2021ರ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಬಾರಿ ಈ ಕಾರ್ಯಕ್ರಮವು ಸಂಪೂರ್ಣ ಆನ್‌ಲೈನ್ ಮೂಲಕ ನಡೆಯಲಿದ್ದು, ವಿಶ್ವದಾದ್ಯಂತ ವಿದ್ಯಾರ್ಥಿಗಳು ಭಾಗವಹಿಸಲು ಮುಕ್ತ ಅವಕಾಶವಿದೆ. ಪರೀಕ್ಷಾ ಒತ್ತಡವನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.
ಪರೀಕ್ಷಾ ಪೇ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಪ್ರಧಾನಿ ಕರೆ
ಪರೀಕ್ಷಾ ಪೇ ಚರ್ಚಾ 2021 ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ಆಹ್ವಾನಿಸಿರುವ ಪ್ರಧಾನಿ ಮೋದಿ ಅವರು, "ನಮ್ಮ ಪರೀಕ್ಷಾ ಯೋಧರು ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಿರುವಂತೆಯೇ, 'ಪರೀಕ್ಷಾ ಪೇ ಚರ್ಚಾ 2021' ಮತ್ತೊಮ್ಮೆ ಬಂದಿದೆ. ಈ ಬಾರಿ ಸಂಪೂರ್ಣ ಆನ್‌ಲೈನ್ ಮತ್ತು ವಿಶ್ವಾದ್ಯಂತ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಮುಕ್ತ ವಾಗಿದೆ. ಬನ್ನಿ, ನಾವು ಯಾವುದೇ ಒತ್ತಡವಿಲ್ಲದೆ ಮುಗುಳುನಗೆಯಿಂದ ಪರೀಕ್ಷೆ ಬರೆಯೋಣ!" ಎಂದು ಟ್ವೀಟ್ ಮಾಡಿದ್ದಾರೆ.
ಪರಿಕ್ಷಪೆ ಚರ್ಚಾ 2021 ರ ಉತ್ಸಾಹ
ಪರೀಕ್ಷಾ ಪೇ ಚರ್ಚಾ 2021ರಲ್ಲಿ ಭಾಗವಹಿಸುವುದಷ್ಟೇ ಅಲ್ಲದೆ, ಒತ್ತಡ ರಹಿತ ವಾತಾವರಣದಲ್ಲಿ ನಿರಾಳವಾಗಿ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಪ್ರಧಾನಿ ಮೋದಿ ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆಯಲು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಸಾಕಷ್ಟು ತುಡಿತವಿದೆ. ಪ್ರಧಾನಿ ಅವರಿಗೆ ಪ್ರಶ್ನೆಗಳನ್ನು ಕೇಳಲು, ಅವರ ಅಮೂಲ್ಯ ಸಲಹೆ-ಸೂಚನೆಗಳನ್ನು ಪಡೆಯಲು ನೀವೂ ಅವಕಾಶ ಗಿಟ್ಟಿಸಬಹುದು.
ಪರೀಕ್ಷಾ ಪೇ ಚರ್ಚಾ 2021 ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
ಪರಿಕ್ಷಾ ಪೇ ಚರ್ಚಾ 2021ರಲ್ಲಿ ಭಾಗವಹಿಸಲು, MyGov ವೇದಿಕೆಯಲ್ಲಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರನ್ನು ʻಪಿಪಿಸಿ-2021ʼಕ್ಕೆ ಮಾಡಲಾದ ಸಲ್ಲಿಕೆಗಳ ಆಧಾರದ ಮೇಲೆ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ʻಪಿಪಿಸಿ-2021ʼ ಸ್ಪರ್ಧೆಯಲ್ಲಿ ಭಾಗವಹಿಸಲು ಈಗಲೇ innovateindia.mygov.in/ppc-2021/ ಗೆ ಭೇಟಿ ನೀಡಿ!
ಪಿಪಿಸಿ 2021 ವಿಜೇತರಿಗೆ ವಿಶೇಷ ಬಹುಮಾನಗಳು...
ಪಿಪಿಸಿ 2021 ಸ್ಪರ್ಧೆಯ ವಿಜೇತರು ಪ್ರಧಾನಿ ಮೋದಿ ಅವರೊಂದಿಗೆ ಪರಿಕ್ಷಾ ಪೇ ಚರ್ಚಾ 2021 ಕಾರ್ಯಕ್ರಮದಲ್ಲಿ ನೇರ ಸ್ಪರ್ಧಿಯಾಗಿ ಭಾಗವಹಿಸುವ ವಿಶೇಷ ಅವಕಾಶವನ್ನು ಪಡೆಯುತ್ತಾರೆ. ಪ್ರತಿಯೊಬ್ಬ ವಿಜೇತರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಶಂಸನಾ ಪ್ರಮಾಣಪತ್ರವನ್ನು ಮತ್ತು ವಿಶೇಷವಾದ ಪರೀಕ್ಷಾ ಪೇ ಚರ್ಚಾ ಕಿಟ್ ಅನ್ನು ಪಡೆಯುತ್ತಾರೆ!
'ಪರೀಕ್ಷಾ ಯೋಧʼರಾಗಿ
'ಪರೀಕ್ಷಾ ಪೇ ಚರ್ಚಾ' ಎಂಬುದು ಯುವ ಜನತೆಗಾಗಿ ಒತ್ತಡ ಮುಕ್ತ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆಸುತ್ತಿರುವ 'ಪರೀಕ್ಷಾ ಯೋಧರುʼ ಎಂಬ ಬೃಹತ್ ಆಂದೋಲನದ ಒಂದು ಭಾಗವಾಗಿದೆ. ತಮ್ಮ ಪುಸ್ತಕದ ಮೂಲಕ ಪ್ರಧಾನಿ ಮೋದಿ ಅವರು ಶಿಕ್ಷಣಕ್ಕೆ ಹೊಸ ದೃಷ್ಟಿಕೋನವನ್ನು ಒದಗಿಸಿದ್ದಾರೆ.
ಕಲಿಕೆ ಆನಂದದಾಯಕ, ತೃಪ್ತಿದಾಯಕ ಮತ್ತು ನಿರಂತರವಾಗಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪುಸ್ತಕದ ಸಂದೇಶ. ʻNaMo Appʼನಲ್ಲಿರುವ 'ಪರೀಕ್ಷಾ ಯೋಧರುʼ ವಿಭಾಗವು ʻಪರೀಕ್ಷಾ ಯೋಧರುʼ ಆಂದೋಲನಕ್ಕೆ ಒಂದು ಸಂವಾದಾತ್ಮಕ ಹಾಗೂ ತಾಂತ್ರಿಕ ಅಂಶವನ್ನು ಸೇರ್ಪಡೆಗೊಳಿಸುತ್ತದೆ. ಜೊತೆಗೆ, ಪ್ರಧಾನಿಯವರು ತಮ್ಮ 'ಪರೀಕ್ಷಾ ಯೋಧರುʼ ಪುಸ್ತಕದಲ್ಲಿ ಬರೆದಿರುವ ಪ್ರತಿಯೊಂದು ಮಂತ್ರದ (ಸಲಹೆ) ಮುಖ್ಯ ಸಂದೇಶಗಳನ್ನೂಅದು ತಿಳಿಸುತ್ತದೆ.
'ಪರೀಕ್ಷಾ ಯೋಧರುʼ ಪುಸ್ತಕದ ಮೂಲಕ ಪ್ರಧಾಣಿ ಮೋದಿ ಅವರು, ಪರೀಕ್ಷೆ ಬರೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆತಂಕವನ್ನು ದೂರ ಮಾಡಲು, ಅದರಲ್ಲೂ ವಿಶೇಷವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಒತ್ತಡ ದೂರ ಮಾಡಲು 25 ಮಂತ್ರಗಳನ್ನು (ಸಲಹೆಗಳನ್ನು) ಪ್ರಧಾನಿ ಮೋದಿ ಅವರು ಮುಂದಿಟ್ಟಿದ್ದಾರೆ. “ಯೋಧರಾಗಿ, ಯೋಚನಾಭರಿತರಾಗಬೇಡಿ” (“Be a warrior, not a worrier”) ಎಂದು ಪ್ರಧಾನಿ ಮೋದಿ ತಮ್ಮ ಪುಸ್ತಕದಲ್ಲಿ ಒತ್ತಿ ಹೇಳಿದ್ದಾರೆ. ಪುಸ್ತಕದಲ್ಲಿನ ಒಂದು ಮಂತ್ರದ ಮೂಲಕ ಜ್ಞಾನಾರ್ಜನೆ ಮುಂದುವರಿಸುವಂತೆ ವಿದ್ಯಾರ್ಥಿಗಳನ್ನು ಕೋರುವ ಪ್ರಧಾನಿ, ಇದರಿಂದ ಅಂಕಗಳು ತಾನಾಗಿಯೇ ಹಿಂಬಾಲಿಸುತ್ತವೆ ಎನ್ನುತ್ತಾರೆ. ಜ್ಞಾನಾರ್ಜನೆಯ ಪಯಣವನ್ನು ಒಂದು ಲಾಭದಾಯಕ ಅನುಭವ ಎಂದು ಕರೆದಿರುವ ಅಧ್ಯಾಯವೊಂದು, ಯಾವುದೇ ಪ್ರಶ್ನೆಗಳು ಕಠಿಣವೆನಿಸದಂತೆ ವಿದ್ಯಾರ್ಥಿಗಳು ಜ್ಞಾನವನ್ನು ಪಡೆಯುವ ಅಗತ್ಯವನ್ನು ಒತ್ತಿ ಹೇಳುತ್ತದೆ.
2018ರ ಫೆಬ್ರವರಿ 16ರಂದು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ 'ಪರೀಕ್ಷಾ ಪೇ ಚರ್ಚಾ' ಮೊದಲ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಎರಡನೇ ಆವೃತ್ತಿಯನ್ನು 2019ರ ಜನವರಿ 29ರಂದು ಮತ್ತು ಮೂರನೇ ಆವೃತ್ತಿಯನ್ನು 2020ರ ಜನವರಿ 20ರಂದು ಆಯೋಜಿಸಲಾಗಿತ್ತು.
As our brave #ExamWarriors start padding up for their exams, ‘Pariksha Pe Charcha 2021’ returns, this time fully online and open to students all over the world. Come, let us appear for the exams with a smile and without stress! #PPC2021https://t.co/dsjq8y879s
— Narendra Modi (@narendramodi) February 18, 2021
On popular demand, ‘Pariksha Pe Charcha 2021’ will also include parents and teachers. It’ll be a fun filled discussion on an otherwise serious subject. I call upon my student friends, their amazing parents and hardworking teachers to take part in #PPC2021 in large numbers.
— Narendra Modi (@narendramodi) February 18, 2021