ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಎಸ್ ವಿಪಿಎನ್ ಪಿಎ)ಯಲ್ಲಿ 2020ರ ಸೆಪ್ಟಂಬರ್ 4ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ದೀಕ್ಷಾಂತ ಪೆರೇಡ್ ವೇಳೆ ಐಪಿಎಸ್ ಪ್ರೊಬೇಷನರಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
28 ಮಹಿಳಾ ಪ್ರೊಬೇಷನರಿಗಳು ಸೇರಿದಂತೆ 131 ಐಪಿಎಸ್ ಪ್ರೊಬೇಷನರಿಗಳು ಅಕಾಡೆಮಿಯಲ್ಲಿ 42 ವಾರಗಳ ಮೊದಲ ಹಂತದ ಕೋರ್ಸ್ ಪೂರೈಸಿದ್ದಾರೆ.
ಮಸ್ಸೂರಿಯ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯಲ್ಲಿ ಹಾಗೂ ತೆಲಂಗಣಾದ ಹೈದರಾಬಾದ್ ನ ಡಾ.ಮರಿಚೆನ್ನಾರೆಡ್ಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ಇತರೆ ಸೇವೆಗಳಾದ ಐಎಎಸ್, ಐಎಫ್ ಎಸ್ ಮತ್ತಿತರ ಸೇವೆಗಳ ಜೊತೆಗೆ ಮೂಲ ಕೋರ್ಸ್ ಮುಗಿಸಿದ ನಂತರ 2018ರ ಡಿಸೆಂಬರ್ 17ರಂದು ಅಕಾಡೆಮಿಗೆ ಸೇರ್ಪಡೆಯಾಗಿದ್ದರು.
ಸರ್ಧಾರ್ ವಲ್ಲಭಾಯಿ ಪಟೇಲ್ ರಾಷ್ಟ್ರೀಯ ಪೋಲಿಸ್ ಅಕಾಡೆಮಿಯ ಮೂಲ ಕೋರ್ಸ್ ತರಬೇತಿ ವೇಳೆ, ಪ್ರೋಬೇಷನರಿಗಳಿಗೆ ಕಾನೂನು, ತನಿಖೆ, ವಿಧಿವಿಜ್ಞಾನ, ನಾಯಕತ್ವ ಮತ್ತು ನಿರ್ವಹಣೆ, ಅಪರಾಧಶಾಸ್ತ್ರ, ಸಾರ್ವಜನಿಕ ಕಾನೂನು ಪಾಲನೆ ಮತ್ತು ಆಂತರಿಕ ಭದ್ರತೆ, ನೈತಿಕತೆ ಮತ್ತು ಮಾನವ ಹಕ್ಕುಗಳು, ಆಧುನಿಕ ಭಾರತೀಯ ಪೊಲಿಸ್ ವ್ಯವಸ್ಥೆ , ಕರಕುಶಲ ಕಲೆ ಮತ್ತು ತಂತ್ರಗಳು, ಶಸ್ತ್ರಾಸ್ತ್ರಗಳ ತರಬೇತಿ ಮತ್ತು ಗುಂಡು ಹಾರಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಒಳಾಂಗಣ ಮತ್ತು ಹೊರಾಂಗಣ ತರಬೇತಿಗಳನ್ನು ನೀಡಲಾಗಿತ್ತು.