ಪಿಎಂ-ಕಿಸಾನ್ ಅಡಿಯಲ್ಲಿ ಸುಮಾರು 16,000 ಕೋಟಿ ರೂ.ಗಳ 13ನೇ ಕಂತಿನ ಹಣ ಬಿಡುಗಡೆ
ಮರು ಅಭಿವೃದ್ಧಿಗೊಂಡ ಬೆಳಗಾವಿ ರೈಲು ನಿಲ್ದಾಣ ಕಟ್ಟಡದ ಲೋಕಾರ್ಪಣೆ
ಜಲ ಜೀವನ ಅಭಿಯಾನದ ಅಡಿಯಲ್ಲಿ ಆರು ಬಹುಗ್ರಾಮ ಯೋಜನೆಗಳಿಗೆ ಶಂಕುಸ್ಥಾಪನೆ
" ಬದಲಾಗುತ್ತಿರುವ ಇಂದಿನ ಭಾರತ ವಂಚಿತರಿಗೆ ಆದ್ಯತೆ ನೀಡುವಾಗ ಒಂದರ ನಂತರ ಒಂದರಂತೆ ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸುತ್ತಿದೆ".
2014 ರ ಮೊದಲು 25,000 ಕೋಟಿ ರೂ. ಇದ್ದ ದೇಶದ ಕೃಷಿ ಬಜೆಟ್ ಅನ್ನು ಈಗ ಐದು ಪಟ್ಟು 1,25,000 ರೂ.ಗೆ. ಕೋಟಿಗೆ ಹೆಚ್ಚಿಸಲಾಗಿದೆ
ಭವಿಷ್ಯದ ಸವಾಲುಗಳನ್ನು ವಿಶ್ಲೇಷಿಸುತ್ತಲೇ ಭಾರತದ ಕೃಷಿ ಕ್ಷೇತ್ರವನ್ನು ಬಲಪಡಿಸುವತ್ತ ಸರ್ಕಾರ ಗಮನ ಹರಿಸಿದೆ"
"ಡಬಲ್ ಎಂಜಿನ್ ಸರ್ಕಾರವು ವೇಗದ ಅಭಿವೃದ್ಧಿಗೆ ಖಾತ್ರಿಯಾಗಿದೆ"
"ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರು, ಆದರೆ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ರಿಮೋಟ್ ಕಂಟ್ರೋಲ್ ಯಾರು ಇಟ್ಟುಕೊಂಡಿದ್ದಾರೆಂಬುದು ಇಡೀ ಜಗತ್ತಿಗೆ ತಿಳಿದಿದೆ"
"ನಿಜವಾದ ಉದ್ದೇಶಗಳೊಂದಿಗೆ ಕೆಲಸ ಮಾಡಿದಾಗ ನಿಜವಾದ ಅಭಿವೃದ್ಧಿ ಆಗುತ್ತದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಳಗಾವಿಯಲ್ಲಿ 2,700 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಪಿಎಂ-ಕಿಸಾನ್ ಅಡಿಯಲ್ಲಿ ಸುಮಾರು 16,000 ಕೋಟಿ ರೂ.ಗಳ 13 ನೇ ಕಂತನ್ನು ಅವರು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿಯವರು ಮರು ಅಭಿವೃದ್ಧಿಗೊಂಡ ಬೆಳಗಾವಿ ರೈಲ್ವೆ ನಿಲ್ದಾಣ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಜಲ ಜೀವನ ಅಭಿಯಾನದ ಅಡಿಯಲ್ಲಿ ಆರು ಬಹು ಗ್ರಾಮ ಯೋಜನೆಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಬೆಳಗಾವಿಯ ಜನರ ಎಣೆಯಿಲ್ಲದ ಪ್ರೀತಿ ಮತ್ತು ಆಶೀರ್ವಾದವು ಜನರ ಕಲ್ಯಾಣಕ್ಕಾಗಿ ಶ್ರಮಿಸಲು ಮತ್ತು ಚೈತನ್ಯದ ಮೂಲವಾಗಲು ಸರ್ಕಾರವನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು. "ಬೆಳಗಾವಿಗೆ ಬರುವುದೆಂದರೆ ಯಾತ್ರಾಸ್ಥಳಕ್ಕೆ ಬರುವುದಕ್ಕಿಂತ ಕಡಿಮೆಯೇನಲ್ಲ" ಎಂದು ಹೇಳಿದ ಪ್ರಧಾನಮಂತ್ರಿಯವರು, ಇದು ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಕ್ರಾಂತಿಕಾರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ನಾಡು, ವಸಾಹತುಶಾಹಿ ಆಡಳಿತದ ವಿರುದ್ಧ ಧ್ವನಿ ಎತ್ತಿದ ಅವರನ್ನು ಇಂದಿಗೂ ಸ್ಮರಿಸಲಾಗುತ್ತದೆ ಎಂದರು.

ಬೆಳಗಾವಿಯ ಕೊಡುಗೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂದಿನ ಹೋರಾಟದಲ್ಲಿ ಮತ್ತು ಭಾರತದ ಪುನರುತ್ಥಾನದಲ್ಲಿ ಬೆಳಗಾವಿ ಸ್ಥಾನ ಪಡೆದಿದೆ ಎಂದರು. ಕರ್ನಾಟಕದ ನವೋದ್ಯಮ ಸಂಸ್ಕೃತಿಗೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ಬೆಳಗಾವಿ ನೂರು ವರ್ಷಗಳ ಹಿಂದೆ ನವೋದ್ಯಮಗಳಿಗೆ ನೆಲೆಯಾಗಿತ್ತು ಮತ್ತು ಬೆಳಗಾವಿಯಲ್ಲಿ ಘಟಕವನ್ನು ಸ್ಥಾಪಿಸಿ, ವಿವಿಧ ಕೈಗಾರಿಕೆಗಳ ತಾಣವನ್ನಾಗಿ ಪರಿವರ್ತಿಸಿದ ಬಾಬುರಾವ್ ಪುಸಾಲ್ಕರ್ ಅವರ ಉದಾಹರಣೆಯನ್ನು ನೀಡಿದರು. ಪ್ರಸ್ತುತ ದಶಕದಲ್ಲಿ ಬೆಳಗಾವಿಯ ಈ ಪಾತ್ರವನ್ನು ಮತ್ತಷ್ಟು ಬಲಪಡಿಸಲು ಡಬಲ್ ಎಂಜಿನ್ ಸರ್ಕಾರ ಬಯಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಶಂಕುಸ್ಥಾಪನೆ ನೆರವೇರಿಸಿದ ಮತ್ತು ಇಂದು ಉದ್ಘಾಟಿಸಲಾಗುತ್ತಿರುವ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಇದು ಬೆಳಗಾವಿಯ ಅಭಿವೃದ್ಧಿಗೆ ಹೊಸ ಚೈತನ್ಯ ಮತ್ತು ವೇಗವನ್ನು ನೀಡಲಿದೆ ಎಂದು ಹೇಳಿದರು. ಸಂಪರ್ಕ ಮತ್ತು ನೀರಿನ ಸೌಲಭ್ಯಗಳಿಗೆ ಸಂಬಂಧಿಸಿದ ನೂರಾರು ಕೋಟಿ ರೂ.ಗಳ ಯೋಜನೆಗಳಿಗಾಗಿ ಅವರು ಈ ಪ್ರದೇಶದ ನಾಗರಿಕರನ್ನು ಅಭಿನಂದಿಸಿದರು. ಪಿಎಂ-ಕಿಸಾನ್ ನಿಂದ ಮತ್ತೊಂದು ಕಂತಿನ ಹಣವನ್ನು ಬಿಡುಗಡೆ ಮಾಡಿ, ದೇಶದ ಪ್ರತಿಯೊಬ್ಬ ರೈತನಿಗೂ ವಿಶೇಷ ಉಡುಗೊರೆ ಸಿಕ್ಕಿದೆ ಎಂದು ಬೆಳಗಾವಿ ಮೂಲಕ ಪ್ರಧಾನಮಂತ್ರಿ ಹೇಳಿದರು. "ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ 16,000 ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಮಧ್ಯವರ್ತಿಯ ಹಾವಳಿಯಿಲ್ಲದೆ ಇಷ್ಟು ದೊಡ್ಡ ಮೊತ್ತವನ್ನು ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಆಡಳಿತಕ್ಕೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, 1 ರೂಪಾಯಿ ಬಿಡುಗಡೆಯಾದರೆ ಕೇವಲ 15 ಪೈಸೆ ಬಡವರಿಗೆ ತಲುಪುತ್ತದೆ ಎಂದು ಆಗಿನ ಪ್ರಧಾನಮಂತ್ರಿ ಹೇಳಿದ್ದನ್ನು ಸ್ಮರಿಸಿದರು. "ಆದರೆ ಇದು ಮೋದಿ ಕಿ ಸರ್ಕಾರ್" ಎಂದು ಹೇಳಿದ ಪ್ರಧಾನಮಂತ್ರಿ, "ಪ್ರತಿ ಪೈಸೆಯೂ ನಿಮಗೆ ಸೇರಿದೆ ಮತ್ತು ಅದು ನಿಮಗಾಗಿ" ಎಂದು ಹೇಳಿದರು. ಪ್ರಧಾನಮಂತ್ರಿಯವರು ಭಾರತದ ಎಲ್ಲ ರೈತರಿಗೆ ಅತ್ಯಂತ ಸಮೃದ್ಧ ಹೋಳಿಯ ಶುಭ ಹಾರೈಸಿದರು ಮತ್ತು ಹೋಳಿಗೆ ಮುಂಚಿತವಾಗಿ ಅವರು ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. 

ಇಂದಿನ ಬದಲಾಗುತ್ತಿರುವ ಭಾರತವು ಒಂದರ ನಂತರ ಒಂದರಂತೆ ಅಭಿವೃದ್ಧಿ ಯೋಜನೆಗಳನ್ನು ಸಾಕಾರಗೊಳಿಸುತ್ತಿದೆ ಮತ್ತು ವಂಚಿತರಿಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದ ಪ್ರಧಾನೃಮಂತ್ರಿ, ಸಣ್ಣ ರೈತರು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದ್ದಾರೆ ಎಂದು ಉಲ್ಲೇಖಿಸಿದರು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ಈವರೆಗೆ 2.5 ಲಕ್ಷ ಕೋಟಿ ರೂ.ಗಳನ್ನು ಸಣ್ಣ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ, ಅದರಲ್ಲಿ 50 ಸಾವಿರ ಕೋಟಿ ರೂ.ಗಳನ್ನು ಮಹಿಳಾ ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಹಣವು ರೈತರ ಸಣ್ಣ ಆದರೆ ನಿರ್ಣಾಯಕ ಅಗತ್ಯಗಳನ್ನು ಪೂರೈಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

2014 ರ ಮೊದಲು 25,000 ಕೋಟಿ ಇದ್ದ ದೇಶದ ಕೃಷಿ ಬಜೆಟ್ ಅನ್ನು ಈಗ 1,25,000 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಪ್ರಧಾನಮಂತ್ರಿ, ಇದು ಐದು ಪಟ್ಟು ಹೆಚ್ಚಳವಾಗಿದೆ ಎಂದು ಪುನರುಚ್ಚರಿಸಿದರು. ಇದು ದೇಶದ ರೈತರನ್ನು ಬೆಂಬಲಿಸುವ ಬಿಜೆಪಿ ಸರ್ಕಾರದ ಬದ್ಧತೆಗೆ ಪುರಾವೆಯಾಗಿದೆ ಎಂದು ಅವರು ಹೇಳಿದರು. ರೈತರಿಗೆ ನೇರವಾಗಿ ಪ್ರಯೋಜನವಾಗುವ ತಂತ್ರಜ್ಞಾನದ ಬಳಕೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಜನ್ ಧನ್ ಬ್ಯಾಂಕ್ ಖಾತೆಗಳು, ಮೊಬೈಲ್ ಸಂಪರ್ಕಗಳು ಮತ್ತು ಆಧಾರ್ ನ ಉದಾಹರಣೆಯನ್ನು ನೀಡಿದರು. ಅಗತ್ಯವಿರುವ ಯಾವುದೇ ಹಂತದಲ್ಲಿ ರೈತರು ಬ್ಯಾಂಕುಗಳ ಬೆಂಬಲವನ್ನು ಪಡೆಯಬಹುದು ಎಂಬ ಉದ್ದೇಶದಿಂದ ಸರ್ಕಾರವು ರೈತರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಅವರು ಒತ್ತಿಹೇಳಿದರು.

ಈ ವರ್ಷದ ಆಯವ್ಯಯವು ಪ್ರಸ್ತುತ ಕಾಳಜಿಗಳ ಜೊತೆಗೆ ಕೃಷಿಯ ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸಣ್ಣ ರೈತರನ್ನು ಸಂಘಟಿಸುವ ಮೂಲಕ ಕೃಷಿಯಲ್ಲಿ ದಾಸ್ತಾನು ಮತ್ತು ವೆಚ್ಚವನ್ನು ತಗ್ಗಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು. ಅದಕ್ಕಾಗಿಯೇ ಈ ಬಜೆಟ್ ಶೇಖರಣಾ ಸೌಲಭ್ಯಗಳನ್ನು ಒತ್ತಿಹೇಳುತ್ತದೆ ಮತ್ತು ಸಹಕಾರಿ ಸಂಸ್ಥೆಗಳ ಮೇಲೆ ಕೇಂದ್ರೀಕರಿಸುತ್ತದೆ.  ಅಂತೆಯೇ, ನೈಸರ್ಗಿಕ ಕೃಷಿಯತ್ತ ಗಮನ ಹರಿಸುತ್ತಿರುವುದರಿಂದ ರೈತನಿಗೆ ವೆಚ್ಚ ಕಡಿಮೆಯಾಗುತ್ತದೆ. ಪಿಎಂ ಪ್ರಣಾಂ ಯೋಜನೆಯಂತಹ ಕ್ರಮಗಳು ರಸಗೊಬ್ಬರಗಳ ಮೇಲಿನ ವೆಚ್ಚವನ್ನು ಮತ್ತಷ್ಟು ತಗ್ಗಿಸುತ್ತವೆ ಎಂದು ಅವರು ಹೇಳಿದರು.

"ಭವಿಷ್ಯದ ಸವಾಲುಗಳನ್ನು ವಿಶ್ಲೇಷಿಸುತ್ತಲೇ ಭಾರತದ ಕೃಷಿ ವಲಯವನ್ನು ಬಲಪಡಿಸುವತ್ತ ಸರ್ಕಾರ ಗಮನ ಹರಿಸಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಹವಾಮಾನ ಬದಲಾವಣೆಯ ಸವಾಲನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಿರಿ ಧಾನ್ಯಗಳ ಸಾಂಪ್ರದಾಯಿಕ ಶಕ್ತಿಯನ್ನು ಪುನಶ್ಚೇತನಗೊಳಿಸಬೇಕೆಂದು ಒತ್ತಿ ಹೇಳಿದರು ಮತ್ತು ಈ ಆಹಾರ ಧಾನ್ಯಗಳು ಯಾವುದೇ ಹವಾಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ಮಾಹಿತಿ ನೀಡಿದರು. ಈ ವರ್ಷದ ಆಯವ್ಯಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಸಿರಿ ಧಾನ್ಯಗಳು ಶ್ರೀ ಅನ್ನ ಎಂಬ ಹೊಸ ಗುರುತನ್ನು ಹೊಂದಿವೆ ಎಂದರು. ಕರ್ನಾಟಕವು ಸಿರಿಧಾನ್ಯಗಳ ಮುಖ್ಯ ಕೇಂದ್ರವಾಗಿದೆ, ಅಲ್ಲಿ ಶ್ರೀ ಅನ್ನ ಅವರನ್ನು ಸಿರಿಧಾನ್ಯಾ ಎಂದು ಜನಪ್ರಿಯವಾಗಿದ್ದು, ವಿವಿಧ ರೀತಿಯ ಶ್ರೀ ಅನ್ನವನ್ನು ಈ ಪ್ರದೇಶದ ರೈತರು ಬೆಳೆಯುತ್ತಾರೆ ಎಂದು ಅವರು ಹೇಳಿದರು. ಶ್ರೀ ಅನ್ನವನ್ನು ಉತ್ತೇಜಿಸಲು ಆಗಿನ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಡೆಸಿದ ಮಹತ್ವದ ಅಭಿಯಾನವನ್ನು ಸ್ಮರಿಸಿದ ಪ್ರಧಾನಮಂತ್ರಿ, ಈಗ ನಾವು ಅದನ್ನು ಜಗತ್ತಿಗೆ ಪ್ರಸ್ತುತಪಡಿಸಬೇಕಾಗಿದೆ ಎಂದರು. ಶ್ರೀ ಅನ್ನ ಪ್ರಯೋಜನಗಳನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿಯವರು, ಇದಕ್ಕೆ ಕಡಿಮೆ ಶ್ರಮ ಮತ್ತು ಕಡಿಮೆ ನೀರು ಬೇಕಾಗುತ್ತದೆ, ಆದರೆ ಇದು ರೈತರಿಗೆ ಲಾಭಗಳನ್ನು ದುಪ್ಪಟ್ಟುಗೊಳಿಸುತ್ತದೆ ಎಂದರು.

ಕರ್ನಾಟಕವು ಪ್ರಮುಖ ಕಬ್ಬು ಬೆಳೆಯುವ ರಾಜ್ಯವಾಗಿರುವುದರಿಂದ ಕಬ್ಬು ಬೆಳೆಗಾರರ ಅಗತ್ಯತೆಗಳ ಬಗ್ಗೆ ಪ್ರಧಾನಮಂತ್ರಿಯವರು ಸುದೀರ್ಘವಾಗಿ ಮಾತನಾಡಿದರು. 2016-17ಕ್ಕೆ ಮುನ್ನ ಪಾವತಿಸಬೇಕಾಗಿದ್ದ ಮೊತ್ತದ ಸಹಕಾರಿ ಕಬ್ಬಿನ ತೆರಿಗೆಯ ಮೇಲೆ ರಿಯಾಯಿತಿ ನೀಡುವ ಈ ವರ್ಷದ ಬಜೆಟ್ ನಿಬಂಧನೆಯನ್ನು ಅವರು ಉಲ್ಲೇಖಿಸಿದರು, ಇದು ಸಕ್ಕರೆ ಸಹಕಾರಿ ಸಂಸ್ಥೆಗಳಿಗೆ 10 ಸಾವಿರ ಕೋಟಿ ರೂ.ಗಳ ಪರಿಹಾರವನ್ನು ನೀಡುತ್ತದೆ. ಎಥೆನಾಲ್ ಮಿಶ್ರಣಕ್ಕೆ ಸರ್ಕಾರದ ಉತ್ತೇಜನದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಎಥೆನಾಲ್ ಉತ್ಪಾದನೆಯು ಕಬ್ಬು ಬೆಳೆಗಾರರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಕಳೆದ 9 ವರ್ಷಗಳಲ್ಲಿ ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವು ಶೇಕಡಾ 1.5 ರಿಂದ 10 ಕ್ಕೆ ಏರಿದೆ ಮತ್ತು ಸರ್ಕಾರ ಈಗಾಗಲೇ ಪೆಟ್ರೋಲ್ ನಲ್ಲಿ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ಉತ್ತಮ ಸಂಪರ್ಕದಿಂದ ಮಾತ್ರ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಶಿಕ್ಷಣ ಬಲಗೊಳ್ಳುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 2014ಕ್ಕಿಂತ ಮೊದಲ ಐದು ವರ್ಷಗಳಲ್ಲಿ ಕರ್ನಾಟಕದ ರೈಲ್ವೆಯ ಒಟ್ಟು ಬಜೆಟ್ 4,000 ಕೋಟಿ ರೂ.ಗಳಾಗಿತ್ತು, ಈ ವರ್ಷ ಕರ್ನಾಟಕದಲ್ಲಿ ರೈಲ್ವೆಗೆ 7,500 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಇಂದು ಸುಮಾರು 45 ಸಾವಿರ ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂದು ಅವರು ಹೇಳಿದರು. ಬೆಳಗಾವಿಯಲ್ಲಿ ಹೊಸದಾಗಿ ಉದ್ಘಾಟಿಸಲಾದ ಆಧುನಿಕ ರೈಲ್ವೆ ನಿಲ್ದಾಣದ ಬಗ್ಗೆ ಉಲ್ಲೇಖಿಸಿದ ಅವರು, ಸೌಲಭ್ಯಗಳು ಮಾತ್ರವಲ್ಲದೆ ರೈಲ್ವೆಯ ಬಗ್ಗೆ ನಂಬಿಕೆಯೂ ಹೆಚ್ಚುತ್ತಿದೆ ಎಂದು ಹೇಳಿದರು. ಇಂತಹ ಆಧುನಿಕ ಅವತಾರದಲ್ಲಿ ಕರ್ನಾಟಕದ ಹಲವು ನಿಲ್ದಾಣಗಳನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದರು. ಲೋಂಡಾ-ಘಟಪ್ರಭಾ ಜೋಡಿ ಮಾರ್ಗವು ಪ್ರಯಾಣವನ್ನು ವೇಗ ಮತ್ತು ಸುರಕ್ಷಿತವಾಗಿಸುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರೋಗ್ಯ ರಕ್ಷಣೆಗೆ ಬೆಳಗಾವಿ ಪ್ರಮುಖ ಕೇಂದ್ರವಾಗಿದೆ ಎಂದ ಪ್ರಧಾನಮಂತ್ರಿ, ಸುಧಾರಿತ ರೈಲ್ವೆ ಸಂಪರ್ಕವು ಈ ವಲಯಗಳಿಗೆ ಉತ್ತೇಜನ ನೀಡಲಿದೆ ಎಂದರು 

"ಡಬಲ್ ಎಂಜಿನ್ ಸರ್ಕಾರವು ವೇಗದ ಅಭಿವೃದ್ಧಿಗೆ ಖಾತರಿಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಜಲ ಜೀವನ್ ಅಭಿಯಾನದ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, 2019ಕ್ಕೆ ಮೊದಲು ಕರ್ನಾಟಕದ ಹಳ್ಳಿಗಳಲ್ಲಿ ಕೇವಲ 25 ಪ್ರತಿಶತದಷ್ಟು ಕುಟುಂಬಗಳು ಮಾತ್ರ ಕೊಳವೆ ನೀರಿನ ಸಂಪರ್ಕವನ್ನು ಹೊಂದಿದ್ದವು, ಆದರೆ ಇಂದು ಅದರ ವ್ಯಾಪ್ತಿ ಶೇಕಡ 60 ಕ್ಕೆ ವಿಸ್ತರಿಸಿದೆ ಎಂದರು. ಬೆಳಗಾವಿಯಲ್ಲೂ 2 ಲಕ್ಷಕ್ಕೂ ಕಡಿಮೆ ಮನೆಗಳಿಗೆ ನಲ್ಲಿ ನೀರು ಸಿಗುತ್ತಿತ್ತು, ಆದರೆ ಈ ಸಂಖ್ಯೆ ಇಂದು 4.5 ಲಕ್ಷ ದಾಟಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ ಈ ಬಜೆಟ್ ನಲ್ಲಿ 60,000 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

"ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ ಸಮಾಜದ ಪ್ರತಿಯೊಂದು ಸಣ್ಣ ವರ್ಗವನ್ನು ಸಬಲೀಕರಣಗೊಳಿಸುವಲ್ಲಿ ಸರ್ಕಾರ ನಿರತವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಬೆಳಗಾವಿ ವೇಣುಗ್ರಾಮ ಅಂದರೆ ಬಿದಿರಿನ ಗ್ರಾಮ ಎಂದು ಪ್ರಸಿದ್ಧವಾಗಿದ್ದು, ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳ ನಗರವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಹಿಂದಿನ ಸರ್ಕಾರಗಳು ಬಿದಿರಿನ ಕೊಯ್ಲನ್ನು ದೀರ್ಘಕಾಲದವರೆಗೆ ನಿಷೇಧಿಸಿದ್ದವು ಆದರೆ ಪ್ರಸ್ತುತ ಸರ್ಕಾರವು ಕಾನೂನ ಸುಧಾರಣೆ ಮಾಡಿ ಬಿದಿರು ಕೃಷಿ ಮತ್ತು ವ್ಯಾಪಾರಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸ್ಮರಿಸಿದರು. ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳನ್ನು ಬೆಂಬಲಿಸಲು ಈ ವರ್ಷದ ಬಜೆಟ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಕರ್ನಾಟಕದ ನಾಯಕರಿಗೆ ಅಗೌರವ ತೋರುವುದನ್ನೇ ಸಂಪ್ರದಾಯವಾಗಿ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಅಸಹ್ಯವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.. "ಎಸ್.ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರಂತಹ ನಾಯಕರನ್ನು ಕಾಂಗ್ರೆಸ್ ಕುಟುಂಬದ ಮುಂದೆ ಹೇಗೆ ಅವಮಾನಿಸಲಾಯಿತು ಎಂಬುದಕ್ಕೆ ಇತಿಹಾಸವೇ ಸಾಕ್ಷಿ" ಎಂದು ಪ್ರಧಾನಮಂತ್ರಿ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ತಮಗಿರುವ ಗೌರವ ಮತ್ತು ಅವರ ಸಾರ್ವಜನಿಕ ಸೇವೆಯ ಬಗೆಗಿನ ನಿಷ್ಠೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಛತ್ತೀಸ್ ಗಢದಲ್ಲಿ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಸುಡುವ ರಣಬಿಸಿಲಿನಲ್ಲಿ ಛತ್ರಿಯ ನೆರಳಿಗೂ ಕೂಡ ಅತ್ಯಂತ ಹಿರಿಯ ಸದಸ್ಯರು  ಅರ್ಹರೆಂದು ಪರಿಗಣಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. "ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರು, ಆದರೆ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ರಿಮೋಟ್ ಕಂಟ್ರೋಲ್ ಯಾರ ಬಳಿ ಇದೆ ಎಂಬುದು ಇಡೀ ಜಗತ್ತಿಗೆ ತಿಳಿದಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ದೇಶದ ಅನೇಕ ರಾಜಕೀಯ ಪಕ್ಷಗಳು 'ಪರಿವಾರವಾದ' (ಸ್ವಜನಪಕ್ಷಪಾತ) ದಿಂದ ಬಳಲುತ್ತಿವೆ ಎಂದು ಉಲ್ಲೇಖಿಸಿದ ಶ್ರೀ ಮೋದಿ, ದೇಶವನ್ನು ಅದರ ಹಿಡಿತದಿಂದ ಮುಕ್ತಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದರು. ಕಾಂಗ್ರೆಸ್ ನಂತಹ ಪಕ್ಷಗಳಿಂದ ಕರ್ನಾಟಕದ ಜನರು ಜಾಗರೂಕರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು.

ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, "ನಿಜವಾದ ಉದ್ದೇಶಗಳೊಂದಿಗೆ ಕೆಲಸವನ್ನು ಮಾಡಿದಾಗ ನಿಜವಾದ ಅಭಿವೃದ್ಧಿ ಆಗುತ್ತದೆ" ಎಂದು ಹೇಳಿದರು. ಡಬಲ್ ಎಂಜಿನ್ ಸರ್ಕಾರದ ನೈಜ ಉದ್ದೇಶ ಮತ್ತು ಅಭಿವೃದ್ಧಿಗೆ ಅದರ ಬದ್ಧತೆಯನ್ನು ಅವರು ಎತ್ತಿ ತೋರಿಸಿದರು. "ಕರ್ನಾಟಕ ಮತ್ತು ದೇಶದ ಅಭಿವೃದ್ಧಿಯನ್ನು ತ್ವರಿತಗೊಳಿಸಲು, ನಾವು ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನ)ನೊಂದಿಗೆ ಮುಂದುವರಿಯಬೇಕಾಗಿದೆ" ಎಂದು ಪ್ರಧಾನಮಂತ್ರಿ ಹೇಳಿ ಮಾತು ಮುಗಿಸಿದರು.  

ಕರ್ನಾಟಕ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಮತ್ತು ಕರ್ನಾಟಕ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿಯವರ ಬದ್ಧತೆಗೆ ಮತ್ತೊಂದು ನಿದರ್ಶನ ತೋರುವ ಒಂದು ಹೆಜ್ಜೆಯಾಗಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ ಸುಮಾರು 16,000 ಕೋಟಿ ರೂ.ಗಳ 13ನೇ ಕಂತಿನ ಮೊತ್ತವನ್ನು 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ನೇರ ಸವಲತ್ತು ವರ್ಗಾವಣೆಯ ಮೂಲಕ ಬಿಡುಗಡೆ ಮಾಡಲಾಯಿತು. ಈ ಯೋಜನೆಯಡಿ, ಅರ್ಹ ರೈತ ಕುಟುಂಬಗಳಿಗೆ ತಲಾ 2000 ರೂ.ಗಳ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ 6000 ರೂ.ಗಳ ಸವಲತ್ತು ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮರು ಅಭಿವೃದ್ಧಿಗೊಂಡ ಬೆಳಗಾವಿ ರೈಲ್ವೆ ನಿಲ್ದಾಣ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲು ಈ ರೈಲ್ವೆ ನಿಲ್ದಾಣವನ್ನು ಸುಮಾರು 190 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮರು ಅಭಿವೃದ್ಧಿ ಮಾಡಲಾಗಿದೆ. ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಿದ ಮತ್ತೊಂದು ರೈಲ್ವೆ ಯೋಜನೆ ಎಂದರೆ ಬೆಳಗಾವಿಯ ಲೋಂಡಾ-ಬೆಳಗಾವಿ-ಘಟಪ್ರಭಾ ವಿಭಾಗದ ನಡುವಿನ ಜೋಡಿ ರೈಲು ಮಾರ್ಗ ಯೋಜನೆ. ಸುಮಾರು 930 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಯೋಜನೆಯು ಜನನಿಬಿಡ ಮುಂಬೈ - ಪುಣೆ - ಹುಬ್ಬಳ್ಳಿ - ಬೆಂಗಳೂರು ರೈಲ್ವೆ ಮಾರ್ಗದ ಉದ್ದಕ್ಕೂ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಈ ಪ್ರದೇಶದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.

ಬೆಳಗಾವಿಯಲ್ಲಿ ಜಲ ಜೀವನ ಅಭಿಯಾನ ಅಡಿಯಲ್ಲಿ ಆರು ಬಹು ಗ್ರಾಮ ಯೋಜನೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು, ಇದನ್ನು ಸುಮಾರು 1585 ಕೋಟಿ ರೂ.ಗಳ ಸಂಚಿತ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು 315 ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 8.8 ಲಕ್ಷ ಜನಸಂಖ್ಯೆಗೆ ಇದರಿಂದ ಪ್ರಯೋಜನವಾಗಲಿದೆ. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."