ಟೆಕ್ಸಾಸ್‌ನ ಹೌಸ್ಟಾನ್‌ನಲ್ಲಿ ಸೆಪ್ಟೆಂಬರ್ 22ರಮದು ‘ಹೌಡಿ ಮೋದಿ’ ಹೆಸರಿಯನಲ್ಲಿ ನಡೆಯುತ್ತಿರುವ ವಿಶೇಷ ಸಮುದಾಯ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವ ಸುದ್ದಿ ಕೇಳಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಅಮೆರಿಕ ಮತ್ತು ಭಾರತದ ನಡುವೆ ಇರುವ ವಿಶೇಷ ಸ್ನೇಹವನ್ನು ಬಿಂಬಿಸುತ್ತದೆ ಎಂದು ಪ್ರಧಾನಿ ಅವರು ಪ್ರತಿಕ್ರಿಯಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಭಾರತ ಮತ್ತು ಅಮೆರಿಕದ ನಡುವಣ ದ್ವಿಪಕ್ಷೀಯ ಸಂಬಂಧಗಳು ಬಲಿಷ್ಠವಾಗಿರುವುದನ್ನು ತೋರಿಸುತ್ತದೆ. ಜತೆಗೆ, ಅಮೆರಿಕದ ಸಮಾಜಕ್ಕೆ ಮತ್ತು ಆರ್ಥಿಕತೆಗೆ ಭಾರತೀಯ ಸಮುದಾಯ ನೀಡಿರುವ ಕೊಡುಗೆಯನ್ನು ಗುರುತಿಸುವ ಕಾರ್ಯವಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಪ್ರಧಾನಿ ಅವರು ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
‘ಅಮೆರಿಕ ಅಧ್ಯಕ್ಷರ ವಿಶೇಷ ನಡೆ. ಭಾರತ ಮತ್ತು ಅಮೆರಿಕದ ವಿಶೇಷ ಸ್ನೇಹದ ಮಹತ್ವವನ್ನು ಸಾರುತ್ತದೆ!
ಹೌಸ್ಟಾನ್‌ನಲ್ಲಿ 22ರಂದು ನಡೆಯುವ ಸಮುದಾಯ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವುದನ್ನು ಕೇಳಿ ಉತ್ಸುಕನಾಗಿದ್ದೇನೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ ಜತೆ ಅವರನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇನೆ.
–ಶ್ರೀ ನರೇಂದ್ರ ಮೋದಿ(@ನರೇಂದ್ರಮೋದಿ) ಸೆಪ್ಟೆಂಬರ್ 16, 2019
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ವಿಶೇಷ ನಡೆಯಿಂದ ಉಭಯ ದೇಶಗಳ ಸಂಬಂಧಗಳು ಗಟ್ಟಿಯಾಗಿರುವುದನ್ನು ತೋರಿಸುತ್ತದೆ. ಜತೆಗೆ, ಅಮೆರಿಕದ ಸಮಾಜಕ್ಕೆ ಮತ್ತು ಆರ್ಥಿಕತೆಗೆ ಭಾರತೀಯರು ನೀಡಿರುವ ಕೊಡುಗೆಯ ಮಹತ್ವವನ್ನು ಬಿಂಬಿಸುತ್ತದೆ.
ಶ್ರೀ ಡೊನಾಲ್ಡ್ ಟ್ರಂಪ್ ಅವರು ಭಾಗಿಯಾಗುತ್ತಿರುವ ವಿಷಯವನ್ನು ಶ್ವೇತ ಭವನ ಪತ್ರಿಕಾ ಹೇಳಿಕೆ ಮೂಲಕ ದೃಢಪಡಿಸಿತ್ತು.
‘ಅಮೆರಿಕ ಮತ್ತು ಭಾರತೀಯರ ನಡುವಣ ಬಲಿಷ್ಠ ಸಂಬಂಧವನ್ನು ತೋರಿಸಲು ಇದೊಂದು ಉತ್ತಮ ಅವಕಾಶ. ಜಗತ್ತಿನ ಅತ್ಯಂತ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಣ ಸಹಭಾಗಿತ್ವ ದೃಢಪಡಿಸಲು ಇದು ಸಕಾಲಿಕವಾಗಿದೆ. ಜತೆಗೆ, ಇಂಧನ ಮತ್ತು ವ್ಯಾಪಾರ ಕುರಿತ ವಿಷಯಗಳ ಬಗ್ಗೆ ಚರ್ಚೆಗೂ ಅವಕಾಶ ದೊರೆಯಲಿದೆ.
‘ಹೌಡಿ ಮೋದಿ– ಕನಸುಗಳನ್ನು ಹಂಚಿಕೊಳ್ಳೋಣ, ಉಜ್ವಲ ಭವಿಷ್ಯಕ್ಕಾಗಿ’ ಎನ್ನುವ ಕಾರ್ಯಕ್ರಮವನ್ನು ಟೆಕ್ಸಾಸ್ ಇಂಡಿಯಾ ಫೋರಂ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗಾಗಿ ಸೆಪ್ಟೆಂಬರ್ 22ರಂದು ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಹೌಸ್ಟ್‌ನ್‌ನಲ್ಲಿ ಆಯೋಜಿಸಿದೆ. ಸುಮಾರು 50 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
A special gesture by @POTUS, signifying the special friendship between India and USA!
— Narendra Modi (@narendramodi) September 16, 2019
Delighted that President @realDonaldTrump will join the community programme in Houston on the 22nd.
Looking forward to joining the Indian origin community in welcoming him at the programme.
The special gesture of President @realDonaldTrump to join us in Houston highlights the strength of the relationship and recognition of the contribution of the Indian community to American society and economy. #HowdyModi
— Narendra Modi (@narendramodi) September 16, 2019