ಇಂದು ನಾವು – ಆಸ್ಟ್ರೇಲಿಯಾ ಪ್ರಧಾನಿ ಆಂತೋನಿ ಅಲ್ಬನೀಸ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಜಪಾನ್ ಪ್ರಧಾನಿ ಫುಮಿಯೋ ಕಿಶಿಡಾ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರುಗಳು ಪಾರದರ್ಶಕ ಮತ್ತು ಮುಕ್ತ ಮಾತುಕತೆಯಲ್ಲಿ ಇಂಡೋ – ಪೆಸಿಫಿಕ್ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ಒಳಗೊಳ್ಳುವ ನಮ್ಮ ಅಚಲ ಬದ್ಧತೆಯನ್ನು ಪುನರುಚ್ಚರಿಸಲು ಟೋಕಿಯೋದಲ್ಲಿ ಸಭೆ ಸೇರಿದ್ದೇವೆ.
ಕೇವಲ ಒಂದು ವರ್ಷದ ಹಿಂದೆ ಈ ನಾಯಕರು ಮೊದಲ ಬಾರಿಗೆ ಭೇಟಿಯಾಗಿದ್ದೇವು. ಟೋಕಿಯೋದಲ್ಲಿ ನಾವು ನಾಲ್ಕನೇ ಬಾರಿಗೆ ಸಭೆ ಸೇರಿದ್ದೇವೆ ಮತ್ತು ವ್ಯಕ್ತಿಗತವಾಗಿ ಇದು ಎರಡನೆಯದು. ಆಳವಾದ ಜಾಗತಿಕ ಸವಾಲಿನ ಸಮಯದಲ್ಲಿ ಕ್ವಾಡ್ ಒಳ್ಳೆಯ ಉದ್ದೇಶಕ್ಕೆ ಒಂದು ಶಕ್ತಿಯಾಗಿದ್ದು, ಈ ಪ್ರದೇಶಕ್ಕೆ ಸ್ಪಷ್ಟ ಪ್ರಯೋಜನಗಳನ್ನು ತರಲು ಬದ್ಧವಾಗಿದೆ. ನಮ್ಮ ಸಹಕಾರದ ಮೊದಲ ವರ್ಷದಲ್ಲಿ ಸಕಾರಾತ್ಮಕ ಮತ್ತು ಪ್ರಾಯೋಗಿಕ ಕಾರ್ಯಸೂಚಿಗೆ ಸಮರ್ಪಣಾಭಾವದ ಕ್ವಾಡ್ ಅನ್ನು ಸ್ಥಾಪಿಸಿದ್ದೇವೆ. ಎರಡನೇ ವರ್ಷದಲ್ಲಿ ನಾವು ಈ ವಾಗ್ದಾನವನ್ನು ಈಡೇರಿಸಲು ಬದ್ಧರಾಗಿದ್ದೇವೆ. 21 ನೇ ಶತಮಾನಕ್ಕೆ ಅನುಗುಣವಾಗಿ ಈ ಪ್ರದೇಶವನ್ನು ತ್ವರಿತವಾಗಿ ಸಜ್ಜುಗೊಳಿಸುತ್ತೇವೆ.
ಜಗತ್ತಿನಾದ್ಯಂತ ಕೋವಿಡ್ – 19 ಸಾಂಕ್ರಾಮಿಕ ಇನ್ನೂ ಆರ್ಥಿಕ ಮತ್ತು ಮಾನವ ಕೇಂದ್ರೀತ ನೋವು ಉಂಟು ಮಾಡುತ್ತಿರುವ ಜೊತೆಗೆ ದೇಶಗಳ ನಡುವೆ ಏಕಪಕ್ಷೀಯ ಕ್ರಮಗಳ ಪ್ರವೃತ್ತಿಗಳು ಮತ್ತು ಉಕ್ರೇನ್ ನಲ್ಲಿ ಭುಗಿಲೆದ್ದಿರುವ ಸಂಘರ್ಷ ಸಂದರ್ಭದಲ್ಲಿ ನಾವು ದೃಢವಾಗಿದ್ದೇವೆ. ನಾವು ಸ್ವಾತಂತ್ರ್ಯದ ಸಿದ್ಧಾಂತಗಳನ್ನು, ನೆಲದ ಕಾನೂನನ್ನು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ, ಯಾವುದೇ ಬೆದರಿಕೆ ಇಲ್ಲವೆ ಶಕ್ತಿ ಬಳಸದೇ ಶಾಂತಿಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳುವುದನ್ನು ಮತ್ತು ಯಥಾಸ್ಥಿತಿಯನ್ನು ಬದಲಾಯಿಸುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು, ನೌಕಾಯಾನ ಮತ್ತು ವಾಯುಮಾರ್ಗದ ಉಲ್ಲಂಘನೆಗಳನ್ನು ವಿರೋಧಿಸುತ್ತೇವೆ. ಭಾರತ ಫೆಸಿಫಿಕ್ ವಲಯ ಹಾಗೂ ಜಾಗತಿಕವಾಗಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧತೆ ಸ್ಥಾಪನೆಗೆ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ನಾವು ಬಲವಾಗಿ ಬೆಂಬಲಿಸುತ್ತೇವೆ. ಈ ಪ್ರಾಂತ್ಯ ಮತ್ತು ಅದರಾಚೆಗೆ ಈ ತತ್ವಗಳನ್ನು ಮುನ್ನಡೆಸಲು ಒಟ್ಟಾಗಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವುದನ್ನು ನಾವು ಮುಂದುವರೆಸುತ್ತೇವೆ. ದೇಶಗಳ ಎಲ್ಲಾ ರೀತಿಯ ಸೇನೆ, ಆರ್ಥಿಕ ಮತ್ತು ರಾಜಕೀಯ ದಬ್ಬಾಳಿಕೆಯಿಂದ ಮುಕ್ತವಾಗಿರುವ ಅಂತರರಾಷ್ಟ್ರೀಯ ನಿಯಮ ಆಧಾರಿತ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ.
ಶಾಂತಿ ಮತ್ತು ಸ್ಥಿರತೆ
ಉಕ್ರೇನ್ ನಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಮಾನವೀಯ ದುರಂತದ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ನಾವು ಪ್ರತಿಕ್ರಿಯೆಗಳ ಬಗ್ಗೆ ಚರ್ಚಿಸಿದ್ದೇವೆ ಮತ್ತು ಭಾರತ - ಪೆಸಿಫಿಕ್ ಮತ್ತು ಅದರ ಪರಿಣಾಮಗಳ ಬಗ್ಗೆ ಮೌಲ್ಯ ಮಾಪನ ಮಾಡಿದ್ದೇವೆ. ಈ ಭಾಗದಲ್ಲಿ ಮಾನವೀಯ ಶಾಂತಿ ಸ್ಥಾಪನೆ ಮತ್ತು ಸ್ಥಿರತೆ ತರಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಪುನರುಚ್ಚರಿಸಿದ್ದೇವೆ. ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆ, ಸಾರ್ವಭೌತ್ವಕ್ಕೆ ಗೌರವ, ಅಂತರರಾಷ್ಟ್ರೀಯ ಕಾನೂನು, ಅಂತರರಾಷ್ಟ್ರೀಯ ವ್ಯವಸ್ಥೆಗೆ ವಿಶ್ವಸಂಸ್ಥೆಯ ಕಾನೂನು ಕೇಂದ್ರ ಬಿಂದುವಾಗಿದೆ ಎಂದು ನಾವು ವಿವಾದಾತೀತವಾಗಿ ಹೇಳುತ್ತಿದ್ದೇವೆ. ಎಲ್ಲಾ ದೇಶಗಳು ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ವಿವಾದಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕೆಂದು ನಾವು ಬಯಸಿರುವುದಾಗಿ ಒತ್ತಿ ಹೇಳುತ್ತಿದ್ದೇವೆ.
ಕ್ವಾಡ್ ನ ಸಹಭಾಗಿ ದೇಶಗಳ ಪಾಲುದಾರರು ಮುಕ್ತ ಮತ್ತು ತೆರೆದ ಭಾರತ - ಪೆಸಿಫಿಕ್ ವಲಯ ಸ್ಥಾಪನೆಗಾಗಿ ಸಹಕಾರ ನೀಡಲು ಬದ್ಧವಾಗಿದ್ದೇವೆ. ನಾವು ಆಸಿಯಾನ್ ಕೇಂದ್ರಿತ ಮತ್ತು ಏಕತೆ ಕುರಿತ ಆಸಿಯಾನ್ ದೃಷ್ಟಿಕೋನದ ಪ್ರಾಯೋಗಿಕ ಅನುಷ್ಠಾನಕ್ಕಾಗಿ ನಮ್ಮ ಅಚಲ ಬೆಂಬಲವನ್ನು ಪುನರುಚ್ಚರಿಸುತ್ತಿದ್ದೇವೆ.
2021 ರ ಸೆಪ್ಟೆಂಬರ್ ನಲ್ಲಿ ಭಾರತ – ಪೆಸಿಫಿಕ್ ವಲಯದಲ್ಲಿ ಐರೋಪ್ಯ ಒಕ್ಕೂಟ ತಮ್ಮ ಜಂಟಿ ಕಾರ್ಯತಂತ್ರವನ್ನು ಪ್ರಕಟಿಸಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಭಾರತ – ಪೆಸಿಫಿಕ್ ವಲಯದಲ್ಲಿ ಐರೋಪ್ಯ ರಾಷ್ಟ್ರಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಬಯಸುತ್ತೇವೆ. ಪೂರ್ವ ಚೈನಾ ಮತ್ತು ದಕ್ಷಿಣ ಚೈನಾ ಸಮುದ್ರಗಳು ಸೇರಿದಂತೆ ಕಡಲು ನಿಯಮ ಆಧಾರಿತ ಸವಾಲುಗಳನ್ನು ಎದುರಿಸಲು ಹಾಗೂ ಕಡಲ ಕಾನೂನು ಕುರಿತ ವಿಶ್ವಸಂಸ್ಥೆಯ ನಿರ್ಣಯ [ಯು.ಎನ್.ಸಿ.ಎಲ್.ಒ.ಎಸ್] ಮತ್ತು ನೌಕಾ ಹಾಗೂ ವಾಯು ಮಾರ್ಗದ ಸ್ವಾತಂತ್ರ್ಯ ನಿರ್ವಹಣೆಯಲ್ಲಿ ಪ್ರತಿಬಿಂಬಿತವಾಗಿರುವಂತೆ ನಾವು ಅಂತರರಾಷ್ಟ್ರೀಯ ಕಾನೂನಿಗೆ ಬದ್ಧರಾಗಿರುವುದನ್ನು ಬೆಂಬಲಿಸುತ್ತೇವೆ. ವಿವಾದದ ಲಕ್ಷಣಗಳಿರುವ ಸೇನಾ ಕ್ರಮ, ಕರಾವಳಿ ಕಾವಲು ಹಡಗುಗಳು, ಕಡಲು ರಕ್ಷಣಾ ಪಡೆಗಳ ಅಪಾಯಕಾರಿ ಬಳಕೆ ಮತ್ತು ದೇಶಗಳ ಸಾಗರೋತ್ತರ ಸಂಪನ್ಮೂಲಗಳ ಶೋಷಣೆ ಕುರಿತ ಚಟುವಟಿಕೆಗಳನ್ನು ಅಡ್ಡಿಪಡಿಸುವ ಪ್ರಯತ್ನಗಳು, ಯಥಾಸ್ಥಿತಿಯನ್ನು ಬದಲಾಯಿಸಲು ಮತ್ತು ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿಸಲು ಪ್ರಯತ್ನಿಸುವ ಯಾವುದೇ ಬಲವಂತದ, ಪ್ರಚೋದನಕಾರಿ ಅಥವಾ ಏಕಪ್ಷಕೀಯ ಕ್ರಮಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ.
ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ನಮ್ಮ ಸಹಕಾರವನ್ನು ನಾವು ಬಲಪಡಿಸುತ್ತೇವೆ. ಆರ್ಥಿಕ ವಲಯವನ್ನು ಬಲಪಡಿಸಲು, ಆರೋಗ್ಯ ಮೂಲ ಸೌಕರ್ಯ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಲು, ಕರಾವಳಿ ಭದ್ರತೆಯನ್ನು ಸುಧಾರಿಸಲು, ಮೀನುಗಾರಿಕೆಯಲ್ಲಿ ಸುಸ್ಥಿರತೆ ತರಲು, ಸುಸ್ಥಿರ ಮೂಲ ಸೌಕರ್ಯ ಅಭಿವೃದ್ಧಿ, ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಮತ್ತು ಅಳವಡಿಸಿಕೊಳ್ಳುವುದು ಈ ಪ್ರದೇಶಕ್ಕೆ ವಿಶೇಷವಾಗಿ ಗಂಭೀರ ಸವಾಲುಗಳಾಗಿವೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳ ಪಾಲುದಾರರ ಅಗತ್ಯಗಳನ್ನು ಒಟ್ಟಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ. ಪೆಸಿಫಿಕ್ ದ್ವೀಪಗಳ ಏಕತೆ ಮತ್ತು ಭದ್ರತಾ ಚೌಕಟ್ಟುಗಳಿಗೆ ಬೆಂಬಲ ನೀಡುವುದಾಗಿ ಪುನುರುಚ್ಚರಿಸಿದ್ದೇವೆ.
ನಾವು ನಮ್ಮಲ್ಲಿ ಮತ್ತು ನಮ್ಮ ಪಾಲುದಾರರ ಬಹುಹಂತದ ಸಂಸ್ಥೆಗಳು, ವಿಶ್ವಸಂಸ್ಥೆಯು ಒಳಗೊಂಡಂತೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು, ಬಹುಪಕ್ಷೀಯ ವ್ಯವಸ್ಥೆಯಲ್ಲಿ ತ್ವರಿತವಾಗಿ ಸುಧಾರಣೆ ತರಲು ಮತ್ತು ನಮ್ಮ ಹಂಚಿಕೆಯ ಆದ್ಯತೆಗಳನ್ನು ಹೆಚ್ಚಿಸುವ ಕ್ಷೇತ್ರಗಳನ್ನು ಬಲಪಡಿಸುತ್ತೇವೆ. ವ್ಯಯಕ್ತಿವಾಗಿ ಮತ್ತು ಒಟ್ಟಾಗಿ ನಾವು ನಮ್ಮ ಕಾಲದ ಸವಾಲುಗಳಿಗೆ ಪ್ರತಿಕ್ರಿಯೆ ನೀಡುತ್ತೇವೆ. ಈ ಪ್ರದೇಶ ಎಲ್ಲವನ್ನು ಒಳಗೊಳ್ಳುವ, ಮುಕ್ತ ಮತ್ತು ಸಾರ್ವತ್ರಿಕ ನಿಯಮಗಳು, ನಿಬಂಧನೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ.
ಕೋರಿಯಾದ ಪರ್ಯಾಯ ದ್ವೀಪದಲ್ಲಿ ಸಂಪೂರ್ಣ ನಿಶ್ಯಸ್ತ್ರೀಕರಣಕ್ಕೆ ನಮ್ಮ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ. ಇದು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ [ಯು.ಎನ್.ಎಸ್.ಸಿ.ಆರ್ ಗಳು] ಅನುಗುಣವಾಗಿ ಮತ್ತು ಜಪಾನಿನ ಒತ್ತೆಯಾಳು ಪ್ರಕರಣಗಳನ್ನು ತಕ್ಷಣವೇ ಪರಿಹರಿಸುವ ಅಗತ್ಯವನ್ನು ಪುನರುಚ್ಚರಿಸುತ್ತೇವೆ. ಉತ್ತರ ಕೋರಿಯಾದ ಖಂಡಾಂತರ ಕ್ಷಿಪಣಿ ಅಭಿವೃದ್ಧಿ ಮತ್ತು ಉಡಾವಣೆ, ಬಹುಹಂತದ ಅಂತರ್ ಖಂಡಾಂತರ ಕ್ಷಿಪಣಿ ಪರೀಕ್ಷೆಗಳು ಯು.ಎನ್.ಎಸ್.ಸಿ.ಆರ್ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಖಂಡಿಸುತ್ತೇವೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವಂತೆ ಕರೆ ನೀಡುತ್ತದೆ. ಯು.ಎನ್.ಎಸ್.ಸಿ.ಆರ್ ಗಳ ಅಡಿಯಲ್ಲಿ ಉತ್ತರ ಕೋರಿಯಾ ತನ್ನ ಎಲ್ಲಾ ಬಾಧ್ಯತೆಗಳಿಗೆ ಬದ್ಧವಾಗಿರಬೇಕು ಮತ್ತು ಪ್ರಚೋದನೆಗಳಿಂದ ದೂರ ಇರಬೇಕು ಹಾಗೂ ಮಹತ್ವದ ಮಾತುಕತೆಯಲ್ಲಿ ತೊಡಗಬೇಕು ಎಂದು ನಾವು ಒತ್ತಾಯಿಸುತ್ತೇವೆ.
ಮ್ಯಾನ್ಮಾರ್ ನ ಬಿಕ್ಕಟ್ಟಿನ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದು, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಾನವೀಯ ತೊಂದರೆಗಳಿಗೆ ಮತ್ತು ಪ್ರಾದೇಶಿಕ ಸ್ಥಿರತೆಗೆ ಸವಾಲುಗಳನ್ನು ಒಡ್ಡುತ್ತದೆ. ಮ್ಯಾನ್ಮಾರ್ ನಲ್ಲಿ ತಕ್ಷಣವೇ ಹಿಂಸಾಚಾರ ಕೊನೆಗೊಳ್ಳಬೇಕು, ವಿದೇಶಿಯರು ಸೇರಿದಂತೆ ಬಂಧಿತ ರಾಜಕೀಯ ನಾಯಕರನ್ನು ಬಂಧಮುಕ್ತಗೊಳಿಸಬೇಕು, ಮಾನವೀಯತೆಯಿಂದ ರಚನಾತ್ಮಕ ಮಾತುಕತೆಯಲ್ಲಿ ತೊಡಗಬೇಕು ಮತ್ತು ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಲು ಮುಂದಾಗಬೇಕು. ಆಸಿಯಾನ್ ನೇತೃತ್ವದಲ್ಲಿ ಮ್ಯಾನ್ಮಾರ್ ನಲ್ಲಿ ಪರಿಹಾರ ರೂಪಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ ಮತ್ತು ಆಸಿಯಾನ್ ಅಧ್ಯಕ್ಷತೆಯ ವಿಶೇಷ ರಾಯಭಾರಿ ಪಾತ್ರವನ್ನು ನಾವು ಬೆಂಬಲಿಸುತ್ತೇವೆ. ಆಸಿಯಾನ್ ನ ಐದು ಅಂಶಗಳ ಕ್ರಮಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ನಾವು ಕರೆ ನೀಡುತ್ತೇವೆ.
ಭಯೋತ್ಪಾದನೆ ಮತ್ತು ಹಿಂಸಾಸ್ವರೂಪದ ಉಗ್ರವಾದ, ಅದರ ಎಲ್ಲಾ ರೂಪಗಳನ್ನು ನಾವು ನಿಸ್ಸಂದೇಹವಾಗಿ ಖಂಡಿಸುತ್ತೇವೆ ಮತ್ತು ಇದರ ಆಧಾರದ ಮೇಲಿನ ಭಯೋತ್ಪಾದಕ ಕೃತ್ಯಗಳಿಗೆ ಯಾವುದೇ ಸಮರ್ಥನೆ ಇಲ್ಲ ಎಂದು ಪುನರುಚ್ಚರಿಸುತ್ತೇವೆ. ನಾವು ಪರೋಕ್ಷ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುತ್ತೇವೆ ಮತ್ತು ಗಡಿಯಾಚೆಗಿನ ದಾಳಿಗಳು ಒಳಗೊಂಡಂತೆ, ಭಯೋತ್ಪಾದಕ ದಾಳಿಗಳನ್ನು ಪ್ರಾರಂಭಿಸಲು, ಆಯೋಜಿಸಬಹುದಾದ ಗುಂಪುಗಳಿಗೆ ಯಾವುದೇ ಸಾರಿಗೆ, ಹಣಕಾಸು, ಸೇನೆಯ ಬೆಂಬಲವನ್ನು ನಿರಾಕರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತೇವೆ. 26/11 ರ ಮುಂಬೈ ಮತ್ತು ಪಠಾಣ್ ಕೋಟ್ ಭಯೋತ್ಪಾದಕ ದಾಳಿಗಳನ್ನು ಖಂಡಿಸುವುದಾಗಿ ಪುನರುಚ್ಚರಿಸುತ್ತೇವೆ. ನಾವು ಯು.ಎನ್.ಎಸ್.ಸಿ ನಿರ್ಣಯ 2593 (2021) ವನ್ನು ಪುನರುಚ್ಚರಿಸುತ್ತೇವೆ. ಇದು ಆಪ್ಘಾನ್ ಭೂ ಪ್ರದೇಶವನ್ನು ಮುಂದೆಂದೂ ಯಾವುದೇ ದೇಶವನ್ನು ಬೆದರಿಸಲು ಅಥವಾ ದಾಳಿ ಮಾಡಲು ಅಥವಾ ಭಯೋತ್ಪಾದಕರಿಗೆ ಆಶ್ರಯ ನೀಡಲು ಇಲ್ಲವೆ ತರಬೇತಿ ಕೊಡಲು ಅಥವಾ ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಲು ಇಲ್ಲವೆ ಹಣಕಾಸು ನೆರವು ಒದಗಿಸಲು ಬಳಸಬಾರದು ಎಂದು ಒತ್ತಾಯಿಸುತ್ತೇವೆ. ಎಲ್ಲಾ ದೇಶಗಳು ಭಯೋತ್ಪಾದನೆಗೆ ಹಣ ಒದಗಿಸುವ ಮತ್ತು ಅಕ್ರಮ ಹಣ ವರ್ಗಾವಣೆ ವಿರೋಧಿ ಅಂತರರಾಷ್ಟ್ರೀಯ ಮಾನದಂಡಗಳ ಎಫ್.ಎ.ಟಿ.ಎಫ್ ಶಿಫಾರಸ್ಸುಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುವುದಾಗಿ ನಾವು ಒತ್ತಿ ಹೇಳುತ್ತಿದ್ದೇವೆ. ನಾವು ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟ ಮುಂದುವರೆಸುತ್ತೇವೆ, ಎಲ್ಲಾ ರೀತಿಯ, ಯು.ಎನ್.ಎಸ್.ಸಿ 1267(1999) ನಿರ್ಣಯಗಳಂತೆ ವ್ಯಕ್ತಿಗಳು ಮತ್ತು ಇದಕ್ಕಾಗಿ ನಿಯೋಜಿತವಾಗಿರುವ ಘಟಕಗಳು, ಭಯೋತ್ಪಾದಕ ಗುಂಪುಗಳ ವಿರುದ್ಧ ತಳಮಟ್ಟದಲ್ಲಿ ಕ್ರಮಗಳನ್ನು ಕೈಗೊಳ್ಳುತ್ತೇವೆ.
ಕೋವಿಡ್ -19 ಮತ್ತು ಜಾಗತಿಕ ಆರೋಗ್ಯ ಭದ್ರತೆ
ನಮ್ಮ ಸಮುದಾಯಗಳು, ನಾಗರಿಕರು, ಆರೋಗ್ಯ ಕಾರ್ಯಕರ್ತರು, ವ್ಯವಸ್ಥೆ ಮತ್ತು ಆರ್ಥಿಕತೆ ಮೇಲೆ ಕೋವಿಡ್ -19 ನ ವಿನಾಶಕಾರಿ ಪರಿಣಾಮಗಳನ್ನು ಜಗತ್ತು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಎದುರಿಸುತ್ತಿದೆ. ಕೋವಿಡ್ -19 ನಿಯಂತ್ರಣದ ಜಾಗತಿಕ ಪ್ರಯತ್ನಗಳನ್ನು ಮುಂದುವೆರಸಲು ಮತ್ತು ಈ ದಿಸೆಯಲ್ಲಿ ಉತ್ತಮ ಆರೋಗ್ಯ ಭದ್ರತೆ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಕ್ವಾಡ್ ರಾಷ್ಟ್ರಗಳು ನಾಯಕತ್ವ ವಹಿಸುತ್ತವೆ. ವೈರಾಣು ಹೊಸ ರೂಪಾಂತರಿಯಾಗುತ್ತಿರುವುದನ್ನು ಕೇಂದ್ರೀಕರಿಸಿ ಲಸಿಕೆ ಪಡೆಯಲು, ಪರೀಕ್ಷೆ, ಚಿಕಿತ್ಸೆ ಮತ್ತು ಅಪಾಯಕಾರಿಯಾಗಿರುವ ಸಂದರ್ಭದಲ್ಲಿ ಇತರೆ ವೈದ್ಯಕೀಯ ಉತ್ಪನ್ನಗಳನ್ನು ಉತ್ಪಾದಿಸಲು ನಾವು ಸಾಮೂಹಿಕ ಧೋರಣೆಯನ್ನು ಅಳವಡಿಸಿಕೊಳ್ಳಲು ಬದ್ಧರಾಗಿದ್ದೇವೆ.
ಇಲ್ಲಿಯವರೆಗೆ ಕ್ವಾಡ್ ಪಾಲುದಾರರು ಕೋವ್ಯಾಕ್ಸ್ ಎ.ಎಂ.ಸಿಗೆ ಒಟ್ಟು 5.2 ಶತಕೋಟಿ ಡಾಲರ್ ಒದಗಿಸುವುದಾಗಿ ಸಾಮೂಹಿಕವಾಗಿ ಪ್ರತಿಜ್ಞೆ ಮಾಡಿದ್ದು, ಇದು ಒಟ್ಟಾರೆ ಸರ್ಕಾರಿ ದಾನಿಗಳ ಪೈಕಿ ಶೇ 40 ರಷ್ಟಿದೆ. ಭಾರತ ಪೆಸಿಫಿಕ್ ವಲಯಕ್ಕೆ 265 ದಶಲಕ್ಷ ಡಾಲರ್ ಒಳಗೊಂಡಂತೆ ನಾವು ಒಟ್ಟು 670 ದಶಲಕ್ಷ ಡೋಸ್ ಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರ ಎಂದು ಹೇಳುತ್ತೇವೆ. ಕೋವಿಡ್ – 19 ಲಸಿಕೆಗಳ ಜಾಗತಿಕ ವಿಸ್ತರಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ನೋಡಿದ ನಾವು ಸುರಕ್ಷಿತ, ಪರಿಣಾಮಕಾರಿ, ಕೈಗೆಟುಕುವ ಮತ್ತು ಗುಣಮಟ್ಟದ ಭರವಸೆಯ ಕೋವಿಡ್ – 19 ಲಸಿಕೆಗಳನ್ನು ಎಲ್ಲಿ ಮತ್ತು ಯಾವಾಗ ಅಗತ್ಯವಿದೆಯೋ ಅಲ್ಲಿ ಹಂಚಿಕೊಳ್ಳುವುದನ್ನು ಮುಂದುವರೆಸುತ್ತೇವೆ.
ಕ್ವಾಡ್ ಪಾಲುದಾರಿಕೆಯಡಿ ಲಸಿಕೆ ಭಾರತದ ಜೈವಿಕ ಇ ಸೌಲಭ್ಯದಡಿ ಜೆ ಮತ್ತು ಜೆ ಲಸಿಕೆ ಉತ್ಪಾದನೆಯ ವಿಸ್ತರಣೆಯ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ – ಸುಸ್ಥಿರ ಉತ್ಪಾದನಾ ಸಾಮರ್ಥ್ಯ ಕೋವಿಡ್ – 19 ಭವಿಷ್ಯ ಮತ್ತು ಭವಿಷ್ಯದ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಭಾರತದ ಲಸಿಕೆಗೆ ವಿಶ್ವ ಆರೋಗ್ಯ ಸಂಘಟನೆಯ ಇ.ಯು.ಎಲ್ ಅನುಮೋದನೆಗಳನ್ನು ನಾವು ಎದುರು ನೋಡುತ್ತಿದ್ದೇವೆ. ಕ್ವಾಡ್ ಮೂಲಕ ಕಾಂಬೋಡಿಯಾ ಮತ್ತು ಥೈಲೆಂಡ್ ಗೆ ಡಬ್ಲ್ಯು.ಎಚ್.ಒ ಮಂಜೂರಾತಿ ನೀಡಿದ ಭಾರತದ ಲಸಿಕೆಗಳನ್ನು ಕೊಡುಗೆಯಾಗಿ ನೀಡಿದ್ದನ್ನು ನಾವು ಕ್ವಾಡ್ ನ ಇತರೆ ಸದಸ್ಯರ ಜೊತೆಗೆ ಲಸಿಕೆ ಸಂಬಂಧಿತ ಬೆಂಬಲ ನೀಡಿದ ಸ್ವಷ್ಟ ಸಾಧನೆಯೊಂದಿಗೆ ಸಂಭ್ರಮಿಸಿದ್ದೇವೆ.
ಕೋವಿಡ್ – 19 ಪ್ರತಿಕ್ರಿಯೆ ಮತ್ತು ಭವಿಷ್ಯದ ಆರೋಗ್ಯ ಬೆದರಿಕೆಗಳನ್ನು ಎದುರಿಸಲು ಸನ್ನದ್ಧವಾಗುವುದನ್ನು ನಾವು ಮುಂದುವರೆಸುತ್ತೇವೆ. ನಾವು ನಾಲ್ಕು ದೇಶಗಳು ಜಾಗತಿಕವಾಗಿ 115 ದೇಶಗಳಲ್ಲಿ ಎರಡು ಶತಕೋಟಿ ಡಾಲರ್ ಗಿಂತ ಹೆಚ್ಚು ಮೌಲ್ಯದ ಲಸಿಕೆಗಳನ್ನು ಒದಗಿಸಿದ್ದೇವೆ. ಈ ವಾರ ನಡೆದ ಕ್ವಾಡ್ ನಿಂದ ಆಯೋಜಿಸಲ್ಪಟ್ಟ ವರ್ಲ್ಡ್ ಹೆಲ್ತ್ ಅಸೆಂಬ್ಲಿಯಲ್ಲಿ ಲಸಿಕೆ ಹಿಂಜರಿಕೆ ಸಮಸ್ಯೆಯನ್ನು ಪರಿಹರಿಸಿದ್ದೇವೆ. ನಾವು ಕೋವಿಡ್ – 19 ಜಾಗತಿಕ ಆದ್ಯತಾ ಕ್ರಿಯಾ ಯೋಜನೆಯನ್ನು ಉತ್ತೇಜಿಸುವ [ಜಿ.ಎ.ಪಿ] ಮತ್ತು ಕೋವ್ಯಾಕ್ಸ್ ಲಸಿಕೆ ಪೂರೈಕೆ ಸಹಭಾಗಿತ್ವದ ವಲಯದಲ್ಲಿ ಸಮನ್ವಯತೆಯನ್ನು ಮುಂದುವರೆಸುತ್ತಿದ್ದೇವೆ. ಅಮೆರಿಕದ ಸಹಭಾಗಿತ್ವದಡಿ ನಾವು ಎರಡು ಕೋವಿಡ್ -19 ಜಾಗತಿಕ ಶೃಂಗ ಸಭೆಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಮತ್ತು ಇದರಲ್ಲಿ ಕ್ವಾಡ್ ಸದಸ್ಯರು ಭಾಗಿಯಾಗಿದ್ದಾರೆ. ಆರ್ಥಿಕ ಮತ್ತು ನೀತಿ ಬದ್ಧತೆಗಳಲ್ಲಿ ನಾವು ನೆರವನ್ನು 3.2 ಶತಕೋಟಿ ಡಾಲರ್ ಗೆ ಹೆಚ್ಚಿಸಿದ್ದೇವೆ. ನಾವು ಭಾರತ – ಪೆಸಿಫಿಕ್ ವಲಯದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪುನಶ್ಚೇತನಕ್ಕೆ ಬೆಂಬಲವನ್ನು ಬಲಪಡಿಸುತ್ತೇವೆ.
ದೀರ್ಘಕಾಲೀನವಾಗಿ ನಾವು ಜಾಗತಿಕ ಆರ್ಥಿಕ ವಾಸ್ತುಶಿಲ್ಪವನ್ನು ಬಲಪಡಿಸುತ್ತೇವೆ ಮತ್ತು ಸಾಂಕ್ರಾಮಿಕ ನಿಯಂತ್ರಣ, ಸನ್ನದ್ಧತೆ ಮತ್ತು ಪ್ರತಿಕ್ರಿಯೆ [ಪಿ.ಪಿ.ಆರ್] ಯನ್ನು ನಿರ್ಮಿಸುವ ಮೂಲಕ ಆರೋಗ್ಯ ಭದ್ರತೆ, ಹಣಕಾಸು ಹೆಚ್ಚಳ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮನ್ವಯತೆ, ಮುಂದುವರೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಲಪಡಿಸುವುದು, ಇವುಗಳ ಕ್ಲಿನಿಕಲ್ ಪರೀಕ್ಷೆ ಮತ್ತು ಜಿನೋಮಿಕ್ ಕಣ್ಗಾವಲು ಮೂಲಕ ಸಾಧಿಸುತ್ತೇವೆ. ಅಸ್ತಿತ್ವದಲ್ಲಿರುವ ಸಹಯೋಗವನ್ನು ಬಳಪಡಿಸಿ, ಸಾಂಕ್ರಾಮಿಕ ನಿಯಂತ್ರಣ ಸಾಮರ್ಥ್ಯ ಹೆಚ್ಚಳ ಮತ್ತು ಎದುರಾಗಬಹುದಾದ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ನಮ್ಮ ಸಾಮರ್ಥ್ಯ ಹೆಚ್ಚಿಸುತ್ತೇವೆ. ಸಾಂಕ್ರಾಮಿಕ ರೋಗಗಳನ್ನು ತಕ್ಷಣವೇ ಪತ್ತೆ ಮಾಡುವ ಕಾರ್ಯವನ್ನು ತೀವ್ರಗೊಳಿಸುತ್ತೇವೆ. ಸೋಂಕು ರೋಗಗಳನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ನಾವು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಮುಂದಿನ ಹಂತದ ಸಿ.ಇ.ಪಿ.ಐ ಕೆಲಸಕ್ಕಾಗಿ ಕ್ವಾಡ್ ಪಾಲುದಾರರು 524 ದಶಲಕ್ಷ ಡಾಲರ್ ಒದಗಿಸಲು ಸಾಮೂಹಿಕವಾಗಿ ಬದ್ಧವಾಗಿದ್ದು, ಇದು ಒಟ್ಟಾರೆ ಶೇ 50 ರಷ್ಟು ಸಾರ್ವಜನಿಕರ ಹೂಡಿಕೆಗೆ ಸಮನಾಗಿದೆ.
2023 ರಲ್ಲಿ ನಡೆಯಲಿರುವ ಯು.ಎಚ್.ಸಿ ಕುರಿತ ವಿಶ್ವ ಸಂಸ್ಥೆಯ ಉನ್ನತ ಮಟ್ಟದ ಸಭೆಯ ಪೂರ್ವಭಾವಿಯಾಗಿ ಪಿಪಿಆರ್ ಹೆಚ್ಚಿಸಲು ಮತ್ತು ಯು.ಎಚ್.ಸಿ ಯನ್ನು ಉತ್ತೇಜಿಸಲು ಜಾಗತಿಕ ಆರೋಗ್ಯ ವಾಸ್ತು ಶಿಲ್ಪವನ್ನು ಮತ್ತುಷ್ಟು ಬಲಪಡಿಸಲು, ಸುಧಾರಿಸಲು ಜಾಗತಿಕ ನಾಯಕತ್ವವನ್ನು ತೆಗೆದುಕೊಳ್ಳಲು ನಾವು ಯು.ಎಚ್.ಸಿ ಸ್ನೇಹಿತರ ಗುಂಪಿನ ಸದಸ್ಯರಾಗಿ ಬದ್ಧತೆ ಹೊಂದಿದ್ದೇವೆ.
ಮೂಲ ಸೌಕರ್ಯ
ಭಾರತ – ಪಿಸಿಫಿಕ್ ವಲಯದಲ್ಲಿ ಉತ್ಪಾದಕತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ನಿರ್ಣಾಯಕವಾಗಿರುವ ಮೂಲ ಸೌಕರ್ಯದ ಮೇಲಿನ ಸಹಕಾರವನ್ನು ಆಳಗೊಳಿಸುವ ಹಾಗೂ ನಮ್ಮ ಹಂಚಿಕೆಯ ಬದ್ಧತೆಯನ್ನು ನಾವು ಪುನರುಚ್ಚರಿಸಿದ್ದೇವೆ. ಅನೇಕ ದೇಶಗಳಲ್ಲಿ ಸಾಂಕ್ರಾಮಿಕ ರೋಗದಿಂದ ಉಲ್ಬಣಗೊಂಡಿರುವ ಸಾಲದ ಸಮಸ್ಯೆಗಳನ್ನು ಪರಿಹರಿಸುವ ಬದ್ಧತೆಯನ್ನು ಸಹ ನಾವು ಹಂಚಿಕೊಳ್ಳುತ್ತೇವೆ.
ಈ ವಲಯಕ್ಕೆ ಮೂಲ ಸೌಕರ್ಯ ಕಲ್ಪಿಸುವುದನ್ನು ಉತ್ತೇಜಿಸಲು ದಶಕಗಳ ಕಾಲದ ಕೌಶಲ್ಯಗಳು ಮತ್ತು ಅನುಭವವನ್ನು ಕ್ವಾಡ್ ರಾಷ್ಟ್ರಗಳು ಹೊಂದಿವೆ. ನಾವು ಮತ್ತು ಪಾಲುದಾರ ರಾಷ್ಟ್ರಗಳು ನಿಕಟವಾಗಿ ಕಾರ್ಯನಿರ್ವಹಿಸಲು ಮತ್ತು ಅಂತರವನ್ನು ತಗ್ಗಿಸಲು, ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಯನ್ನು ತರಲು ಬದ್ಧರಾಗಿದ್ದೇವೆ. ಇದಕ್ಕಾಗಿ ಕ್ವಾಡ್ ದೇಶಗಳು 50 ಶತಕೋಟಿ ಡಾಲರ್ ಗೂ ಹೆಚ್ಚಿನ ಮೂಲ ಸೌಕರ್ಯ ನೆರವನ್ನು ಯಾಚಿಸಲಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಭಾರತ - ಪೆಸಿಫಿಕ್ ವಲಯಕ್ಕೆ ಹೂಡಿಕೆಯಾಗಲಿದೆ.
ಜಿ-20 ಸಾಮಾನ್ಯ ಚೌಕಟ್ಟಿನಡಿ ಸಾಲ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಿರುವ ರಾಷ್ಟ್ರಗಳ ಸಾಮರ್ಥ್ಯ ಬಲಪಡಿಸಲು ಮತ್ತು ಬಹು ಪಕ್ಷೀಯ ಸಾಮರ್ಥ್ಯ ವರ್ಧನೆಯಾಗಿದೆ. ಈ ಕುರಿತಾದ ನೆರವನ್ನು ಒಳಗೊಂಡಿರುವ “ಕ್ವಾಡ್ ಸಾಲ ಸಂಪನ್ಮೂಲ ನಿರ್ವಹಣೆ ಪೋರ್ಟಲ್“ ಮೂಲಕ ಸಂಬಂಧಿತ ದೇಶಗಳ ಹಣಕಾಸು ಅಧಿಕಾರಿಗಳೊಂದಿಗೆ ನಿಕಟ ಸಹಯೋಗದೊಂದಿಗೆ ಸಾಲ ಸುಸ್ಥಿರತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಮೂಲಕ ನಾವು ಈ ಕೆಲಸ ಮಾಡುತ್ತೇವೆ.
ಕ್ವಾಡ್ ನಾಯಕರ ಸಭೆಯಲ್ಲಿ ಹಣಕಾಸು ಏಜನ್ಸಿಗಳು ಮತ್ತು ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ನಾವು ಪರಿಣಿತರು, ನಮ್ಮ ವಲಯ ಹಾಗೂ ಪರಸ್ಪರ ಟೂಲ್ ಕಿಟ್ ಗಳ ಮೂಲ ಭಾರತ – ಪೆಸಿಫಿಕ್ ವಲಯದಲ್ಲಿ ಉತ್ತಮ ಸಂಪರ್ಕ ಸಾಧಿಸಲು ನಾವು ನಿಕಟವಾಗಿ ಕೆಲಸ ಮಾಡುತ್ತೇವೆ.
ಪ್ರಾದೇಶಿಕ ಮತ್ತು ಡಿಜಿಟಲ್ ಸಂಪರ್ಕ, ಶುದ್ಧ ಇಂಧನ ಮತ್ತು ಹವಾಮಾನ, ವಿಪತ್ತುಗಳನ್ನು ತ್ವರಿತವಾಗಿ ಎದುರಿಸುವ, ಭಾರತ – ಪೆಸಿಫಿಕ್ ನ ಆಸಿಯಾನ್ ಹೊರನೋಟದಂತೆ ಇಂಧನ ವಲಯದ ಸೌಲಭ್ಯಗಳನ್ನು ವೃದ್ಧಿಸುವ ಹಾಗೂ ಎಲ್ಲವನ್ನೊಳಗೊಂಡ ಅಭ್ಯುದಯಕ್ಕಾಗಿ ಪೂರಕ ಕ್ರಿಯೆಗಳು ಮತ್ತು ನಮ್ಮ ಸಹಭಾಗಿತ್ವವನ್ನು ನಾವು ಮತ್ತಷ್ಟು ವಿಸ್ತರಿಸುತ್ತೇವೆ.
ಹವಾಮಾನ
ಇತ್ತೀಚಿನ ಪಿಸಿಸಿಐ ವರದಿಗಳಲ್ಲಿ ಒತ್ತಿ ಹೇಳಿರುವಂತೆ ಹವಾಮಾನ ಬದಲಾವಣೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಮನಗಂಡು ನಾವು ಪ್ಯಾರಿಸ್ ಒಪ್ಪಂದವನ್ನು ದೃಢವಾಗಿ ಕಾರ್ಯಗತಗೊಳಿಸುತ್ತೇವೆ ಮತ್ತು ಕಾಪ್26 ರ ಫಲಿತಾಂಶವನ್ನು ತಲುಪಿಸುತ್ತೇವೆ. ಭಾರತ – ಪೆಸಿಫಿಕ್ ಪ್ರದೇಶದ ಪ್ರಮುಖ ಮಧ್ಯಸ್ಥಗಾರರನ್ನು ತಲುಪುವುದು ಮತ್ತು ಬೆಂಬಲಿಸುವುದು, ಬಲಪಡಿಸುವುದು ಸೇರಿದಂತೆ ಜಾಗತಿಕ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಗಳನ್ನು ತ್ವರಿತಗೊಳಿಸುತ್ತೇವೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ಹವಾಮಾನ ಬದಲಾವಣೆ ವಲಯದಲ್ಲಿ ಹಣಕಾಸು ನೆರವು ಸಂಗ್ರಹಿಸುವುದು ಸೇರಿದಂತೆ ಪಾಲುದಾರರೊಂದಿಗೆ ನಾವು ಹವಾಮಾನ ಬದಲಾವಣೆ ಕ್ರಮಗಳನ್ನು ಹೆಚ್ಚಿಸುತ್ತೇವೆ ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವಿನ್ಯತೆಯ ತಂತ್ರಜ್ಞಾನವನ್ನು ಅಳವಡಿಸುತ್ತೇವೆ.
ಇಂದು ನಾವು “ಕ್ವಾಡ್ ಹವಾಮಾನ ಬದಲಾವಣೆ ಮತ್ತು ತಗ್ಗಿಸುವ ಪ್ಯಾಕೇಜ್ [ಕ್ಯೂ-ಚಾಂಪ್] ಅನ್ನು ಸ್ಥಾಪಿಸಿದ್ದು, ಹವಾಮಾನ ತಗ್ಗಿಸುವ ಮತ್ತು ಹೊಂದಾಣಿಕೆಯೊಂದಿಗೆ ಇದನ್ನು ಪ್ರಾರಂಭಿಸುತ್ತೇವೆ. ಕ್ವಾಡ್ ಹವಾಮಾನ ಕಾರ್ಯತಂಡ ನಡೆಸುತ್ತಿರುವ ಹಾಲಿ ಚಟುವಟಿಕೆಗಳಲ್ಲಿ ಕ್ಯೂ – ಚಾಂಪ್ ಕೂಡ ಒಳಗೊಳ್ಳುತ್ತದೆ. ಹಸಿರು ಬಂದರು ಮತ್ತು ಹಡಗು ಸೇರಿದಂತೆ ಪರಸ್ಪರ ಹಂಚಿಕೆಯ ಹಸಿರು ಕಾರಿಡಾರ್ ನಿರ್ಮಿಸುವ ಗುರಿ ಹೊಂದಲಾಗಿದೆ; ನೈಸರ್ಗಿಕ ಅನಿಲ ವಲಯದಲ್ಲಿ ಶುದ್ಧ ಜಲಜನಕ ಮತ್ತು ಮಿಥೇನ್ ಹೊರಸೂಸುವಿಕೆಯಲ್ಲಿ ಶುದ್ಧ ಇಂಧನ ಸಹಕಾರ ಸಾಧಿಸಲಾಗುವುದು; ಹಸಿರು ಇಂಧನ ಪೂರೈಕೆ ಸರಪಳಿಯನ್ನು ಬಲಪಡಿಸುವ; ಸಿಡ್ನಿ ಎನರ್ಜಿ ಫೋರಂ ನ ಕೊಡುಗೆಯನ್ನು ಸ್ವಾಗತಿಸುವ, ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಹವಾಮಾನ ಮಾಹಿತಿ ಸೇವೆಗಳನ್ನು ಅಭಿವೃದ್ಧಿಪಡಿಸಿ ಕಾರ್ಯತಂತ್ರ ಅಳವಡಿಸಿಕೊಳ್ಳುವ ಮತ್ತು ವಿಪತ್ತಿನ ಅಪಾಯ ತಗ್ಗಿಸುವ, ವಿಪತ್ತು ಮತ್ತು ಸಿ.ಡಿ.ಆರ್.ಐ ನಡಿ ಹವಾಮಾನ ಸಮಸ್ಯೆ ನಿವಾರಿಸುವ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದರ ವ್ಯಾಪ್ತಿ ಶುದ್ಧ ಇಂಧನ, ಅಮೋನಿಯಾ, ಸಿಸಿಯುಎಸ್/ಕಾರ್ಬನ್ ಮರುಬಳಕೆ, ಪ್ಯಾರಿಸ್ ಒಪ್ಪಂದದ ಅನುಚ್ಛೇದ 6 ರ ಅಡಿ ಹೆಚ್ಚಿನ ಸಮಗ್ರತೆಯ ಇಂಗಾಲದ ಮಾರುಕಟ್ಟೆಗಳನ್ನು ಮುನ್ನಡೆಸಲು ಸಹಕಾರ ಮತ್ತು ಸಾಮರ್ಥ್ಯ ವರ್ಧನೆ, ಬೆಂಬಲ, ಹವಾಮಾನ ಸ್ಮಾರ್ಟ್ ಕೃಷಿ, ರಾಷ್ಟ್ರೀಯ ಹವಾಮಾನ ಕ್ರಮಗಳ ಬಗ್ಗೆ ಜ್ಞಾನ ಹಂಚಿಕೆ ಮತ್ತು ಪರಿಸರ ವ್ಯವಸ್ಥೆ ಆಧಾರಿತ ಹೊಂದಾಣಿಕೆಯನ್ನು ಇದು ಒಳಗೊಂಡಿದೆ. ನಮ್ಮ ನಾಲ್ಕು ದೇಶಗಳು ಮತ್ತು ಭಾರತ ಪೆಸಿಫಿಕ್ ಪ್ರದೇಶದ ನಡುವಿನ ಹವಾಮಾನ ಕ್ರಮಗಳನ್ನು ಬೆಂಬಲಿಸುವ ಮೂಲಕ ನಮ್ಮ ಕ್ಯೂ-ಚಾಂಪ್ ಅನ್ನು ಸ್ಪಷ್ಟಗೊಳಿಸಲು ನಾವು ಬದ್ಧರಾಗಿದ್ದೇವೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಹವಾಮಾನ ಬದಲಾವಣೆ ನಮಗೆ ಅಪಾರ ಸವಾಲುಗಳನ್ನು ಒಡ್ಡಿದೆ ಎಂಬುದನ್ನು ನಾವು ಮನಗಂಡಿದ್ದೇವೆ.
ಹವಾಮಾನ ಬದಲಾವಣೆ ಕುರಿತು ಆಸ್ಟ್ರೇಲಿಯಾದ ಹೊಸ ಸರ್ಕಾರದ ಬದ್ಧತೆ, ಅದರಲ್ಲೂ ನಿರ್ದಿಷ್ಟವಾಗಿ 2050 ರ ವೇಳೆಗೆ ಹವಾಮಾನ ಬದಲಾವಣೆ ಪರಿಣಾಮಗಳನ್ನು ಶೂನ್ಯ ಮಟ್ಟಕ್ಕೆ ತರುವ ಕುರಿತು ಶಾಸನ ಅಂಗೀಕರಿಸಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಇದು ಹೊಸ ಮಹತ್ವಾಕಾಂಕ್ಷಿ ರಾಷ್ಟ್ರವಾಗಿ ಕೈಗೊಂಡ ನಿರ್ಧಾರವನ್ನು ದಾಖಲಿಸುತ್ತದೆ.
ಸೈಬರ್ ಭದ್ರತೆ
ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಾಗುತ್ತಿರುವ ಅತ್ಯಾಧುನಿಕ ಸೈಬರ್ ಬೆದರಿಕೆಗಳಿಂದಾಗಿ ಸೈಬರ್ ಭದ್ರತೆಯನ್ನು ಹೆಚ್ಚಿಸಲು ಸಾಮೂಹಿಕ ವಿಧಾನವನ್ನು ತೆಗೆದುಕೊಳ್ಳುವ ತುರ್ತು ಅಗತ್ಯವನ್ನು ನಾವು ಗುರುತಿಸುತ್ತೇವೆ. ಮುಕ್ತ ಮತ್ತು ತೆರೆದ ಭಾರತ – ಪೆಸಿಫಿಕ್ ಗಾಗಿ ಕ್ವಾಡ್ ನಾಯಕರ ದೃಷ್ಟಿಕೋನವನ್ನು ಪೂರೈಸಲು ಬೆದರಿಕೆ ಕುರಿತಾದ ಮಾಹಿತಿ ಹಂಚಿಕೆ, ಇವುಗಳನ್ನು ಗುರುತಿಸುವ ಮೂಲಕ ನಮ್ಮ ರಾಷ್ಟ್ರಗಳ ನಿರ್ಣಾಯಕ ಮೂಲ ಸೌಕರ್ಯದ ರಕ್ಷಣೆಯನ್ನು ಸುಧಾರಿಸಲು ನಾವು ಬದ್ಧರಾಗಿದ್ದೇವೆ ಮತ್ತು ಡಿಜಿಟಲ್ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳನ್ನು ಪೂರೈಸುವ ಸಂದರ್ಭದಲ್ಲಿ ಎದುರಾಗುವ ಸಂಭವನೀಯ ಅಪಾಯಗಳ ಮೌಲ್ಯ ಮಾಪನ ಮಾಡಲಾಗಿದೆ ಮತ್ತು ಸರ್ಕಾರದ ಸಂಗ್ರಹಣೆಯಲ್ಲಿ ಮೂಲ ನೆಲೆಯ ಗುಣಮಟ್ಟದ ತಂತ್ರಾಂಶ ಭದ್ರತೆಯನ್ನು ಹೆಚ್ಚಿಸುವ, ಜನರಲ್ಲಿ ಖರೀದಿ ಶಕ್ತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಬಳಕೆದಾರರಿಗೂ ಅನುಕೂಲವಾಗುವಂತೆ ಸುಧಾರಿತ ಮತ್ತು ವಿಸ್ತೃತವಾದ ಪರಿಸರ ಸ್ನೇಹಿ ತಂತ್ರಾಂಶ ಅಭಿವೃದ್ಧಿಪಡಿಸುವ ಅಗತ್ಯವಿದೆ. ಕ್ವಾಡ್ ಸೈಬರ್ ಭದ್ರತಾ ವಲಯದಲ್ಲಿ ಭಾರತ – ಪೆಸಿಫಿಕ್ ಭಾಗದಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವ ಮತ್ತು ಸೈಬರ್ ಬೆದರಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಮ್ಮ ರಾಷ್ಟ್ರಗಳು ಭಾರತ – ಪೆಸಿಫಿಕ್ ಪ್ರದೇಶ ಮತ್ತು ಅದರಾಚೆಗಿನ ವೈಯಕ್ತಿಕ ಅಂತರ್ಜಾಲ ಬಳಕೆದಾರರಿಗೆ ಸಹಾಯ ಮಾಡಲು “ಕ್ವಾಡ್ ಸೈಬರ್ ಸೆಕ್ಯೂರಿಟಿ ದಿನ”ವನ್ನು ಆಚರಿಸಲಾಗುವುದು.
ನಿರ್ಣಾಯಕ ಮತ್ತು ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನ
ಈ ಪ್ರದೇಶದ ಸಮೃದ್ಧಿ ಮತ್ತು ಭದ್ರತೆಯನ್ನು ಹೆಚ್ಚಿಸಲು ನಿರ್ಣಾಯಕ ಮತ್ತು ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ಗಮನಹರಿಸಿದೆ. 5ಜಿ ಮತ್ತು 5ಜಿ ತಂತ್ರಜ್ಞಾನ ಮೀರಿದ ಪ್ರದೇಶಗಳಲ್ಲಿ ದೂರ ಸಂಪರ್ಕ ಪೂರೈಕೆದಾರರ ವೈವಿದ್ಯತೆಯ ಬಗ್ಗೆ ಪ್ರೇಗ್ ಪ್ರಸ್ತಾಪಗಳನ್ನು ಸ್ವಾಗತಿಸುವಾಗ ನಾವು ಪರಸ್ಪರ ಕಾರ್ಯನಿರ್ವಹಣೆಯಲ್ಲಿ ತೊಡಗುತ್ತೇವೆ ಮತ್ತು 5ಜಿ ಪೂರೈಕೆದಾರರ ವೈವಿಧ್ಯತೆ ಮತ್ತು ಮುಕ್ತ ಆರ್.ಎ.ಎನ್ ಕುರಿತ ಹೊಸ ತಂತ್ರಜ್ಞಾನ ವಲಯದಲ್ಲಿ ತಿಳಿವಳಿಕೆ ಪತ್ರಕ್ಕೆ ಸಹಿಮಾಡಲಾಗಿದೆ. ನಾವು ಸಹ ಕೈಗಾರಿಕೆಗಳೊಂದಿಗೆ, ಓಪನ್ ರಾನ್ ಟ್ರಾಕ್ 1.5 ಇವೆಂಟ್ಸ್ ಗಳಲ್ಲಿ ಮತ್ತು ಈ ವಲಯದಲ್ಲಿ ಮುಕ್ತ ಮತ್ತು ಭದ್ರತೆ ಹೊಂದಿರುವ ದೂರ ಸಂಪರ್ಕ ತಂತ್ರಜ್ಞಾನ ಸಹಭಾಗಿತ್ವವನ್ನು ಅಳವಡಿಸಿಕೊಳ್ಳಲಾಗಿದೆ.
ನಾವು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಕ್ವಾಡ್ ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿದ್ದೇವೆ. ವೈವಿಧ್ಯಮಯ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ನಮ್ಮ ಪೂರಕ ಸಾಮರ್ಥ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಈ ಶೃಂಗ ಸಭೆಯ ಸಂದರ್ಭದಲ್ಲಿ ಪ್ರಾರಂಭಿಸಲಾದ ನಿರ್ಣಾಯಕ ತಂತ್ರಜ್ಞಾನ ಪೂರೈಕೆ ಸರಪಳಿಗಳ ಮೇಲಿನ ತತ್ವಗಳ ಸಾಮಾನ್ಯ ಹೇಳಿಕೆಯಂತೆ ನಿರ್ಣಾಯಕ ತಂತ್ರಜ್ಞಾನದ ಮೇಲಿನ ನಮ್ಮ ಸಹಕಾರವನ್ನು ಮುನ್ನಡೆಸುತ್ತದೆ. ಇದು ಈ ಪ್ರದೇಶಕ್ಕೆ ವಿವಿಧ ಅಪಾಯಗಳ ವಿರುದ್ಧ ನಮ್ಮ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಕಾರದ ಅಡಿಪಾಯವನ್ನು ಒದಗಿಸುತ್ತದೆ. ಇತರೆ ನಿರ್ಣಾಯಕ ತಂತ್ರಜ್ಞಾನಗಳು ಈ ಪ್ರದೇಶದಲ್ಲಿ ವಿವಿಧ ಅಪಾಯಗಳನ್ನು ಎದುರಿಸಲು ಸಹಕಾರದ ನೆಲೆಯನ್ನು ಹೆಚ್ಚಿಸುತ್ತದೆ. ನಮ್ಮ ಸಹಕಾರ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದೆ. ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡ್ ಬ್ಯುರೋ ಒಂದು ಅಂತರರಾಷ್ರೀಯ ದೂರ ಸಂಪರ್ಕ ಒಕ್ಕೂಟವಾಗಿದ್ದು, ಇದು ವ್ಯಾಪಕ ಪ್ರಗತಿ ಸಾಧಿಸಿದೆ ಮತ್ತು ಹೊಸ ಅಂತರರಾಷ್ಟ್ರೀಯ ಗುಣಮಟ್ಟ ಸಹಕಾರ ಸಂಪರ್ಕ ಜಾಲ [ಐ.ಎಸ್.ಸಿ.ಎನ್] ಈ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ. ಇಂತಹ ಸಹಕಾರದಿಂದ ಈ ವಲಯದಲ್ಲಿ ಹಂಚಿಕೆಯ ಪ್ರಜಾಸತ್ತಾತ್ಮಕ ಮೌಲ್ಯಗಳ ಆಧಾರದ ಮೇಲೆ ತಂತ್ರಜ್ಞಾನ ಅಭಿವೃದ್ಧಿಪಡಿಸುವುದನ್ನು ಖಾತರಿಪಡಿಸುತ್ತದೆ. ಮೇಲಿನ ನಮ್ಮ ಪ್ರಯತ್ನಗಳ ಮೂಲಕ ಜೈವಿಕ ತಂತ್ರಜ್ಞಾನದಲ್ಲಿ ನಮ್ಮ ಆಳವಾದ ಚರ್ಚೆಗಳನ್ನು ಅನುಸರಿಸಿ ಸಹಕಾರವನ್ನು ಮುಂದುವರೆಸುವುದನ್ನು ಬಯಸುತ್ತೇವೆ ಹಾಗೂ ಟ್ರ್ಯಾಕ್ 1.5 ಮತ್ತು ಭವಿಷ್ಯದ ಕ್ವಾಂಟಮ್ ತಂತ್ರಜ್ಞಾನವನ್ನು ಸಹ ಕೇಂದ್ರೀಕರಿಸಲಾಗುವುದು. ನಿರ್ಣಾಯಕ ಮತ್ತು ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನಗಳಿಗೆ ಬಂಡವಾಳವನ್ನು ವಿಸ್ತರಿಸಲು ಉದ್ಯಮದ ಪಾಲುದಾರರೊಂದಿಗೆ ಸಂಪರ್ಕಕ್ಕಾಗಿ ವ್ಯವಹಾರ ಮತ್ತು ಹೂಡಿಕೆ ಕುರಿತ ವೇದಿಕೆಯನ್ನು ರೂಪಿಸುತ್ತೇವೆ.
ಕ್ವಾಡ್ ಫೆಲ್ಲೋಶಿಪ್
ಜನರೊಂದಿಗಿನ ಬಾಂಧವ್ಯ ಕ್ವಾಡ್ ನ ಅಡಿಪಾಯವಾಗಿದೆ ಎಂದು ನಾವು ಗುರುತಿಸಿದ್ದೇವೆ ಮತ್ತು ಕ್ವಾಡ್ ಫೆಲೋಶಿಪ್ ನ ಅಧಿಕೃತ ಪ್ರಾರಂಭವನ್ನು ಸ್ವಾಗತಿಸುತ್ತೇವೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ವೇದಿಕೆಯನ್ನು ಮುಕ್ತಗೊಳಿಸಲಾಗಿದೆ. ಪ್ರತಿವರ್ಷ 100 ವಿದ್ಯಾರ್ಥಿಗಳನ್ನು ಸ್ಟೆಮ್ ಕ್ಷೇತ್ರಗಳಲ್ಲಿ ಪದವಿಗಳನ್ನು ಮುಂದುವರೆಸಲು ಕ್ವಾಡ್ ಫೆಲ್ಲೋಶಿಪ್ ಇವರನ್ನು ಅಮೆರಿಕಗೆ ಕರೆ ತರುತ್ತದೆ ಮತ್ತು ಈ ವ್ಯವಸ್ಥೆಯನ್ನು ಸ್ಮಿತ್ ಫ್ಯೂಚರ್ಸ್ ನಿರ್ವಹಿಸುತ್ತದೆ. ಕ್ವಾಡ್ ಫೆಲ್ಲೋಶಿಪ್ ನ ಮೊದಲ ಬ್ಯಾಚ್ 2023 ರ ಮೂರನೇ ತ್ರೈಮಾಸಿಕದಲ್ಲಿ ಆರಂಭವಾಗಲಿದೆ ಮತ್ತು ಅತ್ಯಾಧುನಿಕ ಸಂಶೋಧನೆ, ಆವಿಷ್ಕಾರಗಳಲ್ಲಿ ನಮ್ಮ ದೇಶಗಳನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಸ್ಟೆಮ್ ಮನಸ್ಸುಗಳ ಪ್ರತಿಭಾನ್ವಿತ ಸಮೂಹವನ್ನು ಒಟ್ಟಿಗೆ ನಿರ್ಮಿಸಲು ನಾವು ಎದುರು ನೋಡುತ್ತಿದ್ದೇವೆ.
ಬಾಹ್ಯಾಕಾಶ
ಬಾಹ್ಯಾಕಾಶ ಸಂಬಂಧಿತ ಅಪ್ಲಿಕೇಶನ್ ಗಳು ಮತ್ತು ತಂತ್ರಜ್ಞಾನಗಳು ಸಾಮಾನ್ಯ ಸವಾಲುಗಳಾದ ಹವಾಮಾನ ಬದಲಾವಣೆ, ವಿಪತ್ತು ಎದುರಿಸುವ ಹಾಗೂ ಪ್ರತಿಕ್ರಿಯೆ ನೀಡುವ, ಸಾಗರ ಸಂಪನ್ಮೂಲ ಮತ್ತು ಸಾಗರವನ್ನು ಸುಸ್ಥಿರ ರೀತಿಯಲ್ಲಿ ಬಳಸಲು ಸಹಕಾರಿಯಾಗಿದೆ. ಪ್ರತಿಯೊಬ್ಬ ಕ್ವಾಡ್ ಪಾಲುದಾರರಿಗೆ ಭೂ ವೀಕ್ಷಣಾ ಉಪಗ್ರಹ ದತ್ತಾಂಶದಿಂದ ದೊರೆಯುವ ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಸುಧಾರಿಸಲು ಸಹಕಾರಿಯಾಗಿದೆ. ಭೂ ವೀಕ್ಷಣೆ ಆಧಾರಿತ ನಿಗಾ ವ್ಯವಸ್ಥೆ ಮತ್ತು ಸುಸ್ಥಿರ ಅಭಿವೃದ್ಧಿ ಚೌಕಟ್ಟನ್ನು ನಿರ್ಮಿಸಲು ನಾವು ಒಟ್ಟಿಗೆ ಕಾರ್ಯನಿರ್ವಹಿಸುತ್ತೇವೆ. ನಮ್ಮ ರಾಷ್ಟ್ರೀಯ ಉಪಗ್ರಹ ದತ್ತಾಂಶ ಸಂಪನ್ಮೂಲಗಳಿಗೆ ಸಂಪರ್ಕ ಕಲ್ಪಿಸಲು “ಕ್ವಾಡ್ ಸೆಟಲೈಟ್ ಡಾಟಾ ಪೋರ್ಟಲ್ “ಅನ್ನು ಒದಗಿಸುವ ಜತೆಗೆ ಬಾಹ್ಯಾಕಾಶ ಆಧಾರಿತ ನಾಗರಿಕ ಭೂ ವೀಕ್ಷಣಾ ದತ್ತಾಂಶವನ್ನು ಹಂಚಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ನಾವು ಭೂ ವೀಕ್ಷಣಾ ಪ್ರದೇಶ ಮತ್ತು ಈ ಪ್ರದೇಶದಲ್ಲಿ ಸಾಮರ್ಥ್ಯ ವೃದ್ಧಿ, ವ್ಯಾಪಕ ಮಳೆಯಂತಹ ಸಂದರ್ಭಗಳಲ್ಲಿ ಸಾಮರ್ಥ್ಯವನ್ನು ಬಳಸಲು ಅನುಕೂಲವಾಗುವಂತಹ ಬಾಹ್ಯಾಕಾಶ ಅಪ್ಲಿಕೇಶನ್ ಅನ್ನು ಒಟ್ಟಿಗೆ ಅಭಿವೃದ್ಧಿಪಡಿಸುತ್ತೇವೆ. ಬಾಹ್ಯಾಕಾಶವನ್ನು ಸುಸ್ಥಿರವಾಗಿ ಬಳಸಲು ಸೂಕ್ತ ನಿಯಮ, ಮಾರ್ಗಸೂಚಿ ಮತ್ತು ಸಿದ್ಧಾಂತವನ್ನು ನಾವು ಅಳವಡಿಸಿಕೊಳ್ಳಲು ಸಮಾಲೋಚನೆ ನಡೆಸುತ್ತೇವೆ. ಬಾಹ್ಯಾಕಾಶ ಚಟುವಟಿಕೆಗಳ ದೀರ್ಘ ಕಾಲೀನ ಸುಸ್ಥಿರತೆಗಾಗಿ ಬಾಹ್ಯಾಕಾಶ ಶಾಂತಿಯುತ ಬಳಕೆ ಕುರಿತ ವಿಶ್ವಸಂಸ್ಥೆಯ ಸಮಿತಿ [ಸಿ.ಒ.ಪಿ.ಯು.ಒ.ಎಸ್] ಮಾರ್ಗಸೂಚಿ ಸೂತ್ರಗಳಿಗೆ ಸಂಬಂಧಿಸಿದಂತೆ ಜಂಟಿ ಕಾರ್ಯಾಗಾರಗಳ ಮೂಲಕ ಈ ಪ್ರದೇಶಗಳಿಗೆ ಬೆಂಬಲ ವಿಸ್ತರಿಸಲಾಗುವುದು.
ಕಡಲ ಪ್ರದೇಶದ ಜಾಗೃತಿ ಮತ್ತು ಎಚ್.ಎ.ಡಿ.ಆರ್
ಮಾನವೀಯ ಮತ್ತು ನೈಸರ್ಗಿಕ ವಿಪತ್ತುಗಳಿಗೆ ಪ್ರತಿಕ್ರಿಯೆ ನೀಡಲು ಮತ್ತು ಅಕ್ರಮ ಮೀನುಗಾರಿಕೆ ಸಮಸ್ಯೆಯನ್ನು ಎದುರಿಸಲು ಪ್ರಾದೇಶಿಕ ಪಾಲುದಾರರೊಂದಿಗೆ ಕೆಲಸ ಮಾಡಲು ವಿನ್ಯಾಸಗೊಳಿಸಲಾದ ಹೊಸ ಕಡಲ ಪ್ರದೇಶದ ಜಾಗೃತಿ ಉಪಕ್ರಮವಾದ ಭಾರತ – ಪೆಸಿಫಿಕ್ ಪಾಲುದಾರಿಕೆ –ಐಪಿಎಂಡಿಎ ಅನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಸಮುದ್ರ ಮತ್ತು ಸಾಗರ ಪ್ರದೇಶಗಳಲ್ಲಿ ಸ್ಥಿರತೆ ಮತ್ತು ಸಮೃದ್ಧತೆಯನ್ನು ಉತ್ತೇಜಿಸಲು, ಸಾಗರ ಪ್ರದೇಶದ ಜಾಗೃತಿಯನ್ನು ಬೆಂಬಲಿಸಲು, ತಂತ್ರಜ್ಞಾನ ಮತ್ತು ತರಬೇತಿ ಸೌಲಭ್ಯ ಕಲ್ಪಿಸುವ ಮೂಲಕ ಹಿಂದೂ ಮಹಾಸಾಗರ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ದ್ರೀಪಗಳಲ್ಲಿನ ಭಾರತ – ಪೆಸಿಫಿಕ್ ರಾಷ್ಟ್ರಗಳು, ಪ್ರಾದೇಶಿಕ ಮಾಹಿತಿ ಕೇಂದ್ರಗಳನ್ನು ಸಿಪಿಎಂಡಿಎ ಬೆಂಬಲಿಸುತ್ತದೆ. ಕ್ವಾಡ್ ರಾಷ್ಟ್ರಗಳ ಸೂಚನೆಯನ್ನು ಐಪಿಎಂಡಿಎ ಸಾಕಾರಗೊಳಿಸುತ್ತದೆ. ಈ ಪ್ರದೇಶವನ್ನು ಹೆಚ್ಚು ಸ್ಥಿರ ಮತ್ತು ಸಮೃದ್ಧವಾಗಿಸಲು ಸಹಾಯ ಮಾಡುವ ದೃಢವಾದ ಫಲಿತಾಂಶದೆಡೆಗೆ ನಮ್ಮ ಜಂಟಿ ಪ್ರಯತ್ನಗಳನ್ನು ತ್ವರಿತಗೊಳಿಸಲಾಗುವುದು.
2022 ರ ಮಾರ್ಚ್ 3 ರಂದು ಘೋಷಿಸಿದ ನಮ್ಮ ಬದ್ಧತೆಯಂತೆ ನಾವಿಂದು “ಕ್ವಾಡ್ ಸಹಭಾಗಿತ್ವದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ [ಎಚ್.ಎ.ಡಿ.ಆರ್] ಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಈ ಪಾಲುದಾರಿಕೆಯಿಂದ ಈ ಭಾಗದಲ್ಲಿ ವಿಪತ್ತುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ನಮ್ಮ ಸಹಭಾಗಿತ್ವವನ್ನು ಮತ್ತುಷ್ಟು ಬಲಗೊಳಿಸಲಿದೆ.
ಕೊನೆಯಲ್ಲಿ
ಇಂದು ನಾವು ಮುಕ್ತ ಮತ್ತು ತೆರೆದ ಭಾರತ – ಪೆಸಿಫಿಕ್ ಕುರಿತ ನಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದೇವೆ. ನಾವು ಮತ್ತೊಮ್ಮೆ ಮೂಲಭೂತ ಮೌಲ್ಯಗಳು ಮತ್ತು ತತ್ವಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತೇವೆ ಮತ್ತು ಈ ಪ್ರದೇಶಕ್ಕೆ ಸ್ಪಷ್ಟವಾದ ಫಲಿತಾಂಶ ನೀಡಲು ಅವಿರತವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಈ ಕೆಲಸಗಳ ಮೂಲಕ ನಾವು ಕ್ವಾಡ್ ಚಟುವಟಿಕೆಗಳನ್ನು ಕ್ರಿಯಾಶೀಲಗೊಳಿಸುತ್ತೇವೆ. ವಿದೇಶಾಂಗ ಸಚಿವರ ಮತ್ತು ಇತರರ ನಿಯಮಿತ ಸಭೆಗಳನ್ನು ನಡೆಸುತ್ತೇವೆ. 2023 ರಲ್ಲಿ ಆಸ್ಟ್ರೇಲಿಯಾದ ಆತಿಥ್ಯದಲ್ಲಿ ನಮ್ಮ ಮುಂದಿನ ವೈಯಕ್ತಿಕ ಶೃಂಗ ಸಭೆಯನ್ನು ನಡೆಸಲು ನಾವು ಸಮ್ಮತಿಸಿದ್ದೇವೆ.