ಬ್ಯುನೊಸ್ ಎರೆಸಿನಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಚೀನಾ ಪ್ರಜಾಗಣರಾಜ್ಯದ ಅಧ್ಯಕ್ಷ ಶ್ರೀ ಕ್ಸಿ ಜಿನ್ಪಿಂಗ್ ಮತ್ತು ರಷ್ಯಾ ಒಕ್ಕೂಟದ ಅಧ್ಯಕ್ಷ ಶ್ರೀ ವ್ಲಾಡಿಮಿರ್ ಪುಟಿನ್ ಅವರ ನಡುವೆ ತ್ರಿಪಕ್ಷೀಯ ಸಭೆ ನಡೆಯಿತು.
ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಹಕಾರಗಳನ್ನು ವಿಸ್ತರಿಸುವ ಮತ್ತು ಈ ಮೂರೂ ರಾಷ್ಟ್ರಗಳ ನಡುವೆ ಅಧಿಕ ಮಾತುಕತೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿಪ್ರಾಯಗಳನ್ನು ಮೂವರೂ ನಾಯಕರು ಪರಸ್ಪರ ವಿನಿಮಯ ಮಾಡಿಕೊಂಡರು. ವಿಶ್ವ ಸಂಸ್ಥೆ, ವಿಶ್ವ ವ್ಯಾಪಾರ ಸಂಸ್ಥೆ (ಡ.ಬ್ಲ್ಯೂ.ಒ) ಮತ್ತು ಸುಸ್ಥಿತಿಯಲ್ಲಿರುವ, ನೂತನ ಜಾಗತಿಕ ಆರ್ಥಿಕ ಸಂಸ್ಥೆಗಳು ಸೇರಿದಂತೆ ವಿಶ್ವಕ್ಕೆ ಪ್ರಯೋಜನಕಾರಿಯಾದ ಬಹುಮುಖ ಸಂಸ್ಥೆಗಳನ್ನು ಸುಧಾರಿಸುವ ಮತ್ತು ಬಲಿಷ್ಠಗೊಳಿಸುವ ಅಗತ್ಯತೆಯನ್ನು ಇವರು ಒಪ್ಪಿಕೊಂಡರು. ಅಲ್ಲದೆ, ಬಹುಮುಖ ವ್ಯಾಪಾರ ವ್ಯವಸ್ಥೆಗಳ ಪ್ರಯೋಜನಗಳನ್ನು ಹಾಗೂ ಜಾಗತಿಕ ಪ್ರಗತಿ ಮತ್ತು ಸಮೃದ್ಧಿಗಾಗಿ ಮುಕ್ತ ಜಾಗತಿಕ ಆರ್ಥಿಕತೆಯ ಆವಶ್ಯಕತೆಯನ್ನು ಅರ್ಥಮಾಡಿಕೊಂಡರು
ಜಾಗತಿಕ ಸವಾಲುಗಳಾದ ಭಯೋತ್ಪಾದನೆ ಮತ್ತು ವಾತಾವರಣ ಬದಲಾವಣೆಗಳನ್ನು ಪರಿಹರಿಸಲು ಮತ್ತು ವ್ಯತ್ಯಾಸಗಳನ್ನು ಶಾಂತಿಯುತವಾಗಿ ಪರಿಹರಿಸುವುದನ್ನು ಪ್ರೊತ್ಸಾಹಿಸಲು, ಬ್ರಿಕ್ಸ್, ಎಸ್.ಸಿ.ಒ ಮತ್ತು ಇ.ಎ.ಎಸ್ ರಚನಾಚೌಕಟ್ಟು ವ್ಯವಸ್ಥೆಗಳ ಮೂಲಕ ಸಹಕಾರವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಎಲ್ಲಾ ಹಂತಗಳಲ್ಲೂ ಜಂಟಿಯಾಗಿ ಅಂತರ್ ರಾಷ್ಟ್ರೀಯ ಹಾಗೂ ಪ್ರಾಂತೀಯ ಶಾಂತಿ ಮತ್ತು ಸ್ಥಿರತೆಯನ್ನು ವೃದ್ಧಿಮಾಡುವ ನಿಟ್ಟಿನಲ್ಲಿ ನಿಯಮಿತವಾಗಿ ಆಗಾಗ ಸಮಾಲೋಚನೆ ನಡೆಸಲು ಮೂವರೂ ನಾಯಕರು ಒಪ್ಪಿಕೊಂಡಿದ್ದಾರೆ;
ರಿಕ್ ರಚನೆಯಲ್ಲಿ ಸಹಕಾರದ ಮಹತ್ವವನ್ನು ಮೂವರೂ ನಾಯಕರು ಒಪ್ಪಿಕೊಂಡಿದ್ದಾರೆ ಮತ್ತು ವಿವಿಧ ಸಂದರ್ಭಗಳಲ್ಲಿ ಇಂತಹ ತ್ರಿಪಕ್ಷೀಯ ಸಭೆಗಳನ್ನು ನಡೆಸಲು ಒಪ್ಪಿಕೊಂಡಿದ್ದಾರೆ.
Deepening engagement with valued development partners.
— PMO India (@PMOIndia) November 30, 2018
President Vladimir Putin, President Xi Jinping and PM @narendramodi participate in the RIC (Russia, India, China) trilateral in Buenos Aires. @KremlinRussia pic.twitter.com/G8zj5C1ezZ