NCC provides a platform to strengthen the spirit of discipline, determination and devotion towards the nation: PM Modi
India has decided that it will confront the challenges ahead and deal with them: PM Modi
A young India will play key role in fourth industrial revolution: PM

ದೆಹಲಿಯಲ್ಲಿ ಇಂದು ನಡೆದ ಎನ್ ಸಿ ಸಿ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಿದ್ದರು.

ರ‍್ಯಾಲಿಯಲ್ಲಿ ಪ್ರಧಾನ ಮಂತ್ರಿಯವರು ಗೌರವವನ್ನು ಸ್ವೀಕರಿಸಿ ವಿವಿಧ ಎನ್‌ಸಿಸಿ ತುಕಡಿಗಳು ಮತ್ತು ನೆರೆಯ ರಾಷ್ಟ್ರಗಳ ಕೆಡೆಟ್‌ಗಳ ಪಥ ಸಂಚಲನವನ್ನು ವೀಕ್ಷಿಸಿದರು.

ಎನ್‌ಸಿಸಿ ಕೆಡೆಟ್‌ಗಳು ಸಾಂಸ್ಕೃತಿಕ ಪ್ರದರ್ಶನದ ಜೊತೆಗೆ, ಸಾಹಸ ಕ್ರೀಡೆ, ಸಂಗೀತ ಮತ್ತು ಪ್ರದರ್ಶನ ಕಲೆಗಳಂತಹ ಕ್ಷೇತ್ರಗಳಲ್ಲಿನ ತಮ್ಮ ಸಾಮರ್ಥ್ಯಗಳನ್ನು ಪ್ರಧಾನ ಮಂತ್ರಿಯವರ ಸಮ್ಮುಖದಲ್ಲಿ ಪ್ರದರ್ಶಿಸಿದರು. ಅರ್ಹ ಎನ್‌ಸಿಸಿ ಕೆಡೆಟ್‌ಗಳಿಗೆ ಪ್ರಧಾನಮಂತ್ರಿಯವರು ಪ್ರಶಸ್ತಿಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು , ಯುವಕರಿಗೆ ಶಿಸ್ತು, ದೃಡತೆ ಮತ್ತು ದೇಶಭಕ್ತಿಯ ಮನೋಭಾವವನ್ನು ಬಲಪಡಿಸಲು ಎನ್‌ಸಿಸಿ ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಇಂತಹ ಮೌಲ್ಯಗಳು ದೇಶದ ಅಭಿವೃದ್ಧಿಗೆ ಸಹಾಯ ಮಾಡುತ್ತವೆ ಎಂದು ಹೇಳಿದರು.

ಭಾರತವು ವಿಶ್ವದ ಯುವ ರಾಷ್ಟ್ರಗಳಲ್ಲಿ ಒಂದು ಏಕೆಂದರೆ ಇದರ ಜನಸಂಖ್ಯೆಯ 65% ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. “ಈ ವಿಷಯದ ಬಗ್ಗೆ ನಮಗೆ ಹೆಮ್ಮೆ ಇದೆ, ಆದರೆ ಯುವ ಚಿಂತನೆ ನಮ್ಮ ಜವಾಬ್ದಾರಿಯಾಗಿದೆ” ಎಂದು ಅವರು ಹೇಳಿದರು. ಯಾವುದೇ ಸಮಸ್ಯೆಗೆ ತಕ್ಷಣ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. “ಯುವ ಮನಸ್ಸು ಇದಕ್ಕಾಗಿ ಹಂಬಲಿಸುತ್ತದೆ ಮತ್ತು ಇದುವೇ ಯುವ ಭಾರತ ” ಎಂದು ಅವರು ಹೇಳಿದರು.

“ನಾವು ಹಿಂದಿನ ಸವಾಲುಗಳನ್ನು ಎದುರಿಸುತ್ತಿರುವಾಗ, ವರ್ತಮಾನದ ಅಗತ್ಯತೆಗಳ ಬಗ್ಗೆ ಎಚ್ಚರ ವಹಿಸಿ, ಭವಿಷ್ಯದ ಆಕಾಂಕ್ಷೆಗಳ ಕಡೆಗೆ ಗಮನ ಹರಿಸಬೇಕು” ಎಂದು ಅವರು ಹೇಳಿದರು. ಭಾರತವು ಇಂದು ಯುವ ಹುರುಪು ಮತ್ತು ಮನಸ್ಸಿನೊಂದಿಗೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. “ಇಂದು ಭಾರತದ ಯುವ ಮನಸ್ಥಿತಿ ಮತ್ತು ಹುರುಪು, ಸರ್ಜಿಕಲ್ ಸ್ಟ್ರೈಕ್ ಮತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನೇರ ಆಕ್ರಮಣ ಮಾಡಲು ಕಾರಣವಾಗಿದೆ”. ಯುವ ಮನಸ್ಥಿತಿಯು ಎಲ್ಲರನ್ನೂ ತನ್ನ ಜೊತೆಯಲ್ಲಿ ಕೊಂಡೊಯ್ದು ಪ್ರಗತಿಯತ್ತ ದಾಪುಗಾಲು ಹಾಕಲು ಬಯಸಿದೆ” ಎಂದರು. “ಈ ಮನೋಭಾವದಿಂದಲೇ ಸಂಬಂಧಪಟ್ಟವರನ್ನು ಸಂಪರ್ಕಿಸಿ ನಾವು ಬೋಡೋ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ.”

ಈಶಾನ್ಯ ಪ್ರದೇಶದ ಅಭಿವೃದ್ಧಿಯ ಪ್ರಯತ್ನಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಈಶಾನ್ಯ ಪ್ರದೇಶದ ಅಭಿವೃದ್ಧಿಯ ಜೊತೆಗೆ, ಎಲ್ಲಾ ಸಂಬಂಧಪಟ್ಟವರೊಂದಿಗೆ ಅತ್ಯಂತ ಮುಕ್ತ ಮನಸ್ಸಿನಿಂದ ಮತ್ತು ಮುಕ್ತ ಹೃದಯದಿಂದ ಮಾತುಕತೆಯನ್ನು ಆರಂಭಿಸಲಾಗಿದೆ. ಇಂದು ಬೋಡೋ ಒಪ್ಪಂದವು ಇದರ ಫಲಿತಾಂಶವಾಗಿದೆ. “ಇದು ಯುವ ಭಾರತದ ಚಿಂತನೆ. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು, ಎಲ್ಲರನ್ನೂ ಅಭಿವೃದ್ಧಿಪಡಿಸುವ ಮೂಲಕ, ಸಕಲರ ವಿಶ್ವಾಸವನ್ನು ಗಳಿಸುವ ಮೂಲಕ ನಾವು ದೇಶವನ್ನು ಮುಂದೆ ಸಾಗಿಸುತ್ತಿದ್ದೇವೆ ” ಎಂದು ಪ್ರಧಾನಿ ಹೇಳಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PM Modi hails diaspora in Kuwait, says India has potential to become skill capital of world

Media Coverage

PM Modi hails diaspora in Kuwait, says India has potential to become skill capital of world
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi