ನವದೆಹಲಿಯಲ್ಲಿಂದು ಅಬುಧಾಬಿ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಉಭಯ ನಾಯಕರು ವಿವಿಧ ವಿಷಯಗಳ ಕುರಿತು ಫಲಪ್ರದ ಮಾತುಕತೆ ನಡೆಸಿದರು.
ಭಾರತ-ಯುಎಇ ಮೈತ್ರಿ ಬಲವರ್ಧನೆಯ ಶೇಖ್ ಖಲೀದ್ ಅವರ ಬಯಕೆಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
“ಅಬುಧಾಬಿಯ ಯುವರಾಜ ಶೇಖ್ ಖಲೀದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಸ್ವಾಗತಿಸಲು ಹರ್ಷವಾಯಿತು. ವಿವಿಧ ವಿಷಯಗಳ ಬಗ್ಗೆ ನಾವು ಫಲಪ್ರದ ಮಾತುಕತೆ ನಡೆಸಿದ್ದೇವೆ. ಸದೃಢ ಭಾರತ-ಯುಎಇ ಸ್ನೇಹದ ಅವರ ಬಯಕೆಯು ಸ್ಪಷ್ಟವಾಗಿ ಗೋಚರಿಸಿದೆ.”
It was a delight to welcome HH Sheikh Khaled bin Mohamed bin Zayed Al Nahyan, Crown Prince of Abu Dhabi. We had fruitful talks on a wide range of issues. His passion towards strong India-UAE friendship is clearly visible. pic.twitter.com/yoLENhjGWd
— Narendra Modi (@narendramodi) September 9, 2024