ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಫೆಬ್ರವರಿ 16ರಂದು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ (ಡಬ್ಲ್ಯುಎಸ್.ಡಿ.ಎಸ್. 2018)ರ 2018ರ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಡಬ್ಲ್ಯುಎಸ್.ಡಿ.ಎಸ್. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ.ಇ.ಆರ್.ಐ.)ನ ಮಹತ್ವಾಕಾಂಕ್ಷೆಯ ವೇದಿಕೆಯಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿ, ಇಂಧನ ಮತ್ತು ಪರಿಸರ ವಲಯದ ಚಿಂತಕರು ಮತ್ತು ಜಾಗತಿಕ ನಾಯಕರನ್ನು ಸಮಾನ ವೇದಿಕೆಯನ್ನು ಒಟ್ಟಿಗೆ ತರಲು ಬಯಸುತ್ತದೆ. 

 

ಈ ಶೃಂಗಸಭೆಯು ಹಲವು ಪ್ರತಿಷ್ಠಿತರಾದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಡಾ. ಹರ್ಷವರ್ಧನ್,ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಖಾತೆ ಸಚಿವರಾದ ಶ್ರೀ ಸುರೇಶ್ ಪ್ರಭು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಹರ್ದೀಪ್ ಪುರಿ, ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜಯಂತ್ ಸಿನ್ಹ ಹಾಗೂ ಹಲವು ಪ್ರಮುಖ ರಾಜಕೀಯ ಮತ್ತು ಸಾಂಸ್ಥಿಕ ನಾಯಕರುಗಳಿಗೆ ಆತಿಥ್ಯ ನೀಡಲಿದೆ. 

 

ಈ ವರ್ಷದ ಶೃಂಗಸಭೆಯ ಧ್ಯೇಯವಾಕ್ಯ ‘ಚೇತರಿಕೆಯ ಗ್ರಹಕ್ಕಾಗಿ ಪಾಲುದಾರಿಕೆ’ ಎಂಬುದಾಗಿದೆ, ಡಬ್ಲ್ಯುಎಸ್.ಡಿ.ಎಸ್. 2018 ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಕಾರ್ಯ ಚೌಕಟ್ಟು ರೂಪಿಸುವುದನ್ನು ನಿರೀಕ್ಷಿಸುತ್ತದೆ. ಈ ಶೃಂಗಸಭೆಯು ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ತಗ್ಗಿಸಲು ಭೂಮಿಯ ಕೆಳದರ್ಜೀಕರಣದ ವಿರುದ್ಧದ ಹೋರಾಟ, ನಗರಗಳನ್ನು ಕಸ ಮುಕ್ತಗೊಳಿಸಲು, ಪರಿಣಾಮಕಾರಿಯಾಗಿ ವಾಯುಮಾಲಿನ್ಯವನ್ನು ಎದುರಿಸಲು,ಇಂಧನ ದಕ್ಷತೆ ಮತ್ತು ಸಂಪನ್ಮೂಲ ಹೆಚ್ಚಿಸಲು ಕ್ರಮ, ಶುದ್ಧ ಇಂಧನ ಪರಿವರ್ತನೆ ಸೇರಿದಂತೆ ವಿಸ್ತೃತ ಬಗೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿದೆ. ಡಬ್ಲ್ಯು.ಎಸ್.ಡಿ.ಎಸ್ 2018ರಲ್ಲಿ ‘ಗ್ರೀನೋವೇಷನ್ ವಸ್ತುಪ್ರದರ್ಶನ’ವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಇತ್ತೀಚಿನ ಅತ್ಯಾಧುವಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ. 

 

ವಿಶ್ವಾದ್ಯಂತದ ನೀತಿ ನಿರೂಪಕರು, ಸಂಶೋಧಕರು, ಚಿಂತಕರ ಚಾವಡಿ ಸದಸ್ಯರು, ರಾಜತಾಂತ್ರಿಕರು ಮತ್ತು ಸಾಂಸ್ಥಿಕ ವಲಯದವರು ಸೇರಿದಂತೆ 2000 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.  ಪ್ರಖ್ಯಾತ ಅಂತಾರಾಷ್ಟ್ರೀಯ ಭಾಷಣಕಾರರು ಭೂಮಿ, ವಾಯು ಮತ್ತು ಜಲದ ಮೇಲಿನ ಪರಿಣಾಮ ತಗ್ಗಿಸುವುದು, ಇಂಧನ ಮತ್ತು ಸಂಪನ್ಮೂಲದ ಸಮರ್ಥ ಬಳಕೆ ಮಾರ್ಗೋಪಾಯಗಳೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಹಾಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಡಬ್ಲ್ಯು.ಎಸ್.ಡಿ.ಎಸ್. 2018ರ ಧ್ಯೇಯಪೂರ್ಣ ಮಾರ್ಗಗಳಲ್ಲಿ ಇಂಗಾಲದ ಮಾರುಕಟ್ಟೆ ಮತ್ತು ದರನಿಗದಿ, ಸುಸ್ಥಿರ ಸಾರಿಗೆ, ಸ್ಥಿತಿಸ್ಥಾಪಕ ನಗರಗಳು, ಸೌರ ಇಂಧನ ಮತ್ತು ಶೀಥಕ ತಂತ್ರಜ್ಞಾನವೂ ಸೇರಿದೆ. ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ.ಇ.ಆರ್.ಐ.) ತನ್ನ ಮಹತ್ವಾಕಾಂಕ್ಷೆಯ ವೇದಿಕೆಯಲ್ಲಿ ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2018ರ ಆವೃತ್ತಿಯನ್ನು ನವದೆಹಲಿಯಲ್ಲಿ ಫೆಬ್ರವರಿ 15, 16 ಮತ್ತು 17, 2018ರಂದು ಆಯೋಜಿಸುತ್ತಿದೆ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
2024: A Landmark Year for India’s Defence Sector

Media Coverage

2024: A Landmark Year for India’s Defence Sector
NM on the go

Nm on the go

Always be the first to hear from the PM. Get the App Now!
...
Governor of Maharashtra meets PM Modi
December 27, 2024

The Governor of Maharashtra, Shri C. P. Radhakrishnan, met Prime Minister Shri Narendra Modi today.

The Prime Minister’s Office handle posted on X:

“Governor of Maharashtra, Shri C. P. Radhakrishnan, met PM @narendramodi.”