ಕೊರಿಯಾ ಗಣರಾಜ್ಯದ ಅಧ್ಯಕ್ಷರಾಗಿ ಚುನಾಯಿತರಾದ ಘನತೆವೆತ್ತ ಯುನ್ ಸುಕ್-ಯೋಲ್ ಅವರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ದೂರವಾಣಿ ಮೂಲಕ ಸಂಭಾಷಿಸಿದರು.
ಇತ್ತೀಚೆಗೆ ನಡೆದ ಕೊರಿಯಾ ಗಣರಾಜ್ಯದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಘನತೆವೆತ್ತ ಯುನ್ ಸುಕ್-ಯೋಲ್ ಅವರಿಗೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು
ಭಾರತ-ಕೊರಿಯಾ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ವಿಶೇಷವಾಗಿ ಪ್ರಸ್ತುತ ಜಾಗತಿಕ ಸನ್ನಿವೇಶದಲ್ಲಿ ಇನ್ನಷ್ಟು ವಿಸ್ತರಿಸುವ ಮತ್ತು ಗಾಢಗೊಳಿಸುವ ಪ್ರಾಮುಖ್ಯವನ್ನು ಎರಡೂ ದೇಶದ ನಾಯಕರು ಒಪ್ಪಿಕೊಂಡರು. ವೇಗವರ್ಧಿತ ದ್ವಿಪಕ್ಷೀಯ ಸಹಕಾರಕ್ಕಾಗಿ ಸಂಭವನೀಯನ್ನು ಒದಗಿಸುವ ವಿವಿಧ ಕ್ಷೇತ್ರಗಳ ಕುರಿತು ಚರ್ಚಿಸಿದರು ಮತ್ತು ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಲು ಎರಡೂ ದೇಶದ ನಾಯಕರು ಒಪ್ಪಿಕೊಂಡರು.
ಮುಂದಿನ ವರ್ಷ ಭಾರತ ಮತ್ತು ಕೊರಿಯಾ ಗಣರಾಜ್ಯದ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವವನ್ನು ಜಂಟಿಯಾಗಿ ಆಚರಿಸುವ ತಮ್ಮ ಆಶಯಗಳನ್ನು ಉಭಯ ನಾಯಕರು ಒಪ್ಪಿಕೊಂಡರು.
ಪ್ರಧಾನಮಂತ್ರಿ ಅವರು ಘನತೆವೆತ್ತ ಯುನ್ ಸುಕ್-ಯೋಲ್ ಅವರಿಗೆ ಲಭ್ಯ ಮೊದಲ ಸಮಯಾವಕಾಶದಲ್ಲಿ ಭಾರತಕ್ಕೆ ಭೇಟಿ ನೀಡಲು ಅವರನ್ನು ಆಹ್ವಾನಿಸಿದರು.