ಸೇನಾ ಪಡೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದ್ದರು.
ಕೋವಿಡ್ ನಿರ್ವಹಣೆಗಾಗಿ ಸೇನೆಯ ನೆರವಿನ ವಿವಿಧ ಉಪಕ್ರಮಗಳ ಕುರಿತಂತೆ ಅವರು ಚರ್ಚಿಸಿದರು.
ಸೇನೆಯ ವೈದ್ಯಕೀಯ ಸಿಬ್ಬಂದಿಗಳನ್ನು ವಿವಿಧ ರಾಜ್ಯ ಸರ್ಕಾರಗಳ ಸೇವೆಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ದೇಶದ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಸೇನೆ ಸ್ಥಾಪಿಸುತ್ತಿದೆ ಎಂದೂ ಅವರು ತಿಳಿಸಿದರು.
ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಾಗರಿಕರಿಗಾಗಿ ಸೇನೆ ತನ್ನ ಆಸ್ಪತ್ರೆಗಳನ್ನು ತೆರೆಯುತ್ತಿದೆ ಎಂದು ಜನರಲ್ ಎಂ.ಎಂ. ನರವಾಣೆ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ನಾಗರಿಕರು ತಮಗೆ ಹತ್ತಿರದ ಸೇನಾ ಆಸ್ಪತ್ರೆಗಳನ್ನು ಸಂಪರ್ಕಿಸಬಹುದು ಎಂದೂ ತಿಳಿಸಿದರು.
ಆಮದು ಮಾಡಿಕೊಳ್ಳಲಾದ ಆಕ್ಸಿಜನ್ ಟ್ಯಾಂಕರ್ ಗಳು ಮತ್ತು ವಾಹನಗಳನ್ನು ನಿರ್ವಹಿಸಲು ಎಲ್ಲಿ ವಿಶೇಷ ಕೌಶಲದ ಅಗತ್ಯವಿದೆಯೋ ಅಲ್ಲಿ ಸೈನ್ಯವು ಮಾನವಶಕ್ತಿಯೊಂದಿಗೆ ನೆರವಾಗುತ್ತಿದೆ ಎಂದು ಪ್ರಧಾನಮಂತ್ರಿಯವರಿಗೆ ಜನರಲ್ ಎಂ. ಎಂ. ನರವಾಣೆ ವಿವರಿಸಿದರು.