ರಾಜ್ ಕೋಟ್ ನೊಂದಿಗಿನ ತಮ್ಮ ಸಂಪರ್ಕವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನೆನಪಿಸಿಕೊಂಡರು ಮತ್ತು ಆರ್ಕೈವ್ ನ ಎಕ್ಸ್ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಸರಿಯಾಗಿ 22 ವರ್ಷಗಳ ಹಿಂದೆ ಫೆಬ್ರವರಿ 24, 2002 ರಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಶಾಸಕರಾಗಿ ಗುಜರಾತ್ ವಿಧಾನಸಭೆಗೆ ಕಾಲಿಟ್ಟರು ಮತ್ತು ರಾಜ್‌ಕೋಟ್ II ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಜಯಗಳಿಸಿದ ವಿಶೇಷ ಕ್ಷಣವನ್ನು ಶ್ರೀ ಮೋದಿಯವರ ಆರ್ಕೈವ್ ಸಂದೇಶ ನೆನಪಿಸುತ್ತದೆ.
ಪ್ರಧಾನಮಂತ್ರಿ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;
"ರಾಜ್ ಕೋಟ್ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಈ ನಗರದ ಜನರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ನನಗೆ ಮೊದಲ ಚುನಾವಣಾ ಗೆಲುವನ್ನು ನೀಡಿದ್ದಾರೆ. ಅಂದಿನಿಂದ ಜನತಾ ಜನಾರ್ದನರ ಆಶಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ನಾನು ಇಂದು ಮತ್ತು ನಾಳೆ ಗುಜರಾತ್ ನಲ್ಲಿ ಇರುತ್ತೇನೆ ಮತ್ತು ರಾಜ್ ಕೋಟ್ ನಲ್ಲಿ ಕಾಕತಾಳೀಯವಾಗಿ ಅದೇ ದಿನದಂದು ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಅಲ್ಲಿಂದ 5 ಏಮ್ಸ್‌ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂಬುದು ಸಂತೋಷದ ವಿಷಯವಾಗಿದೆ.
Rajkot will always have a very special place in my heart. It was the people of this city who put their faith in me, giving me my first ever electoral win. Since then, I have always worked to do justice to the aspirations of the Janta Janardan. It’s also a happy coincidence that I… https://t.co/mhVeNPyDTe
— Narendra Modi (@narendramodi) February 24, 2024