ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ತಮ್ಮ ತಾಯಿಯ ಜೀವನವನ್ನು ದೇವರ ಪಾದದಲ್ಲಿ ಶಾಂತಿಯನ್ನು ಕಂಡುಕೊಂಡ ಭವ್ಯ ಶತಮಾನ ಎಂದು ಬಣ್ಣಿಸಿದ್ದಾರೆ.
ಶ್ರೀಮತಿ ಹೀರಾಬೆನ್ ಅವರು ಇಂದು ನಿಧನರಾಗುತ್ತಿದ್ದಂತೆ, ತಪಸ್ವಿಯ ಪಯಣ, ನಿಸ್ವಾರ್ಥ ಕರ್ಮಯೋಗಿ ಮತ್ತು ಅವರಲ್ಲಿನ ಮೌಲ್ಯಗಳಿಗೆ ಮುಡಿಪಾಗಿಟ್ಟ ಜೀವನದ ತ್ರಿಮೂರ್ತಿಗಳನ್ನು ನಾನು ಎಂದಿಗೂ ಸ್ಮರಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ತಾಯಿ ಹೀರಾಬೆನ್ ಅವರು ಅವರ 100 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಮಗೆ ನೀಡಿದ ಸಲಹೆಯನ್ನು ಪ್ರಧಾನಿಗಳು ನೆನಪಿಸಿಕೊಂಡರು. ಹೀರಾಬೆನ್ ಅವರು ಕೆಲಸವನ್ನು ಬುದ್ಧಿವಂತಿಕೆಯಿಂದ ಮಾಡಬೇಕು ಮತ್ತು ಜೀವನವನ್ನು ಶುದ್ಧತೆಯಿಂದ ನಡೆಸಬೇಕು ಎಂದು ಹೇಳಿದ ಮಾತುಗಳನ್ನು ಪ್ರಧಾನಿಗಳು ಸ್ಮರಿಸಿದ್ದಾರೆ.
ಪ್ರಧಾನಿ ಟ್ವೀಟ್ ಮಾಡಿದ್ದು ಹೀಗೆ :
ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ ... ಮಾನಲ್ಲಿ (ತಾಯಿಯವರಲ್ಲಿ) ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ, ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿರುವುದಾಗಿ ಹೇಳಿದರು.
ಅವರ 100 ನೇ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದಾಗ, ಅವರು ಹೇಳಿದ್ದ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು, ಪರಿಶುದ್ಧತೆಯಿಂದ ಬದುಕಬೇಕು ಎಂಬ ಮಾತುಗಳಿಂದೂ ನನಗೆ ನೆನಪಿವೆ.ಈ ಮಾತುಗಳನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ ಎಂದು ಗುಜರಾತಿ ಭಾಷೆಯಲ್ಲಿಯೂ ಅವರು ತಮ್ಮ ನೋವಿನ ವಿದಾಯ ಹೃದಯದ ಮಾತುಗಳು ತಾಯಿಯವರ ಸವಿನೆನಪುಗಳನ್ನು ಉಲ್ಲೇಖಿಸಿದ್ದಾರೆ.
शानदार शताब्दी का ईश्वर चरणों में विराम... मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
— Narendra Modi (@narendramodi) December 30, 2022