ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು `ಪ್ರಧಾನಮಂತ್ರಿಗಳ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಮತ್ತು ಕೈಗೆಟುಕುವ ದರದಲ್ಲಿ ಹೃದಯದ ಸ್ಟೆಂಟ್‍ಗಳು ಹಾಗೂ ಮಂಡಿ ಜೋಡಣೆ ಸಾಧನಗಳ ಯೋಜನೆ’ಯ ಫಲಾನುಭವಿಗಳೊಂದಿಗೆ ಜೂನ್ 7ರಂದು ಬೆಳಿಗ್ಗೆ 9.30 ಗಂಟೆಗೆ ಮಾನ್ಯ ಪ್ರಧಾನಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.
ಕೇಂದ್ರ ಸರಕಾರವು ಜಾರಿಗೆ ತಂದಿರುವ ಈ ಯೋಜನೆಗಳು ರೋಗಿಗಳ, ಅದರಲ್ಲೂ ಬಡವರ ಜೀವನದಲ್ಲಿ ಯಾವ ಸ್ವರೂಪದ ಬದಲಾವಣೆಗಳನ್ನು ತಂದಿದೆ ಎನ್ನುವುದನ್ನು ಫಲಾನುಭವಿಗಳಿಂದಲೇ ನೇರವಾಗಿ ತಿಳಿದುಕೊಳ್ಳುವುದು ಈ ಸಂವಾದದ ಉದ್ದೇಶವಾಗಿದೆ.
ನಾನಾ ಬಗೆಯ ಸಾಮಾಜಿಕ ಮಾಧ್ಯಮಗಳಾದ `ನಮೋ ಆಪ್’, ಯುಟ್ಯೂಬ್, ಫೇಸ್‍ಬುಕ್ ಇತ್ಯಾದಿಗಳಲ್ಲಿ ಕೂಡ ಈ ಸಂವಾದ ಲಭ್ಯವಿರಲಿದೆ.