ಧಾನ ಮಂತ್ರಿಯವರು ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನ ಮಂತ್ರಿ , ಶ್ರೀ ನರೇಂದ್ರ ಮೋದಿಯವರು ನಾಳೆ ಜನವರಿ 15, 2019 ರಂದು ಕೇರಳದ ಕೊಲ್ಲಂ ಮತ್ತು ತಿರುವನಂತಪುರಕ್ಕೆ ಭೇಟಿ ನೀಡಲಿದ್ದಾರೆ.
ಕೊಲ್ಲಂನಲ್ಲಿ, ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಕೊಲ್ಲಂ ಬೈಪಾಸ್ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಇದು 13 ಕಿ.ಮೀ .ಉದ್ದದ 2 ಪಥದ ಬೈಪಾಸ್ ಆಗಿದ್ದು ರೂ. 352 ಕೋಟಿಯ ಯೋಜನೆಯಾಗಿದೆ. ಈ ರಸ್ತೆಯು ಅಷ್ಟಮುಡಿ ಸರೋವರದ ಮೇಲೆ 3 ಪ್ರಮುಖ ಸೇತುವೆಗಳನ್ನು ಒಳಗೊಂಡಿದ್ದು, ಇದರ ಉದ್ದವು ಒಟ್ಟು 1540 ಮೀಟರ್ ಆಗಿದೆ. ಈ ಯೋಜನೆಯು ಆಲಪುಳ ಮತ್ತು ತಿರುವನಂತಪುರಂ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕೊಲ್ಲಂ ಪಟ್ಟಣದಲ್ಲಿ ಸಂಚಾರದ ದಟ್ಟಣೆಯನ್ನು ತಗ್ಗಿಸುತ್ತದೆ.
ತಿರುವನಂತಪುರಂನಲ್ಲಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಕೆಲವು ಸಂದರ್ಶಕರ ಸೌಲಭ್ಯಗಳ ಪ್ರಾರಂಭದ ಸಂಕೇತವಾಗಿ ಗುರುತಿನ ಫಲಕವೊಂದನ್ನು ಅನಾವರಣಗೊಳಿಸಲಿದ್ದಾರೆ.
ಕೊಲ್ಲಂ ನಗರಕ್ಕೆ ಇದು ಪ್ರಧಾನ ಮಂತ್ರಿಯವರ ಮೂರನೇ ಅಧಿಕೃತ ಭೇಟಿ. ಅವರು ಮೊದಲ ಬಾರಿಗೆ ಡಿಸೆಂಬರ್ 2015ರಲ್ಲಿ ನಗರಕ್ಕೆ ಭೇಟಿ ನೀಡಿದ್ದರು. ಆಗ ಆರ್. ಶಂಕರ್ ರವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ತರುವಾಯ, ಏಪ್ರಿಲ್ 2016 ರಲ್ಲಿ ಪ್ರಧಾನ ಮಂತ್ರಿಯವರು ಕೊಲ್ಲಂಗೆ ಅಗ್ನಿ ದುರಂತದ ಕೆಲವೇ ಗಂಟೆಗಳಲ್ಲಿ ಭೇಟಿ ನೀಡಿದ್ದರು.