ರಾಣಿ ಮ್ಯಾಕ್ಸಿಮಾ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಅಭಿವೃದ್ಧಿಯಾಗಿ ಹಣಕಾಸಿಗೆ ಸಂಬಂಧಿಸಿದಂತೆ ವಿಶೇಷ ಪ್ರತಿನಿಧಿಯಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ.
![](https://cdn.narendramodi.in/cmsuploads/0.41682900_1527514156_queen1.jpg)
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗು ರಾಣಿ ಮ್ಯಾಕ್ಸಿಮಾ ಅವರು ಭಾರತ ಸರ್ಕಾರದಿಂದ ಕಳೆದ ಕೆಲವು ವರ್ಷಗಳಲ್ಲಿ ಕೈಗೊಳ್ಳಲಾದ ಹಲವು ಉಪಕ್ರಮಗಳ ಕುರಿತು ಚರ್ಚಿಸಿದರು. ಇವುಗಳಲ್ಲಿ ಜನಧನ್ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಮತ್ತು ಅಟಲ್ ಪೆನ್ಷನ್ ಯೋಜನೆ ಸೇರಿದೆ. ರಾಣಿ ಮ್ಯಾಕ್ಸಿಮಾ ಅವರು ಈ ಯೋಜನೆಗಳಿಂದ ಸಾಧಿಸಿದ ಪ್ರಗತಿಯನ್ನು ಶ್ಲಾಘಿಸಿದರು.
ಜಾಗತಿಕ ಅಭಿವೃದ್ಧಿ ಹಣಕಾಸಿನ ಕುರಿತು ಈ ಇಬ್ಬರೂ ನಾಯಕರು ಚರ್ಚಿಸಿದರು. ಭಾರತೀಯ ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರ ಯೋಜನೆ ಮತ್ತು ವಿದೇಶಿ ಅಭಿವೃದ್ಧಿಯ ಯೋಜನೆಗಳಿಗೆ ಸರ್ಕಾರದ ಅಗತ್ಯತೆ ಮತ್ತು ಆದ್ಯತೆಗಳ ಆಧಾರದ ಮೇಲೆ ಸಾಲ ನೀಡುವ ದಿಕ್ಕಿನಲ್ಲಿ ಭಾರತದ ಪ್ರಯತ್ನಗಳನ್ನು ರಾಣಿ ಮ್ಯಾಕ್ಸಿಮಾ ಶ್ಲಾಘಿಸಿದರು.
Queen Máxima of the Netherlands met PM @narendramodi. pic.twitter.com/kpPZdwMTBh
— PMO India (@PMOIndia) May 28, 2018