ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2019ರ ಜನವರಿ 17 ಅಂದರೆ ನಾಳೆಯಿಂದ ಮೂರು ದಿನಗಳ ಗುಜರಾತ್ ಭೇಟಿ ಕೈಗೊಳ್ಳಲಿದ್ದಾರೆ. ಈ ವೇಳೆ, ಅವರು ಗಾಂಧಿನಗರ, ಅಹ್ಮದಾಬಾದ್ ಮತ್ತು ಹಜೀರಾಕ್ಕೆ ಭೇಟಿ ನೀಡಲಿದ್ದಾರೆ.
ನಾಳೆ ಅವರು ಗಾಂಧಿನಗರದಲ್ಲಿ ಮಹಾತ್ಮಾ ಮಂದಿರ್ ವಸ್ತು ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿನ ತಮ್ಮ ಪ್ರಥಮ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ರೋಮಾಂಚಕ ಗುಜರಾತ್ ಜಾಗತಿಕ ವಾಣಿಜ್ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಇಲ್ಲಿ ಒಂದೇ ಸೂರಿನಡಿಯಲ್ಲಿ 25ಕ್ಕೂ ಹೆಚ್ಚು ಕೈಗಾರಿಕೆಗಳು ಮತ್ತು ವಾಣಿಜ್ಯ ವಲಯಗಳು ಪ್ರದರ್ಶನಗೊಳ್ಳಲಿವೆ.
ಸಂಜೆ, ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಅಹ್ಮದಾಬಾದ್ ನಲ್ಲಿ ಉದ್ಘಾಟಿಸಲಿದ್ದಾರೆ. ಇದು ಅತ್ಯಾಧುನಿಕ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಸಾರ್ವಜನಿಕ ಆಸ್ಪತ್ರೆಯಾಗಿದ್ದು, ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ನಿರ್ಮಾಣ ಮಾಡಿದೆ. ಇದು ಒಂದು ಏರ್ ಆಂಬುಲೆನ್ಸ್ ಸೇರಿದಂತೆ ಎಲ್ಲ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.78 ಮೀಟರ್ ಎತ್ತರದ ಕಟ್ಟಡ ಕೌಶಲ, ವೇಗ ಮತ್ತು ಅಳತೆಯ ಸಮ್ಮಿಲನವಾಗಿದೆ.
ಡಿಜಿಟಲ್ ಇಂಡಿಯಾ ಸ್ಫೂರ್ತಿಯನ್ನು ಗಮನದಲ್ಲಿಟ್ಟುಕೊಂಡು, ಸಂಪೂರ್ಣ ಕಾಗದ ರಹಿತ ಆಸ್ಪತ್ರೆ ಮಾಡಲಾಗಿದೆ. ಇದು ಶ್ರೀಸಾಮಾನ್ಯರ ಸೇವೆ ಮಾಡಲಿದ್ದು, ಆಯುಷ್ಮಾನ್ ಭಾರತದ ಮುನ್ನೋಟವನ್ನು ಪೂರೈಸಲಿದೆ.
ಪ್ರಧಾನಮಂತ್ರಿಯವರು ಆಸ್ಪತ್ರೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಲಿದ್ದು, ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಸಂಜೆ, ಅಹ್ಮದಾಬಾದ್ ಶಾಪಿಂಗ್ ಉತ್ಸವ 2019ನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಇದನ್ನು ರೋಮಾಂಚಕ ಗುಜರಾತ್ ಶೃಂಗದ ಜೊತೆ ಜೊತೆಗೇ ಆಯೋಜಿಸಲಾಗಿದೆ. ಪ್ರಧಾನಮಂತ್ರಿಯವರು ವೈಬರೆಂಟ್ ಗುಜರಾತ್ ಅಹ್ಮದಾಬಾದ್ ಶಾಪಿಂಗ್ ಉತ್ಸವ ಮಸ್ಕಾಟ್ ಅನಾವರಣ ಮಾಡಲಿದ್ದಾರೆ. ಅಹ್ಮದಾಬಾದ್ ಶಾಪಿಂಗ್ ಉತ್ಸವ 2019 ಭಾರತದಲ್ಲಿ ನಡೆಯುತ್ತಿರುವ ಇಂಥ ಮೊದಲ ಉತ್ಸವವಾಗಿದೆ. ಇದು ನಗರದ ಉದ್ದಿಮೆದಾರರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಒಂದು ಅವಕಾಶ ಒದಗಿಸುತ್ತದೆ.
ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಮಾರನೆ ದಿನ 2019ರ ಜನವರಿ 18ರಂದು ಪ್ರಧಾನಮಂತ್ರಿಯವರು ಗುಜರಾತ್ ನ ಮಹಾತ್ಮ ಮಂದಿರ್ ವಸ್ತು ಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ವೈಬರೆಂಟ್ ಗುಜರಾತ್ ನ 9ನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಗುಜರಾತ್ ಅನ್ನು ಹೂಡಿಕೆಯ ಆದ್ಯತೆಯ ತಾಣವಾಗಿ ಪುನರ್ ಸ್ಥಾಪಿಸುವ ಸಲುವಾಗಿ ರೋಮಾಂಚಕ ಗುಜರಾತ್ ಶೃಂಗವನ್ನು 2003ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ರೂಪಿಸಿದ್ದರು. ಈ ಶೃಂಗವು ಜಾಗತಿಕ ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಜ್ಞಾನ ವಿನಿಮಯ ಮತ್ತು ಪರಿಣಾಮಕಾರಿ ಪಾಲುದಾರಿಕೆಯಂಥ ವಿಷಯಗಳ ಕುರಿತಂತೆ ಮೆದುಳಿಗೆ ಮುದನೀಡುವಂಥ ವೇದಿಕೆ ಕಲ್ಪಿಸಲಿದೆ.
ಪ್ರಧಾನಮಂತ್ರಿಯವರು ಹಜೀರಾ ಬಂದೂಕು ಕಾರ್ಖಾನೆ ಸ್ಥಾಪನೆಯ ಅಂಗವಾಗಿ ಹಜೀರಾಗೆ 2019ರ ಜನವರಿ 19ರಂದು ಭೇಟಿ ನೀಡಲಿದ್ದಾರೆ.
ನಂತರ ಅವರು ಹಜೀರಾದಿಂದ ದಾದ್ರಾ ನಗರ್ ಹವೇಲಿಯ ಸಿಲ್ವಾಸಾಗೆ ತೆರಳಲಿದ್ದಾರೆ. ಅವರು ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ದಾರೆ.
ತಮ್ಮ ಪ್ರವಾಸದ ಕೊನೆಯ ಚರಣದಲ್ಲಿ ಜನವರಿ 19ರಂದು ಪ್ರಧಾನಮಂತ್ರಿಯವರು ಮುಂಬೈಗೆ ತೆರಳಲಿದ್ದಾರೆ. ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಪ್ರದರ್ಶನ ನೂತನ ಕಟ್ಟಡವನ್ನು ಅವರು ಉದ್ಘಾಟಿಸಲಿದ್ದಾರೆ.