ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಅಕ್ಟೋಬರ್ 1ರಂದು ವಿಜ್ಞಾನ ಭವನದಲ್ಲಿ ನಡೆಯಲಿರುವ ಆರೋಗ್ಯ ಮಂಥನ ಸಮಾರೋಪ ಸಮಾರಂಭದ ಭಾಗಿಯಾಗಲಿದ್ದಾರೆ. ಆರೋಗ್ಯ ಮಂಥನ, ಆಯುಷ್ಮಾನ್ ಭಾರತ ಪಿಎಂ ಜೆಎವೈಗೆ ಒಂದು ವರ್ಷ ತುಂಬಿರುವ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಆಯೋಜಿಸಿರುವ 2 ದಿನಗಳ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಆಯುಷ್ಮಾನ್ ಭಾರತದ ನೂತನ ಮೊಬೈಲ್ ಅಪ್ಲಿಕೇಷನ್ ಅನ್ನು ಉದ್ಘಾಟಿಸಲಿದ್ದಾರೆ. ಆಯುಷ್ಮಾನ್ ಭಾರತ ಸ್ಟಾರ್ಟ್ ಅಪ್ ಗ್ರಾಂಡ್ ಚಾಲೆಂಜ್ ಗೂ ಅವರು ಚಾಲನೆ ನೀಡಲಿದ್ದಾರೆ ಮತ್ತು ಇದೇ ಸಂದರ್ಭದಲ್ಲಿ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ.
ಪಿಎಂ ಜೆಎವೈನ ಆಯ್ದ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ. ಕಳೆದ ಒಂದು ವರ್ಷದಲ್ಲಿ ಯೋಜನೆ ನಡೆದ ಬಂದ ದಾರಿಯನ್ನು ಬಿಂಬಿಸುವ ಪಿಎಂ ಜೆಎವೈ ಕುರಿತ ವಸ್ತು ಪ್ರದರ್ಶನಕ್ಕೂ ಅವರು ಭೇಟಿ ನೀಡಲಿದ್ದಾರೆ.
ಪಿಎಂಜೆಎವೈನ ಎಲ್ಲ ಪ್ರಮುಖ ಬಾಧ್ಯಸ್ಥರು ಒಂದೇ ವೇದಿಕೆಯಲ್ಲಿ ಭೇಟಿಯಾಗಿ ಕಳೆದ ಒಂದು ವರ್ಷದಲ್ಲಿ ಯೋಜನೆಯ ಜಾರಿಯಲ್ಲಿ ಎದುರಿಸಿದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮತ್ತು ಯೋಜನೆ ಅನುಷ್ಠಾನದಲ್ಲಿನ ಸುಧಾರಣೆಗಳ ಕುರಿತಂತೆ ಹೊಸ ಅರಿವಿಗಾಗಿ ಚರ್ಚಿಸುವ ಅವಕಾಶ ಕಲ್ಪಿಸುವುದು ಆರೋಗ್ಯಮಂಥನ ಕಾರ್ಯಕ್ರಮದ ಉದ್ದೇಶವಾಗಿದೆ. ಆರೋಗ್ಯ ಮಂಥನದ ಪ್ರಮುಖ ಶಿಫಾರಸುಗಳನ್ನು ಈ ಸಂದರ್ಭದಲ್ಲಿ ಪ್ರಸ್ತುತ ಪಡಿಸಲಾಗುವುದು.
ಆಯುಷ್ಮಾನ್ ಭಾರತ ಪಿಎಂ ಜೆಎವೈ ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2018ರ ಸೆಪ್ಟೆಂಬರ್ 23ರಂದು ಉದ್ಘಾಟಿಸಿದ್ದರು.