ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ದೂರವಾಣಿ ಕರೆ ಮಾಡಿ ರಷ್ಯಾದಲ್ಲಿ ನಿನ್ನೆ ನಡೆದ ಚುನಾವಣೆಯಲ್ಲಿ ಜಯ ಸಾಧಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಶ್ರೀ ಪುಟಿನ್ ಅವರ ಯಶಸ್ಸಿಗೆ ಅಭಿನಂದಿಸಿದ ಪ್ರಧಾನಿ, ಶ್ರೀ ಪುಟಿನ್ ಅವರ ನಾಯಕತ್ವದಲ್ಲಿ ಭಾರತ ಮತ್ತು ರಷ್ಯಾ ಒಕ್ಕೂಟದ ನಡುವಿನ “ವಿಶೇಷ ಮತ್ತು ಗೌರವದ ವ್ಯೂಹಾತ್ಮಕ ಪಾಲುದಾರಿಕೆ ” ಬಲಿಷ್ಠತೆಯಿಂದ ಬಲಿಷ್ಠತೆಯತ್ತ ವೃದ್ಧಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಾರ್ಷಿಕ ಶೃಂಗ ಸಭೆಯಲ್ಲಿ ಪುಟಿನ್ ಅವರನ್ನು ಭಾರತದಲ್ಲಿ ಸ್ವಾಗತಿಸಲು ತಾವು ಎದಿರು ನೋಡುತ್ತಿರುವುದಾಗಿಯೂ ಪ್ರಧಾನಿ ತಿಳಿಸಿದರು.
ಅಧ್ಯಕ್ಷ ಪುಟಿನ್ ಅವರು ಪ್ರಧಾನಿಯವರಿಗೆ ಕರೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಭಾರತ – ರಷ್ಯಾ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಬದ್ಧತೆ ವ್ಯಕ್ತಪಡಿಸಿದ ಅವರು, ಭಾರತ ಮತ್ತು ಅದರ ಜನತೆಯ ನಿರಂತರ ಪ್ರಗತಿಗೆ ಶುಭ ಕೋರಿದರು.