ಪರೀಕ್ಷಾ ಪೆ ಚರ್ಚಾ ಸಭಾಂಗಣದಲ್ಲಿ ಪ್ರಧಾನಮಂತ್ರಿ ಮೋದಿ ಅವರು, ವೈಫಲ್ಯವನ್ನು ಮೆಟ್ಟಿ ನಿಲ್ಲುವ ವಿಚಾರದಲ್ಲಿ ಚಂದ್ರಯಾನದ ಇಳಿಯುವಿಕೆ ಒಂದು ಸ್ಪಷ್ಟ ಉದಾಹಣೆ. “ಚಂದ್ರಯಾನ ಇಳಿಯುವ ಸಂದರ್ಭದಲ್ಲಿ ತಮ್ಮ ಇಸ್ರೋ ಭೇಟಿ ಮತ್ತು ಶ್ರಮಪಟ್ಟು ದುಡಿಯುವ ವಿಜ್ಞಾನಿಗಳೊಂದಿಗೆ ಕಳೆದ ಸಮಯವನ್ನು ಎಂದಿಗೂ ಮರೆಯುವುದಿಲ್ಲ’’ ಎಂದರು.
ಇಸ್ರೋ ವಿಜ್ಞಾನಿಗಳ ಪ್ರಯತ್ನವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, “ಯೋಜಿತ ರೀತಿಯಲ್ಲಿ ಚಂದ್ರಯಾನ ಇಳಿಯದಿದ್ದಾಗ ನಮ್ಮ ವಿಜ್ಞಾನಿಗಳ ಮುಖದಲ್ಲಿ ಕಾಣಿಸಿಕೊಂಡ ನಿರಾಶೆಯನ್ನು ಗಮನಿಸಿದೆ. ತಾತ್ಕಾಲಿಕ ಹಿನ್ನಡೆಯು ಉತ್ತಮ ಯಶಸ್ಸಿನ ಮುನ್ಸೂಚಿ’ ಎಂದರು.