೆದ ಐದು ವರ್ಷಗಳಲ್ಲಿ ಭಾರತ, ವಿವಿಧ ವಲಯಗಳಲ್ಲಿ ಹಲವು ಯಶೋಗಾಥೆಗಳನ್ನು ಕಂಡಿದೆ. ಇದಕ್ಕೆ ಕಾರಣ ಸರ್ಕಾರ ಮಾತ್ರವೇ ಅಲ್ಲ. ಭಾರತ ಈಗ ಆಡಳಿತಶಾಹಿ ಧೋರಣೆಯಿಂದ ಮಾತ್ರ ಕೆಲಸ ಮಾಡುವುದನ್ನು ನಿಲ್ಲಿಸಿದೆ.

ನಿಮಗೆ ಕೇಳಿದರೆ ಆಘಾತ ಆಗುತ್ತದೆ, ಹಲವು ವರ್ಷಗಳಿಂದ ಬಡವರಿಗಾಗಿ ಮಾಡುತ್ತಿದ್ದ ವೆಚ್ಚ ಬಡವರನ್ನೂ ತಲುಪುತ್ತಲೇ ಇರಲಿಲ್ಲ. ನಮ್ಮ ಸರ್ಕಾರ ಈ ಪ್ರವೃತ್ತಿಗೆ ಕೊನೆ ಹಾಡಿದೆ ಡಿಬಿಟಿಗೆ ಧನ್ಯವಾದಗಳು. ಡಿಬಿಟಿ ಅಂದರೆ ನೇರ ಸವಲತ್ತು ವರ್ಗಾವಣೆ. ಡಿಬಿಟಿ ಮಧ್ಯವರ್ತಿಗಳು ಮತ್ತು ಅದಕ್ಷತೆಯನ್ನು ಕೊನೆಗಾಣಿಸಿದೆ.

ತೆರಿಗೆ ಆಡಳಿತ ಸುಧಾರಣೆ

ಇಂದಿನ ಭಾರತದಲ್ಲಿ, ಕಷ್ಟಜೀವಿ ತೆರಿಗೆದಾರರ ಕೊಡುಗೆ ಸ್ಮರಿಸಲಾಗುತ್ತಿದೆ. ನಾನು ತೆರಿಗೆಯ ಒಂದು ಕ್ಷೇತ್ರದಲ್ಲಿ ಗಣನೀಯ ಕಾರ್ಯ ಮಾಡಿದ್ದೇವೆ. ಭಾರತ ಈಗ ಅತ್ಯಂತ ಜನ ಸ್ನೇಹಿಯಾದ ತೆರಿಗೆ ಆಡಳಿತ ಹೊಂದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಾವು ಇದನ್ನು ಮತ್ತಷ್ಟು ಉತ್ತಮಪಡಿಸಲು ಬದ್ಧರಾಗಿದ್ದೇವೆ.

ಭಾರತ ಹೂಡಿಕೆಗೆ ಅತ್ಯಂತ ಆಕರ್ಷಕ ತಾಣ

ಎಲ್ಲಕ್ಕಿಂತ ಮಿಗಿಲಾಗಿ, ಭಾರತ ವಿಶ್ವದ ಅತ್ಯಂತ ಉತ್ತಮ ಆಕರ್ಷಕ ಹೂಡಿಕೆ ತಾಣ ಎಂದು ಈಗಷ್ಟೇ ಹೇಳಿದೆ. ಭಾರತ ಕಳೆದ ಐದು ವರ್ಷಗಳಲ್ಲಿ 286 ಶತಕೋಟಿ ಅಮೆರಿಕನ್ ಡಾಲರ್ ನೇರ ಬಂಡವಾಳ ಹೂಡಿಕೆ ಸ್ವೀಕರಿಸಿದೆ. ಕಳೆದ 25 ವರ್ಷಗಳಲ್ಲಿ ಭಾರತಕ್ಕೆ ಬಂದ ವಿದೇಶೀ ನೇರ ಬಂಡವಾಳದ ಅರ್ಧದಷ್ಟು ಇದಾಗಿದೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿನ ಬೆನ್ನಟ್ಟಿ

ಭಾರತ ಈಗ ಐದು ಟ್ರಿಲಿಯನ್ ಡಾಲರ್ ಆರ್ಥಿಕ ರಾಷ್ಟ್ರವಾಗುವ ಪ್ರಯತ್ನ ಮಾಡುತ್ತಿದೆ. 2014ರಲ್ಲಿ ನನ್ನ ಸರ್ಕಾರ ಅಧಿಕಾರ ವಹಿಸಿಕೊಂಡಾಗ, ಭಾರತದ ಡಿಜಿಪಿ ಸುಮಾರು 2 ಟ್ರಿಲಿಯನ್ ಡಾಲರ್ ಆಗಿತ್ತು. 65 ವರ್ಷಗಳಲ್ಲಿ 2 ಟ್ರಿಲಿಯನ್ ಡಾಲರ್. ಆದರೆ ಕಳೆದ 5 ವರ್ಷಗಳಲ್ಲಿ ಅದನ್ನು ಸುಮಾರು 3 ಟ್ರಿಲಿಯನ್ ಡಾಲರ್ ಗೆ ಹೆಚ್ಚಿಸಿದ್ದೇವೆ. ಭಾರತದಲ್ಲಿರುವ ಕೌಶಲ್ಯಪೂರ್ಣ ಮತ್ತು ಪ್ರತಿಭಾವಂತ ಮಾನವ ಸಂಪನ್ಮೂಲದ ಬಗ್ಗೆ ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ. ಭಾರತ ವಿಶ್ವದ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಭಾರತ ಪ್ರಗತಿ ಸಾಧಿಸಿದಾಗ, ಇಡೀ ವಿಶ್ವ ಪ್ರಗತಿ ಸಾಧಿಸುತ್ತದೆ. ಭಾರತದ ಅಭಿವೃದ್ಧಿಯ ನಮ್ಮ ಮುನ್ನೋಟ ಭೂಗ್ರಹವನ್ನೂ ಉತ್ತಮವಾಗಿ ಮುನ್ನಡೆಸುತ್ತದೆ.

ಪೂರ್ವದತ್ತ ಕ್ರಮ

ನಮ್ಮ ಪೂರ್ವದತ್ತ ಕ್ರಮದ ಸ್ಫೂರ್ತಿಯ ಮೂಲಕ, ಈ ವಲಯದೊಂದಿಗೆ ಹೆಚ್ಚಿನ ಸಂಪರ್ಕಕ್ಕೆ ನಾವು ವಿಶೇಷ ಗಮನ ಹರಿಸಿದ್ದೇವೆ. ಥಾಯ್ ಲ್ಯಾಂಡ್ ನ ಪಶ್ಚಿಮ ಕರಾವಳಿಯ ಬಂದುರುಗಳು ಮತ್ತು ಭಾರತದ ಪೂರ್ವ ಕರಾವಳಿಯ ಬಂದರುಗಳ ನಡುವಿನ  ನೇರ ಸಂಪರ್ಕ ನಮ್ಮ ಆರ್ಥಿಕ ಪಾಲುದಾರಿಕೆಯನ್ನು ಹೆಚ್ಚಿಸುತ್ತದೆ.

ಹೂಡಿಕೆಗಾಗಿ ಮತ್ತು ಸುಗಮ ವ್ಯಾಪಾರಕ್ಕಾಗಿ, ಭಾರತಕ್ಕೆ ಬನ್ನಿ. ನಾವಿನ್ಯತೆ ಮತ್ತು ನವೋದ್ಯಮಕ್ಕಾಗಿ ಭಾರತಕ್ಕೆ ಬನ್ನಿ. ಕೆಲವು ಅತ್ಯಂತ ಉತ್ತಮ ಪ್ರವಾಸಿ ತಾಣಗಳನ್ನು ಕಾಣಲು ಮತ್ತು ಜನರ ಆತ್ಮೀಯ ಆತಿಥ್ಯಕ್ಕಾಗಿ ಭಾರತಕ್ಕೆ ಬನ್ನಿ.  ಭಾರತ ನಿಮ್ಮನ್ನು ಕೈಬೀಸಿ ಕರೆಯಲು ಕಾಯುತ್ತಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi