ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು 15 ನೇ ಪ್ರವಾಸಿ ಭಾರತೀಯ ದಿವಸ ಸಮಾವೇಶವನ್ನು ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಳೆ, ಜನವರಿ 22, 2019 ರಂದು ಉದ್ಘಾಟಿಸುವರು.
ಮೊದಲ ಬಾರಿಗೆ, ಮೂರು ದಿನಗಳ ಸಮಾವೇಶವನ್ನು ವಾರಣಾಸಿಯಲ್ಲಿ 21 ರಿಂದ 23ರ ಜನವರಿ 2019ರವರೆಗೆ ಆಯೋಜಿಸಲಾಗಿದೆ. ಪಿಬಿಡಿ ಸಮಾವೇಶ 2019 ರ ವಿಷಯವು “ನವ ಭಾರತ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ ಪಾತ್ರ” ಎಂದು ಆಗಿದೆ.
ಕುಂಭ ಮೇಳ ಮತ್ತು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಬರುವ ಅನಿವಾಸಿ ಭಾರತೀಯರ ಭಾವನೆಗಳನ್ನು ಗೌರವಿಸಿ 15 ನೇ ಪಿಬಿಡಿ ಸಮಾವೇಶವನ್ನು ಜನವರಿ 9ನೇ ತಾರೀಕಿನ ಬದಲು ಜನವರಿ 21 ರಿಂದ 23 , 2019ರವರೆಗೆ ಆಯೋಜಿಸಲಾಗಿದೆ . ಸಮಾವೇಶದ ನಂತರ, ಭಾಗವಹಿಸುವವರು ಜನವರಿ 24ರಂದು ಕುಂಭ ಮೇಳಕ್ಕಾಗಿ ಪ್ರಯಾಗ್ ರಾಜ್ ಗೆ ಭೇಟಿ ನೀಡುವರು. ಮೇ 24 ರಂದು ಮೇಳ, ನಂತರ ಜನವರಿ 25 ರಂದು ದೆಹಲಿಗೆ ತೆರಳಿ ಜನವರಿ 26 ರಂದು ನವದೆಹಲಿಯ ಗಣರಾಜ್ಯೋತ್ಸವದ ಪರೇಡ್ ಅನ್ನು ವೀಕ್ಷಿಸುವರು.
ಮಾರಿಷಸ್ ದೇಶದ ಪ್ರಧಾನಮಂತ್ರಿಗಳಾದ ಶ್ರೀ ಪ್ರವಿಂದ್ ಜುಗನೌಥ್ ಅವರು ಪಿಬಿಡಿ ಸಮಾವೇಶದ ಮುಖ್ಯ ಅತಿಥಿಗಳಾಗಿರುತ್ತಾರೆ. ನಾರ್ವೆಯ ಸಂಸತ್ತಿನ ಸದಸ್ಯರಾದ ಶ್ರೀ ಹಿಮಾಂಶು ಗುಲಾಟಿಯವರು ವಿಶೇಷ ಅತಿಥಿಯಾಗಲಿದ್ದು, ನ್ಯೂಜಿಲೆಂಡ್ ಸಂಸತ್ತಿನ ಸದಸ್ಯ ಶ್ರೀ ಕನ್ವಲ್ಜಿತ್ ಸಿಂಗ್ ಬಕ್ಷಿ ಅವರು ಪಿಬಿಡಿ 15 ನೇ ಗೌರವಾರ್ಥ ಅತಿಥಿಗಳಾಗಿರುತ್ತಾರೆ.
ಈ ಆವೃತ್ತಿಯ ಪ್ರಮುಖ ಘಟನೆಗಳು-
21 ಜನವರಿ, 2019 – ಯುವ ಪ್ರವಾಸಿ ಭಾರತೀಯ ದಿವಸ್ . ಈ ಕಾರ್ಯಕ್ರಮವು ಯುವಜನರಿಗೆ ನವಭಾರತದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅವಕಾಶಗಳನ್ನು ಒದಗಿಸುತ್ತದೆ.
22 ಜನವರಿ 2019 – ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ಮಾರಿಷಸ್ ದೇಶದ ಪ್ರಧಾನಮಂತ್ರಿಗಳಾದ ಶ್ರೀ ಪ್ರವಿಂದ್ ಜುಗನೌಥ್ ರವರ ಸಮ್ಮುಖದಲ್ಲಿ ಪಿಬಿಡಿ ಸಮಾವೇಶದ ಉದ್ಘಾಟನೆ .
23 ಜನವರಿ 2019 – ಬೀಳ್ಕೊಡುಗೆಯ ಸಮಾರಂಭ & ಭಾರತದ ರಾಷ್ಟ್ರಪತಿಗಳಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ . ವಿವಿಧ ಸರ್ವಸದಸ್ಯರನ್ನೊಳಗೊಂಡ ಕಾರ್ಯಕ್ರಮಗಳು ಕೂಡಾ ನಡೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಪ್ರವಾಸಿ ಭಾರತೀಯ ದಿವಸದ ಬಗ್ಗೆ :
ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಪ್ರವಾಸಿ ಭಾರತೀಯ ದಿವಸವನ್ನು (ಪಿಬಿಡಿ) ಆಚರಿಸುವ ನಿರ್ಧಾರ ಕೈಗೊಂಡರು.
1 ನೇ ಪಿಬಿಡಿ ಯನ್ನು 2003 ರ ಜನವರಿ 9 ರಂದು ನವದೆಹಲಿಯಲ್ಲಿ ಆಚರಿಸಲಾಯಿತು. 1915 ರಲ್ಲಿ ಮಹಾತ್ಮಾ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ದಿನವೆಂದು ಜನವರಿ 19 ರಂದು ಪಿಬಿಡಿ ಯನ್ನು ಆಚರಿಸುವ ದಿನವಾಗಿ ಆಯ್ಕೆ ಮಾಡಲಾಯಿತು.
ಪಿಬಿಡಿಯನ್ನು ಈಗ ಪ್ರತಿ ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ, ವಿದೇಶಿ ಭಾರತೀಯ ಸಮುದಾಯಕ್ಕೆ ಸರ್ಕಾರದೊಂದಿಗೆ ತೊಡಗಿಸಿಕೊಳ್ಳಲು ಮತ್ತು ತಮ್ಮ ಮೂಲಗಳೊಂದಿಗೆ ಮತ್ತೆ ಒಂದಾಗಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಸಮಾವೇಶದಲ್ಲಿ ಭಾರತ ಮತ್ತು ಹೊರದೇಶಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ ಆಯ್ದ ಅನಿವಾಸಿ ಭಾರತೀಯರಿಗೆ “ ಪ್ರವಾಸಿ ಭಾರತೀಯ ಸಮ್ಮಾನ್ “ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕರ್ನಾಟಕದ ಬೆಂಗಳೂರಿನಲ್ಲಿ ಜನವರಿ 7 – 9ರಂದು 2017 ರಂದು ನಡೆದ 14 ನೇ ಪಿಬಿಡಿಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. 14 ನೇ ಪಿಬಿಡಿ ಯ ವಿಷಯವು “ಅನಿವಾಸಿ ಭಾರತೀಯರೊಂದಿಗೆ ಸಂಬಂಧಗಳ ಮರುನಿರ್ಮಾಣ ಮಾಡುವುದು ” ಎಂದಾಗಿತ್ತು. ತಮ್ಮ ಭಾಷಣದಲ್ಲಿ ಶ್ರೀ ಮೋದಿಯವರು “ಅನಿವಾಸಿ ಭಾರತೀಯ ಸಮೂಹವು ಉನ್ನತ ಭಾರತೀಯ ಸಂಸ್ಕೃತಿ, ತತ್ವಗಳು ಮತ್ತು ಮೌಲ್ಯಗಳನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತದೆ ಮತ್ತು ಅವರ ಕೊಡುಗೆಗಳನ್ನು ಗೌರವಿಸಲಾಗುತ್ತದೆ “ಎಂದು ಹೇಳಿದ್ದಾರೆ.
“ಸಾಗರೋತ್ತರ ಭಾರತೀಯ ಸಮುದಾಯದೊಂದಿಗೆ ನಿರಂತರವಾಗಿ ಸಂಬಂಧ ಹೊಂದಿರುವುದು ಸರ್ಕಾರದ ಆದ್ಯತೆಯಾಗಿದೆ “ಎಂದು ಹೇಳಿ ಅದರ ಪ್ರಾಮುಖ್ಯತೆಯನ್ನು ತಿಳಿಸಿದ್ದಾರೆ.