ಭಾರತದ ಯೂನಿಫೈಡ್ ಪೆಮೆಂಟ್ ಇಂಟರ್ಫೇಸ್ (UPI) ಮತ್ತು ಸಿಂಗಾಪುರದ ಪೆ ನೌ ನಡುವಿನ ವಾಸ್ತವ ಪಾವತಿ ಸಂಪರ್ಕದ ಉದ್ಘಾಟನಾ ಸಮಾರಂಭದಲ್ಲಿ ವರ್ಚುವಲ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮತ್ತು ಸಿಂಗಾಪುರ ಪ್ರಧಾನಿ ಶ್ರೀ ಲೀ ಸಿಯೆನ್ ಲೂಂಗ್ ಭಾಗವಹಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶ್ರೀ ಶಕ್ತಿಕಾಂತ ದಾಸ್ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಶ್ರೀ ರವಿ ಮೆನನ್ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಬಳಸಿ ಪರಸ್ಪರ ಗಡಿಯಾಚೆಗಿನ ವಹಿವಾಟು ಮಾಡಿದರು.
ಸಿಂಗಾಪುರ, ಗಡಿಯಾಚೆಗೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ಪಾವತಿ ಸೌಲಭ್ಯವನ್ನು ಪ್ರಾರಂಭಿಸಿದ ಮೊದಲ ದೇಶವಾಗಿದೆ. ಇದು ಸಿಂಗಾಪುರದಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು/ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ ಮತ್ತು ಸಿಂಗಾಪುರದಿಂದ ಭಾರತಕ್ಕೆ ಹಾಗೂ ಭಾರತದಿಂದ ಸಿಂಗಾಪುರಕ್ಕೆ ತ್ವರಿತವಾಗಿ ಕಡಿಮೆ-ವೆಚ್ಚದಲ್ಲಿ ಹಣ ವರ್ಗಾವಣೆ ಮಾಡುವ ಮೂಲಕ ಡಿಜಿಟಲೀಕರಣ ಮತ್ತು ಫಿನ್ ಟೆಕ್ ನ ಪ್ರಯೋಜನಗಳನ್ನು ಜನಸಾಮಾನ್ಯರಿಗೆ ದೊರಕಿಸಿ ಕೊಡುತ್ತದೆ. ಸಿಂಗಾಪುರದ ಆಯ್ದ ವ್ಯಾಪಾರಿ ಮಳಿಗೆಗಳಲ್ಲಿ QR ಕೋಡ್‌ಗಳ ಮೂಲಕ UPI ಪಾವತಿಗಳನ್ನು ಸ್ವೀಕರಿಸುವ ಸೌಲಭ್ಯ ಈಗಾಗಲೇ ಲಭ್ಯವಿದೆ.
ವರ್ಚುವಲ್ ಉದ್ಘಾಟನೆಗೆ ಮೊದಲು ಉಭಯ ರಾಷ್ಟ್ರಗಳ ಪ್ರಧಾನಮಂತ್ರಿಗಳು ಪರಸ್ಪರ ಆಸಕ್ತಿಯ ಕ್ಷೇತ್ರಗಳ ಕುರಿತು ದೂರವಾಣಿ ಕರೆ ಮೂಲಕ ಚರ್ಚಿಸಿದ್ದರು. ಭಾರತ-ಸಿಂಗಪುರ ಸಂಬಂಧಕ್ಕೆ ಮತ್ತಷ್ಟು ಪುಷ್ಟಿ ನೀಡಲು ಕೈಗೊಂಡ ಪಾಲುದಾರಿಕೆಗಾಗಿ ಪ್ರಧಾನಿ ಲೀ ಅವರಿಗೆ ಪ್ರಧಾನಮಂತ್ರಿಗಳು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಭಾರತದ ಜಿ 20 ಅಧ್ಯಕ್ಷತೆಯಡಿ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದರು.
भारत और सिंगापुर की मित्रता बहुत पुरानी है, समय की कसौटी पर हमेशा खरी उतरी है।
— PMO India (@PMOIndia) February 21, 2023
हमारे people-to-people रिश्ते इसका मुख्य आधार रहे हैं: PM @narendramodi
UPI-Pay Now Link का लॉन्च, आज दोनों देशों के नागरिकों के लिए एक ऐसा उपहार है, जिसका वे उत्सुकता से इंतजार कर रहे थे।
— PMO India (@PMOIndia) February 21, 2023
मैं भारत और सिंगापुर के लोगों को इसकी बहुत-बहुत बधाई देता हूं: PM @narendramodi
आज के लॉन्च ने cross-border FinTech connectivity के एक नए अध्याय का शुभारम्भ किया है।
— PMO India (@PMOIndia) February 21, 2023
आज के बाद, सिंगापुर और भारत के लोग अपने मोबाइल फोन से उसी तरह पैसे ट्रांसफर कर पाएंगे, जैसे वे अपने-अपने देश के अंदर करते हैं: PM @narendramodi
डिजिटल इंडिया अभियान ने, Governance और public service delivery में अभूतपूर्व Reforms को भी संभव बनाया है।
— PMO India (@PMOIndia) February 21, 2023
ये भारत के डिजिटल इंफ्रास्ट्रक्चर की ही ताकत है कि, Covid pandemic के दौरान हम करोड़ों लोगों के बैंक खातों में सीधे पैसे ट्रांसफर कर पाए: PM @narendramodi
आज रियल टाइम डिजिटल ट्रांजेक्शन्स के मामले में भारत, विश्व के अग्रणी देशों में है।
— PMO India (@PMOIndia) February 21, 2023
आज UPI भारत में सबसे पसंदीदा payment mechanism बन गया है: PM @narendramodi