ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮತ್ತು ತಮಿಳುನಾಡು ರಾಜ್ಯಗಳಿಗೆ ಹಾಗು ದಮನ್ ಮತ್ತು ದಿಯು ಹಾಗು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನೆರಡು ದಿನಗಳಲ್ಲಿ ಭೇಟಿ ನೀಡಲಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶನಿವಾರದಂದು ದಮನ್ ಗೆ ಆಗಮಿಸುವರು. ಅವರು ಅಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಶುಭಾರಂಭಗೊಳಿಸಲಿದ್ದಾರೆ ಮತ್ತು ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ. ಅವರು ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ಪ್ರಧಾನ ಮಂತ್ರಿ ಆ ಬಳಿಕ ಅವರು ತಮಿಳುನಾಡಿಗೆ ಪ್ರಯಾಣಿಸುವರು. ಚೆನ್ನೈಯಲ್ಲಿ ಅವರು ರಾಜ್ಯ ಸರಕಾರದ ಕಲ್ಯಾಣ ಯೋಜನೆಯಾದ ಅಮ್ಮಾ ದ್ವಿಚಕ್ರ ವಾಹನ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಭಾನುವಾರದಂದು ಪ್ರಧಾನ ಮಂತ್ರಿಗಳು ಪುದುಚೇರಿಗೆ ತೆರಳುವರು. ಅಲ್ಲಿ ಅರಬಿಂದೋ ಆಶ್ರಮದಲ್ಲಿ ಅವರು ಶ್ರೀ ಅರಬಿಂದೋ ಅವರಿಗೆ ಪುಷ್ಪ ನಮನ ಸಲ್ಲಿಸುವರು. ಮತ್ತು ಶ್ರೀ ಅರಬಿಂದೋ ಆಂತಾರಾಷ್ಟ್ರೀಯ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವರು. ಅರೋವಿಲ್ಲೆಗೆ ಭೇಟಿ ನೀಡುವರು. ಅವರು ಅಲ್ಲಿ ಅರೋವಿಲ್ಲೆ ಸ್ವರ್ಣ ಮಹೋತ್ಸವದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವರು. ಈ ಸಂದರ್ಭ ಅವರು ಸಭೆಯನ್ನುದ್ದೇಶಿಸಿ ಮಾತನಾಡುವರು.
ಪ್ರಧಾನ ಮಂತ್ರಿ ಅವರು ಪುದುಚೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು.
ಭಾನುವಾರದಂದು ಸಂಜೆ , ಪ್ರಧಾನ ಮಂತ್ರಿ ಅವರು ಗುಜರಾತಿನ ಸೂರತ್ ನಲ್ಲಿ “ನವಭಾರತಕ್ಕಾಗಿ ಮ್ಯಾರಥಾನ್ ಓಟ” ಕ್ಕೆ ಹಸಿರು ನಿಶಾನೆ ತೋರಿಸುವರು.